logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Elections: ನಾಣ್ಯಗಳಲ್ಲಿಯೇ ಠೇವಣಿ ಕಟ್ಟಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು, ನಾಣ್ಯ ಎಣಿಸಿ ಸಿಬ್ಬಂದಿ ಸುಸ್ತು

Karnataka Elections: ನಾಣ್ಯಗಳಲ್ಲಿಯೇ ಠೇವಣಿ ಕಟ್ಟಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು, ನಾಣ್ಯ ಎಣಿಸಿ ಸಿಬ್ಬಂದಿ ಸುಸ್ತು

Praveen Chandra B HT Kannada

Apr 18, 2023 03:23 PM IST

ನಾಣ್ಯ ರೂಪದಲ್ಲಿ ಠೇವಣಿ ನೀಡಿದ ಯಾದಗಿರಿ ಪಕ್ಷೇತರ ಅಭ್ಯರ್ಥಿ ಯಂಕಪ್ಪ ದೇವಿಂದ್ರಪ್ಪ ರಾಮಸಮುದ್ರ (ಎಡ) ಮತ್ತು ರಾಣೇಬೆನ್ನೂರಿನ ಆಮ್‌ ಆದ್ಮಿ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ್‌ (ಬಲಚಿತ್ರ).

    • ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections) ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಯಾದಗಿರಿ (Yadagir News) ಮತ್ತು ರಾಣೆಬೆನ್ನೂರಿನಲ್ಲಿ (Haveri News) ಅಭ್ಯರ್ಥಿಗಳು ನಾಣ್ಯ ರೂಪದಲ್ಲಿ ಚುನಾವಣಾಧಿಕಾರಿಗಳಿಗೆ ಠೇವಣಿ ನೀಡಿ ನಾಮಪತ್ರ ಸಲ್ಲಿಸಿದ್ದಾರೆ.
ನಾಣ್ಯ ರೂಪದಲ್ಲಿ ಠೇವಣಿ ನೀಡಿದ ಯಾದಗಿರಿ ಪಕ್ಷೇತರ ಅಭ್ಯರ್ಥಿ ಯಂಕಪ್ಪ ದೇವಿಂದ್ರಪ್ಪ ರಾಮಸಮುದ್ರ (ಎಡ) ಮತ್ತು ರಾಣೇಬೆನ್ನೂರಿನ ಆಮ್‌ ಆದ್ಮಿ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ್‌   (ಬಲಚಿತ್ರ).
ನಾಣ್ಯ ರೂಪದಲ್ಲಿ ಠೇವಣಿ ನೀಡಿದ ಯಾದಗಿರಿ ಪಕ್ಷೇತರ ಅಭ್ಯರ್ಥಿ ಯಂಕಪ್ಪ ದೇವಿಂದ್ರಪ್ಪ ರಾಮಸಮುದ್ರ (ಎಡ) ಮತ್ತು ರಾಣೇಬೆನ್ನೂರಿನ ಆಮ್‌ ಆದ್ಮಿ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ್‌ (ಬಲಚಿತ್ರ).

ಯಾದಗಿರಿ: ಕರ್ನಾಟಕ ವಿಧಾನಸಭೆ ಚುನಾವಣಾ ಹಬ್ಬವು ಹಲವು ಸ್ವಾರಸ್ಯಕರ ಸಂಗತಿಗಳಿಗೆ ಸಾಕ್ಷಿಯಾಗುತ್ತಿದೆ. ಮಂಗಳವಾರ ಯಾದಗಿರಿಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇವಲ 1 ರೂಪಾಯಿ ನಾಣ್ಯಗಳಲ್ಲಿಯೇ ಹತ್ತು ಸಾವಿರ ರೂ.ನ ಠೇವಣಿ ಕಟ್ಟಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇದೇ ರೀತಿ ಹಾವೇರಿಯಲ್ಲಿಯೂ ಆಮ್‌ ಆದ್ಮಿ ಅಭ್ಯರ್ಥಿಯೊಬ್ಬರು ನಾಣ್ಯಗಳ ಮೂಲಕವೇ ಚುನಾವಣಾ ಠೇವಣಿ ಕಟ್ಟಿ ನಾಮಪತ್ರ ಸಲ್ಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ಬೆಂಗಳೂರಿನಲ್ಲಿ ಮೇ 18, 19ಕ್ಕೆ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ; ಆರೆಂಜ್ ಅಲರ್ಟ್ ಘೋಷಣೆ -Bengaluru Rain

ಎಸ್‌ಎಸ್‌ಎಲ್‌ಸಿ ಕಡಿಮೆ ಫಲಿತಾಂಶ ಬಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ; ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ರದ್ದು, ಮಹತ್ವದ ತೀರ್ಮಾನ

ಲೈಂಗಿಕ ದೌರ್ಜನ್ಯಕ್ಕೊಳದ ಮಹಿಳೆ ಅಪಹರಣ ಆರೋಪ ಪ್ರಕರಣ; ಮೇ 20ಕ್ಕೆ ಹೆಚ್‌ಡಿ ರೇವಣ್ಣ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯಂಕಪ್ಪ ದೇವಿಂದ್ರಪ್ಪ ರಾಮಸಮುದ್ರ ಅವರು ಒಂದು ರೂಪಾಯಿ ನಾಣ್ಯಗಳಲ್ಲಿಯೇ ಠೇವಣಿ ಕಟ್ಟಿದ್ದಾರೆ. ವಿಶೇಷವೆಂದರೆ, ಈ ನಾಣ್ಯಗಳನ್ನು ಯಾದಗಿರಿ ಕ್ಷೇತ್ರದ ಹಳ್ಳಿಗಳಿಂದ ಇವರು ಜನರಿಂದ ಸಂಗ್ರಹಿಸಿದ್ದಾರೆ. ಪ್ರಜಾವಾಣಿ ವರದಿ ಪ್ರಕಾರ ಈ ಪಕ್ಷೇತರ ಅಭ್ಯರ್ಥಿಯು ಕಳೆದ ಒಂದು ವರ್ಷದಲ್ಲಿ ಪಾದಯಾತ್ರೆ ಮೂಲಕ ಹಳ್ಳಿಹಳ್ಳಿಗಳಿಗೆ ತೆರಳಿ ಈ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಜನರಿಂದ ಕೇವಲ ಒಂದು ರೂಪಾಯಿ ಮಾತ್ರ ಸಂಗ್ರಹಿಸಿದ್ದು, ಅದಕ್ಕಿಂತ ಹೆಚ್ಚು ಹಣ ನೀಡಿದರೂ ಇವರು ತೆಗೆದುಕೊಂಡಿಲ್ಲವಂತೆ.

ಮಂಗಳವಾರ ಇವರು ಯಾದಗಿರಿಯ ತಹಶೀಲ್ದಾರ್‌ ಕಚೇರಿಗೆ ನಾಣ್ಯದ ಚೀಲದ ಜತೆಗೆ ಆಗಮಿಸಿದರು. ಈ ಹಣದ ಮೂಟೆಯನ್ನು ಚುನಾವಣೆ ಅಧಿಕಾರಿಗಳಿಗೆ ನೀಡಿದರು. ಸುಮಾರು ಮೂವರು ಸಿಬ್ಬಂದಿ ಎರಡು ಗಂಟೆಗೂ ಹೆಚ್ಚು ಕಾಲ ಈ ನಾಣ್ಯವನ್ನು ಎಣಿಸಿ ಭರ್ತಿ 10 ಸಾವಿರ ರೂಪಾಯಿ ಇರುವುದನ್ನು ಖಾತ್ರಿ ಪಡಿಸಿಕೊಂಡಿದ್ದಾರೆ.

ಒಂದು ರೂಪಾಯಿಯ ಒಂದು ಮತದಾನದಿಂದ ನನಗೆ ಮತದಾನ ನೀಡಿ, ನಿಮಗೆ ಬಡತನದಿಂದ ಸ್ವಾತಂತ್ರ್ಯ ಕೊಡಿಸುವೆ ಎಂಬ ಸ್ಲೋಗನ್‌ ಹಿಡಿದುಕೊಂಡು ಇವರು ಪಾದಯಾತ್ರೆ ನಡೆಸಿದ್ದರು. ವಿಶೇಷವೆಂದರೆ, ಇವರು ಮೈಸೂರು ವಿಶ್ವವಿದ್ಯಾಲಯದಿಂದ ಪೊಲಿಟಿಕಲ್‌ ಸೈನ್ಸ್‌ನಲ್ಲಿ ಎಂಎ ಪದವಿ ಪಡೆದಿದ್ದಾರೆ. ತನ್ನ 23ನೇ ವಯಸ್ಸಿನಿಂದಲೇ ಜನರಲ್ಲಿ ಮತಾನದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಹಾವೇರಿಯಲ್ಲೂ ನಾಣ್ಯಗಳಲ್ಲಿಯೇ ಠೇವಣಿ ತುಂಬಿದ ಅಭ್ಯರ್ಥಿ

ಹಾವೇರಿ: ಯಾದಗಿರಿ ಮಾತ್ರವಲ್ಲದೆ ಮಂಗಳವಾರ ಹಾವೇರಿಯಲ್ಲಿಯೂ ಎಎಪಿ ಅಭ್ಯರ್ಥಿಯೊಬ್ಬರು ನಾಣ್ಯಗಳ ಮೂಲಕವೇ ಠೇವಣಿ ತುಂಬಿದ್ದಾರೆ. ರಾಣೇಬೆನ್ನೂರಿನಲ್ಲಿ ಹನುಮಂತಪ್ಪ ಕಬ್ಬಾರ್‌ ಚುನಾವಣೆಗೆ ಸ್ಪರ್ಧಿಸಲು ಠೇವಣಿ ಮೊತ್ತವನ್ನು ನಾಣ್ಯದಲ್ಲಿಯೇ ನೀಡಿದ್ದಾರೆ.

ನಾಣ್ಯಗಳನ್ನು ಮೊದಲು ಚುನಾವಣಾಧಿಕಾರಿಯೇ ಎಣಿಸಲು ಮುಂದಾಗಿದ್ದಾರೆ. ಬಳಿಕ ತಮ್ಮ ಸಿಬ್ಬಂದಿ ಸಹಾಯ ಪಡೆದಿದ್ದಾರೆ. ನಾಣ್ಯಗಳನ್ನು ಎಣಿಸಲು ಸಾಕಷ್ಟು ಸಮಯ ಬೇಕಿದ್ದರಿಂದ ನಾಣ್ಯ ಎಣಿಸುವ ಮೊದಲೇ ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಿದ್ದಾರೆ. ನಾಣ್ಯ ಎಣಿಸಿದ ಬಳಿಕ ರಸೀದಿ ನೀಡಿದ್ದಾರೆ.

ಹನುಮಂತಪ್ಪ ಕಬ್ಬಾರ್‌ ಅವರು 7.54 ಲಕ್ಷ ಚರಾಸ್ತಿ , 22 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದು, ತಾವು ಸಂಗ್ರಹಿಸಿದ ನಾಣ್ಯಗಳನ್ನೇ ಠೇವಣಿ ಕಟ್ಟಿದ್ದಾರೆ. ಹನುಮಂತಪ್ಪ ಕಬ್ಬಾರ್‌ ದಂಪತಿ ಬಳಿ 100 ಗ್ರಾಂ ಚಿನ್ನ , ಒಂದು ಬಜಾಜ್‌ ಬೈಕ್‌, ಒಂದು ಸೈಕಲ್‌ ಇದೆ.

ಚುನಾವಣೆಗೆ ಸ್ಪರ್ಧಿಸಲು 10 ಸಾವಿರ ರೂಪಾಯಿ ಠೇವಣಿ ಇಡುವುದು ಕಡ್ಡಾಯವಾಗಿದೆ. ಈ ಠೇವಣಿ ಹಣವನ್ನು ರಾಣೆಬೆನ್ನೂರು ಮತ್ತು ಯಾದಗಿರಿಯ ಇಬ್ಬರು ನಾಣ್ಯ ರೂಪದಲ್ಲಿ ನೀಡಿ ಅಚ್ಚರಿ ಹುಟ್ಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ