logo
ಕನ್ನಡ ಸುದ್ದಿ  /  ಕರ್ನಾಟಕ  /  Chikkaballapur Utsava: ಬೆಂಗಳೂರಿಗೆ ಸಮಾನಾಂತರವಾಗಿ ಚಿಕ್ಕಬಳ್ಳಾಪುರ ಬೆಳೆಯಬೇಕು: ಸಚಿವ ಡಾ ಕೆ ಸುಧಾಕರ್‌

Chikkaballapur Utsava: ಬೆಂಗಳೂರಿಗೆ ಸಮಾನಾಂತರವಾಗಿ ಚಿಕ್ಕಬಳ್ಳಾಪುರ ಬೆಳೆಯಬೇಕು: ಸಚಿವ ಡಾ ಕೆ ಸುಧಾಕರ್‌

HT Kannada Desk HT Kannada

Jan 08, 2023 07:40 AM IST

ಚಿಕ್ಕಬಳ್ಳಾಪುರ ಜಿಲ್ಲೆಗೆ ‘ಫಲ ಪುಷ್ಪ ಗಿರಿಧಾಮ ನಾಡು’ ಎಂಬ ಹೆಸರನ್ನು ನೀಡಲಾಗಿದ್ದು, ಸಿಎಂ ಬೊಮ್ಮಾಯಿ ಈ ಹೆಸರನ್ನು ಅನಾವರಣ ಮಾಡಿದರು.

  • 20-25 ವರ್ಷಗಳಿಂದ ನೀರಿನ ಬರ ಎದುರಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಈಗ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿಕೊಂಡಿದೆ. ಇಡೀ ಜಿಲ್ಲೆಯ ಕೆರೆಗಳು ತುಂಬಿ ಹಸಿರಿನಿಂದ ಕಂಗೊಳಿಸುತ್ತಿವೆ. ವೈದ್ಯಕೀಯ ಕಾಲೇಜು ಮೂಲಕ ದಶಕಗಳ ಕನಸು ನನಸಾಗಿದೆ ಎಂದು ಸಚಿವ ಡಾ ಕೆ ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ. 

ಚಿಕ್ಕಬಳ್ಳಾಪುರ ಜಿಲ್ಲೆಗೆ ‘ಫಲ ಪುಷ್ಪ ಗಿರಿಧಾಮ ನಾಡು’ ಎಂಬ ಹೆಸರನ್ನು ನೀಡಲಾಗಿದ್ದು, ಸಿಎಂ ಬೊಮ್ಮಾಯಿ ಈ ಹೆಸರನ್ನು ಅನಾವರಣ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ‘ಫಲ ಪುಷ್ಪ ಗಿರಿಧಾಮ ನಾಡು’ ಎಂಬ ಹೆಸರನ್ನು ನೀಡಲಾಗಿದ್ದು, ಸಿಎಂ ಬೊಮ್ಮಾಯಿ ಈ ಹೆಸರನ್ನು ಅನಾವರಣ ಮಾಡಿದರು.

ಚಿಕ್ಕಬಳ್ಳಾಪುರ: ರೈತರು, ವಿದ್ಯಾರ್ಥಿಗಳು ಹೀಗೆ ಜಿಲ್ಲೆಯ ಎಲ್ಲಾ ವರ್ಗದ ಜನರು ಸಂತಸದಿಂದ ಇರುವುದರಿಂದ ‘ಚಿಕ್ಕಬಳ್ಳಾಪುರ ಉತ್ಸವ’ ಆಚರಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನಲ್ಲಿ ಮೇ 18, 19ಕ್ಕೆ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ; ಆರೆಂಜ್ ಅಲರ್ಟ್ ಘೋಷಣೆ -Bengaluru Rain

ಎಸ್‌ಎಸ್‌ಎಲ್‌ಸಿ ಕಡಿಮೆ ಫಲಿತಾಂಶ ಬಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ; ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ರದ್ದು, ಮಹತ್ವದ ತೀರ್ಮಾನ

ಲೈಂಗಿಕ ದೌರ್ಜನ್ಯಕ್ಕೊಳದ ಮಹಿಳೆ ಅಪಹರಣ ಆರೋಪ ಪ್ರಕರಣ; ಮೇ 20ಕ್ಕೆ ಹೆಚ್‌ಡಿ ರೇವಣ್ಣ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

HD Revanna: ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಅಪಹರಣ ಆರೋಪ ಪ್ರಕರಣ; ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲೇ ಉಳಿದಿರುವ ಹೆಚ್‌ಡಿ ರೇವಣ್ಣ

ನಿನ್ನೆಯಿಂದ (ಜ.7, ಶನಿವಾರ) ಆರಂಭವಾಗಿರುವ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭಾಗವಹಿಸಿದ್ದ ಅವರು, ಕೆಲ ವರ್ಷಗಳ ಹಿಂದೆ 1,500 ಅಡಿಗಳಿಂದ ನೀರು ತೆಗೆದು ಕಷ್ಟದ ನಡುವೆಯೂ ಜೀವನ ಮಾಡಿದ್ದ ಈ ನಾಡಿನ ರೈತರು ಪ್ರಗತಿಪರರು. ಬೆಂಗಳೂರಿನ ಬೇಡಿಕೆಯ ಶೇ.70 ರಷ್ಟು ತರಕಾರಿಗಳನ್ನು ಚಿಕ್ಕಬಳ್ಳಾಪುರ ಮತ್ತು ಕೋಲಾರದಿಂದಲೇ ಒದಗಿಸಲಾಗುತ್ತಿದೆ ಅನ್ನುವುದು ನಮ್ಮ ರೈತರ ಹೆಮ್ಮೆ ಎಂದು ಹೇಳಿದ್ದಾರೆ.

ಜಿಲ್ಲೆಯಾಗಿ 15 ವಸಂತಗಳ ಸಂಭ್ರಮದಲ್ಲಿರುವ ಚಿಕ್ಕಬಳ್ಳಾಪುರ ಧಾರ್ಮಿಕ, ಐತಿಹಾಸಿಕ, ಶೈಕ್ಷಣಿಕ ಹಾಗೂ ಎಲ್ಲಾ ಮೂಲಸೌಕರ್ಯಗಳನ್ನು ಪಡೆದು ನವ ಕರ್ನಾಟಕದ ನಿರ್ಮಾಣದಲ್ಲಿ ಅತಿ ದೊಡ್ಡ ಬೆಳವಣಿಗೆ ಕಂಡು, ನವ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ.

ಈ ಐತಿಹಾಸಿಕ ದಿನವನ್ನು ಇಡೀ ಜಿಲ್ಲೆಯ ಜನರು ಆಚರಿಸಿಕೊಳ್ಳುತ್ತಿದ್ದಾರೆ. ಇಡೀ ರಾಜ್ಯವೇ ನಮ್ಮ ಕಡೆ ನೋಡುತ್ತಿದೆ. ಈ ಅದ್ದೂರಿಯ ಹಬ್ಬ ಜಿಲ್ಲೆಯ ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಸೇವೆ, ನೀರಾವರಿ ಅಭಿವೃದ್ಧಿಯ ಸಂಕೇತ. ಟೀನೇಜ್‌ಗೆ ಎಂಟ್ರಿ ಕೊಟ್ಟಿರುವ ಚಿಕ್ಕಬಳ್ಳಾಪುರದ ಹಲವು ಆಶಯಗಳು ಈಡೇರಿವೆ. ಆದರೆ ಗುರಿ ನವ ಚಿಕ್ಕಬಳ್ಳಾಪುರದ ನಿರ್ಮಾಣದ ಮೂಲಕ, ನವ ಕರ್ನಾಟಕ ಹಾಗೂ ನವ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವುದು ಆಗಿದೆ ಎಂದು ಸುಧಾಕರ್ ಹೇಳಿದರು.

20-25 ವರ್ಷಗಳಿಂದ ನೀರಿನ ಬರ ಎದುರಿಸಿದ್ದ ಜಿಲ್ಲೆ ಈಗ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿಕೊಂಡಿದೆ. ಇಡೀ ಜಿಲ್ಲೆಯ ಕೆರೆಗಳು ತುಂಬಿ ಹಸಿರಿನಿಂದ ಕಂಗೊಳಿಸುತ್ತಿವೆ. ವೈದ್ಯಕೀಯ ಕಾಲೇಜು ಮೂಲಕ ದಶಕಗಳ ಕನಸು ನನಸಾಗಿದೆ. ರೈತರು, ವಿದ್ಯಾರ್ಥಿಗಳು ಹೀಗೆ ಜಿಲ್ಲೆಯ ಎಲ್ಲಾ ವರ್ಗದ ಜನರು ಸಂತಸದಿಂದ ಇರುವುದರಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಕೆಲ ವರ್ಷಗಳ ಹಿಂದೆ 1,500 ಅಡಿಗಳಿಂದ ನೀರು ತೆಗೆದು ಕಷ್ಟದ ನಡುವೆಯೂ ಜೀವನ ಮಾಡಿದ್ದ ಈ ನಾಡಿನ ರೈತರು ಪ್ರಗತಿಪರರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

5 ಪವಿತ್ರ ನದಿಗಳು ಉಗಮವಾಗುತ್ತವೆ

ಈ ಜಿಲ್ಲೆಯಲ್ಲಿ ಒಂದೂ ನದಿಗಳು ಹರಿಯುವುದಿಲ್ಲ. ಆದರೆ 5 ಪವಿತ್ರ ನದಿಗಳು ಉಗಮವಾಗುತ್ತವೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. 2ನೇ ಜಲಿಯನ್‌ ವಾಲಾಭಾಗ್‌ ಎಂದು ಕರೆಸಿಕೊಳ್ಳುವ ವಿಧುರಾಶ್ವತ್ಥ ಐತಿಹಾಸಿಕವಾಗಿದೆ. 2 ಭಾರತ ರತ್ನಗಳು ( ಸರ್‌.ಎಂ. ವಿಶ್ವೇಶ್ವರಯ್ಯ ಮತ್ತು ಪ್ರೋ. ಸಿಎನ್‌ಆರ್‌ ರಾವ್‌) ಇದೇ ನಾಡಿನವರು ಎಂಬುದು ನಮ್ಮ ಹೆಮ್ಮೆ. ತಪಸ್ವಿಗಳು, ಸಾಧು ಸಂತರು ಮೆಟ್ಟಿದ ಈ ನೆಲ ಫಲಪುಷ್ಪಗಳ ಗಿರಿಧಾಮ ಎಂದು ಹೇಳಿದರು.

ಭಗೀರಥ ಬೊಮ್ಮಾಯಿ

ನೀರಾವರಿ ಸಚಿವರಾಗಿದ್ದಾಗ ಎತ್ತಿನಹೊಳೆ ಯೋಜನೆ ರೂಪಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರು ಈ ಜಿಲ್ಲೆಯ ನಿಜವಾದ ಭಗೀರಥ. ಅಷ್ಟೇ ಅಲ್ಲ ಈ ಯೋಜನೆಯ ಮೂಲ ವೆಚ್ಚವನ್ನು 13,000 ಕೋಟಿ ರೂ. ನಿಂದ 23,000 ಕೋಟಿ ರೂ.ಗೆ ಏರಿಸಿ ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ದಿ.ಶಂಕರ್‌ನಾಗ್‌ ಅವರ ಕನಸಾಗಿದ್ದ ನಂದಿಬೆಟ್ಟದ ರೋಪ್‌ ವೇ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಎಲ್ಲವನ್ನೂ ಮುಂದಿನ 7 ದಿನಗಳಲ್ಲಿ ಹಬ್ಬವನ್ನಾಗಿ ಆಚರಿಸಿಕೊಂಡು, ಬೆಂಗಳೂರಿಗೆ ಸಹಕಾರವಾಗಿ ಚಿಕ್ಕಬಳ್ಳಾಪುರವನ್ನು ಬೆಳೆಸಲು ಪ್ರಯತ್ನ ಪಡುವುದಾಗಿ ಅವರು ಹೇಳಿದರು.

ಜನರ ಬದುಕಿನ ಭವಿಷ್ಯ ಬರೆಯಲು ‘ಚಿಕ್ಕಬಳ್ಳಾಪುರ ಉತ್ಸವ’ ಮುನ್ನುಡಿ

ಚಿಕ್ಕಬಳ್ಳಾಪುರದ ಪುಣ್ಯಭೂಮಿಯು ಜನರ ಬದುಕಿನ ಭವಿಷ್ಯವನ್ನು ಬರೆಯಲು ‘ಚಿಕ್ಕಬಳ್ಳಾಪುರ ಉತ್ಸವ’ವು ಮುನ್ನುಡಿಯಾಗಲಿದೆ. ಪ್ರಖ್ಯಾತ ಎಂಜಿನಿಯರ್‌ ಸರ್‌.ಎಂ.ವಿಶ್ವೇಶ್ವರಯ್ಯ, ವಿಜ್ಞಾನದಲ್ಲಿ ಸಾಧನೆ ಮಾಡಿದ ಸಿಎನ್‌ಆರ್‌ ರಾವ್‌ ಇಲ್ಲಿಯವರೇ ಆಗಿದ್ದಾರೆ. ಹೀಗೆ ಇಬ್ಬರು ಭಾರತರತ್ನಗಳನ್ನು ಈ ಜಿಲ್ಲೆ ನೀಡಿದೆ. ಇತಿಹಾಸ ಪ್ರಸಿದ್ಧ ಭೋಗನಂದೀಶ್ವರ ದೇವಸ್ಥಾನ ಇಲ್ಲೇ ಇದೆ. ಇಂತಹ ವಿಶಿಷ್ಟ ಜಿಲ್ಲೆಯನ್ನು ಈಗ ಫಲ ಪುಷ್ಪ ಗಿರಿಧಾಮ ನಾಡು ಎಂದು ಕರೆಯಲಾಗಿದೆ. ಈ ಹೆಸರನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ