logo
ಕನ್ನಡ ಸುದ್ದಿ  /  ಕರ್ನಾಟಕ  /  Ibps So Jobs: ಬ್ಯಾಂಕ್‌ಗಳಲ್ಲಿ ಸ್ಪೆಷಲಿಸ್ಟ್‌ ಆಫೀಸರ್ಸ್‌ ಹುದ್ದೆ, ಐಬಿಪಿಎಸ್‌ನಿಂದ 1403 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ವಿವರ

IBPS SO Jobs: ಬ್ಯಾಂಕ್‌ಗಳಲ್ಲಿ ಸ್ಪೆಷಲಿಸ್ಟ್‌ ಆಫೀಸರ್ಸ್‌ ಹುದ್ದೆ, ಐಬಿಪಿಎಸ್‌ನಿಂದ 1403 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ವಿವರ

Praveen Chandra B HT Kannada

Aug 01, 2023 02:01 PM IST

IBPS SO Jobs: ಬ್ಯಾಂಕ್‌ಗಳಲ್ಲಿ ಸ್ಪೆಷಲಿಸ್ಟ್‌ ಆಫೀಸರ್ಸ್‌ ಹುದ್ದೆ, ಐಬಿಪಿಎಸ್‌ನಿಂದ 1403 ಹುದ್ದೆಗಳಿಗೆ ಅರ್ಜಿ ಆಹ್ವಾನ

    • IBPS SO/SPL-XIII Recruitment 2023: ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯು ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
IBPS SO Jobs: ಬ್ಯಾಂಕ್‌ಗಳಲ್ಲಿ ಸ್ಪೆಷಲಿಸ್ಟ್‌ ಆಫೀಸರ್ಸ್‌ ಹುದ್ದೆ, ಐಬಿಪಿಎಸ್‌ನಿಂದ 1403 ಹುದ್ದೆಗಳಿಗೆ ಅರ್ಜಿ ಆಹ್ವಾನ
IBPS SO Jobs: ಬ್ಯಾಂಕ್‌ಗಳಲ್ಲಿ ಸ್ಪೆಷಲಿಸ್ಟ್‌ ಆಫೀಸರ್ಸ್‌ ಹುದ್ದೆ, ಐಬಿಪಿಎಸ್‌ನಿಂದ 1403 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್‌ ಆಫೀಸರ್‌ (IBPS SO/SPL-XIII Recruitment 2023) ಹುದ್ದೆಗಳನ್ನು ಭರ್ತಿ ಮಾಡಲು ಐಬಿಪಿಎಸ್‌ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಯುಕೋ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ನೇಮಕಾತಿ ಡ್ರೈವ್‌ನಲ್ಲಿ ಪಾಲ್ಗೊಳ್ಳುತ್ತವೆ. ಐಬಿಪಿಎಸ್‌ ಎಸ್‌ಒ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ, ಅರ್ಜಿ ಶುಲ್ಕ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

ಪ್ರಮುಖ ದಿನಾಂಕಗಳು

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: : 01-08-2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-08-2023
  • ಆನ್‌ಲೈನ್ ಪ್ರವೇಶ ಪತ್ರವನ್ನು ಡೌನ್‌ಲೋಡ್: ಡಿಸೆಂಬರ್ 2023
  • ಆನ್‌ಲೈನ್ ಪೂರ್ವಭಾವಿ ಪರೀಕ್ಷೆಯ ದಿನಾಂಕ: 30-12-2023 ರಿಂದ 31-12-2023
  • ಆನ್‌ಲೈನ್ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ: ಜನವರಿ 2024
  • ಮೇನ್ಸ್‌ ಪರೀಕ್ಷೆಯ ಹಾಲ್‌ ಟಿಕೆಟ್‌ ಡೌನ್‌ಲೋಡ್: ಜನವರಿ 2024
  • ಆನ್‌ಲೈನ್ ಮುಖ್ಯ ಪರೀಕ್ಷೆಯ ದಿನಾಂಕ: 28-01-2024
  • ಆನ್‌ಲೈನ್ ಮುಖ್ಯ ಪರೀಕ್ಷೆಯ ಫಲಿತಾಂಶದ ದಿನಾಂಕ: ಫೆಬ್ರವರಿ 2024
  • ಸಂದರ್ಶನಕ್ಕಾಗಿ ಕಾಲ್‌ ಲೆಟರ್‌ ಡೌನ್‌ಲೋಡ್: ಫೆಬ್ರವರಿ/ಮಾರ್ಚ್ 2024
  • ಸಂದರ್ಶನದ ಸಮಯ: ಫೆಬ್ರವರಿ/ಮಾರ್ಚ್ 2024
  • ತಾತ್ಕಾಲಿಕ ಸೀಟು ಹಂಚಿಕೆ: ಏಪ್ರಿಲ್ 2024

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ: www.ibps.in

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಜಿಎಸ್‌ಟಿ ಒಳಗೊಂಡಂತೆ 850 ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳು ಜಿಎಸ್‌ಟಿ ಒಳಗೊಂಡಂತೆ 175 ರೂಪಾಯಿ ಪಾವತಿಸಿದರೆ ಸಾಕು. ಅರ್ಜಿಯನ್ನು ಆನ್‌ಲೈನ್‌ ಮೋಡ್‌ ಮೂಲಕ ಪಾವತಿಸಬೇಕು.

ಹುದ್ದೆಗಳ ವಿವರ

ಐಟಿ ಆಫೀಸರ್-‌ 120, ಅಗ್ರಿಕಲ್ಚರ್‌ ಫೀಲ್ಡ್‌ ಆಫೀಸರ್‌ 500, ರಾಜಭಾಷಾ ಅಧಿಕಾರಿ- 41, ಲಾ ಆಫೀಸರ್‌-10, ಎಚ್‌ಆರ್‌/ ಪರ್ಸನಲ್‌ ಆಫೀಸರ್‌-31, ಮಾರ್ಕೆಟಿಂಗ್‌ ಆಫೀಸರ್‌-700 ಸೇರಿದಂತೆ ಒಟ್ಟು 1403 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ ಏನು?

ಐಟಿ ಆಫೀಸರ್ ಹುದ್ದೆಗೆ ಪದವಿ/ಸ್ನಾತಕೋತ್ತರ/ಡಿಒಇಎಸಿ (ಎಂಜಿನಿಯರಿಂಗ್‌), ಅಗ್ರಿಕಲ್ಚರ್‌ ಫೀಲ್ಡ್‌ ಆಫೀಸರ್‌ ಹುದ್ದೆಗೆ ಅಗ್ರಿಕಲ್ಚರ್‌ ಅಥವಾ ತತ್ಸಮಾನ ವಿದ್ಯಾರ್ಹತೆ ಬಯಸಲಾಗಿದೆ. ರಾಜಭಾಷಾ ಅಧಿಕಾರಿಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ, ಲಾ ಆಫೀಸರ್‌ಗೆ ಕಾನೂನು ಪದವಿ ಬಯಸಲಾಗಿದೆ. ಎಚ್‌ಆರ್‌/ ಪರ್ಸನಲ್‌ ಆಫಿಸರ್‌ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಬಯಸಲಾಗಿದೆ. ಮಾರ್ಕೆಟಿಂಗ್‌ ಆಫೀಸರ್‌ ಹುದ್ದೆಗೆ ಎಂಎಂಎಸ್‌, ಎಂಬಿಎ, ಪಿಜಿಡಿಬಿಎ, ಪಿಜಿಡಿಬಿಎಂ, ಪಿಜಿಪಿಎಂ, ಪಿಜಿಡಿಎಂ ಮಾರ್ಕೆಟಿಂಗ್‌ ಇತ್ಯಾದಿ ವಿದ್ಯಾರ್ಹತೆ ಬಯಸಲಾಗಿದೆ.

ಈಗಾಗಲೇ ಐಬಿಪಿಎಸ್‌ ಪ್ರೊಬೆಷನರಿ ಆಫೀಸರ್ಸ್‌, ಮ್ಯಾನೇಜ್‌ಮೆಂಟ್‌ ಟ್ರೇನಿ ಹುದ್ದೆಗಳ ಅಧಿಸೂಚನೆ ಪ್ರಕಟಗೊಂಡಿದೆ. ಈ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವಿವಿರವಾದ ಮಾಹಿತಿ ಪ್ರಕಟಿಸಿದೆ. ಆಸಕ್ತರು ಇಲ್ಲಿ ಕ್ಲಿಕ್‌ ಮಾಡುವ ಮೂಲಕ ಓದಬಹುದು.

ಐಬಿಪಿಎಸ್‌ ಸ್ಪೆಷಲಿಸ್ಟ್‌ ಆಫೀಸರ್‌ ಅಧಿಸೂಚನೆ ಇಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ