logo
ಕನ್ನಡ ಸುದ್ದಿ  /  ಮನರಂಜನೆ  /  Kareena Kapoor: ಈ ದೇಶದ ಜನಸಂಖ್ಯೆಗೆ ಸೈಫ್ ಸಾಕಷ್ಟು ಕೊಡುಗೆ ನೀಡಿದ್ದಾರೆ...ಬೆಬೊ ಹೀಗೆ ಹೇಳಲು ಕಾರಣ ಏನು...?

Kareena Kapoor: ಈ ದೇಶದ ಜನಸಂಖ್ಯೆಗೆ ಸೈಫ್ ಸಾಕಷ್ಟು ಕೊಡುಗೆ ನೀಡಿದ್ದಾರೆ...ಬೆಬೊ ಹೀಗೆ ಹೇಳಲು ಕಾರಣ ಏನು...?

HT Kannada Desk HT Kannada

Jul 20, 2022 10:02 AM IST

ಮೂರನೇ ಪ್ರೆಗ್ನೆನ್ಸಿ ರೂಮರ್ ಬಗ್ಗೆ ಕರೀನಾ ಸ್ಪಷ್ಟನೆ

    • ಈ ದೇಶದ ಜನಸಂಖ್ಯೆಗೆ ಈಗಾಗಲೇ ಸಾಕಾಗುವಷ್ಟು ಕೊಡುಗೆ ನೀಡಿರುವುದಾಗಿ ಸೈಫ್ ಹೇಳುತ್ತಿದ್ದಾರೆ ಎಂದು ಕರೀನಾ ಕಪೂರ್ ತಮ್ಮ ಇನ್​​ಸ್ಟಾಗ್ರಾಮ್ ಸ್ಟೇಟಸ್​​​​​​​​ ಬರೆದುಕೊಂಡಿದ್ದಾರೆ.
ಮೂರನೇ ಪ್ರೆಗ್ನೆನ್ಸಿ ರೂಮರ್ ಬಗ್ಗೆ ಕರೀನಾ ಸ್ಪಷ್ಟನೆ
ಮೂರನೇ ಪ್ರೆಗ್ನೆನ್ಸಿ ರೂಮರ್ ಬಗ್ಗೆ ಕರೀನಾ ಸ್ಪಷ್ಟನೆ

ಬಾಲಿವುಡ್ ನಟಿ ಕರೀನಾ ಕಪೂರ್ ಕಳೆದ ವರ್ಷ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಈಗಾಗಲೇ ಮಗುವಿಗೆ ಜೆಹ್ ಎಂದು ಕೂಡಾ ನಾಮಕರಣ ಮಾಡಿದ್ದಾರೆ. 2 ವರ್ಷಗಳ ಬ್ರೇಕ್ ಬಳಿಕ ಇತ್ತೀಚೆಗಷ್ಟೇ ಕರೀನಾ ಮತ್ತೆ ನಟನೆಗೆ ವಾಪಸಾಗಿದ್ದಾರೆ. ಈ ನಡುವೆ ಕರೀನಾ ಕಪೂರ್ ಮತ್ತೆ ಗರ್ಭಿಣಿಯಾಗಿದ್ದು ಮೂರನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಮಾತು ಬಾಲಿವುಡ್​​​​​ನಾದ್ಯಂತ ಕೇಳಿಬರುತ್ತಿದೆ.

ಟ್ರೆಂಡಿಂಗ್​ ಸುದ್ದಿ

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Kuntebille Movie: ಸೆಟ್ಟೇರಿತು ತರ್ಲೆ ವಿಲೇಜ್‌ ನಿರ್ದೇಶಕರ ಕುಂಟೆಬಿಲ್ಲೆ ಸಿನಿಮಾ; ಇದು ಪ್ರೇಮ ಕಾಮದ ಸುತ್ತ ತಿರುಗುವ ಚಿತ್ರ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

ಸದ್ಯಕ್ಕೆ ಕರೀನಾ ಕಪೂರ್, ಪತಿ ಸೈಫ್ ಅಲಿ ಖಾನ್ ಹಾಗೂ ಮಕ್ಕಳೊಂದಿಗೆ ಯೂರೋಪ್ ಟ್ರಿಪ್​​​​ನಲ್ಲಿದ್ದಾರೆ. ಅಲ್ಲಿ ತೆಗೆಸಿದ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಕರೀನಾ ಕಪೂರ್ ಅವರನ್ನು ನೋಡಿದ ಹಲವರು ಕರೀನಾ ಬೇಬಿ ಬಂಪ್ ಕಾಣುತ್ತಿದೆ, ಅವರು ಮತ್ತೆ ಗರ್ಭಿಣಿ, ಅವರು ಮೂರನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕರೀನಾ ಕಪೂರ್ ತಮ್ಮ ಇನ್​ಸ್ಟಾಗ್ರಾಮ್​​​​ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಾಗೇ ನಾನು ಗರ್ಭಿಣಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

<p>ಕರೀನಾ ಇನ್​​​​ಸ್ಟಾಗ್ರಾಮ್ ಸ್ಟೇಟಸ್</p>

ದಯವಿಟ್ಟು ಸುಮ್ಮನಿರಿ, ನಾನು ಮತ್ತೆ ಗರ್ಭಿಣಿ ಅಲ್ಲ, ಈ ದೇಶದ ಜನಸಂಖ್ಯೆಗೆ ಈಗಾಗಲೇ ಸಾಕಾಗುವಷ್ಟು ಕೊಡುಗೆ ನೀಡಿರುವುದಾಗಿ ಸೈಫ್ ಹೇಳುತ್ತಿದ್ದಾರೆ ಎಂದು ಕರೀನಾ ಕಪೂರ್ ತಮ್ಮ ಇನ್​​ಸ್ಟಾಗ್ರಾಮ್ ಸ್ಟೇಟಸ್​​​​​​​​ ಬರೆದುಕೊಂಡಿದ್ದಾರೆ. ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ 16 ಅಕ್ಟೋಬರ್ 2012 ರಂದು ಮದುವೆಯಾಗಿದ್ದರು. 2016 ರಲ್ಲಿ ಈ ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿಗೆ ತೈಮೂರ್ ಎಂದು ಹೆಸರಿಟ್ಟಿದ್ದಾರೆ. ಕಳೆದ ವರ್ಷ ಜನಿಸಿದ ಎರಡನೇ ಗಂಡು ಮಗುವಿಗೆ ಜೇಹ್ ಎಂದು ಹೆಸರಿಡಲಾಗಿದೆ.

ಸೈಫ್ ಅಲಿ ಖಾನ್​​ಗೆ ಕರೀನಾ ಎರಡನೇ ಪತ್ನಿ, 1991 ರಲ್ಲಿ ಸೈಫ್, ತಮಗಿಂತ ಹಿರಿಯವರಾದ ನಟಿ ಅಮೃತಾ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಜನಿಸಿದ ಮಕ್ಕಳೇ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ. 13 ವರ್ಷಗಳ ದಾಂಪತ್ಯ ಜೀವನ 2004 ರಲ್ಲಿ ಕೊನೆಗೊಂಡಿತು. ಸೈಫ್ ಪುತ್ರಿ ಸಾರಾ ಅಲಿ ಖಾನ್ ಕೂಡಾ ಬಾಲಿವುಡ್​​​​ನಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಕರೀನಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾ ತೆರೆ ಕಾಣಬೇಕಿದೆ. ಆಗಸ್ಟ್ 11 ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದ್ದು ಚಿತ್ರದಲ್ಲಿ ಕರೀನಾ ಆಮೀರ್ ಖಾನ್ ಪತ್ನಿಯಾಗಿ ನಟಿಸಿದ್ದಾರೆ. ಆಮೀರ್ ಖಾನ್ ಪ್ರೊಡಕ್ಷನ್ಸ್ ಹಾಗೂ ವಯಾಕಾಮ್ 18 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ತೆಲುಗು ನಟ ನಾಗಚೈತನ್ಯ ಬಾಲಿವುಡ್​​​ಗೆ ಎಂಟ್ರಿ ಕೊಟ್ಟಿದ್ದಾರೆ. ಇದು ಹಾಲಿವುಡ್​​​​ನ ಫಾರೆಸ್ಟ್ ಗಂಪ್ ಚಿತ್ರದಿಂದ ಸ್ಪೂರ್ತಿ ಪಡೆದು ತಯಾರಾಗಿರುವ ಸಿನಿಮಾ. ಜಪಾನಿ ಕಾದಂಬರಿ ಆಧಾರಿತ ಮತ್ತೊಂದು ಸಿನಿಮಾವೊಂದರಲ್ಲಿ ಕರೀನಾ ನಟಿಸಿದ್ದು ಈ ಸಿನಿಮಾ ಒಟಿಟಿಯಲ್ಲಿ ತೆರೆ ಕಾಣಲಿದೆ. ಈ ಚಿತ್ರವನ್ನು ಸುಜಯ್ ಘೋಷ್ ನಿರ್ದೇಶಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ