logo
ಕನ್ನಡ ಸುದ್ದಿ  /  ಕರ್ನಾಟಕ  /  Fact Check Cell: ಕರ್ನಾಟಕ ಫ್ಯಾಕ್ಟ್‌ ಚೆಕ್ ಸೆಲ್‌ ಜತೆಗೆ ಒಡಂಬಡಿಕೆಗೆ ಮಾನ್ಯತೆ ಪಡೆದ ಫ್ಯಾಕ್ಟ್‌ ಚೆಕರ್ಸ್ ಹಿಂದೇಟು, 8 ಅಂಶಗಳ ವಿವರಣೆ

Fact Check Cell: ಕರ್ನಾಟಕ ಫ್ಯಾಕ್ಟ್‌ ಚೆಕ್ ಸೆಲ್‌ ಜತೆಗೆ ಒಡಂಬಡಿಕೆಗೆ ಮಾನ್ಯತೆ ಪಡೆದ ಫ್ಯಾಕ್ಟ್‌ ಚೆಕರ್ಸ್ ಹಿಂದೇಟು, 8 ಅಂಶಗಳ ವಿವರಣೆ

HT Kannada Desk HT Kannada

Oct 17, 2023 04:23 PM IST

ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ

  • ಸುಳ್ಳು ಸುದ್ದಿ ನಿವಾರಣೆಗಾಗಿ ಕರ್ನಾಟಕ ಸರ್ಕಾರ ಸ್ಥಾಪಿಸಲು ಉದ್ದೇಶಿಸಿದ ಮಾಹಿತಿ ಅಸ್ವಸ್ಥತೆ ನಿವಾರಣಾ ಘಟಕ (Information Disorder Tackling Unit)ದ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲು ಐಎಫ್‌ಸಿಎನ್ ಮಾನ್ಯತೆ ಪಡೆದ ಫ್ಯಾಕ್ಟ್‌ ಚೆಕರ್ಸ್‌ ಹಿಂದೇಟು ಹಾಕಿದ್ದಾರೆ. ಈ ವಿದ್ಯಮಾನದ ವಿವರ 8 ಅಂಶಗಳ ವಿವರಣೆಯೊಂದಿಗೆ ಇಲ್ಲಿದೆ.

ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ
ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕರ್ನಾಟಕ ಫ್ಯಾಕ್ಟ್‌ ಚೆಕ್ ಸೆಲ್‌ ಅಥವಾ ಕರ್ನಾಟಕ ಸತ್ಯ ಪರಿಶೀಲನಾ ಘಟಕದ ಸ್ಥಾಪನೆಗೆ ಭಾರಿ ಹಿನ್ನಡೆಯಾಗಿದೆ. ಇಂಟರ್‌ನ್ಯಾಷನಲ್‌ ಫ್ಯಾಕ್ಟ್‌ ಚೆಕಿಂಗ್ ನೆಟ್‌ವರ್ಕ್ (ಐಎಫ್‌ಸಿಎನ್‌) ಮಾನ್ಯತೆ ಪಡೆದ 20 ಫ್ಯಾಕ್ಟ್‌ ಚೆಕರ್ಸ್ ಪೈಕಿ 19 ಚೆಕರ್ಸ್‌ ಕರ್ನಾಟಕ ಸರ್ಕಾರದ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲು ಹಿಂದೇಟು ಹಾಕಿರುವುದು ಗಮನಸೆಳೆದಿದೆ.

ಟ್ರೆಂಡಿಂಗ್​ ಸುದ್ದಿ

Mandya News: ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್‌ಐಆರ್‌ ದಾಖಲು

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕದ ಸುಳ್ಳು ಮಾಹಿತಿ ಪತ್ತೆ ಘಟಕ ಅಥವಾ ಕರ್ನಾಟಕದ ಮಾಹಿತಿ ಅಸ್ವಸ್ಥತೆ ನಿವಾರಣಾ ಘಟಕ (Information Disorder Tackling Unit) (IDTU) ಜತೆಗೆ ಒಡಂಬಡಿಕೆ ಮಾಡಿಕೊಳ್ಳಲು ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಫ್ಯಾಕ್ಟ್‌ ಚೆಕರ್ಸ್ ಹಿಂದೇಟು ಹಾಕಿದ್ದಾರೆ. ಸಂಪಾದಕೀಯ ಸ್ವಾತಂತ್ರ್ಯದ ಕೊರತೆ ಮತ್ತು ಕಾನೂನು ಕ್ರಮಕ್ಕೆ ಸಂಬಂಧಿಸಿದ ಅಂಶಗಳನ್ನು ಈ ಫ್ಯಾಕ್ಟ್‌ ಚೆಕರ್ಸ್ ಹೈಲೈಟ್ ಮಾಡಿದ್ದಾರೆ.

3 ಸ್ತರದ ಕರ್ನಾಟಕದ ಮಾಹಿತಿ ಅಸ್ವಸ್ಥತೆ ನಿವಾರಣಾ ಘಟಕ ಸ್ಥಾಪನೆಗೆ ಪ್ರಸ್ತಾವನೆ ಆಹ್ವಾನಿಸಿದ್ದ ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರವು ಹದಿನೈದು ದಿನಗಳ ಹಿಂದೆ ತನ್ನ 3-ಹಂತದ ಕರ್ನಾಟಕದ ಮಾಹಿತಿ ಅಸ್ವಸ್ಥತೆ ನಿವಾರಣಾ ಘಟಕ ಅನ್ನು ಸ್ಥಾಪಿಸಲು ಪ್ರಸ್ತಾವನೆಗಳನ್ನು ಆಹ್ವಾನಿಸಿದ್ದು ಸೋಮವಾರ ಸಂಜೆ 5 ಗಂಟೆಯ ಗಡುವು ನಿಗದಿ ಮಾಡಿತ್ತು. ಇಂಟರ್‌ನ್ಯಾಷನಲ್‌ ಫ್ಯಾಕ್ಟ್‌ ಚೆಕಿಂಗ್ ನೆಟ್‌ವರ್ಕ್ (ಐಎಫ್‌ಸಿಎನ್‌) ಮಾನ್ಯತೆ ಪಡೆದ ಫ್ಯಾಕ್ಟ್‌ ಚೆಕರ್ಸ್‌ಗೆ ಆದ್ಯತೆ ಎಂದು ನಿಬಂಧನೆಯಲ್ಲಿ ಹೇಳಿತ್ತು.

ಇಂಟರ್‌ನ್ಯಾಷನಲ್‌ ಫ್ಯಾಕ್ಟ್‌ ಚೆಕಿಂಗ್ ನೆಟ್‌ವರ್ಕ್ ತತ್ತ್ವಗಳಿಗೆ ವಿರುದ್ಧವಾದ ನಿಬಂಧನೆ ವಿಧಿಸಿದ ಕರ್ನಾಟಕ ಸರ್ಕಾರ

ಸಂಪಾದಕೀಯ ಸ್ವಾತಂತ್ರ್ಯದ ಕೊರತೆ ಮತ್ತು ಕಾನೂನು ಕ್ರಮಕ್ಕೆ ಸಂಬಂಧಿಸಿದ ಅಂಶಗಳು ಇಂಟರ್‌ನ್ಯಾಷನಲ್‌ ಫ್ಯಾಕ್ಟ್‌ ಚೆಕಿಂಗ್ ನೆಟ್‌ವರ್ಕ್ ತತ್ತ್ವಗಳಿಗೆ ವಿರುದ್ಧವಾಗಿದೆ ಎಂದು ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಫ್ಯಾಕ್ಟ್‌ ಚೆಕರ್ಸ್‌ ಹೇಳಿದ್ದಾರೆ.

ಇಂಟರ್‌ನ್ಯಾಷನಲ್‌ ಫ್ಯಾಕ್ಟ್‌ ಚೆಕಿಂಗ್ ನೆಟ್‌ವರ್ಕ್ ತತ್ತ್ವ ಏನು

ಸಂಪಾದಕೀಯ ಕೆಲಸವನ್ನು ರಾಜ್ಯ, ರಾಜಕೀಯ ಪಕ್ಷ ಅಥವಾ ರಾಜಕಾರಣಿ ನಿಯಂತ್ರಿಸುವ ಸಂಸ್ಥೆಗೆ ಇಂಟರ್‌ನ್ಯಾಷನಲ್‌ ಫ್ಯಾಕ್ಟ್‌ ಚೆಕಿಂಗ್ ನೆಟ್‌ವರ್ಕ್‌ನ ಮಾನ್ಯತೆಯ ಸ್ಥಾನಮಾನವನ್ನು ನೀಡಲಾಗುವುದಿಲ್ಲ.

ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಏನು ಹೇಳಿದ್ದರು

ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಈ ಹಿಂದೆ ಹಿಂದೂಸ್ತಾನ್ ಟೈಮ್ಸ್ ವಿರೋಧಾಭಾಸವನ್ನು ಉಲ್ಲೇಖಿಸಿದಾಗ ಆ ವಿಚಾರವಾಗಿ ಮಾತನಾಡುತ್ತ, ಅನೇಕ ಸತ್ಯ-ಪರೀಕ್ಷಕರು (ಫ್ಯಾಕ್ಟ್‌ ಚೆಕರ್ಸ್) ಸರ್ಕಾರದ ಯೋಜನೆಯಲ್ಲಿ ಕೈಜೋಡಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ನಂತರ ಜೂನ್ ಮೊದಲ ವಾರ, ಕರ್ನಾಟಕ ಸತ್ಯ ಪರಿಶೀಲನಾ ಘಟಕದ ಕುರಿತು ಪ್ರಿಯಾಂಕ್‌ ಖರ್ಗೆ ಮೊದಲು ಮಾತನಾಡಿದರು. ಅಕ್ಟೋಬರ್ 13 ರಂದು ಹೋಲನ್ ಅವರೊಂದಿಗೆ ಕನಿಷ್ಠ 16 ಸಂಸ್ಥೆಗಳು ವೀಡಿಯೊ ಕಾನ್ಫರೆನ್ಸ್ ನಡೆಸಿದಾಗ ಅದು ಪಂಡೋರಾ ಬಾಕ್ಸ್ ಅನ್ನು ತೆರೆದಾಗಿನಿಂದ ಕೋಶವನ್ನು ತಿರಸ್ಕರಿಸುವ ಬಗ್ಗೆ ಒಮ್ಮತವಿತ್ತು.

ಕರ್ನಾಟಕ ಸರ್ಕಾರದ ಜತೆಗೆ ಒಡಂಬಡಿಕೆ ಮಾಡಲು 20 ಫ್ಯಾಕ್ಟ್‌ ಚೆಕರ್ಸ್ ಪೈಕಿ 19 ಚೆಕರ್ಸ್‌ ಹಿಂದೇಟು

ಕರ್ನಾಟಕ ಸರ್ಕಾರದ ಜತೆಗೆ ಒಡಂಬಡಿಕೆ ಮಾಡುವುದಕ್ಕಾಗಿ ಪ್ರಸ್ತಾವನೆ ಸಲ್ಲಿಸುವ ಯಾವುದೇ ಉದ್ದೇಶ ಇಲ್ಲ ಎಂದು ಬೂಮ್, ಫ್ಯಾಕ್ಟ್ಲಿ, ಟಿವಿ ಟುಡೇ ನೆಟ್‌ವರ್ಕ್ ಮತ್ತು ಲಾಲಂಟಾಪ್, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ, ಕ್ವಿಂಟ್, ವಿಶ್ವಾಸ್ ನೆಟ್‌ವರ್ಕ್, ದಿ ಹೆಲ್ತಿ ಇಂಡಿಯನ್ ಪ್ರಾಜೆಕ್ಟ್, ನ್ಯೂಸ್‌ಚೆಕರ್, ಫ್ಯಾಕ್ಟ್‌ಚೆಕರ್.ಇನ್ ಮತ್ತು ನ್ಯೂಸ್‌ಮೊಬೈಲ್ ಸೇರಿ ಭಾರತದ 20 ಸತ್ಯ-ಪರೀಕ್ಷಕರಲ್ಲಿ 19 ಫ್ಯಾಕ್ಟ್‌ ಚೆಕರ್ಸ್ ಎಚ್‌ಟಿಗೆ ತಿಳಿಸಿದರು.

ಈ 20 ಫ್ಯಾಕ್ಟ್‌ ಚೆಕರ್ಸ್‌ ಪೈಕಿ 15 ಫ್ಯಾಕ್ಟ್ ಚೆಕರ್ಸ್ ತಮ್ಮ ಐಎಫ್‌ಸಿಎನ್ ಮಾನ್ಯತೆ ನವೀಕರಿಸಿದ್ದಾರೆ. ಈ ಪೈಕಿ ಲಾಲಂಟಾಪ್, ಲಾಜಿಕಲ್ ಇಂಡಿಯನ್, ಮತ್ತು ಡಿಜಿಟಲ್ ಫೊರೆನ್ಸಿಕ್, ರಿಸರ್ಚ್ ಮತ್ತು ಅನಾಲಿಟಿಕ್ಸ್ ಸೆಂಟರ್ ಮಾನ್ಯತೆ ನವೀಕರಣ ಹಂತದಲ್ಲಿದೆ. ಆಲ್ಟ್ ನ್ಯೂಸ್ ಮಾತ್ರ 202ರ ಏಪ್ರಿಲ್‌ನಿಂದ ಮಾನ್ಯತೆಯನ್ನು ನವೀಕರಿಸಿಲ್ಲ. ಐಎಫ್‌ಸಿಎನ್‌ ನ ಮಾನ್ಯತೆ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ.

ಕರ್ನಾಟಕ ಫ್ಯಾಕ್ಟ್‌ ಚೆಕ್ ಸೆಲ್‌ ಎಂದರೇನು

ಕರ್ನಾಟಕದಲ್ಲಿ ಸುಳ್ಳು ಸುದ್ದಿ ಪತ್ತೆ ಮಾಡುವುದು ಮತ್ತು ಅದನ್ನು ನಿಯಂತ್ರಿಸುವುದಕ್ಕೆ ಬೇಕಾಗಿ ಕರ್ನಾಟಕ ಸರ್ಕಾರ ಆರಂಭಿಸುವುದಾಗಿ ಘೋಷಿಸಿದ ಘಟಕ ಕರ್ನಾಟಕ ಫ್ಯಾಕ್ಟ್‌ ಚೆಕ್ ಸೆಲ್‌ ಅಥವಾ ಕರ್ನಾಟಕ ಸತ್ಯ ಪರಿಶೀಲನಾ ಘಟಕ ಅಥವಾ ಕರ್ನಾಟಕ ಸತ್ಯಶೋಧನಾ ಘಟಕ (Karnataka fact-check cell). ಇದನ್ನು ಕರ್ನಾಟಕದ ಮಾಹಿತಿ ಅಸ್ವಸ್ಥತೆ ನಿವಾರಣಾ ಘಟಕ (Karnataka’s Information Disorder Tackling Unit (IDTU)) ಎಂದು ಕರೆಯಲಾಗಿದೆ.

ಕರ್ನಾಟಕ ಫ್ಯಾಕ್ಟ್‌ ಚೆಕ್ ಸೆಲ್‌ನ ಕೆಲಸವೇನು?

ಕರ್ನಾಟಕ ಮಾಹಿತಿ ಅಸ್ವಸ್ಥತೆ ನಿವಾರಣಾ ಘಟಕ ಅಥವಾ ಕರ್ನಾಟಕ ಸತ್ಯಶೋಧನಾ ಘಟಕದ ಜತೆಗೆ ಒಡಂಬಡಿಕೆ ಮಾಡಿಕೊಂಡ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಫ್ಯಾಕ್ಟ್‌ ಚೆಕರ್ಸ್‌ ಸುಳ್ಳು ಸುದ್ದಿ, ಸುಳ್ಳು ಮಾಹಿತಿಯ ಮೂಲ ಪತ್ತೆ ಮಾಡಲಿದ್ದಾರೆ. ಸುಳ್ಳು ಸುದ್ದಿಯ ಸೃಷ್ಟಿ ಮತ್ತು ಪರಿಣಾಮದ ಮೇಲೆ ನಿಗಾ ಇಟ್ಟು ಕೆಲಸ ಮಾಡಲಿದ್ದಾರೆ.

ಫ್ಯಾಕ್ಟ್‌ ಚೆಕರ್ಸ್‌ ಕಾರ್ಯಬದ್ಧತೆ ಏನು, ಐಎಫ್‌ಸಿಎನ್ ಮಾನ್ಯತೆಗೆ ನಿಬಂಧನೆ ಏನು

ಫ್ಯಾಕ್ಟ್ ಚೆಕರ್ಸ್ ಅಥವಾ ಸತ್ಯ-ಪರೀಕ್ಷಕರು ಪಕ್ಷಾತೀತ, ಮುಕ್ತ, ನ್ಯಾಯೋಚಿತ ಮತ್ತು ಸ್ವತಂತ್ರವಾಗಿ ಉಳಿಯಬೇಕಾದ ಬದ್ಧತೆ ಇದೆ. ಫ್ಯಾಕ್ಟ್‌ ಚೆಕರ್ಸ್ ಕೆಲಸದಲ್ಲಿ ಸರ್ಕಾರದ ಹಸ್ತಕ್ಷೇಪ ಉಂಟಾದರೆ, ಅದು ಸುದ್ದಿಮನೆಯನ್ನು ದುರ್ಬಲಗೊಳಿಸುವುದರ ಹೊರತಾಗಿ, ಆ ಸಂಸ್ಥೆಯ ಐಎಫ್‌ಸಿಎನ್‌ ಮಾನ್ಯತೆಯ ನಷ್ಟಕ್ಕೂ ಕಾರಣವಾಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ