logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಕೆಕೆಆರ್‌ಡಿಬಿಯಲ್ಲಿ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 30ರೊಳಗೆ ಅರ್ಜಿ ಸಲ್ಲಿಸಿ

Kalaburagi News: ಕೆಕೆಆರ್‌ಡಿಬಿಯಲ್ಲಿ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 30ರೊಳಗೆ ಅರ್ಜಿ ಸಲ್ಲಿಸಿ

HT Kannada Desk HT Kannada

Oct 23, 2023 12:30 PM IST

ಕೆಕೆಆರ್‌ಡಿಬಿಯಲ್ಲಿ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 30ರೊಳಗೆ ಅರ್ಜಿ ಸಲ್ಲಿಸಿ

    • ಎಲ್ಎಲ್‌ಬಿ ಪದವಿ ಜೊತೆಗೆ ಅಖಿಲ‌ ಭಾರತ ಬಾರ್ ಕೌನ್ಸಿಲ್‌ನಲ್ಲಿ‌ ನೋಂದಣಿ ಮತ್ತು ಸಿವಿಲ್‌ ಪ್ರಕರಣಗಳಲ್ಲಿ 5 ವರ್ಷ ಅನುಭವ ಇರುವ ಹಾಗೂ ಕನ್ನಡ‌ ಮತ್ತು ಇಂಗ್ಲೀಷ್ ಚೆನ್ನಾಗಿ ಬಲ್ಲ ಅಭ್ಯರ್ಥಿಗಳು ಇದೇ ಅಕ್ಟೋಬರ್‌ 30 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕೆಕೆಆರ್‌ಡಿಬಿಯಲ್ಲಿ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 30ರೊಳಗೆ ಅರ್ಜಿ ಸಲ್ಲಿಸಿ
ಕೆಕೆಆರ್‌ಡಿಬಿಯಲ್ಲಿ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 30ರೊಳಗೆ ಅರ್ಜಿ ಸಲ್ಲಿಸಿ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಮಂಡಳಿ ವಿರುದ್ಧ ದಾಖಲಾಗುವ ಪ್ರಕರಣದಲ್ಲಿ ಮಂಡಳಿ ಪರವಾಗಿ ಹಾಜರಾಗಿ ವಾದ‌ ಮಂಡಿಸಲು ಗುತ್ತಿಗೆ ಆಧಾರಿತ ಕಾನೂನು ಅಧಿಕಾರಿ ಹುದ್ದೆಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಟ್ರೆಂಡಿಂಗ್​ ಸುದ್ದಿ

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ; ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಬೆಂಗಳೂರು: ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಜಾಯ್‌ ರೈಡ್‌, ಯುವಕನ ಬಂಧನ, ಡಿಎಲ್ ಅಮಾನತಿಗೆ ಶಿಫಾರಸು

ಕರ್ನಾಟಕ ಹವಾಮಾನ ಮೇ 20; ದಕ್ಷಿಣ ಕನ್ನಡ, ಉಡುಪಿ ಸೇರಿ 8ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

ಎಲ್.ಎಲ್.ಪದವಿ ಜೊತೆಗೆ ಅಖಿಲ‌ ಭಾರತ ಬಾರ್ ಕೌನ್ಸಿಲ್‌ನಲ್ಲಿ‌ ನೋಂದಣಿ ಮತ್ತು ಸಿವಿಲ್‌ ಪ್ರಕರಣಗಳಲ್ಲಿ 5 ವರ್ಷ ಅನುಭವ ಇರುವ ಹಾಗೂ ಕನ್ನಡ‌ ಮತ್ತು ಇಂಗ್ಲೀಷ್ ಚೆನ್ನಾಗಿ ಬಲ್ಲ ಅಭ್ಯರ್ಥಿಗಳು ಇದೇ ಅಕ್ಟೋಬರ್‌ 30 ರೊಳಗೆ ರೆಸ್ಯೂಮ್ ಜೊತೆಗೆ ‌ಅಗತ್ಯ ದಾಖಲೆಗಳನ್ನು ಕಾರ್ಯದರ್ಶಿಗಳು, ಕಲ್ಯಾಣ‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಕಚೇರಿಗೆ ಸಲ್ಲಿಸುವಂತೆ ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.

ಆಯ್ಕೆಯಾದವರಿಗೆ‌ ಮಾಸಿಕ 18,000 ರೂ. ವೇತನ‌ ನೀಡಲಾಗುವುದು. ಕಲಬುರಗಿ ಹೊರತುಪಡಿಸಿ ಇತರೆ ಜಿಲ್ಲಾ, ತಾಲೂಕು ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ಪ್ರಯಾಣಿಸಿದಲ್ಲಿ ನಿಯಮಾನುಸಾರ ಪ್ರಯಾಣ, ದಿನ ಭತ್ಯೆ ನೀಡಲಾಗುವುದು.

ಈ‌ ಕುರಿತು ಅಯ್ಕೆ‌ ಮಾನದಂಡ ಹಾಗೂ ಇನ್ನಿತರ ಹೆಚ್ಚಿನ‌ ಮಾಹಿತಿಗೆ ಮಂಡಳಿ ಅಂತರ್ಜಾಲ ‌ವಿಳಾಸ www.hkrdb.kar.nic.in ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ