logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ವೇಳಾಪಟ್ಟಿ ಪ್ರಕಟ; ಜೂನ್ 7 ರಿಂದ 14ರ ತನಕ ನಡೆಯಲಿದೆ ಪರೀಕ್ಷೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ವೇಳಾಪಟ್ಟಿ ಪ್ರಕಟ; ಜೂನ್ 7 ರಿಂದ 14ರ ತನಕ ನಡೆಯಲಿದೆ ಪರೀಕ್ಷೆ

Umesh Kumar S HT Kannada

May 09, 2024 02:53 PM IST

google News

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ವೇಳಾಪಟ್ಟಿ ಪ್ರಕಟ; ಜೂನ್ 7 ರಿಂದ 14ರ ತನಕ ನಡೆಯಲಿದೆ ಪರೀಕ್ಷೆ

  • ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ವೇಳಾಪಟ್ಟಿ ಪ್ರಕಟವಾಗಿದ್ದು, ಜೂನ್ 7 ರಿಂದ 14ರ ತನಕ ಪರೀಕ್ಷೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರಲ್ಲಿ ಕಡಿಮೆ ಅಂಕ ಬಂದವರು ಅಂಕ ಸುಧಾರಣೆಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರಲ್ಲಿ ಅಂಕ ಉತ್ತಮಗೊಳಿಸಲು ಪ್ರಯತ್ನಿಸಬಹುದು. 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ರ ವೇಳಾಪಟ್ಟಿ ವಿವರ ಇಲ್ಲಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ವೇಳಾಪಟ್ಟಿ ಪ್ರಕಟ; ಜೂನ್ 7 ರಿಂದ 14ರ ತನಕ ನಡೆಯಲಿದೆ ಪರೀಕ್ಷೆ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ವೇಳಾಪಟ್ಟಿ ಪ್ರಕಟ; ಜೂನ್ 7 ರಿಂದ 14ರ ತನಕ ನಡೆಯಲಿದೆ ಪರೀಕ್ಷೆ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಇಂದು (ಮೇ 9) ಪ್ರಕಟಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ರ ಫಲಿತಾಂಶವನ್ನು ಪ್ರಕಟಿಸಿದ ಬೆನ್ನಿಗೆ, ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು, ಮರುಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದಕ್ಕೆ ವೇಳಾಪಟ್ಟಿಯನ್ನೂ ಮಂಡಲಿಯು ಇದೇ ಸಂದರ್ಭದಲ್ಲಿ ಪ್ರಕಟಿಸಿದೆ.

ಕಡಿಮೆ ಅಂಕ ಬಂದ ವಿದ್ಯಾರ್ಥಿಗಳು ತಮ್ಮ ಅಂಕ ಗಳಿಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶ ನೀಡುವ ಸಲುವಾಗಿ ಮಂಡಲಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಅನ್ನು ನಡೆಸುತ್ತಿದೆ. ಇನ್ನೂ ಒಂದು ಪರೀಕ್ಷೆಯನ್ನು ಮಂಡಲಿ ನಡೆಸಲಿದ್ದು, ಪರೀಕ್ಷೆ 2 ರ ಫಲಿತಾಂಶ ಘೋಷಿಸುವಾಗ ಅದರ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ರ ವೇಳಾಪಟ್ಟಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ರ ವೇಳಾಪಟ್ಟಿ ಪ್ರಕಾರ ಬೆಳಗ್ಗೆ ಮತ್ತು ಮಧ್ಯಾಹ್ನ ನಂತರದ ಪಾಳಿಯಲ್ಲಿ ನಡೆಯಲಿದೆ. ಬಹುತೇಕ ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ ನಡೆಯಲಿದೆ. ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ ಪರೀಕ್ಷೆ ಜೂ 12 ರಂದು ಮಧ್ಯಾಹ್ನ ನಂತರ 2 ಗಂಟೆಯಿಂದ ಸಂಜೆ 5.15ರ ತನಕ ನಡೆಯಲಿದೆ.

ಜೂನ್ 7 - ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ) ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಜೂನ್ 8- ತೃತೀಯ ಭಾಷೆ (ಹಿಂದಿ (NCERT), ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು) ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಎನ್‌ಎಸ್‌ಕ್ಯೂಎಫ್‌ ಪರೀಕ್ಷಾ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರಿಟೇಲ್‌, ಆಟೋಮೊಬೈಲ್‌, ಹೆಲ್ತ್‌ಕೇರ್‌, ಬ್ಯೂಟಿ ಆಂಡ್ ವೆಲ್‌ನೆಸ್‌, ಅಪರೆಲ್ ಮೇಟ್‌ ಅಪ್ಸ್ ಆಂಡ್‌ ಹೋಮ್ ಫರ್ನಿಷಿಂಗ್‌, ಎಲೆಕ್ಟ್ರಾನಿಕ್ಸ್ ಆಂಡ್ ಹಾರ್ಡ್‌ವೇರ್‌ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಜೂನ್ 10 - ಕೋರ್ ಸಬ್ಜೆಕ್ಟ್‌ - ಗಣಿತ, ಸಮಾಜ ಶಾಸ್ತ್ರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಜೂನ್ 11 - ಕೋರ್ ಸಬ್ಜೆಕ್ಟ್‌ ಎಲಿಮೆಂಟ್ಸ್ ಆಫ್‌ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ - IV, ಎಲಿಮೆಂಟ್ಸ್‌ ಆಫ್ ಮೆಕಾನಿಕಲ್ ಆಂಡ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ -2 ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿಯರಿಂಗ್‌ - IV, ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಇಂಜಿನಿಯರಿಂಗ್ ಗ್ರಾಫಿಕ್ಸ್ -2 ಮಧ್ಯಾಹ್ನ 2.30 ರಿಂದ ಸಂಜೆ 5.45ರ ತನಕ

ಎಲಿಮೆಂಟ್ಸ್ ಆಫ್‌ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ - IV, ಎಲಿಮೆಂಟ್ಸ್‌ ಆಫ್ ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಪ್ರೋಗ್ರಾಮಿಂಗ್ ಇನ್ ANSI "C", ಎಲಿಮೆಂಟ್ಸ್‌ ಆಫ್ ಕಂಪ್ಯೂಟರ್ ಸೈನ್ಸ್ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಅರ್ಥಶಾಸ್ತ್ರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಜೂನ್ 12 - ಕೋರ್ ಸಬ್ಜೆಕ್ಟ್‌ - ವಿಜ್ಞಾನ, ರಾಜ್ಯಶಾಸ್ತ್ರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ ಮಧ್ಯಾಹ್ನ ನಂತರ 2 ಗಂಟೆಯಿಂದ ಸಂಜೆ 5.15ರ ತನಕ

ಜೂನ್ 13 - ದ್ವಿತೀಯ ಭಾಷೆ - ಇಂಗ್ಲಿಷ್ , ಕನ್ನಡ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.15ರ ತನಕ

ಜೂನ್ 14 - ಕೋರ್ ಸಬ್ಜೆಕ್ಟ್‌ - ಸಮಾಜ ವಿಜ್ಞಾನ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ತನಕ

ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಮನಕ್ಕೆ

ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದುವುದಕ್ಕಾಗಿ 15 ನಿಮಿಷಗಳನ್ನು ಪರೀಕ್ಷೆಯ ಪ್ರಾರಂಭದಲ್ಲೇ ಮಂಡಲಿ ಒದಗಿಸುತ್ತಿದೆ. ಜೂನ್ 15 ರಂದು (ಶನಿವಾರ) ಜೆಟಿಎಸ್‌ (56, 57,58, 59, 75,76, 77 ವಿಷಯಗಳು) ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳು ಆಯಾ ಶಾಲೆಗಳಲ್ಲೇ ನಡೆಯಲಿದೆ. ಆವರಣದಲ್ಲಿ NCERT ಎಂದು ಬರೆದಿರುವ ವಿಷಯಗಳು ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಎಂದು ಮಂಡಲಿಯು ಸ್ಪಷ್ಟಪಡಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ