logo
ಕನ್ನಡ ಸುದ್ದಿ  /  ಮನರಂಜನೆ  /  Tollywood News: ರಶ್ಮಿಕಾ ಮಂದಣ್ಣ ಶ್ರೀಲೀಲಾ ಇಲ್ದಿದ್ರೆ ಬೇಡ, ನನಗೆ ಸಾಕ್ಷಿ ವೈದ್ಯ ಸಾಕು ಅಂದ್ರ ವಿಜಯ್‌ ದೇವರಕೊಂಡ

Tollywood News: ರಶ್ಮಿಕಾ ಮಂದಣ್ಣ ಶ್ರೀಲೀಲಾ ಇಲ್ದಿದ್ರೆ ಬೇಡ, ನನಗೆ ಸಾಕ್ಷಿ ವೈದ್ಯ ಸಾಕು ಅಂದ್ರ ವಿಜಯ್‌ ದೇವರಕೊಂಡ

Praveen Chandra B HT Kannada

Oct 30, 2023 09:10 AM IST

ಸಾಕ್ಷಿ ವೈದ್ಯ, ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ

    • Vijay Deverakonda Upcoming Film: ಸ್ಯಾಂಡಲ್‌ವುಡ್‌ ಮೂಲದ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಬದಲು ಸಾಕ್ಷಿ ವೈದ್ಯ ಅವರು ಟಾಲಿವುಡ್‌ನ ವಿಜಯ್‌ ದೇವರಕೊಂಡರ ಮುಂದಿನ ಚಿತ್ರ ವಿಡಿ 12ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಸಾಕ್ಷಿ ವೈದ್ಯ, ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ
ಸಾಕ್ಷಿ ವೈದ್ಯ, ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ

ಸ್ಯಾಂಡಲ್‌ವುಡ್‌ ಮೂಲದ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಬದಲು ಸಾಕ್ಷಿ ವೈದ್ಯ ಅವರು ವಿಜಯ್‌ ದೇವರಕೊಂಡ ನಟನೆಯ ಮುಂದಿನ ಚಿತ್ರ ವಿಡಿ 12ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ- ವಿಜಯ್‌ ದೇವರಕೊಂಡ ಅಥವಾ ಶ್ರೀಲೀಲಾ-ವಿಜಯ್‌ ದೇವರಕೊಂಡ ಜೋಡಿಯನ್ನು ತೆರೆಯ ಮೇಲೆ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಶೆಯಾಗಬಹುದು. ಕೆಲವೊಂದು ಕಾರಣಗಳಿಂದ ವಿಜಯ್‌ ದೇವರಕೊಂಡ ಅವರ ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಬದಲು ಸಾಕ್ಷಿ ವೈದ್ಯ ನಟಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

Aadujeevitham OTT: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಿ, ಇಲ್ಲಿದೆ ಒಟಿಟಿ ಬಿಡುಗಡೆ ವಿವರ

ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್, ಸಂಜೀವ್ ಜಾಗೀರ್ದರ್ ಎಡಿಟಿಂಗ್‌ ಸೂಪರ್‌

Dhurva Sarja: ಅಪ್ಪ ಮಗಳ ಬಾಂಧವ್ಯದ C ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

ವಿಜಯ್‌ ದೇವರಕೊಂಡ ಜತೆ ರಶ್ಮಿಕಾ ಮಂದಣ್ಣ ಅವರು ಮುಂದಿನ ಚಿತ್ರದಲ್ಲಿ ನಟಿಸಬೇಕೆಂದು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದರು. ಆದರೆ, ರಶ್ಮಿಕಾ ಬದಲು ಕರ್ನಾಟಕ ಮೂಲದ ಇನ್ನೊಬ್ಬರು ನಟಿ ಶ್ರೀಲೀಲಾರನ್ನು ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿತ್ತು. ಗೌತಮ್ ತಿನ್ನನೂರಿ ನಿರ್ದೇಶನದ ವಿಜಯ್ ದೇವರಕೊಂಡ ಅವರ ಮುಂಬರುವ ಚಿತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣರಿಗೆ ಡೇಟ್‌ ಶೆಡ್ಯೂಲ್‌ ಸಮಸ್ಯೆಯಾಗಿದೆ. ಹೀಗಾಗಿ, ವಿಜಯ್‌ ದೇವರಕೊಂಡ ಅವರ ಮುಂದಿನ ಚಿತ್ರಕ್ಕೆ ಸಾಕ್ಷಿ ವೈದ್ಯರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ರಶ್ಮಿಕಾ ಮಂದಣ್ಣ, ಶ್ರೀಲೀಲಾ ಜನಪ್ರಿಯ ನಟಿಯರು. ಹಾಗಾದ್ರೆ, ಈ ಸಾಕ್ಷಿ ವೈದ್ಯ ಯಾರು ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಇವರು ಏಜೆಂಟ್‌ ಚಿತ್ರದ ಮೂಲಕ ಗಮನ ಸೆಳೆದ ನಟಿ. ಮೂಲಗಳ ಪ್ರಕಾರ ವಿಜಯ್‌ ದೇವರಕೊಂಡರ ಮುಂದಿನ ಚಿತ್ರದಲ್ಲಿ ನಟಿಸಲು ಸಾಕ್ಷಿ ಅವರು ಸಹಿ ಹಾಕಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ವಿಜಯ್‌ ದೇವರಕೊಂಡ ಜತೆ ರಶ್ಮಿಕಾ ಮಂದಣ್ಣ ಯಾಕೆ ನಟಿಸುತ್ತಿಲ್ಲ ಎನ್ನುವ ಪ್ರಶ್ನೆಯೂ ಈ ಸಂದರ್ಭದಲ್ಲಿ ಮೂಡಿದೆ. ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ತುಂಬಾ ಕ್ಲೋಸ್‌ ಆಗಿದ್ದರೂ ರಶ್ಮಿಕಾ ಹಲವು ಚಿತ್ರಗಳಲ್ಲಿ ಬಿಝಿ ಇದ್ದಾರೆ. ಹೀಗಾಗಿ, ದೇವರಕೊಂಡ ಚಿತ್ರಕ್ಕೆ ನೀಡಲು ಸಮಯ ಇಲ್ಲ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‌ನ ಅನಿಮಲ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದೇ ರೀತಿ ಶ್ರೀಲೀಲಾ ಕೂಡ ಬ್ಯುಸಿಯಾಗಿದ್ದಾರೆ. ಇವರಲ್ಲಿ ಈಗಾಗಲೇ ಒಪ್ಪಿಕೊಂಡ 6 ಚಿತ್ರಗಳಿದ್ದು, ವಿಜಯ್‌ ದೇವರಕೊಂಡ ಚಿತ್ರಕ್ಕೆ ನಟಿಸಲು ಇವರಲ್ಲಿ ಸಮಯವಿಲ್ಲ. ಹೀಗಾಗಿ, ಈ ಚಿತ್ರದಿಂದ ಶ್ರೀಲೀಲಾ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಇವರ ಬದಲು ರಶ್ಮಿಕಾ ಮಂದಣ್ಣರನ್ನು ನೋಡಲು ಬಯಸಿದ ಅಭಿಮಾನಿಗಳು ಸಾಕ್ಷಿ ವೈದ್ಯರನ್ನು ವಿಜಯ್‌ ದೇವರಕೊಂಡರ ಮುಂದಿನ ಚಿತ್ರದಲ್ಲಿ ನೋಡುವ ಸಾಧ್ಯತೆ ಹೆಚ್ಚಾಗಿದೆ.

ಸದ್ಯ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‌ನ ಅನಿಮಲ್‌ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅನಿಮಲ್‌' ಚಿತ್ರವನ್ನು ಟಿ ಸೀರೀಸ್ ಫಿಲ್ಮ್ಸ್‌, ಭದ್ರಕಾಳಿ ಪಿಕ್ಚರ್ಸ್‌, ಸಿನಿ ಸ್ಟುಡಿಯೋಸ್‌ ಬ್ಯಾನರ್‌ ಅಡಿ ಭೂಷಣ್‌ ಕುಮಾರ್‌, ಕೃಷ್ಣ ಕುಮಾರ್‌, ಮುರ್ದ್‌ ಖೇತಾನಿ, ಪ್ರಣಯ್‌ ರೆಡ್ಡಿ ವಂಗಾ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸಂದೀಪ್‌ ರೆಡ್ಡಿ ವಂಗಾ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಪ್ರೀತಮ್‌, ವಿಶಾಲ್‌ ಮಿಶ್ರಾ, ಜಾನಿ ಹಾಗೂ ಇನ್ನಿತರರು ಸಂಗೀತ ನೀಡಿದ್ದಾರೆ. ಡಿಸೆಂಬರ್‌ 1 ರಂದು 'ಅನಿಮಲ್‌' ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದಲ್ಲಿ ರಣಬೀರ್‌ ಕಪೂರ್‌, ಅನಿಲ್‌ ಕಪೂರ್‌, ರಶ್ಮಿಕಾ ಮಂದಣ್ಣ, ಶಕ್ತಿ ಕಪೂರ್‌, ಸುರೇಶ್‌ ಒಬೆರಾಯ್‌ ಹಾಗೂ ಇನ್ನಿತರರು ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ