logo
ಕನ್ನಡ ಸುದ್ದಿ  /  ಕರ್ನಾಟಕ  /  ಕಲಬುರಗಿ ಜಿಲ್ಲೆಯಲ್ಲಿ 45 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 13 ಕೊನೆ ದಿನ

ಕಲಬುರಗಿ ಜಿಲ್ಲೆಯಲ್ಲಿ 45 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 13 ಕೊನೆ ದಿನ

HT Kannada Desk HT Kannada

Sep 23, 2023 01:45 PM IST

ಕಲಬುರಗಿ ಜಿಲ್ಲೆಯಲ್ಲಿ 45 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 13 ಕೊನೆ ದಿನ

    • ಕಲಬುರಗಿ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಖಾಲಿಯಿರುವ ಒಟ್ಟು 45 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ 45 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 13 ಕೊನೆ ದಿನ
ಕಲಬುರಗಿ ಜಿಲ್ಲೆಯಲ್ಲಿ 45 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ; ಅಕ್ಟೋಬರ್‌ 13 ಕೊನೆ ದಿನ

ಕಲಬುರಗಿ: ದ್ವಿತೀಯ ಪದವಿಪೂರ್ವ ಮತ್ತು ಸರ್ಟಿಫಿಕೇಷನ್‌ ಕೋರ್ಸ್‌ ಇನ್‌ ಲೈಬ್ರರಿ ಸೈನ್ಸ್‌ ಪೂರ್ಣಗೊಳಿಸಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಜಾತಕ ಪಕ್ಷಿಯಂತೆ ಕಾಯುತ್ತಿರುವ ನಿರುದ್ಯೋಗಿ ವಿದ್ಯಾವಂತರಿಗೆ ಸಿಹಿ ಸುದ್ದಿ ಇದ್ದು, ಕಲಬುರಗಿ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಖಾಲಿಯಿರುವ ಒಟ್ಟು 45 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸೆಪ್ಟೆಂಬರ್‌ 25 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್‌ 13 ಅರ್ಜಿ ಸಲ್ಲಿಕೆ ಕೊನೆ ದಿನವಾಗಿದೆ.

ಟ್ರೆಂಡಿಂಗ್​ ಸುದ್ದಿ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

ಗ್ರಾಮ ಪಂಚಾಯತ ಹೆಸರು, ತಾಲೂಕಿನ ಹೆಸರು ಹಾಗೂ ನಿಗದಿಪಡಿಸಿದ ಮಿಸಲಾತಿ ವಿವರ ಇಂತಿದೆ

ಆಲಗೂಡ, ತಾಲೂಕು ಕಲಬುರಗಿ ಪ.ಜಾ (ಇತರೆ), ಬಂಕಲಗಾ, ತಾಲೂಕು ಅಫಜಲಪುರ ಸಾ.ಅ (ಇತರೆ), ಬಸವಪಟ್ಟಣ ತಾಲೂಕು ಕಲಬುರಗಿ ಪ.ಪಂ. (ಇತರೆ) ಬೆಡಸೂರ ತಾಲೂಕು ಕಾಳಗಿ, ಸಾ.ಅ.(ಮ.ಆ), ದನ್ನೂರ ತಾಲೂಕು ಆಳಂದ ಪ್ರವರ್ಗ-1 (ಇತರೆ) ಡೋಣಗಾಂವ ತಾಲೂಕು ಚಿತ್ತಾಪೂರ, ಸಾ.ಅ (ಗ್ರಾಮೀಣ), ಗರಗಪಳ್ಳಿ ತಾಲೂಕು ಚಿಂಚೋಳಿ, ಪ್ರವರ್ಗ-2ಎ (ಇತರೆ),ಘತ್ತರಗಾ, ತಾಲೂಕು ಅಫಜಲಪೂರ, ಪ.ಜಾ.(ಮ.ಅ), ಹಾಗರಗಾ ತಾಲೂಕು ಕಲಬುರಗಿ, ಸಾ.ಅ.(ಮ.ಅ), ಹಾಳತಡಕಲ್, ತಾಲೂಕು ಆಳಂದ, ಪ್ರವರ್ಗ-2ಬಿ (ಇತರೆ) ಹೇಬಳಿ, ತಾಲೂಕು ಆಳಂದ , ಸಾ.ಅ.(ಗ್ರಾಮೀಣ), ಹಿತ್ತಲ ಶೀರೂರ ತಾಲ್ಲೂಕು ಆಳಂದ ಪ್ರವರ್ಗ-2ಎ (ಮ.ಅ), ಹುಲ್ಲೂರ ತಾಲೂಕು ಜೇವರ್ಗಿ, ಸಾ.ಅ.(ಇತರೆ), ಇವಣಿ ತಾಲೂಕು ಚಿತ್ತಾಪೂರ, ಪ.ಜಾ. (ಗ್ರಾಮೀಣ), ಜೆಟ್ಟೂರ ತಾಲೂಕು ಚಿಂಚೋಳಿ, ಸಾ.ಅ.(ಮ.ಆ.) ಕಾಚಪೂರ, ತಾಲೂಕು ಯಡ್ರಾಮಿ ಪ್ರವರ್ಗ 3ಎ (ಇತರೆ) ಕೆರೆಅಂಬಲಗಾ ತಾಲೂಕು ಆಳಂದ ಸಾ.ಅ.(ಗ್ರಾಮೀಣ), ಕುಪನೂರು ತಾಲೂಕು ಚಿಂಚೋಳಿ, ಪ್ರವರ್ಗ-2ಎ (ಗ್ರಾಮೀಣ) , ಮಡಕಿ ತಾಲೂಕು ಕಮಲಾಪೂರ, ಸಾ.ಅ.(ಮಾ.ಸೈ), ಮದರಿ ತಾಲೂಕು ಜೇವರ್ಗಿ, ಪ.ಜಾ. (ಅಂ.ವಿ), ಮದರಾ (ಬಿ) ಅಫಜಲಪೂರ ಸಾ.ಅ..(ಮ.ಆ.), ಮಿಣಜಗಿ ಕಲಬುರಗಿ ತಾಲೂಕು ಪ್ರವರ್ಗ-2ಎ (ಅಂ.ವಿ), ಮುಗಳನಾಗಾಂವ ತಾಲೂಕು ಶಹಾಬಾದ ಸಾ.ಅ.(ಮ.ಆ.), ಮೋಘಾ(ಕೆ) ತಾಲೂಕು ಆಳಂದ ಪ.ಜಾ.(ಮ.ಆ.), ಮೋಘ (ಕೆ) ತಾಲೂಕು ಚಿತ್ತಾಪೂರ ಸಾ.ಅ. ಗ್ರಾಮೀಣ, ನಂದರಗಾ ತಾಲೂಕು ಅಫಜಲಪೂರ, ಪ್ರವರ್ಗ-2ಎ (ಮ.ಆ.) ನೇದಲಗಿ ತಾಲೂಕು ಜೇವರ್ಗಿ, ಸಾ.ಅ. (ಕ.ಮಾ.), ರಾಮನಗರ ತಾಲೂಕು ಅಫಜಲಪೂರ, ಪ್ರವರ್ಗ-1 (ಮ.ಆ.), ರಾಮಪೂರಹಳ್ಳಿ ತಾಲೂಕು ಚಿತ್ತಾಪೂರ ಪ.ಪಂ. ಗ್ರಾಮೀಣ) ರಂಜಣಗಿ ತಾಲೂಕು ಜೇವರ್ಗಿ, ಪ.ಜಾ.(ಗ್ರಾಮೀಣ), ಸರಡಗಿ(ಬಿ) ತಾಲೂಕು ಕಲಬರುಗಿ, ಸಾ.ಅ.(ಮ.ಆ.) ಸಾತಖೇಡ ತಾಲೂಕು ಯಡ್ರಾಮಿ, ಸಾ.ಅ.(ಯೋ.ನಿ.ಅ) ತಡೋಳ, ತಾಲೂಕು ಆಳಂದ ಪ.ಪಂ.(ಅಂ.ವಿ), ತೇಲ್ಕೂರ ತಾಲೂಕು ಅಫಜಲಪೂರ ಸಾ.ಅ.(ಮ.ಆ.) ಯಡಗಾ ತಾಲೂಕು ಸೇಡಂ ಪ.ಜಾ.(ಇತರೆ), ಪಡಸಾವಳಿ, ತಾಲೂಕು ಆಳಂದ ಸ.ಅ.(ತೃತೀಯಲಿಂಗ) ಮಾಶ್ಯಾಳ ಅಫಜಲಪೂರ, ಪ್ರವರ್ಗ- 3ಬಿ (ಮ.ಆ.), ಕೊಡಲಹಂಗರಾ ತಾಲೂಕು ಆಳಂದ ಸಾ.ಅ. (ಮಾ.ಸೈ), ಮಹಾಗಾಂವ ತಾಲೂಕು ಕಮಲಾಪೂರ ಪ್ರವರ್ಗ 2ಎ (ಇತರೆ).

ಶೈಕ್ಷಣಿಕ ವಿದ್ಯಾರ್ಹತೆ

ದ್ವಿತೀಯ ಪದವಿ ಪೂರ್ವ ಪರೀಕ್ಷೆ (ಪಿ.ಯು.ಸಿ)ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್‌ ಇನ್ ಲೈಬ್ರರಿ ಸೈನ್ಸ್‌ನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದು ಹಾಗೂ ಕನಿಷ್ಠ ಮೂರು ತಿಂಗಳ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ ಕೋರ್ಸನಲ್ಲಿ ಉತ್ತೀರ್ಣರಾಗಿರಬೇಕು.

ಒಂದು ವೇಳೆ ಸರ್ಟಿಫಿಕೇಶನ್ ಕೋರ್ಸ್ ಇನ್‌ ಲೈಬ್ರರಿ ಸೈನ್ಸನಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿಸಲ್ಲಿಸಿದ್ದಲ್ಲಿ ಪಿ.ಯು.ಸಿ. ಪರೀಕ್ಷೆಯಲ್ಲಿ ಅಭ್ಯರ್ಥಿಯು ಗಳಿಸಿದ ಅಂಕಗಳನ್ನು ಆಧರಿಸಿ ಅಧಿಸೂಚಿಸಿದ ಖಾಲಿ ಹುದ್ದೆಗಳಿಗೆ ಮೀಸಲಾತಿ ಬಿಂದುವಿನಂತೆ ಆಯ್ಕೆ ಪರಿಗಣಿಸಲಾಗುವುದು.

ವಯೋಮಿತಿ

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಸಿದ ಕೊನೆಯ ದಿನಾಂಕ ಅಭ್ಯರ್ಥಿಯು ವರ್ಷ ವಯಸ್ಸು ಪೂರೈಸಿರತಕ್ಕದ್ದು ಹಾಗೂ ಗರಿಷ್ಠ ವಯೋಮಿತಿಯ ಈ ಕೆಳಕಂಡಂತೆ ಇರತಕ್ಕದ್ದು, ಸಾಮಾನ್ಯ ವರ್ಗ 35 ವರ್ಷ, 2ಎ,2ಬಿ,3ಎ, 3ಬಿ, 38 ವರ್ಷ ಪ.ಜಾ/ಪ.ಪಂ/ಪ್ರವರ್ಗ-1, 40 ವರ್ಷ.

ಅರ್ಜಿ ಸಲ್ಲಿಸುವ ವಿಧಾನ

ಭರ್ತಿ ಮಾಡಿದ ಅರ್ಜಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಹಾಗೂ ಅರ್ಜಿಯ ಕವರ್ ಮೇಲೆ ಗ್ರಾಮ ಪಂಚಾಯತ ಹೆಸರನ್ನು ನಮೂದಿಸಿ ಕೊನೆಯ ದಿನಾಂಕದಂದು ಅಥವಾ ಒಳಗಾಗಿ ಸ್ವಯಂ ದೃಢೀಕರಿಸಿ ಉಪನಿರ್ದೇಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ ಕಲಬುರಗಿ ಕಚೇರಿಯಲ್ಲಿ ಸಲ್ಲಿಸಬೇಕು.

ಅರ್ಜಿ ಶುಲ್ಕ

ಅರ್ಜಿ ನಮೂನೆಯನ್ನು ರೂ. 40 (ನಲವತ್ತು ರೂಪಾಯಿಗಳು) ಮಾತ್ರ ಪಾವತಿಸಿ ಉಪನಿರ್ದೇಶಕರ ಜಿಲ್ಲಾ ಕೇಂದ್ರ ಗ್ರಂಥಾಲಯ ರೂಮ್ ನಂ.26. 3ನೇ ಮಹಡಿ ಮಿನಿ ವಿಧಾನ ಸೌಧ, ಕಲಬುರಗಿ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ 5.30ರ ಒಳಗಾಗಿ ಪಡೆಯತಕ್ಕದ್ದು.

ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ: 25-9-2023

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 13-10-2023

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ ಜಿಲ್ಲಾ ಕೇಂದ್ರ ಗ್ರಂಥಾಲಯ ಕಲಬುರಗಿ ದೂರವಾಣಿ ಸಂಖ್ಯೆ 08472-221069ಗೆ ಸಂಪರ್ಕಿಸಲು ಕೋರಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ