logo
ಕನ್ನಡ ಸುದ್ದಿ  /  ಕರ್ನಾಟಕ  /  Ins Vikrant: ಕಾರವಾರ ನೌಕಾನೆಲೆಗೆ ಆಗಮಿಸಿದ ಐಎನ್‌ಎಸ್‌ ವಿಕ್ರಾಂತ್‌, ಸ್ವದೇಶಿ ವಿಮಾನವಾಹಕ ನೌಕೆಗೆ ಇನ್ಮುಂದೆ ಹೊಸ ತಂಗುದಾಣ

INS Vikrant: ಕಾರವಾರ ನೌಕಾನೆಲೆಗೆ ಆಗಮಿಸಿದ ಐಎನ್‌ಎಸ್‌ ವಿಕ್ರಾಂತ್‌, ಸ್ವದೇಶಿ ವಿಮಾನವಾಹಕ ನೌಕೆಗೆ ಇನ್ಮುಂದೆ ಹೊಸ ತಂಗುದಾಣ

HT Kannada Desk HT Kannada

May 21, 2023 11:36 AM IST

INS Vikrant: ಕಾರವಾರ ನೌಕಾನೆಲೆಗೆ ಆಗಮಿಸಿದ ಐಎನ್‌ಎಸ್‌ ವಿಕ್ರಾಂತ್‌, ಸ್ವದೇಶಿ ವಿಮಾನವಾಹಕ ನೌಕೆಗೆ ಇನ್ಮುಂದೆ ಹೊಸ ತಂಗುದಾಣ

    • INS Vikrant: ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐ.ಎನ್.ಎಸ್. ವಿಕ್ರಾಂತ್ ಕಾರವಾರ ನೌಕಾನೆಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಬರ್ತಿಂಗ್ ಜಾಗಕ್ಕೆ ಆಗಮಿಸಿದೆ.
INS Vikrant: ಕಾರವಾರ ನೌಕಾನೆಲೆಗೆ ಆಗಮಿಸಿದ ಐಎನ್‌ಎಸ್‌ ವಿಕ್ರಾಂತ್‌, ಸ್ವದೇಶಿ ವಿಮಾನವಾಹಕ ನೌಕೆಗೆ ಇನ್ಮುಂದೆ ಹೊಸ ತಂಗುದಾಣ
INS Vikrant: ಕಾರವಾರ ನೌಕಾನೆಲೆಗೆ ಆಗಮಿಸಿದ ಐಎನ್‌ಎಸ್‌ ವಿಕ್ರಾಂತ್‌, ಸ್ವದೇಶಿ ವಿಮಾನವಾಹಕ ನೌಕೆಗೆ ಇನ್ಮುಂದೆ ಹೊಸ ತಂಗುದಾಣ (PTI)

ಕಾರವಾರ: ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಶನಿವಾರ ಸಂಭ್ರಮದ ವಾತಾವರಣ. ಭಾರತದ ಮೊದಲ ಸ್ವದೇಶಿ ವಿಮಾನವಾಹನ ನೌಕೆ ಎಂದೇ ಹೆಗ್ಗುರುತಿಗೆ ಪಾತ್ರವಾಗಿರುವ ಐ.ಎನ್.ಎಸ್. ವಿಕ್ರಾಂತ್ ನೌಕಾನೆಲೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಬರ್ತಿಂಗ್ ಜಾಗದಲ್ಲಿ ಯಶಸ್ವಿಯಾಗಿ ಬಂದಿಳಿದಿದೆ.

ಟ್ರೆಂಡಿಂಗ್​ ಸುದ್ದಿ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

ಐಎನ್‌ಎಸ್‌ ವಿಕ್ರಾಂತ್‌ಗೆ ನೂತನ ತಂಗುದಾಣ (ಶಿಪ್ ಬರ್ತಿಂಗ್‌‌ ಫೆಸಿಲಿಟಿ)ವನ್ನು ಪ್ರಾಜೆಕ್ಟ್‌ ಸೀ ಬರ್ಡ್‌ನಡಿ ನಿರ್ಮಿಸಲಾಗಿದೆ. "ಕಾರವಾರದಲ್ಲಿ ಹೊಸದಾಗಿ ನಿರ್ಮಿಸಲಾದ ಏರ್‌ಕ್ರಾಫ್ಟ್‌ ಕ್ಯಾರಿಯರ್‌ ಬರ್ತಿಂಗ್‌ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಐಎನ್‌ಎಸ್‌ ವಿಕ್ರಾಂತ್‌ ಆಗಮಿಸಿದೆ. ಕಾರವಾರ ನೌಕನೆಲೆಯ ಹಡಗು ನಿಲುಗಡೆ ವ್ಯವಸ್ಥೆಯಲ್ಲಿ ಇದೊಂದು ಮಹತ್ವದ ಮೈಲುಗಲ್ಲು" ಎಂದು ಭಾರತೀಯ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರವಾರದ ಸೀಬರ್ಡ್ ನೌಕಾನೆಲೆಯು ರಕ್ಷಣಾ ದೃಷ್ಟಿಯಿಂದ ಕರ್ನಾಟಕದಲ್ಲಿರುವ ಮಹತ್ವದ ಪ್ರದೇಶವಾಗಿದ್ದು, ಯಾವುದೇ ಸಂಭಾವ್ಯ ಅಪಾಯಗಳು ಎದುರಾಗುವ ಸಂದರ್ಭ ಸೂಕ್ತ ಪ್ರತಿಕ್ರಿಯೆ ನೀಡಲು ಇಲ್ಲಿನ ನೌಕಾನೆಲೆ ತಯಾರಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಇದರ ಅಭಿವೃದ್ಧಿಗಳು ರಕ್ಷಣಾ ದೃಷ್ಟಿಯಿಂದ ಕಾಲಕಾಲಕ್ಕೆ ಆಗುತ್ತಿದ್ದು, ಇದೀಗ ಭಾರತದ ಸ್ವದೇಶಿ ವಿಮಾನವಾಹಕ ನೌಕೆ ಬಂದಿಳಿದಿರುವುದು ಮಹತ್ವದ ಹೆಜ್ಜೆಯಾಗಿದೆ.

ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್.ಎಸ್. ವಿಕ್ರಾಂತ್ ಹೊಸದಾಗಿ ನಿರ್ಮಿಸಲಾದ ವಿಮಾನವಾಹಕ ನೌಕೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಿಂತಿದೆ. ಐಎನ್‌ಎಸ್ ವಿಕ್ರಾಂತ್ ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಎಂಎಸ್‌ಎಂಇಗಳು ಒದಗಿಸಿದ ದೇಶೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ. ಇದು ಭಾರತದ ನೌಕಾಪಡೆ ಇತಿಹಾಸದಲ್ಲಿ ನಿರ್ಮಿಸಲಾದ ಅತಿದೊಡ್ಡ ಹಡಗು ಮತ್ತು ಅತ್ಯಾಧುನಿಕ ಯಾಂತ್ರೀಕೃತ ವೈಶಿಷ್ಟ್ಯಗಳನ್ನು ಹೊಂದಿದೆ.

ಐಎನ್ಎಸ್ ವಿಕ್ರಾಂತ್

ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ. ಇದು 21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿ ಎಂದೇ ಪರಿಗಣಿಸಲಾಗುತ್ತಿದೆ.

ಐಎನ್‌ಎಸ್ ವಿಕ್ರಾಂತ್ ಅನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ (ಡಬ್ಲ್ಯುಡಿಬಿ) ವಿನ್ಯಾಸಗೊಳಿಸಿದೆ. ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಸಾರ್ವಜನಿಕ ವಲಯದ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಿಸಿದೆ, ವಿಕ್ರಾಂತ್ ಅನ್ನು ಅತ್ಯಾಧುನಿಕ ಯಾಂತ್ರೀಕೃತ ವೈಶಿಷ್ಟ್ಯಗಳೊಂದಿಗೆ ನಿರ್ಮಾಣ ಮಾಡಲಾಗಿದ್ದು, ಅತಿದೊಡ್ಡ ಹಡಗು ಎನಿಸಿಕೊಂಡಿದೆ.

1971 ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ವಿಮಾನವಾಹಕ ನೌಕೆಯ ಹೆಸರನ್ನು ಈ ಸ್ವದೇಶಿ ವಿಮಾನವಾಹಕ ನೌಕೆಗೆ ಇಡಲಾಗಿದೆ. 262 ಮೀಟರ್ ಉದ್ದ, 62 ಮೀಟರ್ ಅಗಲವಿರುವ ಈ ವಿಕ್ರಾಂತ್ ಎರಡು ಫುಟ್ಬಾಲ್ ಮೈದಾನದಷ್ಟು ದೊಡ್ಡದಿದೆ. 59 ಮೀಟರ್ ಎತ್ತರವಿರುವ ಇದರಲ್ಲಿ 14 ಡೆಕ್ಗಳಿದ್ದು, 2300 ಕಂಪಾರ್ಟ್‌ಮೆಂಟ್‌ಗಳಿವೆ. ಇವುಗಳಲ್ಲಿ ಮಹಿಳಾ ಅಧಿಕಾರಿಗಳು ಸೇರಿದಂತೆ 1700 ಸಿಬ್ಬಂದಿಗೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದು 40000 ಟನ್ನಷ್ಟು ಭಾರವಿದ್ದು, ಗಂಟೆಗೆ 50 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಈ ನೌಕೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಆಸ್ಪತ್ರೆಯೇ ಇದೆ. ಇದರಲ್ಲಿ ಎರಡು ಆಪರೇಷನ್ ಥಿಯೇಟರ್ಗಳೂ ಇವೆ. ಅಲ್ಲದೆ, ಇದರಲ್ಲಿರುವ ಅಡುಗೆ ಮನೆಯಲ್ಲಿ ಏಕಕಾಲದಲ್ಲಿ ಸುಮಾರು 2000 ಮಂದಿಗೆ ಅಡುಗೆ ಮಾಡಬಹುದು.

ಇದರ ವಿನ್ಯಾಸದಿಂದ ಹಿಡಿದು, ಬಳಕೆ ಮಾಡಲಾಗಿರುವ ವಸ್ತುಗಳು ಕೂಡ ಸ್ವದೇಶಿಯಾಗಿವೆ. ಅಂದರೆ, ಶೇ.76ರಷ್ಟು ಸಲಕರಣೆಗಳು ಮತ್ತು 21,500 ಟನ್ನಷ್ಟು ವಿಶೇಷ ಗ್ರೇಡ್‌ನ ಕಬ್ಬಿಣವನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ನೌಕೆಯ ನಿರ್ಮಾಣಕ್ಕೂ ಮುನ್ನ, 3ಡಿ ತಂತ್ರಜ್ಞಾನದಲ್ಲಿ ಮಾದರಿಯನ್ನು ನಿರ್ಮಿಸಲಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ 3ಡಿ ಮಾದರಿ ತಯಾರಿಸಿ ಸಮರ ನೌಕೆ ನಿರ್ಮಾಣ ಮಾಡಲಾಗಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ