logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಕುಸಿದ ಭೂಮಿ, ಪರ್ಯಾಯ ಮಾರ್ಗ ಬಳಸಲು ಸೂಚನೆ

ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಕುಸಿದ ಭೂಮಿ, ಪರ್ಯಾಯ ಮಾರ್ಗ ಬಳಸಲು ಸೂಚನೆ

Umesh Kumar S HT Kannada

May 09, 2024 07:11 AM IST

ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಭೂಮಿ ಕುಸಿದ ಕಾರಣ, ದೊಡ್ಡ ಗುಂಡಿ ಉಂಟಾಗಿದೆ. ಹೀಗಾಗಿ ಆ ರಸ್ತೆ ಬಿಟ್ಟು ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

  • ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಭೂಮಿ ಕುಸಿದ ಕಾರಣ ದೊಡ್ಡ ಗುಂಡಿ ಉಂಟಾಗಿದೆ. ಹೀಗಾಗಿ ಈ ರಸ್ತೆ ಬಿಟ್ಟು ಪರ್ಯಾಯ ಮಾರ್ಗ ಬಳಸಲು ಪುಲಕೇಶಿನಗರ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ. ಈ ವಿದ್ಯಮಾನದ ಪೂರ್ಣ ವಿವರ ಇಲ್ಲಿದೆ. 

ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಭೂಮಿ ಕುಸಿದ ಕಾರಣ, ದೊಡ್ಡ ಗುಂಡಿ ಉಂಟಾಗಿದೆ. ಹೀಗಾಗಿ ಆ ರಸ್ತೆ ಬಿಟ್ಟು ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಭೂಮಿ ಕುಸಿದ ಕಾರಣ, ದೊಡ್ಡ ಗುಂಡಿ ಉಂಟಾಗಿದೆ. ಹೀಗಾಗಿ ಆ ರಸ್ತೆ ಬಿಟ್ಟು ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ. (@ftowntrfps)

ಬೆಂಗಳೂರು: ಸುಡುಬಿಸಿಲಿನ ಸಂಕಷ್ಟದ ಬಳಿಕ ಬೆಂಗಳೂರಿನಲ್ಲಿ ಮಳೆ ಸುರಿಯಲಾರಂಭಿಸಿದ್ದು, ಒಂದೆಡೆ ಮೂಲಸೌಕರ್ಯದ ಕೊರತೆಯ ಕಾರಣ ನಗರವಾಸಿಗಳು ತೊಂದರೆ ಅನುಭವಿಸತೊಡಗಿದ್ದಾರೆ. ಇನ್ನೊಂದೆಡೆ, ನಿನ್ನೆ (ಮೇ 8 ) ಮಳೆ ಸುರಿದ ಸಂದರ್ಭದಲ್ಲಿ ಪಾಟರಿ ಟೌನ್ ಬೋರ್ ಬ್ಯಾಂಕ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಮಣ್ಣು ಕುಸಿದು ದೊಡ್ಡ ಕಂದಕ ಉಂಟಾಗಿತ್ತು. ಇದು ಕೆಲ ಹೊತ್ತು ಆತಂಕಕ್ಕೆ ಕಾರಣವಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ; ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಬೆಂಗಳೂರು: ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಜಾಯ್‌ ರೈಡ್‌, ಯುವಕನ ಬಂಧನ, ಡಿಎಲ್ ಅಮಾನತಿಗೆ ಶಿಫಾರಸು

ಕರ್ನಾಟಕ ಹವಾಮಾನ ಮೇ 20; ದಕ್ಷಿಣ ಕನ್ನಡ, ಉಡುಪಿ ಸೇರಿ 8ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

ಈ ರೀತಿ ಭೂಮಿ ಕುಸಿದು ದೊಡ್ಡ ಗುಂಡಿ ಉಂಟಾದಾಗ ಸ್ಥಳದಲ್ಲಿ ಮೆಟ್ರೋ ಕಾರ್ಮಿಕರು ಯಾರೂ ಇರಲಿಲ್ಲ. ವಾಹನ ಸಂಚಾರವೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಅಥವಾ ಮನುಷ್ಯರಿಗೆ ಹಾನಿ ಸಂಭವಿಸಿಲ್ಲ. ಆದಾಗ್ಯೂ, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಪ್ರಯಾಣಿಕರು ಪರದಾಡಿದರು. ಈ ದುರಂತ ಸಂಭವಿಸಿದ ಕೆಲ ಹೊತ್ತಿನಲ್ಲೇ ಪುಲಕೇಶಿನಗರ ಸಂಚಾರ ಪೊಲೀಸರು, ಸಂಚಾರ ಸಲಹೆ ನೀಡಿದ್ದರು.

ಪಾಟರಿ ಟೌನ್ ಬೋರ್ ಬ್ಯಾಂಕ್ ರಸ್ತೆಯಲ್ಲಿ ಕುಸಿದ ಭೂಮಿ; ಏನಿದು ವಿದ್ಯಮಾನ

ಬೆಂಗಳೂರಿನ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಟರಿ ಟೌನ್ ಬೋರ್ ಬ್ಯಾಂಕ್ ರಸ್ತೆಯಲ್ಲಿ ಕಾಳೇನ ಅಗ್ರಹಾರ-ನಾಗವಾರದ ಗುಲಾಬಿ ಮಾರ್ಗಕ್ಕಾಗಿ ಸುರಂಗ ನಿಲ್ದಾಣ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಿನ್ನೆ (ಮೇ 8) ಸಂಜೆ 5.45ರ ಸುಮಾರಿಗೆ ಭಾರಿ ಶಬ್ದದೊಂದಿಗೆ ರಸ್ತೆಯ ಅಡಿಯಲ್ಲಿದ್ದ ಹಲವು ಅಡಿಗಳಷ್ಟು ಮಣ್ಣು ಒಳಕ್ಕೆ ಕುಸಿದಿದೆ. ಈ ರೀತಿ ಭೂಕುಸಿತವಾದಾಗ ಕಾರ್ಮಿಕರು ಯಾರೂ ಅಲ್ಲಿರಲಿಲ್ಲ.

ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕಾಗಿ ಮಣ್ಣು ಅಗೆಯಲು ಮಾಡಿದ್ದ ತಾತ್ಕಾಲಿಕ ತಡೆಗೋಡೆ ವ್ಯವಸ್ಥೆ ಕೂಡ ಕುಸಿದಿದೆ. ಹೀಗಾಗಿ ಬೋರ್ ಬ್ಯಾಂಕ್ ರಸ್ತೆ ಮಧ್ಯದಲ್ಲಿ ಗುಂಡಿ ಉಂಟಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಆದ್ದರಿಂದ ಈ ರಸ್ತೆಯನ್ನು ಮುಚ್ಚಿದ ಸಂಚಾರ ಪೊಲೀಸರು, ಪರ್ಯಾಯ ಮಾರ್ಗ ಬಳಸುವಂತೆ ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.

ಪಾಟರಿ ಜಂಕ್ಷನ್ ನಿಂದ ಪಾಟರಿ ಟೌನ್ & ಬೆನ್ಸನ್ ಟೌನ್ ಗೆ ಹೋಗುವ ಬೋರ್ ಬ್ಯಾಂಕ್ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಸ್ಥಳದ ಹತ್ತಿರ ರಸ್ತೆಯು ಕುಸಿದಿರುವುದರಿಂದ ಸಂಪೂರ್ಣವಾಗಿ ಸಂಚಾರ ನಿರ್ಬಂಧಿಸಿದ್ದು, ವಾಹನ ಸವಾರ/ಚಾಲಕರು ಹೇನ್ಸ್ ರಸ್ತೆ -ಮಿಲ್ಲರ್ಸ್ ರಸ್ತೆ- ನಂದಿದುರ್ಗ ರಸ್ತೆ ಮುಖಾಂತರ ತೆರಳುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ನಮ್ಮ ಮೆಟ್ರೋ ಟ್ವೀಟ್ ಹೀಗಿದೆ

ನಮ್ಮ ಮೆಟ್ರೋ ಕೂಡ ಈ ಕುರಿತು ಟ್ವೀಟ್‌ ಮಾಡಿದ್ದು, “ಇಂದು ಅಂದರೆ 08/05/2024 ರಂದು, ಭಾರೀ ಮಳೆಯಿಂದಾಗಿ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕಾಗಿ ಮಣ್ಣು ಅಗೆಯಲು ಮಾಡಿದ ತಾತ್ಕಾಲಿಕ ತಡೆ ಫೈಲ್ ವ್ಯವಸ್ಥೆಯು ಸಂಜೆ 5.45 ರ ಸುಮಾರಿಗೆ ವಿಫಲವಾಗಿದೆ. ಇದರ ಪರಿಣಾಮವಾಗಿ ಬೋರ್ ಬ್ಯಾಂಕ್ ರಸ್ತೆಯ ಒಂದು ಭಾಗವು ಹಾನಿಯಾಗಿರುವ ಕಾರಣ ಬೋರ್ ಬ್ಯಾಂಕ್ ರಸ್ತೆಯನ್ನು ಮುಚ್ಚಲಾಗಿದೆ ಮತ್ತು ಮರುಸ್ಥಾಪನೆ ಮಾಡುವವರೆಗೆ ರಸ್ತೆ ಮುಚ್ಚಿರುತ್ತದೆ. ವಾಹನ ಚಲನೆಗೆ ಪರಿಯಾಯ ಮಾರ್ಗ ಮಾಡಲಾಗಿದೆ, ಯಾವುದೇ ವ್ಯಕ್ತಿಗಳು ಗಾಯಗೊಂಡಿಲ್ಲ.” ಎಂದು ಹೇಳಿಕೊಂಡಿದೆ.

ಕಳೆದ ವರ್ಷ ಬ್ರಿಗೇಡ್ ರಸ್ತೆ ಮೆಟ್ರೋ ಸುರಂಗ ಕಾಮಗಾರಿಯಿಂದಾಗಿ ರಸ್ತೆ ಮಣ್ಣು ಕುಸಿದು ದೊಡ್ಡ ಪ್ರಮಾಣದ ಗುಂಡಿ ಉಂಟಾಗಿತ್ತು. ಇಲ್ಲಿ ಬೈಕ್ ಸವಾರನೊಬ್ಬ ಬಿದ್ದು ಗಾಯಗೊಂಡಿದ್ದ. ಅದೇ ರೀತಿ ಮೆಟ್ರೋದಿಂದಾಗಿ ಬನ್ನೇರುಘಟ್ಟ ರಸ್ತೆಯ ಚಿನ್ನಯ್ಯನಪಾಳ್ಯದಲ್ಲಿಯೂ ಮಣ್ಣು ಕುಸಿದಿತ್ತು ಎಂಬುದನ್ನು ಇಲ್ಲಿ ನೆನಪಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ