logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಪದವಿ ಪ್ರವೇಶಾತಿ ಇಂದು ಶುರು; 4 ವರ್ಷದ ಪದವಿ ಇಲ್ಲ, 3 ವರ್ಷದ ಪದವಿ ಮರುಜಾರಿಗೊಳಿಸಿದ ಸರ್ಕಾರ

ಕರ್ನಾಟಕ ಪದವಿ ಪ್ರವೇಶಾತಿ ಇಂದು ಶುರು; 4 ವರ್ಷದ ಪದವಿ ಇಲ್ಲ, 3 ವರ್ಷದ ಪದವಿ ಮರುಜಾರಿಗೊಳಿಸಿದ ಸರ್ಕಾರ

Umesh Kumar S HT Kannada

May 09, 2024 09:40 AM IST

ಕರ್ನಾಟಕ ಪದವಿ ಪ್ರವೇಶಾತಿ ಇಂದು ಶುರುವಾಗುತ್ತಿದೆ. ಈ ಬಾರಿ 4 ವರ್ಷದ ಪದವಿಯ ಬದಲು 3 ವರ್ಷದ ಪದವಿ ವ್ಯವಸ್ಥೆಯನ್ನು ಸರ್ಕಾರ ಮರುಜಾರಿಗೊಳಿಸಿದೆ. (ಸಾಂಕೇತಿಕ ಚಿತ್ರ)

  • ಕರ್ನಾಟಕ ಪದವಿ ಪ್ರವೇಶಾತಿ ಇಂದು ಶುರುವಾಗುತ್ತಿದ್ದು, 4 ವರ್ಷದ ಪದವಿ ಇಲ್ಲ. 3 ವರ್ಷದ ಪದವಿ ಮರುಜಾರಿಗೊಳಿಸಿದ ಸರ್ಕಾರ, ರಾಷ್ಟ್ರೀಯ ಶಿಕ್ಷಣ ನೀತಿಯ ಅಂಶಗಳನ್ನು ಕೈಬಿಟ್ಟು, ರಾಜ್ಯ ಶಿಕ್ಷಣ ನೀತಿಯ ಪ್ರಕಾರ ಕಾಲೇಜು ಶಿಕ್ಷಣ ಮುಂದುವರಿಸಲು ನಿರ್ಧರಿಸಿದೆ. 

ಕರ್ನಾಟಕ ಪದವಿ ಪ್ರವೇಶಾತಿ ಇಂದು ಶುರುವಾಗುತ್ತಿದೆ. ಈ ಬಾರಿ 4 ವರ್ಷದ ಪದವಿಯ ಬದಲು 3 ವರ್ಷದ ಪದವಿ ವ್ಯವಸ್ಥೆಯನ್ನು ಸರ್ಕಾರ ಮರುಜಾರಿಗೊಳಿಸಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಪದವಿ ಪ್ರವೇಶಾತಿ ಇಂದು ಶುರುವಾಗುತ್ತಿದೆ. ಈ ಬಾರಿ 4 ವರ್ಷದ ಪದವಿಯ ಬದಲು 3 ವರ್ಷದ ಪದವಿ ವ್ಯವಸ್ಥೆಯನ್ನು ಸರ್ಕಾರ ಮರುಜಾರಿಗೊಳಿಸಿದೆ. (ಸಾಂಕೇತಿಕ ಚಿತ್ರ) (Canva)

ಬೆಂಗಳೂರು: ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಶಿಫಾರಸುಗಳ ಪ್ರಕಾರ ಕರ್ನಾಟಕ ಸರ್ಕಾರವು, 2024-25 ಶೈಕ್ಷಣಿಕ ವರ್ಷಕ್ಕೆ ಮೂರು ವರ್ಷಗಳ ಪದವಿ ಕಾರ್ಯಕ್ರಮವನ್ನು ಮರುಪರಿಚಯಿಸಿದೆ. ಅದೇ ರೀತಿ, ಪದವಿ ಪಠ್ಯ ರಚನೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ, ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರಕಾರ ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಅಂಗಸಂಸ್ಥೆ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲು ಶಿಫಾರಸು ಮಾಡಿದ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

ಟ್ರೆಂಡಿಂಗ್​ ಸುದ್ದಿ

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರ್ನಾಟಕ ಸರ್ಕಾರದ ಈ ಹೊಸ ಆದೇಶವು 2021-22, 2022-23, 2023-24 ನೇ ಶೈಕ್ಷಣಿಕ ವರ್ಷಗಳಲ್ಲಿ ಪದವಿಗೆ ಪ್ರವೇಶಾತಿ ಪಡೆದು ಪ್ರಸ್ತುತ ವಿವಿಧ ಸೆಮಿಸ್ಟರ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಅದೇ ರೀತಿ, ಪ್ರಸಕ್ತ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ 4ನೇ ವರ್ಷದ ಆನರ್ಸ್ ಪದವಿ ವ್ಯಾಸಂಗ ಮಾಡುವುದು, ಬಿಡುವುದು ಆಯಾ ವಿದ್ಯಾರ್ಥಿಗಳ ಆಯ್ಕೆಗೇ ಬಿಟ್ಟದ್ದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದರೊಂದಿಗೆ ಹಿಂದಿನ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಹಿಮ್ಮೆಟ್ಟಿದಂತಾಗಿದೆ. ಈ ಹಿಂದಿನ ಸರ್ಕಾರ ದೇಶದಲ್ಲೇ ಮೊದಲ ರಾಜ್ಯವಾಗಿ ಎನ್‌ಇಪಿಯನ್ನು 2021-22ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಜಾರಿಗೊಳಿಸಿತು. ಪದವಿ ವ್ಯಾಸಂಗದ ಅವಧಿಯನ್ನು 4 ವರ್ಷಕ್ಕೆ ಏರಿಸಿತ್ತು. ಕಲೆ, ವಿಜ್ಞಾನ ಮತ್ತು ವಾಣಿಜ್ಯ ಹೀಗೆ ಬೇರೆ ಬೇರೆ ವಿಭಾಗದ ಮೇಜರ್ ವಿಷಯಗಳ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಲು ಅವಕಾಶ ನೀಡಿತ್ತು. ಈಗ ಈ ವ್ಯವಸ್ಥೆಗೂ ಕೆಲ ಮಾರ್ಪಾಡನ್ನು ಕಾಂಗ್ರೆಸ್ ಸರ್ಕಾರ ತಂದಿದೆ.

ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ 4 ವರ್ಷದ ಪದವಿ ಪೂರ್ಣಗೊಳಿಸಿರಬೇಕು. ಉಳಿದ ರಾಷ್ಟ್ರಗಳಲ್ಲೂ ಇಂತಹದೇ ಪದ್ಧತಿ ಇದ್ದು, ಈ ಜಾಗತಿಕ ಶೈಕ್ಷಣಿಕ ಪದ್ಧತಿಗಳೊಂದಿಗೆ ಸಾಮ್ಯತೆ ಸಾಧಿಸುವ ಉದ್ದೇಶದಿಂದ ಪದವಿ ವ್ಯಾಸಂಗದ ಅವಧಿಯನ್ನು ಎನ್‌ಇಪಿ ಅಡಿಯಲ್ಲಿ 4 ವರ್ಷಕ್ಕೆ ಹೆಚ್ಚಿಸಲಾಗಿದೆ.

ಎನ್‌ಇಪಿ vs ಎಸ್‌ಇಪಿ; ಕರ್ನಾಟಕ ಸರ್ಕಾರದ ಆದೇಶದ ಅಂಶಗಳಿವು

ಕರ್ನಾಟಕ ಸರ್ಕಾರವು ಬುಧವಾರ (ಮೇ 8) ಪ್ರಕಟಿಸಿದ ಆದೇಶದಂತೆ, ಇನ್ನು ಮುಂದೆ ರಾಜ್ಯದಲ್ಲಿ ಪದವಿ ವ್ಯಾಸಂಗ ಮೂರು ವರ್ಷಗಳಿಗೆ ಸೀಮಿತ. ಪಠ್ಯ ವಿಷಯದ ಆಯ್ಕೆ ವೇಳೆ ಆರು ಸೆಮಿಸ್ಟರ್‌ಗಳಲ್ಲಿ ಒಂದೇ ವಿಭಾಗದ (ಕಲೆ ಅಥವಾ ವಿಜ್ಞಾನ ಅಥವಾ ವಾಣಿಜ್ಯ) ಮೂರು ಮೇಜರ್ ವಿಷಯಗಳೊಂದಿಗೆ ಸಾಮಾನ್ಯ ಪದವಿ ವ್ಯಾಸಂಗ ಮಾಡಬಹುದು. ಅಥವಾ 5 ಮತ್ತು 6ನೇ ಸೆಮಿಸ್ಟರ್‌ಗಳಲ್ಲಿ 3 ಮೇಜರ್‌ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯಕ್ಕೆ ಪರ್ಯಾಯವಾಗಿ ಬೇರೆ ವಿಭಾಗದ ವಿಷಯವನ್ನು (ಸ್ಪೆಷಲೈಸೇಷನ್) ಆಯ್ಕೆ ಮಾಡಬಹುದು. ಮೊದಲನೇ ಸೆಮಿಸ್ಟರ್‌ನಿಂದಲೇ ಇತರೆ ವಿಷಯಗಳ ಜೊತೆಗೆ ಬೇರೆ ವಿಭಾಗದ ಒಂದು ವಿಶೇಷ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಓದಬಹುದು.

ಪದವಿ ವ್ಯಾಸಂಗದ ವೇಳೆ ಮಧ್ಯೆ ಯಾವುದೇ ವರ್ಷ ಓದು ನಿಲ್ಲಿಸಿದರೆ, ಮೊದಲ ವರ್ಷಕ್ಕೆ ಸರ್ಟಿಫಿಕೇಟ್, ಎರಡನೇ ವರ್ಷಕ್ಕೆ ಡಿಪ್ಲೊಮಾ ಸರ್ಟಿಫಿಕೇಟ್‌ ಪಡೆಯುವ ಎನ್‌ಇಪಿಯ ಅಂಶದ ಬಗ್ಗೆ ಕರ್ನಾಟಕ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯ ಈ ಅಂಶ ಹಾಗೆಯೇ ಅನುಷ್ಠಾನವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮೊದಲ ವರ್ಷಕ್ಕೆ ಸರ್ಟಿಫಿಕೇಟ್, ಎರಡನೇ ವರ್ಷಕ್ಕೆ ಡಿಪ್ಲೊಮಾ ಸರ್ಟಿಫಿಕೇಟ್‌ ಪಡೆದರೆ ಅದನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿ ಮುಂದೆ ಯಾವಾಗ ಬೇಕಾದರೂ ಪದವಿ ವ್ಯಾಸಂಗ ಮುಂದುವರಿಸಲು ಅವಕಾಶವಿದೆ. ಈ ವ್ಯವಸ್ಥೆಯ ಬಗ್ಗೆ ರಾಜ್ಯ ಶಿಕ್ಷಣ ಆಯೋಗವು ಮುಂದಿನ ಆಗಸ್ಟ್‌ನಲ್ಲಿ ನೀಡುವ ಅಂತಿಮ ವರದಿಯ ಆಧರಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನ 3 ವರ್ಷದ ಪದವಿ ಪ್ರವೇಶಾತಿ ಇಂದು ಶುರು

ಕರ್ನಾಟಕದಲ್ಲಿ ಹೊಸ ಶೈಕ್ಷಣಿಕ ವರ್ಷದ ಅಂದರೆ, 2024-25ನೇ ಸಾಲಿನ ಮೂರು ವರ್ಷದ ಪದವಿ ಪ್ರವೇಶ ಪ್ರಕ್ರಿಯೆಯು ಇಂದು (ಮೇ 9) ಶುರುವಾಗುತ್ತಿದೆ. ಕಾಲೇಜು ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ತಂತ್ರಾಂಶದ ಮೂಲಕ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಸಂಯೋಜಿತ ಕಾಲೇಜುಗಳು ಪದವಿ ಪ್ರವೇಶ ಪ್ರಕ್ರಿಯೆ ನಡೆಸಬಹುದು ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ