logo
ಕನ್ನಡ ಸುದ್ದಿ  /  ಕರ್ನಾಟಕ  /  Bjp Mla Thrashed By The Villagers: ಮೂಡಿಗೆರೆ ಶಾಸಕರ ಮೇಲೆ ಗ್ರಾಮಸ್ಥರ ಹಲ್ಲೆ; ಯೋಜಿತ ಸಂಚು ಎಂದು ಆರೋಪಿಸಿದ Mla ಕುಮಾರಸ್ವಾಮಿ

BJP MLA thrashed by the villagers: ಮೂಡಿಗೆರೆ ಶಾಸಕರ ಮೇಲೆ ಗ್ರಾಮಸ್ಥರ ಹಲ್ಲೆ; ಯೋಜಿತ ಸಂಚು ಎಂದು ಆರೋಪಿಸಿದ MLA ಕುಮಾರಸ್ವಾಮಿ

HT Kannada Desk HT Kannada

Nov 22, 2022 01:16 PM IST

google News

ಹಲ್ಲೆಗೊಳಗಾದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ

  • BJP MLA thrashed by the villagers: ಮೂಡಿಗೆರೆ ಶಾಸಕ ಬಿಜೆಪಿ ಕುಮಾರಸ್ವಾಮಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಇದೊಂದು ಯೋಜಿತ ಸಂಚು ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. 

ಹಲ್ಲೆಗೊಳಗಾದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ
ಹಲ್ಲೆಗೊಳಗಾದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ (ANI)

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾನುವಾರ ಆನೆ ದಾಳಿಗೆ ಬಲಿಯಾದ ಮಹಿಳೆಯೊಬ್ಬರ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಆಕ್ರೋಶಭರಿತ ಗ್ರಾಮಸ್ಥರು ಥಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಕುಂದೂರು ಎಸ್ಟೇಟ್ ಬಳಿ ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರಿಂದ ಥಳಿಸಿದ್ದಾರೆ. ಈ ಪ್ರದೇಶ ಮೂಡಿಗೆರೆ ಕ್ಷೇತ್ರವ್ಯಾಪ್ತಿಯಲ್ಲೇ ಇದೆ.

ಮಹಿಳೆ ಭಾನುವಾರ ಸಾವನ್ನಪ್ಪಿದ್ದಾಳೆ. ತಮ್ಮ ಗ್ರಾಮಕ್ಕೆ ಆನೆಗಳು ಪದೇಪದೆ ದಾಳಿ ಮಾಡುತ್ತಿದ್ದು, ಸ್ಥಳೀಯ ಅಧಿಕಾರಿಗಳು ಮತ್ತು ಶಾಸಕರು ಅವುಗಳನ್ನು ತಡೆಯುವಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದೊಂದು ‘ಸಂಘಟಿತ ಮತ್ತು ಯೋಜಿತ ದಾಳಿʼ ಎಂದು ಹೇಳಿರುವ ಕುಮಾರಸ್ವಾಮಿ, ಪೊಲೀಸರು ತನಗೆ ಸಹಾಯ ಮಾಡಲಿಲ್ಲ. ಕೇವಲ 10 ಜನ ಪೊಲೀಸರಷ್ಟೇ ಸ್ಥಳದಲ್ಲಿದ್ದರು ಎಂದು ಆರೋಪಿಸಿದ ವಿಡಿಯೋ ವೈರಲ್‌ ಆಗಿದೆ.

ಕೋಪಗೊಂಡ ಗ್ರಾಮಸ್ಥರು ಥಳಿಸಿದ ನಂತರ, ಪೊಲೀಸರು ನೆರವಿಗೆ ಬಂದು ತಮ್ಮನ್ನು ವಾಹನಕ್ಕೆ ಕರೆದೊಯ್ದರು ಎಂದು ಶಾಸಕರು ಹೇಳಿದ್ದಾರೆ. ಬಳಿಕ ವಿಡಿಯೋ ಸಂದೇಶ ಪ್ರಸಾರ ಮಾಡಿರುವ ಕುಮಾರಸ್ವಾಮಿ, ಹರಿದ ಅಂಗಿಯಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಮೇಲಿನ ದಾಳಿಯನ್ನು ಚೆನ್ನಾಗಿ ಯೋಜಿಸಲಾಗಿದೆ ಮತ್ತು ಸಾಕಷ್ಟು ಪೊಲೀಸ್ ಭದ್ರತೆ ಇಲ್ಲ ಎಂದು ಹೇಳಿರುವುದು ಕಂಡುಬಂದಿದೆ.

ಪೊಲೀಸರು ಅವರನ್ನು ವಾಹನಕ್ಕೇರಿಸುವಾಗ ಅವರ ಉಡುಪು ಹರಿದಿರಲಿಲ್ಲ. ಬಳಿಕ ಅದನ್ನು ಹರಿದವರು ಯಾರು ಎಂದು ಗ್ರಾಮಸ್ಥರು ಕೇಳಿದ್ದಾರೆ. ಈ ಪ್ರಕರಣ ಸಂಬಂಧ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಸಂಜೆ ಸರ್ಕಾರ ಕೂಡ ಆನೆ ಟಾಸ್ಕ್‌ ಫೋರ್ಸ್‌ ಅನ್ನು ರಚಿಸಲು ಆದೇಶ ಪ್ರಕಟಿಸಿದೆ.

ರಾಜ್ಯದ 4 ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಆನೆ ಟಾಸ್ಕ್ ಫೋರ್ಸ್ ರಚಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ (ನ.21) ಗೃಹಕಚೇರಿ ಕೃಷ್ಣದಲ್ಲಿ ಸಭೆ ನಡೆಯಿತು. ಇದರಲ್ಲಿ, ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಳವಾಗಿದ್ದು, ಇದನ್ನು ತಡೆಗಟ್ಟಲು ಪ್ರತಿ ಜಿಲ್ಲೆಗೊಂದರಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಎಲಿಫಂಟ್‌ ಟಾಸ್ಕ್ ಫೋರ್ಸ್ ರಚಿಸಬೇಕೆಂಬ ತೀರ್ಮಾನ ತೆಗೆದುಕೊ‍ಳ್ಳಲಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ