logo
ಕನ್ನಡ ಸುದ್ದಿ  /  ಮನರಂಜನೆ  /   Vijay Deverakonda: ತನ್ನೊಂದಿಗೆ ಡೇಟ್​​ ಮಾಡಬೇಕು ಎಂದ ಸಾರಾ ಅಲಿಖಾನ್​​​​​ಗೆ 'ಲೈಗರ್' ನಟ ನೀಡಿದ ಉತ್ತರ ಏನು..?

Vijay Deverakonda: ತನ್ನೊಂದಿಗೆ ಡೇಟ್​​ ಮಾಡಬೇಕು ಎಂದ ಸಾರಾ ಅಲಿಖಾನ್​​​​​ಗೆ 'ಲೈಗರ್' ನಟ ನೀಡಿದ ಉತ್ತರ ಏನು..?

Rakshitha Sowmya HT Kannada

Jul 13, 2022 03:18 PM IST

ವಿಜಯ್ ದೇವರಕೊಂಡ, ಸಾರಾ ಅಲಿಖಾನ್

    • ಕಾಫಿ ವಿತ್ ಕರಣ್ ಪ್ರೋಮೋವನ್ನು ತಮ್ಮ ಇನ್​​ಸ್ಟಾಗ್ರಾಮ್​ ಸ್ಟೇಟಸ್​​​​​​ನಲ್ಲಿ ಹಂಚಿಕೊಂಡಿರುವ ವಿಜಯ್ ದೇವರಕೊಂಡ, ಸಾರಾಅಲಿ ಖಾನ್, ದೇವರಕೊಂಡ ಎಂದು ಹೇಳಿದ್ದು ಕ್ಯೂಟ್ ಇತ್ತು. ಅದು ನನಗೆ ಬಹಳ ಇಷ್ಟವಾಯ್ತು. ಸಾರಾ ಅಲಿಖಾನ್ ಹಾಗೂ ಜಾನ್ವಿ ಕಪೂರ್ ಇಬ್ಬರಿಗೂ ಹಗ್ ಹಾಗೂ ನನ್ನ ಪ್ರೀತಿಯನ್ನು ಕಳಿಸಿಕೊಡುತ್ತಿದ್ದೇನೆ ಎಂದು ಲವ್ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ.
ವಿಜಯ್ ದೇವರಕೊಂಡ, ಸಾರಾ ಅಲಿಖಾನ್
ವಿಜಯ್ ದೇವರಕೊಂಡ, ಸಾರಾ ಅಲಿಖಾನ್

ವಿಜಯ್ ದೇವರಕೊಂಡ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಲೈಗರ್' ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಮತ್ತಷ್ಟು ಅಭಿಮಾನಿಳನ್ನು ಗಳಿಸಿದ್ದಾರೆ. ಜನ ಸಾಮಾನ್ಯರು ಮಾತ್ರವಲ್ಲ ಸೆಲಬ್ರಿಟಿಗಳಿಗೂ ಕೂಡಾ ಈ ನಟನಿಗೆ ಫಿದಾ ಆಗಿದ್ದಾರಂತೆ. ಅವರಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕೂಡಾ ಒಬ್ಬರು.

ಟ್ರೆಂಡಿಂಗ್​ ಸುದ್ದಿ

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Kuntebille Movie: ಸೆಟ್ಟೇರಿತು ತರ್ಲೆ ವಿಲೇಜ್‌ ನಿರ್ದೇಶಕರ ಕುಂಟೆಬಿಲ್ಲೆ ಸಿನಿಮಾ; ಇದು ಪ್ರೇಮ ಕಾಮದ ಸುತ್ತ ತಿರುಗುವ ಚಿತ್ರ

ಕಾಫಿ ವಿತ್ ಕರಣ್ ಸೀಸನ್​​​​​ 7 ಸಂಚಿಕೆಯ ಪ್ರೋಮೋವೊಂದು ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್ ಹಾಗೂ ಸಾರಾ ಅಲಿಖಾನ್ ಭಾಗವಹಿಸಿದ್ದರು. ಈ ವೇಳೆ ಕರಣ್ ಜೋಹರ್, ನೀವು ಡೇಟ್ ಮಾಡಬೇಕೆಂದುಕೊಂಡಿರುವ ಒಬ್ಬರ ಹೆಸರು ಹೇಳಿ ಎಂದು ಕೇಳಿದಾಗ, ಸಾರಾ ಅಲಿಖಾನ್ ವಿಜಯ್ ದೇವರಕೊಂಡ ಹೆಸರು ಹೇಳುತ್ತಾರೆ. ಈ ಪ್ರೋಮೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಸಾರಾ ಮಾತುಗಳು ವಿಜಯ್ ದೇವರಕೊಂಡ ಕಿವಿಗೂ ಬಿದ್ದಿದೆ. ಇದೀಗ ಅವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಕಾಫಿ ವಿತ್ ಕರಣ್ ಪ್ರೋಮೋವನ್ನು ತಮ್ಮ ಇನ್​​ಸ್ಟಾಗ್ರಾಮ್​ ಸ್ಟೇಟಸ್​​​​​​ನಲ್ಲಿ ಹಂಚಿಕೊಂಡಿರುವ ವಿಜಯ್ ದೇವರಕೊಂಡ, ಸಾರಾಅಲಿ ಖಾನ್, ದೇವರಕೊಂಡ ಎಂದು ಹೇಳಿದ್ದು ಕ್ಯೂಟ್ ಇತ್ತು. ಅದು ನನಗೆ ಬಹಳ ಇಷ್ಟವಾಯ್ತು. ಸಾರಾ ಅಲಿಖಾನ್ ಹಾಗೂ ಜಾನ್ವಿ ಕಪೂರ್ ಇಬ್ಬರಿಗೂ ಹಗ್ ಹಾಗೂ ನನ್ನ ಪ್ರೀತಿಯನ್ನು ಕಳಿಸಿಕೊಡುತ್ತಿದ್ದೇನೆ ಎಂದು ಲವ್ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ. ಲೈಗರ್ ಚಿತ್ರದ ಮೂಲಕ ವಿಜಯ್ ದೇವರಕೊಂಡ ಕೀರ್ತಿ ಬಾಲಿವುಡ್​​​ವರೆಗೂ ಹಬ್ಬರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

<p>ವಿಜಯ್ ದೇವರಕೊಂಡ ಇನ್​​ಸ್ಟಾಗ್ರಾಮ್ ಸ್ಟೇಟಸ್</p>

ಇತ್ತೀಚೆಗೆ ಭಾರೀ ಸದ್ದು ಮಾಡಿದ್ದ ಲೈಗರ್ ಪೋಸ್ಟರ್​

ಜುಲೈ 2 ರಂದು ಲೈಗರ್ ಚಿತ್ರತಂಡ ಬಿಡುಗಡೆ ಮಾಡಿದ್ದ ಪೋಸ್ಟರ್​​​ ಭಾರೀ ಸದ್ದು ಮಾಡಿತ್ತು. ಈ ಪೋಸ್ಟರ್​​​​​​​​ನಲ್ಲಿ ವಿಜಯ್ ದೇವರಕೊಂಡ ನ್ಯೂಡ್ ಲುಕ್​​​​​ನಲ್ಲಿ ಕಾಣಿಸಿಕೊಂಡಿದ್ದು ಗುಲಾಬಿ ಹೂವಿನ ಬೊಕೆಯಿಂದ ಮಾನ ಮುಚ್ಚಿಕೊಂಡಿದ್ದಾರೆ. ಜೊತೆಗೆ ಎರಡೂ ಕೈಗಳಿಗೂ ಹ್ಯಾಂಡ್ ಗ್ಲೌಸ್ ಧರಿಸಿದ್ದಾರೆ. ಪೋಸ್ಟರ್ ಮೇಲೆ Saala Crossbreed ಎಂಬ ಇಂಗ್ಲೀಷ್ ಅಕ್ಷರಗಳನ್ನು ಬರೆಯಲಾಗಿದೆ. ಪೋಸ್ಟರ್​​​ ವಿಚಾರಕ್ಕೆ ಹಲವರು ವಿಜಯ್ ಬಗ್ಗೆ ಬೇಸರ ವ್ಯಕ್ತಪಡಿಸಿದರೂ, ಆ ಪೋಸ್ಟರ್ ಏಕೆ ಸೃಷ್ಟಿಸಲಾಯ್ತು ಎಂಬ ಕಾರಣ ತಿಳಿದು ಸಮಾಧಾನ ವ್ಯಕ್ತಪಡಿಸಿದ್ದರು.

ಬಾಲಿವುಡ್​​​​ ಫಿಲ್ಮ್​ ಮೇಕರ್ ಕರಣ್ ಜೋಹರ್ ಅವರ ಧರ್ಮ ​ಆರ್ಟ್ಸ್​ ಹಾಗೂ ಪುರಿ ಜಗನ್ನಾಥ್ ಅವರ ಪುರಿ ಕನೆಕ್ಟ್ಸ್​​​ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಲೈಗರ್​​​​​​​​​​​​​​​​​​​​​​​​​​ ಚಿತ್ರವನ್ನು ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ತೆಲುಗು ನಟಿ ಚಾರ್ಮಿ ಕೌರ್ ಕೂಡಾ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕಿಯಾಗಿ ಅನನ್ಯ ಪಾಂಡೆ ನಟಿಸುತ್ತಿದ್ದಾರೆ. ರಮ್ಯಕೃಷ್ಣನ್, ರೊನಿತ್ ರಾಯ್, ಆಲಿ, ಮಕರಂದ್ ದೇಶಪಾಂಡೆ, ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಹಾಗೂ ಇನ್ನಿತರರು ನಟಿಸಿರುವ ಚಿತ್ರಕ್ಕೆ ಮಣಿಶರ್ಮ ಸಂಗೀತ ನೀಡಿದ್ದಾರೆ. ಆಗಸ್ಟ್ 25 ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಅಕ್ಡಿ ಪಕ್ಡಿ... ಪಾರ್ಟಿ ಸಾಂಗ್ ಕೂಡಾ ಬಿಡುಗಡೆಯಾಗಿತ್ತು. ಸದ್ಯಕ್ಕೆ ಸಿನಿಮಾ ತಂಡ ಪೋಸ್ಟ್​ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಇದ್ದು ಸಿನಿಮಾ ನೋಡಲು ವಿಜಯ್ ಅಭಿಮಾನಿಗಳು ಬಹಳ ಎಕ್ಸೈಟ್ ಆಗಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ