logo
ಕನ್ನಡ ಸುದ್ದಿ  /  ಕರ್ನಾಟಕ  /  Job Alert: ಕೋಮುಲ್‌ ನೇಮಕಾತಿ; ಅಸಿಸ್ಟಂಟ್‌ ಮ್ಯಾನೇಜರ್‌ ಸಹಿತ 179 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Job Alert: ಕೋಮುಲ್‌ ನೇಮಕಾತಿ; ಅಸಿಸ್ಟಂಟ್‌ ಮ್ಯಾನೇಜರ್‌ ಸಹಿತ 179 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

HT Kannada Desk HT Kannada

Sep 20, 2023 11:13 AM IST

ಕೋಮುಲ್‌ ನೇಮಕಾತಿ; ಅಸಿಸ್ಟಂಟ್‌ ಮ್ಯಾನೇಜರ್‌ ಸಹಿತ 179 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    • ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಕೋಮುಲ್) ನಲ್ಲಿ ವಿವಿಧ 179 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.
ಕೋಮುಲ್‌ ನೇಮಕಾತಿ; ಅಸಿಸ್ಟಂಟ್‌ ಮ್ಯಾನೇಜರ್‌ ಸಹಿತ 179 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೋಮುಲ್‌ ನೇಮಕಾತಿ; ಅಸಿಸ್ಟಂಟ್‌ ಮ್ಯಾನೇಜರ್‌ ಸಹಿತ 179 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಕೋಮುಲ್) ವು ಅಸಿಸ್ಟೆಂಟ್ ಮ್ಯಾನೇಜರ್ ಸಹಿತ ವಿವಿಧ 179 ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆ ಹೊರಡಿಸಿದೆ. ಪ್ರತಿಯೊಂದು ಹುದ್ದೆಗೂ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ವಿದ್ಯಾರ್ಹತೆ ಅನ್ವಯ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಕ್ಟೋಬರ್‌ 4 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರು ರಸ್ತೆಗಳಲ್ಲಿ ಮರ ಬೀಳುವ ಸನ್ನಿವೇಶವಿದೆಯಾ, ಈ ನಂಬರ್‌ಗಳಿಗೆ ಕರೆ ಮಾಡಿ

Mandya News: ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್‌ಐಆರ್‌ ದಾಖಲು

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಹುದ್ದೆಗಳ ವಿವರ:

* ಸಹಾಯಕ ವ್ಯವಸ್ಥಾಪಕ (ಎಎಎಚ್ ಹಾಗೂ ಎ. ಐ)

* ಸಹಾಯಕ ವ್ಯವಸ್ಥಾಪಕ (ವಿತ್ತ)

* ತಾಂತ್ರಿಕ ಅಧಿಕಾರಿ (ಡಿ.ಟಿ)

* ಮಾರುಕಟ್ಟೆ ಅಧಿಕಾರಿ

* ಸಿಸ್ಟಮ್ ಆಫೀಸರ್

* ತಾಂತ್ರಿಕ ಅಧಿಕಾರಿ (ಗು. ನಿ)

* ಕೃಷಿ ಅಧಿಕಾರಿ

* ಆಡಳಿತಾಧಿಕಾರಿ

* ತಾಂತ್ರಿಕ ಅಧಿಕಾರಿ (ಎಂ. ಜಿ)

* ಲೆಕ್ಕಾಧಿಕಾರಿ.

ಅರ್ಜಿ ಹೀಗೆ ಸಲ್ಲಿಸಿ:

* ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘದ ವೆಬ್ ಸೈಟ್ಗೆ ಲಾಗಿನ್ ಮಾಡಿಕೊಳ್ಳಬೇಕು.

* ಪ್ರತಿಯೊಂದು ಹುದ್ದೆಗೂ ಪ್ರತ್ಯೇಕ ಅಧಿಸೂಚನೆ, ಅರ್ಜಿ ದೊರೆಯುತ್ತದೆ.

* ಅಭ್ಯರ್ಥಿಗಳು ವಿದ್ಯಾರ್ಹತೆ ಅನ್ವಯ ವಿಭಾಗ ಆಯ್ಕೆ ಮಾಡಿಕೊಳ್ಳಬಹುದು.

* ಸೂಕ್ತ ಮಾಹಿತಿ ತುಂಬಿ, ದಾಖಲೆಗಳ ಪ್ರತಿಯೊಂದು ಇದೇ ವೆಬ್ ಸೈಟ್ನಲ್ಲಿ ಅರ್ಜಿ ಕಳುಹಿಸಬೇಕು.

ವಯೋಮಿತಿ:

* ಕನಿಷ್ಠ 18 ವರ್ಷ ಪೂರೈಸಿದ ಎಲ್ಲ ವರ್ಗದ ಅಭ್ಯರ್ಥಿಗಳು, ಗರಿಷ್ಠ 35 ವರ್ಷದೊಳಗಿನ ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

* ವರ್ಗವಾರು ವಯೋಸಡಿಲಿಕೆ ಅನ್ವಯವಾಗಲಿದೆ.

ಶಿಕ್ಷಣ:

ಬಿ. ಎಸ್ಸಿ, ಎಂಕಾಂ, ಎಂಬಿಎ, ಬಿ.ಎಸ್ಸಿ (ಡಿ. ಟಿ), ಬಿಬಿಎಂ, ಬಿ.ಇ, ಮೈಕ್ರೋಬಯಾಲಜಿ, ಬಿ.ಎಸ್ಸಿ(ಕೃಷಿ), ಎಂಬಿಎ(ಫೈನಾನ್ಸ್ ) ಸಹಿತ ಹುದ್ದೆಗೆ ಸಂಬಂದಿಸಿದ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ಶುಲ್ಕ ವಿವರ:

* ಸಾಮಾನ್ಯ ಅಭ್ಯರ್ಥಿಯು 1,000 ರೂ.ಅರ್ಜಿ ಶುಲ್ಕ ಪಾವತಿಸಬೇಕು.

* ಎಸ್ಸಿ /ಎಸ್ಟಿ ಸಹಿತ ಇತರ ವರ್ಗದ ಅಭ್ಯರ್ಥಿಗಳು 500 ರೂ. ಪಾವತಿಸಬೇಕು.

* ಶುಲ್ಕವನ್ನು ಆನ್ಲೈನ್ ನ ಯಾವದೇ ವಿಧಾನದ ಮೂಲಕ ಪಾವತಿಸಬಹುದು.

* ಸೇವಾ ಶುಲ್ಕವು ಪ್ರತ್ಯೇಕ ಇರಲಿದೆ.

ವೇತನ:

* ಸಹಾಯಕ ವ್ಯವಸ್ಥಾಪಕ ಹುದ್ದೆಗೆ 52,650 ರೂ 97,100 ರೂ., ತಾಂತ್ರಿಕ ಅಧಿಕಾರಿ ಹುದ್ದೆಗೆ,

* ಮಾರುಕಟ್ಟೆ ಅಧಿಕಾರಿ ಹುದ್ದೆಗೆ, ಸಿಸ್ಟಮ್ ಆಫೀಸರ್ ಸಹಿತ ಎಲ್ಲ ವಿಭಾಗದ ಹುದ್ದೆಗಳಿಗೆ 43,100 ರೂ. ದಿಂದ 83,900 ರೂ. ಮಾಸಿಕ ವೇತನ ಇರಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 04–10–2023

ಅರ್ಜಿ ಸಲ್ಲಿಕೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕೋಮಲ್‌ನ ಅಧಿಕೃತ ವೆಬ್‌ಸೈಟ್‌ http:/www.komul.coop/ ಗೆ ಭೇಟಿ ಕೊಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ