logo
ಕನ್ನಡ ಸುದ್ದಿ  /  ಕರ್ನಾಟಕ  /  Diwali Weekend Trips For Bangalore: ಬೆಂಗಳೂರು ಬಿಟ್ಟು ಎಲ್ಲಾದ್ರೂ ಹೋಗೋಣ ಅಂತಿದ್ದೀರಾ? ರಿಲ್ಯಾಕ್ಸ್‌ ಆಗೋಕೆ ಇಲ್ಲಿದೆ 5 ಡೆಸ್ಟಿನಿ

Diwali weekend trips for Bangalore: ಬೆಂಗಳೂರು ಬಿಟ್ಟು ಎಲ್ಲಾದ್ರೂ ಹೋಗೋಣ ಅಂತಿದ್ದೀರಾ? ರಿಲ್ಯಾಕ್ಸ್‌ ಆಗೋಕೆ ಇಲ್ಲಿದೆ 5 ಡೆಸ್ಟಿನಿ

HT Kannada Desk HT Kannada

Oct 22, 2022 01:38 PM IST

ದೀಪಾವಳಿ ಹಬ್ಬ ಬರುತ್ತಿರುವಂತೆಯೇ ಪ್ರವಾಸದ ಹುಮ್ಮಸ್ಸು ಗರಿಗೆದರಿದೆ.

    • Diwali Weekend: ದೀಪಾವಳಿ ಹಬ್ಬದ ಸಡಗರ ತುಂಬಿದ ವಾರಾಂತ್ಯ ಇದು. ಬೆಂಗಳೂರು ಬಿಟ್ಟು ಎಲ್ಲಾದರೂ ಹೋಗೋಣ ಅಂತ ಅನಿಸಿದ್ರೆ ತಪ್ಪೇನಿಲ್ಲ. ಏಕತಾನತೆಯಿಂದ ಹೊರಬರಲು ಕೆಲವು ಆಯ್ದ ಡೆಸ್ಟಿನಿಗಳನ್ನು ಇಲ್ಲಿ ಕೊಡಲಾಗಿದೆ. 
ದೀಪಾವಳಿ ಹಬ್ಬ ಬರುತ್ತಿರುವಂತೆಯೇ ಪ್ರವಾಸದ ಹುಮ್ಮಸ್ಸು ಗರಿಗೆದರಿದೆ.
ದೀಪಾವಳಿ ಹಬ್ಬ ಬರುತ್ತಿರುವಂತೆಯೇ ಪ್ರವಾಸದ ಹುಮ್ಮಸ್ಸು ಗರಿಗೆದರಿದೆ. (Pexels)

ದೇಶದಾದ್ಯಂತ ಹೆಚ್ಚಿನ ಜನರು ಎದುರುನೋಡುವ ಹಬ್ಬಗಳಲ್ಲಿ ದೀಪಾವಳಿ ಒಂದು. ಕೆಲವರು ಈ ಹಬ್ಬವನ್ನು ಕುಟುಂಬದೊಂದಿಗೆ ಮನೆಯಲ್ಲಿ ಆಚರಿಸಿದರೆ, ಇನ್ನೂ ಅನೇಕರು ರಜಾದಿನಗಳನ್ನು ಸಣ್ಣ ವಿಹಾರಕ್ಕೆ ಔಟಿಂಗ್‌ ಹೋಗಲು ಆಯ್ಕೆ ಮಾಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಹೌದು, ದೀಪಾವಳಿ ಈ ಸಲ ವಾರಾಂತ್ಯ ಮತ್ತು ಮುಂದಿನ ವಾರದ ಆರಂಭದ ದಿನಗಳಲ್ಲಿ ಬಂದಿದೆ. ಈ ವರ್ಷ, ಅಕ್ಟೋಬರ್ 24 ರಂದು ದೀಪಾವಳಿ ಹಬ್ಬ ಆಚರಣೆ ಇದೆ. ಬಲಿಪಾಡ್ಯಮಿಯನ್ನು ಅಕ್ಟೋಬರ್ 26 ರಂದು ಆಚರಿಸಲಾಗುತ್ತದೆ. ಸೂರ್ಯಗ್ರಹಣವು ಅದರ ನಡುವಿನ ದಿನ ಇದೆ. ಆ ದಿನವೇ ದೀಪಾವಳಿ ಅಮಾವಾಸ್ಯೆ ಕೂಡ. ಹೀಗಾಗಿ ಈ ಸಲದ ಹಬ್ಬ ದೀರ್ಘ ಅಥವಾ ವಿಸ್ತೃತ ವಾರಾಂತ್ಯವನ್ನು ಜನರಿಗೆ ಕೊಟ್ಟಿದೆ.

ಅನೇಕ ಕುಟುಂಬಗಳು ಮತ್ತು ಯುವಜನರು ಸಣ್ಣ ಪ್ರವಾಸಗಳಿಗೆ ಸಿದ್ಧರಾಗಿರುವುದರಿಂದ, ಪ್ರವಾಸಕ್ಕಾಗಿ ಬೆಂಗಳೂರಿನಿಂದ ಹೊರಗೆ ಭೇಟಿ ನೀಡಬಹುದಾದ ಆಯ್ದ ಐದು ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ.

1. ಕಬಿನಿ: ರಾಜ್ಯದ ಅತ್ಯಂತ ಜನಪ್ರಿಯ ಸಾಹಸ ಮತ್ತು ವನ್ಯಜೀವಿ ತಾಣಗಳಲ್ಲಿ ಒಂದು. ಇದು ಸಫಾರಿ ಪ್ರವಾಸಗಳಿಗೆ ಹೆಸರುವಾಸಿ. ಇದು ಬೆಂಗಳೂರಿನಿಂದ 205 ಕಿಮೀ ದೂರ ಇದೆ. ಹಚ್ಚ ಹಸಿರಿನ ವನ್ಯತಾಣ ಇದು. ಇದೇ ರೀತಿಯ ಇತರ ಆಯ್ಕೆಗಳು: ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳು. ಆನೆಗಳ ಬಗ್ಗೆ ಗಮನವಿರಲಿ.

2. ಹಂಪಿ: Hampi: ವಿಜಯನಗರ ಜಿಲ್ಲೆಯಲ್ಲಿರುವ ಸಂರಕ್ಷಿತ UNESCO ವಿಶ್ವ ಪಾರಂಪರಿಕ ತಾಣ. ಈ ಸ್ಥಳವು ಇತಿಹಾಸ ಮತ್ತು ವಾಸ್ತುಶಿಲ್ಪದ ಪ್ರತೀಕ. ಬೆಂಗಳೂರಿನಿಂದ 340 ಕಿಮೀ ದೂರ ಇದೆ. ಈ ಪಟ್ಟಣವನ್ನು 'ಬ್ಯಾಕ್‌ಪ್ಯಾಕರ್ಸ್ ಡಿಲೈಟ್' ಎಂದು ಕರೆಯಲಾಗುತ್ತದೆ. ಪ್ರಾಚೀನ ಸ್ಮಾರಕಗಳು ಮತ್ತು ಸುಂದರವಾದ ದೇವಾಲಯಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು.

3. ಗೋಕರ್ಣ: 'ತಾಳೆ ಮರಗಳು, ನೀಲಿ ಸಮುದ್ರಗಳು ಮತ್ತು ಚಿನ್ನದ ಮರಳುಗಳ ನಾಡು' ಎಂದು ಕರೆಯಲ್ಪಡುವ ಈ ಸ್ಥಳವು ಬೀಚ್ ಪ್ರೇಮಿಗಳು ಮತ್ತು ಹಿಪ್ಪಿಗಳಿಗೆ ನೆಚ್ಚಿನ ಕೇಂದ್ರ. ಗೋಕರ್ಣವು ಹಿಂದೂ ಯಾತ್ರಾ ಪಟ್ಟಣವಾಗಿದ್ದು, ಮಹಾಬಲೇಶ್ವರ ದೇವಾಲಯವು ನಗರದ ಮಧ್ಯಭಾಗದಲ್ಲಿದೆ.

4. ಚಿಕ್ಕಮಗಳೂರು: ಕರ್ನಾಟಕದ ರಾಜಧಾನಿಯಿಂದ ಕೇವಲ 240 ಕಿಮೀ ದೂರದಲ್ಲಿರುವ ಗಿರಿಧಾಮವು ಪರ್ವತಗಳು, ಜಲಪಾತಗಳು ಮತ್ತು ಹಸಿರು ಪರಿಸರಗಳನ್ನು ಹೊಂದಿದೆ. ಈ ಪಟ್ಟಣವು ಚಹಾ ಮತ್ತು ಕಾಫಿ ತೋಟಗಳಿಗೆ ಜನಪ್ರಿಯವಾಗಿರುವುದರಿಂದ ಪ್ರಕೃತಿ ಉತ್ಸಾಹಿಗಳಿಗೆ ಸೂಕ್ತ ತಾಣ.

5. ಶಿವನಸಮುದ್ರ: ಕರ್ನಾಟಕದ ಮಂಡ್ಯ ಜಿಲ್ಲೆಯ ಸಮೀಪದಲ್ಲಿರುವ ಶಿವನಸಮುದ್ರವು ಈ ಮಳೆಗಾಲದಲ್ಲಿ ವೀಕ್ಷಿಸಲು ರೋಮಾಂಚಕ ದೃಶ್ಯ ಒದಗಿಸುತ್ತದೆ. ಇದು - ಬರಚುಕ್ಕಿ ಮತ್ತು ಗಗನಚುಕ್ಕಿ - ಎಂಬ ಎರಡು ಜಲಪಾತಗಳನ್ನು ಹೊಂದಿದೆ. ಕಲ್ಲಿನ ಬಂಡೆಗಳೊಂದಿಗೆ ದಟ್ಟವಾದ ಕಾಡುಗಳಿಂದ ಆವೃತವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ