logo
ಕನ್ನಡ ಸುದ್ದಿ  /  ಮನರಂಜನೆ  /  Starkids: 2023ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಸ್ಟಾರ್​ ಕಿಡ್ಸ್​ಗಳ್ಯಾರು? ಕ್ಲಿಕ್​ ಆದವರೆಷ್ಟು?

Starkids: 2023ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಸ್ಟಾರ್​ ಕಿಡ್ಸ್​ಗಳ್ಯಾರು? ಕ್ಲಿಕ್​ ಆದವರೆಷ್ಟು?

HT Kannada Desk HT Kannada

Dec 25, 2023 10:00 AM IST

ಸುಹಾನಾ ಖಾನ್ - ಅಗಸ್ತ್ಯ ನಂದಾ - ಖುಷಿ ಕಪೂರ್

    • Bollywood Starkids: ಕೆಲವು ವರ್ಷಗಳಿಂದ ನೆಲಕಚ್ಚಿದ್ದ ಬಾಲಿವುಡ್​ ಸದ್ಯ ಚೇತರಿಕೆ ಕಾಣುತ್ತಿದೆ. 2023 ಬಾಲಿವುಡ್​ನ ಪಾಲಿಗೆ ಹೊಸ ಪ್ರತಿಭೆಗಳ ಅನಾವರಣದ ವರ್ಷವಾಗಿದ್ದು, ಅನೇಕ ಸ್ಟಾರ್​ ಕಿಡ್​ಗಳು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಸುಹಾನಾ ಖಾನ್ - ಅಗಸ್ತ್ಯ ನಂದಾ - ಖುಷಿ ಕಪೂರ್
ಸುಹಾನಾ ಖಾನ್ - ಅಗಸ್ತ್ಯ ನಂದಾ - ಖುಷಿ ಕಪೂರ್

ತಂದೆ ತಾಯಿ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ಆಗಿ ಮೆರೆದಿದ್ದರೆ ಅವರ ಮಕ್ಕಳು ಕೂಡ ಅಪ್ಪ ಅಮ್ಮನ ಹಾದಿ ಹಿಡಿಯುವುದು ಹೊಸತೇನಲ್ಲ. ಪೋಷಕರ ದಾರಿಯನ್ನೇ ತುಳಿಯಲು ಹೋಗಿ ಸಾಧನೆಯ ಶಿಖರವನ್ನೇರಿದವರು ಒಂದೆಡೆಯಾದರೆ ಹೇಳ ಹೆಸರಿಲ್ಲದೇ ಹೋದವರು ಇನ್ನೂ ಹಲವರು. ಇನ್ನೂ ಕೆಲವರು ನೆಪೋಟಿಸಂ ಮೂಲಕ ಸಿನಿಮಾ ರಂಗದಲ್ಲಿ ಹೇಗೋ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದರ ಬಗ್ಗೆ ಈಗ ಮಾತನಾಡಲು ಕಾರಣವಿದೆ. ಬಾಲಿವುಡ್​​ನಲ್ಲಿ ಈ ಬಾರಿ ಸಾಲು ಸಾಲು ಸ್ಟಾರ್​ ಕಿಡ್​ಗಳು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯಾರು ಅವರೆಲ್ಲ ಅನ್ನೋದನ್ನು ತಿಳಿದುಕೊಳ್ಳೋಣ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಸುಹಾನಾ ಖಾನ್​ : ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಶಾರೂಕ್​ ಖಾನ್​ ಪುತ್ರಿ ಸುಹಾನಾ ಖಾನ್​ ಬಾಲಿವುಡ್​ಗೆ ಬರುತ್ತಿದ್ದಾರೆ ಎಂಬ ಸುದ್ದಿ ಅನೇಕ ವರ್ಷಗಳಿಂದ ಸುದ್ದಿಯಲ್ಲಿತ್ತು. ಕೊನೆಗೂ ಈ ವದಂತಿಗಳು ನಿಜವಾಗಿದ್ದು ತಂದೆಯ ಹಾದಿಯನ್ನೇ ತುಳಿಯೋಕೆ ಸುಹಾನಾ ನಿರ್ಧರಿಸಿದಂತಿದೆ . ನವೆಂಬರ್​ 7ರಂದು ನೆಟ್​ಫ್ಲಿಕ್ಸ್​ನಲ್ಲಿ ಜೋಯಾ ಅಖ್ತರ್​ ನಿರ್ದೇಶನದ 'ದಿ ಆರ್ಚೀಸ್'​​ ರಿಲೀಸ್​ ಆಗಿದೆ. ಇದರಲ್ಲಿ ಸುಹಾನಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಹಾನಾ ಖಾನ್​ರ ಈ ಚೊಚ್ಚಲ ಸಿನಿಮಾ ಮಿಶ್ರ ಪ್ರತಿಕ್ರಿಯೆಯನ್ನು ಗಳಿಸಿದೆ. ವೆರೋನಿಕಾ ಪಾತ್ರದಲ್ಲಿ ಕಾಣಿಸಿಕೊಂಡ ಸುಹಾನಾ ನಟನೆಯನ್ನು ಬಹುತೇಕರು ಇಷ್ಟಪಟ್ಟಿಲ್ಲ.

ಖುಷಿ ಕಪೂರ್ : ಬಾಲಿವುಡ್​ ನಟಿ ದಿವಂಗತ ಶ್ರೀದೇವಿ ಪುತ್ರಿ ಖುಷಿ ಕಪೂರ್​ ಕೂಡ ತನ್ನ ಸಹೋದರಿ ಜಾನ್ವಿ ಕಪೂರ್​ರಂತೆಯೇ ಅಮ್ಮನ ಹಾದಿಯನ್ನೇ ಹಿಡಿದಿದ್ದಾರೆ, ಅಂದಹಾಗೆ ಖುಷಿ ಕಪೂರ್​ ಕೂಡ ಸುಹಾನ್​ ಖಾನ್​ ನಟಿಸಿರುವ 'ದಿ ಆರ್ಚೀಸ್' ಸಿನಿಮಾದ ಮೂಲಕವೇ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಸುಹಾನಾ ಖಾನ್​ಗಿಂತ ಖುಷಿ ಕಪೂರ್​ ಚೆನ್ನಾಗಿ ನಟಿಸಿದ್ದಾರೆ ಎನ್ನುವುದು ಬಹುತೇಕ ವೀಕ್ಷಕರ ಅಭಿಪ್ರಾಯವಾಗಿದೆ. ಅಲ್ಲದೇ ಅನೇಕರು ಖುಷಿ ಕಪೂರ್​ಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಭವಿಷ್ಯ ಇರುವಂತೆ ಕಾಣ್ತಿದೆ ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ.

ಅಗಸ್ತ್ಯ ನಂದಾ : 'ದಿ ಆರ್ಚೀಸ್'​ ಎನ್ನುವುದು ಒಂದು ರೀತಿಯಲ್ಲಿ ಸ್ಟಾರ್​ ಕಿಡ್​ಗಳ ಸಿನಿಮಾ ಎಂದು ಹೇಳಬಹುದಾಗಿದೆ. ಏಕೆಂದರೆ ಇದೇ ಸಿನಿಮಾದ ಮೂಲಕ ಅಗಸ್ತ್ಯಾ ನಂದಾ ಕೂಡ ಬಾಲಿವುಡ್​​ಗೆ ಕಾಲಿಟ್ಟಿದ್ದಾರೆ. ಅಗಸ್ತ್ಯ ನಂದಾ ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಛನ್​ರ ಮೊಮ್ಮಗ. ಅಮಿತಾಬ್​ ಹಾಗೂ ಜಯಾ ಬಚ್ಛನ್​ ಪುತ್ರಿಯಾದ ಶ್ವೇತಾ ಬಚ್ಛನ್​ ಹಾಗೂ ನಿಖಿಲ್​ ನಂದಾ​ ದಂಪತಿಯ ಮಗ. ಬಚ್ಚನ್​ ಕುಟುಂಬದಿಂದ ಚಿತ್ರರಂಗಕ್ಕೆ ಕಾಲಿಟ್ಟ ಮೂರನೇ ತಲೆಮಾರು ಎನಿಸಿದ್ದಾರೆ.

ಅಲಿಜೆ ಅಗ್ನಿಹೋತ್ರಿ : ಅಲಿಜೆ ಅಗ್ನಿಹೋತ್ರಿ ಸಲ್ಮಾನ್​ ಖಾನ್​ರ ಸೊಸೆ. ಇವರು ಸೌಮೇಂದ್ರ ಪಾದಿ ಆ್ಯಕ್ಷನ್​ ಕಟ್​ ಹೇಳಿರುವ 'ಫಾರೆ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್​ 24ರಂದು ಈ ಸಿನಿಮಾ ತೆರೆ ಕಂಡಿದೆ.

ಪಲೋಮಾ ದಿಲ್ಲೋನ್​ : ನಟಿ ಪೂನಂ ದಿಲ್ಲೋನ್​ ಪುತ್ರಿ ಪಲೋಮಾ ದಿಲ್ಲೋನ್​ ಕೂಡ ಈ ವರ್ಷ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ, 'ಡೋನೋ' ಸಿನಿಮಾದಲ್ಲಿ ನಟಿ ಪಲೋಮಾ ದಿಲ್ಲೋನ್​ ಬಣ್ಣ ಹಚ್ಚಿದ್ದಾರೆ. ಪಲೋಮಾ ದಿಲ್ಲೋನ್​ ನಟನೆಯು ಸಿನಿಪ್ರಿಯರಿಗೆ ಇಷ್ಟವಾದಂತಿದೆ.

ರಾಜ್​ವೀರ್​ ಡಿಯೋಲ್​ : ಪಲೋಮಾ ದಿಲ್ಲೋನ್​ ನಟಿಸಿರುವ 'ಡೋನೋ' ಸಿನಿಮಾದಲ್ಲಿ ನಟ ರಾಜ್​ವೀರ್​ ಡಿಯೋಲ್​ ಕೂಡ ನಟಿಸಿದ್ದಾರೆ. ರಾಜ್​ವೀರ್​ ಡಿಯೋಲ್​ಗೂ ಇದು ಮೊದಲ ಸಿನಿಮಾವಾಗಿದೆ. ಅಂದಹಾಗೆ ಇವರು ಬಾಲಿವುಡ್​ ನಟ ಸನ್ನಿ ಡಿಯೋಲ್​ರ ಕಿರಿಯ ಪುತ್ರ.ರಾಜ್​ವೀರ್ ನಟನೆಯು ಸನ್ನಿ ಡಿಯೋಲ್​ರ ಕಾಲವನ್ನು ನೆನಪಿಸುವಂತಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಪಲಕ್​ ತಿವಾರಿ: ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡಿರುವ ನಟಿ ಶ್ವೇತಾ ತಿವಾರಿ ಪುತ್ರಿ ಪಲಕ್​ ತಿವಾರಿ ಕೂಡ ತಮ್ಮ ಅದೃಷ್ಟ ಪರೀಕ್ಷೆ 2023ನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. 'ಕಿಸಿ ಕಾ ಭಾಯ್​ ಕಿಸಿ ಕಾ ಜಾನ್'​ ಸಿನಿಮಾದಲ್ಲಿ ಪಲಕ್​ ತಿವಾರಿ ನಟಿಸಿದ್ದಾರೆ. ಅಲ್ಲದೇ ಪಲಕ್​ ಸಲ್ಮಾನ್​ ಖಾನ್​ರ ಜೊತೆಯಲ್ಲಿ ತೆರೆ ಹಂಚಿಕೊಂಡಿರೋದು ಮತ್ತೊಂದು ವಿಶೇಷ. ಆದರೆ ಪಲಕ್​ ತಿವಾರಿ ಈ ಹಿಂದೆ ಬಿಜಲಿ ಬಿಜಲಿ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ