logo
ಕನ್ನಡ ಸುದ್ದಿ  /  ಕರ್ನಾಟಕ  /  Congress 5 Guarantees: ಕರ್ನಾಟಕದ ಜನತೆಗೆ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಏನು? ಪ್ರಣಾಳಿಕೆ ಮೂಲಕ ನೀಡಿದ ಭರವಸೆಗಳು ಯಾವವು?

Congress 5 Guarantees: ಕರ್ನಾಟಕದ ಜನತೆಗೆ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಏನು? ಪ್ರಣಾಳಿಕೆ ಮೂಲಕ ನೀಡಿದ ಭರವಸೆಗಳು ಯಾವವು?

HT Kannada Desk HT Kannada

May 20, 2023 02:44 PM IST

google News

ಕರ್ನಾಟಕದ ಜನತೆಗೆ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಏನು? ಪ್ರಣಾಳಿಕೆ ಮೂಲಕ ನೀಡಿದ ಭರವಸೆಗಳು ಯಾವವು? ಇಲ್ಲಿದೆ ವಿವರ

    • ಚುನಾವಣೆ ಘೋಷಣೆ ಬಳಿಕ ಕಾಂಗ್ರೆಸ್‌ ತನ್ನ ಪ್ರಣಾಳಿಕೆ ಮೂಲಕವೇ ಹೆಚ್ಚು ಸದ್ದು ಮಾಡಿತ್ತು. ಇದೀಗ ಅದೇ ಭರವಸೆ ಮೇಲೆ  ಅಧಿಕಾರಕ್ಕೆ ಬಂದಿದ್ದು, ಶೀಘ್ರದಲ್ಲಿ ಆಡಿದ ಮಾತನ್ನು ಉಳಿಸಿಕೊಳ್ಳಲಿದ್ದೇವೆ ಎಂದಿದೆ.  
ಕರ್ನಾಟಕದ ಜನತೆಗೆ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಏನು? ಪ್ರಣಾಳಿಕೆ ಮೂಲಕ ನೀಡಿದ ಭರವಸೆಗಳು ಯಾವವು? ಇಲ್ಲಿದೆ ವಿವರ
ಕರ್ನಾಟಕದ ಜನತೆಗೆ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಏನು? ಪ್ರಣಾಳಿಕೆ ಮೂಲಕ ನೀಡಿದ ಭರವಸೆಗಳು ಯಾವವು? ಇಲ್ಲಿದೆ ವಿವರ

Congress 5 Guarantees: ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಶೀರ್ಷಿಕೆಯಡಿ ತಯಾರಿ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಯುವಕರು, ಮಹಿಳೆಯರು ಸೇರಿದಂತೆ ನಾನಾ ವಲಯಗಳಿಗೆ 25 ವರ್ಷದ ಮುಂದಿನ ಗುರಿ ಇಟ್ಟುಕೊಂಡು ಹತ್ತಾರು ಭರವಸೆಗಳನ್ನು ನೀಡಲಾಗಿದೆ.

ಯಾವ್ಯಾವ ಅಂಶಗಳು ಪ್ರಣಾಣಿಕೆಯಲ್ಲಿವೆ?

  • ಕುಟುಂಬಕ್ಕೊಂದು ಮನೆ: ರಾಜ್ಯದ ಎಲ್ಲ ವಸತಿ ರಹಿತ ಕುಟುಂಬಗಳಿಗೂ 5 ವರ್ಷದೊಳಗೆ ಚಾಲ್ತಿಯಲ್ಲಿರುವ ಯೋಜನೆ ಮೂಲಕ ಸರಕಾರಿ ವಸತಿ ಸೌಲಭ್ಯ. ಬಡವರಿಗಾಗಿ ನಿರ್ಮಿಸುವ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ 3.5 ಲಕ್ಷ ರೂ. ಸಹಾಯಧನ.
  • ಪೊಲೀಸರಲ್ಲಿ ರಾತ್ರಿ ಪಾಳಿ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಮಾಸಿಕ ಭತ್ಯೆ, ಎಲ್ಲ ಪೊಲೀಸರಿಗೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ
  • ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಬಾರಿಯ ನೆರವಿನ ರೂಪದಲ್ಲಿ 20,000 ಅನುದಾನ
  • ಬಿಎಂಟಿಸಿ ಬಸ್‌ಗಳ ಸಂಖ್ಯೆ 10 ಸಾವಿರಕ್ಕೆ ಹೆಚ್ಚಳ, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ 15 ಸಾವಿರಕ್ಕೆ ಏರಿಕೆ.
  • ಮಂಗಳಮುಖಿ ಮಂಡಳಿ ಸ್ಥಾಪನೆ ವಾರ್ಷಿಕ 100 ಕೋಟಿ ಅನುದಾನ ಮತ್ತು ಅದರ ಮೂಲಕ ಮೂರು ಲಕ್ಷದವರೆಗೆ ಸ್ವ ಉದ್ಯೋಗಕ್ಕೆ ಅನುದಾನ
  • ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಗೆ 3 ಸಾವಿರ ಕೋಟಿ ಹೂಡಿಕೆ
  • ಪ್ರತಿ ಲೀಟರ್ ಹಾಲಿನ ಸರ್ಕಾರದ ಸಹಾಯಧನ 5 ರೂ.ಯಿಂದ 7 ರೂ.ಗೆ ಏರಿಕೆ
  • ನೇಕಾರರ ಮಗ್ಗ ಆಧುನಿಕರಣಕ್ಕಾಗಿ ವರ್ಷಕ್ಕೆ 30 ಸಾವಿರ ಅನುದಾನ
  • ಭ್ರಷ್ಟಾಚಾರ ನಿಗ್ರಹಿಸಲು ವಿಶೇಷವಾದ ಕಾನೂನು ರಚನೆ

ಐದು ಗ್ಯಾರಂಟಿಗಳು

  1. ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ
  2. ಗೃಹ ಲಕ್ಷಿಯೋಜನೆಯಡಿ ಪ್ರತಿ ಗೃಹಿಣಿಗೆ ತಿಂಗಳಿಗೆ 2000 ರೂ. ಸಹಾಯಧನ
  3. ಅನ್ನಭಾಗ್ಯ ಯೊಜನೆಯಡಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬರಿಗೂ 10 ಕೆಜಿ ಉಚಿತ ಅಕ್ಕಿ
  4. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ. ಡಿಪ್ಲೊಮಾ ಮುಗಿಸಿದ ನಿರುದ್ಯೋಗಿಗಳಿಗೆ 1500 ರೂ. ನೆರವು.
  5. ಶಕ್ತಿ ಯೋಜನೆಯಡಿ ರಾಜ್ಯದ ಬಸ್ಸುಗಳಲ್ಲಿ ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ