logo
ಕನ್ನಡ ಸುದ್ದಿ  /  ಕರ್ನಾಟಕ  /  Sudhakar On Siddaramaiah: ಸಿದ್ದರಾಮಯ್ಯನವರು ಮಾಡಿದ ಪಾಪದ ಕೆಲಸದಿಂದ ನಾನು ಕಾಂಗ್ರೆಸ್‌ ತೊರೆಯಬೇಕಾಯಿತು: ಸಚಿವ ಸುಧಾಕರ್‌

Sudhakar on Siddaramaiah: ಸಿದ್ದರಾಮಯ್ಯನವರು ಮಾಡಿದ ಪಾಪದ ಕೆಲಸದಿಂದ ನಾನು ಕಾಂಗ್ರೆಸ್‌ ತೊರೆಯಬೇಕಾಯಿತು: ಸಚಿವ ಸುಧಾಕರ್‌

HT Kannada Desk HT Kannada

Jan 25, 2023 08:27 AM IST

ಚಿಕ್ಕಬಳ್ಳಾಪುರದ ಅಜ್ಜವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸುಧಾಕರ್

  • ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದನ್ನು ನಾನು ಕೇಳಿದ್ದೇನೆ. ಬಿಬಿಎಂಪಿಯಲ್ಲಿ ಕಸ ವಿಲೇವಾರಿಗೆ ಟೆಂಡರ್‌ ಮೊತ್ತ ಹೆಚ್ಚಳ ಮಾಡಿದ್ದು ಏಕೆ ಎಂದು ಕೇಳಿದ್ದೆ. ಆದರೆ ಅದಕ್ಕೆ ಯಾರೂ ಉತ್ತರ ನೀಡಲಿಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. 

ಚಿಕ್ಕಬಳ್ಳಾಪುರದ ಅಜ್ಜವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸುಧಾಕರ್
ಚಿಕ್ಕಬಳ್ಳಾಪುರದ ಅಜ್ಜವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸುಧಾಕರ್

ಅಜ್ಜವಾರ(ಚಿಕ್ಕಬಳ್ಳಾಪುರ): ಕರ್ನಾಟಕ ಇತಿಹಾಸದಲ್ಲಿ ಭಷ್ಟ್ರಾತಿ ಭ್ರಷ್ಟ ಮಂತ್ರಿ ಅಂದರೆ ಅದು ಡಾ ಕೆ ಸುಧಾಕರ್. ಆತನಿಗೆ ಟಿಕೆಟ್ ಕೊಟ್ಟು ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಹೇಳಿದ್ದರು. ಸಿದ್ದರಾಮಯ್ಯ ಅವರ ಆರೋಪಕ್ಕೆ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ಬೆಂಗಳೂರಿನಲ್ಲಿ ಮೇ 18, 19ಕ್ಕೆ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ; ಆರೆಂಜ್ ಅಲರ್ಟ್ ಘೋಷಣೆ -Bengaluru Rain

ಎಸ್‌ಎಸ್‌ಎಲ್‌ಸಿ ಕಡಿಮೆ ಫಲಿತಾಂಶ ಬಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ; ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ರದ್ದು, ಮಹತ್ವದ ತೀರ್ಮಾನ

ಲೈಂಗಿಕ ದೌರ್ಜನ್ಯಕ್ಕೊಳದ ಮಹಿಳೆ ಅಪಹರಣ ಆರೋಪ ಪ್ರಕರಣ; ಮೇ 20ಕ್ಕೆ ಹೆಚ್‌ಡಿ ರೇವಣ್ಣ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾದಳದಲ್ಲಿದ್ದು ಎಲ್ಲಾ ರೀತಿಯ ಅಧಿಕಾರ ಅನುಭವಿಸಿದ ಅವರು, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದಿದ್ದಾರೆ.

ಬಾರ್‌ನಲ್ಲಿ ಕುಡಿದು ಬಂದಂತೆ ಮಾತನಾಡಬಾರದು

ಜಿಲ್ಲೆಯ ಅಜ್ಜವಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಪ್ರಜಾಧ್ವನಿ ಯಾತ್ರೆಯ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಮಾಡಿದ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಕಾಂಗ್ರೆಸ್‌ ನಾಯಕರಿಗೆ ಸಾಧ್ಯವಾಗಿಲ್ಲ. ಆದರ ಬದಲಿಗೆ ವೈಯಕ್ತಿಕ ಆರೋಪವನ್ನು ಮಾಡಿದ್ದಾರೆ. ಸಿಎಂ ಆಗಿದ್ದವರು, ಸಚಿವರಾಗಿದ್ದವರು, ಜನಪ್ರತಿನಿಧಿಗಳು ಪ್ರಜಾಪ್ರಭುತ್ವದಲ್ಲಿ ಹೇಗೆ ಮಾತಾಡಬೇಕೆಂದು ಮೊದಲು ಕಲಿಯಬೇಕು. ಬಾರ್‌ನಲ್ಲಿ ಕುಡಿದು ಬಂದಂತೆ ಸಭೆಯಲ್ಲಿ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ನನಗೆ ಟಿಕೆಟ್‌ ನೀಡುಲ್ಲಿ ಸಿದ್ದರಾಮಯ್ಯ ಪಾತ್ರವೇ ಇಲ್ಲ

ಕಾಂಗ್ರೆಸ್‌ನಲ್ಲಿ ನನಗೆ ಟಿಕೆಟ್‌ ದೊರೆಯುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ನನಗೆ 2013ರಲ್ಲಿ ಟಿಕೆಟ್ ಕೊಡಿಸಿದ್ದು ನನ್ನ ರಾಜಕೀಯ ಗುರುಗಳಾದ ಎಸ್‌.ಎಂ.ಕೃಷ್ಣ ಹಾಗೂ ಡಾ.ಜಿ.ಪರಮೇಶ್ವರ್‌ ಅವರು. ನಾನು ಸಿದ್ದರಾಮಯ್ಯ ಅವರ ಬಳಿ ಟಿಕೆಟ್ ಗಾಗಿ ಏನೂ ಸಹಾಯ ಕೇಳಿಯೇ ಇಲ್ಲ. ಶಾಸಕನಾದ ಬಳಿಕ ನನ್ನನ್ನು ವಿಶ್ವಾಸದಿಂದ ನೋಡಿದ್ದಾರೆ. ಆಗ ನಾನೂ ಅವರನ್ನು ಸಮರ್ಥನೆ ಮಾಡಿದ್ದೆ. ಆದರೆ ತಪ್ಪು ಮಾಡಿದಾಗ ಅದನ್ನು ನೇರವಾಗಿ ಖಂಡಿಸಿದ್ದೇನೆ. ಚುನಾಯಿತ ಪ್ರತಿನಿಧಿಗಳು ತಮ್ಮ ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ಆ ಎಲ್ಲಾ ಗುಣಮಟ್ಟ ಬಿಟ್ಟು ಕೀಳಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್‌ ಕಾಲೇಜು ತಾವೇ ತಂದಿದ್ದು ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಬಂದು ಆರು ವರ್ಷದ ಮಗುವನ್ನು ಕೇಳಿದರೂ ಯಾರು ಈ ಯೋಜನೆ ತಂದಿದ್ದು ಎಂದು ಹೇಳುತ್ತದೆ. ಎಚ್‌ಎನ್‌ ವ್ಯಾಲಿ ಬಗ್ಗೆ ಇವರಿಗೆ ಗೊತ್ತೇ ಇರಲಿಲ್ಲ. ಶಿವಶಂಕರರೆಡ್ಡಿ ಹಾಗೂ ರಮೇಶ್‌ಕುಮಾರ್‌ ಅವರಿಗೂ ಗೊತ್ತೇ ಇರಲಿಲ್ಲ. ಇದೇ ಸಿದ್ದರಾಮಯ್ಯನವರು, ಎಚ್‌ಎನ್‌ ವ್ಯಾಲಿ ಯೋಜನೆ ಜಾರಿಯಾಗಲು ಸುಧಾಕರ್‌ ಕಾರಣ ಎಂದು ಇಲ್ಲಿಗೇ ಬಂದು ಭಾಷಣ ಮಾಡಿದ್ದರು. ಅಂದು ಒಂದು ಮಾತನಾಡುತ್ತಾರೆ, ಈಗ ಮತ್ತೊಂದು ಮಾತನಾಡುತ್ತಾರೆ. ಭಾಷಣ ಮಾಡಲಿ, ಆದರೆ ಅದರಲ್ಲಿ ಸತ್ಯ ಇರಬೇಕು ಎಂದು ಸುಧಾಕರ್ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಕ್ಷೇತ್ರ ಹುಡುಕಾಟ

ಸಿದ್ದರಾಮಯ್ಯನವರು ಒಂದೊಂದೇ ಕ್ಷೇತ್ರ ಹುಡುಕಾಡುತ್ತಿದ್ದಾರೆ. ವರುಣಾ, ಚಾಮುಂಡೇಶ್ವರಿ, ಬಳಿಕ ಕೋಲಾರಕ್ಕೆ ಹೋಗಿದ್ದಾರೆ. ಪ್ರತಿ ಬಾರಿ ಅನ್ನಭಾಗ್ಯ ಕೊಟ್ಟೆ, ಅಕ್ಕಿ ಕೊಟ್ಟೆ ಎಂದು ಹೇಳುತ್ತಾರೆ. ವಾಸ್ತವ ಏನೆಂದರೆ, ಈ ಯೋಜನೆಯಲ್ಲಿ ಒಂದು ಕೆಜಿ ಅಕ್ಕಿಗೆ 32 ರೂ.ನಲ್ಲಿ 29 ರೂಪಾಯಿಯನ್ನ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡುತ್ತಿದೆ. ಆದರೆ ಪ್ರಧಾನಿ ಮೋದಿ ಅದನ್ನು ಹೇಳಿಕೊಳ್ಳಲೇ ಇಲ್ಲ. ಸಿದ್ದರಾಮಯ್ಯನವರು ಅಕ್ಕಿ ನೀಡಲಿಲ್ಲ, ಕೇವಲ ಚೀಲ ನೀಡಿದರು ಎಂದರು.

ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದನ್ನು ನಾನು ಕೇಳಿದ್ದೇನೆ. ಬಿಬಿಎಂಪಿಯಲ್ಲಿ ಕಸ ವಿಲೇವಾರಿಗೆ ಟೆಂಡರ್‌ ಮೊತ್ತ ಹೆಚ್ಚಳ ಮಾಡಿದ್ದು ಏಕೆ ಎಂದು ಕೇಳಿದ್ದೆ. ಆದರೆ ಅದಕ್ಕೆ ಯಾರೂ ಉತ್ತರ ನೀಡಲಿಲ್ಲ. ಇಂತಹ ಸರ್ಕಾರದ ಮಟ್ಟದ ಪ್ರಶ್ನೆಗಳಿಗೆ ಸಿದ್ದರಾಮಯ್ಯನವರು ಉತ್ತರ ನೀಡಿಲ್ಲ. ಆದರೆ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಾರೆ. ಕೇವಲ ರಾಜಕೀಯ ಕೆಸರೆರೆಚಾಟ ಮಾಡುತ್ತಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಲು ನನ್ನ ಸಹಕಾರವೂ ಕಾರಣ

ಅವರು ಮುಖ್ಯಮಂತ್ರಿಯಾಗಲು ನನ್ನ ಸಹಕಾರವೂ ಕಾರಣ. ಹಿಂದೆ ಇಲ್ಲಿ ಕಾಂಗ್ರೆಸ್‌ ಅಧಿಕಾರ ಪಡೆದಿರಲಿಲ್ಲ. ಇಲ್ಲಿ ಜನತಾದಳದ ಶಾಸಕರಿದ್ದರು. ನಾನು ಬಂದ ಮೇಲೆ ದಳದಲ್ಲಿದ್ದ ಸೀಟನ್ನು ಕಾಂಗ್ರೆಸ್‌ಗೆ ನೀಡಿದೆ. ಆದರೆ ಸಿದ್ದರಾಮಯ್ಯನವರು ಮಾಡಿದ ಪಾಪದ ಕೆಲಸದಿಂದ ನಾನು ಕಾಂಗ್ರೆಸ್‌ ತೊರೆಯಬೇಕಾಯಿತು. ವ್ಯಕ್ತಿಯ ಚಾರಿತ್ರ್ಯಹರಣ ಮಾಡುವುದು ಬಹಳ ಸುಲಭ, ಆದರೆ ಅದನ್ನು ಗಳಿಸುವುದು ಕಷ್ಟ ಎಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ