logo
ಕನ್ನಡ ಸುದ್ದಿ  /  ಕರ್ನಾಟಕ  /  ಕಲಬುರಗಿ ಜಿಲ್ಲಾ ಆರೋಗ್ಯ ಕೇಂದ್ರದಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ ಜಿಲ್ಲಾ ಆರೋಗ್ಯ ಕೇಂದ್ರದಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

HT Kannada Desk HT Kannada

Oct 10, 2023 12:18 PM IST

ಕಲಬುರಗಿ ಜಿಲ್ಲಾ ಆರೋಗ್ಯ ಕೇಂದ್ರದಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.

    • ಕಲಬುರಗಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವೈದ್ಯ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 71 ವೈದ್ಯ ಹಾಗೂ ಇತರ ಹುದ್ದೆಗಳ ಅರ್ಜಿ ಪ್ರಕ್ರಿಯೆ ಅಕ್ಟೋಬರ್‌ 3 ರಿಂದ ಆರಂಭವಾಗಿದ್ದು, ಅಕ್ಟೋಬರ್‌ 17 ಕೊನೆ ದಿನವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ.
ಕಲಬುರಗಿ ಜಿಲ್ಲಾ ಆರೋಗ್ಯ ಕೇಂದ್ರದಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.
ಕಲಬುರಗಿ ಜಿಲ್ಲಾ ಆರೋಗ್ಯ ಕೇಂದ್ರದಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.

ಕಲಬುರಗಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಲಬುರಗಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 71 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಕ್ಟೋಬರ್‌ 3 ರಿಂದ ಆರಂಭವಾಗಿದ್ದು, ಅಕ್ಟೋಬರ್‌ 17ರೊಳಗೆ ಅರ್ಜಿ ಸಲ್ಲಿಸಬಹುದು.

ಟ್ರೆಂಡಿಂಗ್​ ಸುದ್ದಿ

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ: ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಬೆಂಗಳೂರು: ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಜಾಯ್‌ ರೈಡ್‌, ಯುವಕನ ಬಂಧನ, ಡಿಎಲ್ ಅಮಾನತಿಗೆ ಶಿಫಾರಸು

ಕರ್ನಾಟಕ ಹವಾಮಾನ ಮೇ 20; ದಕ್ಷಿಣ ಕನ್ನಡ, ಉಡುಪಿ ಸೇರಿ 8ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

ಹುದ್ದೆ:

ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು, ಮಕ್ಕಳ ತಜ್ಞ ವೈದ್ಯರು, ಅರಿವಳಿಕೆ ತಜ್ಞ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಮೆಡಿಕಲ್ ಆಫೀಸರ್, ಮಕ್ಕಳ ಆರೋಗ್ಯ ಸಮಾಲೋಚಕರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಆಯುಷ್ ವೈದ್ಯರು, RBSK ಆಯುಷ್ ಮಹಿಳಾ ವೈದ್ಯರು, ಸೀನಿಯರ್ ಮೆಡಿಕಲ್ ಆಫೀಸರ್, ಟಿ.ಬಿ.ಹೆಚ್.ವಿ, ಸೈಕಿಯಾಟ್ರಿಸ್ಟ್, ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಆಪ್ತ ಸಮಾಲೋಚಕರು, ಮೋಬೈಲ್ ಐಸಿಟಿಸಿ ವಾಹನ ಚಾಲಕರು.

ಕರ್ತವ್ಯ ಸ್ಥಳ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 71 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಶೈಕ್ಷಣಿಕ ಅರ್ಹತೆ:

ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು – ಡಿಜಿಓ/ಡಿ.ಎಮಕ್ಕಳ ತಜ್ಞ ವೈದ್ಯರ)

ಮಕ್ಕಳ ತಜ್ಞ ವೈದ್ಯರು – ಡಿಎಂ ನಿಯೋನಟಾಲಜಿ, ಫೆಲೋಶಿಪ್ ಇನ್ ನಿಯೋನಟಾಲಜಿ, ಎಂ.ಡಿ ಪಿಡಿಯಾಟ್ರಿಕಸ್/ ಡಿ.ಎನ್.ಬಿ (ಮಕ್ಕಳ ಆರೋಗ್ಯ)/ ಡಿ.ಸಿ.ಹೆಚ್

ಅರಿವಳಿಕೆ ತಜ್ಞ ವೈದ್ಯರು – ಡಿಎ/ ಡಿ.ಎನ್.ಬಿ/ ಎಂ.ಡಿ (ಅನಸ್ತೇಶಿಯಾ)

ಲ್ಯಾಬ್ ಟೆಕ್ನಿಷಿಯನ್ – ಎಸ್.ಎಸ್.ಎಲ್.ಸಿ ಮತ್ತು ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಿಷಿಯನ್ ಅಥವಾ ಪಿಯುಸಿ ಮತ್ತು ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಿಷಿಯನ್

ಮೆಡಿಕಲ್ ಆಫೀಸರ್ (ಎಂ.ಬಿ.ಬಿ.ಎಸ್ ಡಾಕ್ಟರ್ಸ್) – ಎಂ.ಬಿ.ಬಿ.ಎಸ್ ಪದವಿ ಜೊತೆಗೆ ಕೆ.ಎಂ.ಸಿ ನೊಂದಣಿ ಹೊಂದಿರಬೇಕು.

ಮಕ್ಕಳ ಆರೋಗ್ಯ ಸಮಾಲೋಚಕರು – ಸ್ನಾತಕ ಪದವಿ ಹೊಂದಿರಬೇಕು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ – ಕಿ.ಮ.ಆ ಸಹಾಯಕಿಯ ತರಬೇತಿಯನ್ನು ಪಡೆದಿರಬೇಕು.

ಆಯುಷ್ ವೈದ್ಯರು – ಬಿಎಎಂಎಸ್/ಬಿ.ಹೆಚ್.ಎಂ.ಎಸ್/ಬಿ.ಎನ್.ವೈಯ್.ಎಸ್/ಬಿ..ಯು.ಎಂ.ಎಸ್/ ಸಿದ್ಧ ವೈದ್ಯ ಪದ್ಧತಿಯಲ್ಲಿ ಪದವಿ ಹೊಂದಿರಬೇಕು.

RBSK ಆಯುಷ್ ಮಹಿಳಾ ವೈದ್ಯರು – ಬಿ.ಎ.ಎಮ್.ಎಸ್ ಕಡ್ಡಾಯ ಹೌಸಮನ್ ಸಿಪ್ ಮುಗಿಸಿರಬೇಕು.

ಸೀನಿಯರ್ ಮೆಡಿಕಲ್ ಆಫೀಸರ್ – ಎಂ.ಬಿ.ಬಿ.ಎಸ್ ಪದವಿ ಹೊಂದಿರಬೇಕು.

ಟಿ.ಬಿ.ಹೆಚ್.ವಿ – ಸೈನ್ಸ್ ಪದವಿ ಪಡೆದಿರಬೇಕು

ಸೈಕಿಯಾಟ್ರಿಸ್ಟ್ – ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಇನ್ ಸೈಕಿಯಾಟ್ರಿ ಅಥವಾ ಡಿ.ಎನ್.ಬಿ ಸೈಕಿಯಾಟ್ರಿ ಅಥವಾ ಡಿಪಿಎಂ

ತಜ್ಞ ವೈದ್ಯರು – ಎಂ.ಬಿ.ಬಿ.ಎಸ್, ಎಂ.ಡಿ

ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್

ಶುಶ್ರೂಷಕರು – ಜಿ.ಎನ್.ಎಂ

ಪ್ರಯೋಗಾಲಯ ತಂತ್ರಜ್ಞರು – ಪಿಯುಸಿ ಜೊತೆಗೆ ಡಿ.ಎಂ.ಎಲ್.ಟಿ

ಆಪ್ತ ಸಮಾಲೋಚಕರು – ವಿಜ್ಞಾನ ವಿಷಯದಲ್ಲಿ ಪದವಿ

ಮೋಬೈಲ್ ಐಸಿಟಿಸಿ ವಾಹನ ಚಾಲಕರು – 10ನೇ ತರಗತಿ ಜೊತೆಗೆ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ವಯೋಮಿತಿ ಮಾಹಿತಿ ಇಂತಿದೆ:

ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು: 45 ವರ್ಷ

ಮಕ್ಕಳ ತಜ್ಞ ವೈದ್ಯರು: 45 ವರ್ಷ

ಅರಿವಳಿಕೆ ತಜ್ಞ ವೈದ್ಯರು: 45 ವರ್ಷ

ಲ್ಯಾಬ್ ಟೆಕ್ನಿಷಿಯನ್: 40 ವರ್ಷ

ಮೆಡಿಕಲ್ ಆಫೀಸರ್: 45 ವರ್ಷ

ಮಕ್ಕಳ ಆರೋಗ್ಯ ಸಮಾಲೋಚಕರು: 45 ವರ್ಷ

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ: 40 ವರ್ಷ

ಆಯುಷ್ ವೈದ್ಯರು: 60 ವರ್ಷ

RBSK ಆಯುಷ್ ಮಹಿಳಾ ವೈದ್ಯರು:45 ವರ್ಷ

ಸೀನಿಯರ್ ಮೆಡಿಕಲ್ ಆಫೀಸರ್: 45 ವರ್ಷ

ಟಿ.ಬಿ.ಹೆಚ್.ವಿ: 45 ವರ್ಷ

ಸೈಕಿಯಾಟ್ರಿಸ್ಟ್: 45 ವರ್ಷ

ತಜ್ಞ ವೈದ್ಯರು: 50 ವರ್ಷ

ವೈದ್ಯಾಧಿಕಾರಿಗಳು: 50 ವರ್ಷ

ಶುಶ್ರೂಷಕರು: 40 ವರ್ಷ

ಪ್ರಯೋಗಶಾಲಾ ತಂತ್ರಜ್ಞರು: 40 ವರ್ಷ

ಆಪ್ತ ಸಮಾಲೋಚಕರು:40 ವರ್ಷ

ಮೋಬೈಲ್ ಐಸಿಟಿಸಿ ವಾಹನ ಚಾಲಕರು: 40 ವರ್ಷ

ಆಯ್ಕೆ ವಿಧಾನ:
ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ: ಅಭ್ಯರ್ಥಿಯು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಹಂತ 1 : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.

ಹಂತ 2 : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.

ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.

ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಅಕ್ಟೋಬರ್ 03

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 17

ಹೆಚ್ಚಿನ ಮಾಹಿತಿಗೆ ಮತ್ತು ಆನ್‌ಲೈನ್‌ ಅರ್ಜಿ ಸಲ್ಲಿಸಲು: https://kalaburagi.nic.in/

ಅಕ್ಟೋಬರ್‌ 11 ರಂದು ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ

ಯಾದಗಿರಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ರಾಯಚೂರಕರ್ ಹಾಸ್ಪೀಟಲ್ ಸಹಯೋಗದೊಂದಿಗೆ ನೇರ ಸಂದರ್ಶನ ಅಕ್ಟೋಬರ್‌ 11 ರಂದು ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ನಡೆಯಲಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ರಾಯಚೂರಕರ್ ಹಾಸ್ಟೀಟಲ್ ಹುದ್ದೆ ಡಾಕ್ಟರಸ್ ವಿದ್ಯಾರ್ಹತೆ ಎಮ್.ಬಿ.ಬಿ.ಎಸ್, ಬಿ.ಎ.ಎಮ್.ಎಸ್, ಹೊಂದಿರಬೇಕು, ಆಪ್ತೋ ಹುದ್ದೆಗಳು 10 ಇದ್ದು ವಿದ್ಯಾರ್ಹತೆ ಡಿಪ್ಲೋಮ್, ಆಪ್ತೋ ಹುದ್ದೆ ಮ್ಯಾನೇಜರ್ ವಿದ್ಯಾರ್ಹತೆ ಯಾವುದೇ ಪದವಿ ಹಾಗೂ ಎಮ್.ಬಿ.ಎ ಹುದ್ದೆ ಟೀಮ್ ಲೀಡರ್ ಹುದ್ದೆಗಳು-3, ಲ್ಯಾಬ್ ಟೆಕ್‌ನೀಷನ್ ವಿದ್ಯಾರ್ಹತೆ ಡಿ.ಎಮ್.ಎಲ್.ಟಿ ಹುದ್ದೆ-20, ಡಾಟ್ ಎಂಟ್ರಿ ಆಪರೇಟರ್ ವಿದ್ಯಾರ್ಹತೆ ಪಿ.ಯು.ಸಿ ಪಾಸ್ ಹುದ್ದೆ ಹೆಲ್ಪರಸ್ ಹುದ್ದೆಗಳು 4, ಸ್ಟೋರ್ ಇನ್‌ಚಾರ್ಜ್ ಹುದ್ದೆಗಳು-02 ವಿದ್ಯಾರ್ಹತೆ ಪಿಯುಸಿ ಪಾಸ್, ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹುದ್ದೆ ಡ್ರೆವರ್ ಹುದ್ದೆಗಳು 5 ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಎಲ್.ಎಮ್.ವಿ ಲೈಸನ್ಸ್ ನೇರ ಸಂದರ್ಶನಕ್ಕೆ ಬರುವಾಗ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ವ್ಯಕ್ತಿ ಪರಿಚಯ (ರೆಸ್ಯೂಮ್, ಬಯೋಡಾಟಾ) 10ನೇ, ಪಿ.ಯು.ಸಿ ಮಾಕ್ಸ್ಕಾರ್ಡ್, ಆಧಾರ್‌ಕಾರ್ಡ್ 2 ಪಾಸ್‌ಪೋರ್ಟ್ ಆಳತೆಯ ಭಾವಚಿತ್ರ ತಮ್ಮ ಮೂಲ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ ಹಾಗೂ ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಯಾದಗಿರಿ ಸಂಪರ್ಕಿಸಬಹುದು ನೇರ ಸಂದರ್ಶನ ನಡೆಯುವ ಸ್ಥಳ ರಾಯಚೂರಕರ್ ಬಿಲ್ಡಿಂಗ್ ಗಣೇಶ ನಗರ ಗಂಜ್ ಏರಿಯಾ ಯಾದಗಿರಿ ದೂ.ಸಂ.08473 253718 ಮೊ.ನಂ.9448566765ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ