Kalaburagi News: ಕಾನೂನು ಅಭಿರಕ್ಷಕರ ಕಚೇರಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Dec 01, 2023 11:13 AM IST
Kalaburagi News: ಕಾನೂನು ಅಭಿರಕ್ಷಕರ ಕಚೇರಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
- Job Alert: ಕಲಬುರಗಿ ಜಿಲ್ಲೆಯ ಕಾನೂನು ಅಭಿರಕ್ಷಕರ ಕಚೇರಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 11 ರೊಳಗೆ ಅರ್ಜಿ ಸಲ್ಲಿಸಬೇಕು.
ಕಲಬುರಗಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಡಿ ರಚನೆಯಾದ ಕಾನೂನು ಅಭಿರಕ್ಷಕರ ಕಚೇರಿಯಲ್ಲಿ ತಾತ್ಕಾಲಿಕ ಆಧಾರದ ಮೇಲೆ 6 ತಿಂಗಳ ಅವಧಿಗೆ ಕಾರ್ಯನಿರ್ವಹಿಸಲು ಆಡಳಿತ ಸಹಾಯಕ/ಗುಮಾಸ್ತ್-1 ಹುದ್ದೆ, ಸ್ವಾಗತಕಾರರು- ಡಾಟಾ ಎಂಟ್ರಿ ಆಪರೇಟರ್-1 ಹುದ್ದೆ ಹಾಗೂ ಜವಾನ-1 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್. ನಾಗಶ್ರೀ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಅವರು ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ.ಡಿ.ಆರ್. ಬಿಲ್ಡಿಂಗ್ ಕಲಬುರಗಿ ಕಚೇರಿಯಲ್ಲಿ ಡಿಸೆಂಬರ್ 11 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ನಿಗದಿತ ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯದ https://kalaburagi.dcourts.gov.in ವೆಬ್‌ಸೈಟ್‌ಗೆ ಸಂಪರ್ಕಿಸಲು ಕೋರಲಾಗಿದೆ.
ಡಿಸೆಂಬರ್ 1 ರಿಂದ 3ರವರೆಗೆ ಕಲಬುರಗಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ: ನವೆಂಬರ್ 30 ರಂದು ತುರ್ತು ದುರಸ್ತಿ ಕಾರ್ಯಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 1 ರಿಂದ 3 ರವರೆಗೆ ಕಲಬುರಗಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಲಬುರಗಿ ಕೆಯುಡಬ್ಲ್ಯೂಎಸ್‌ಎಂಪಿ, ಕೆಯುಐಡಿಎಫ್‌ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿ ಭೀಮಾ ನದಿಯ ಸರಡಗಿಯಲ್ಲಿರುವ ಪಂಪಿನ ಮನೆಗಳಲ್ಲಿ/ಮಧ್ಯಂತರ ನೀರೇತ್ತುವ ಯಂತ್ರಗಾರ ಕೋಟನೂರು-ಡಿ ಮ್ಯಾನಿಫೋಲ್ಡ್ ನಲ್ಲಿ ಮತ್ತು ಫರತಾಬಾದ ಹತ್ತಿರ ಇರುವ 1118 ಕೊಳವೆ ಮಾರ್ಗದಲ್ಲಿ ಹಾಗೂ 750 ಎಂ.ಎಂ. ವ್ಯಾಸದ ಆಳಂದ ರಸ್ತೆಯ ನಾಕಾ, ಲಾಲಾಗೇರಿ ಕ್ರಾಸ್ ಮತ್ತು ಗೋವಾ ಹೋಟೆಲ್ ಹತ್ತಿರ ಪಿ.ಎಸ್.ಸಿ. ಕೊಳವೆ ಮಾರ್ಗಗಳಲ್ಲಿ ಸೋರುವಿಕೆ ಕಂಡು ಬಂದ ಹಿನ್ನೆಲೆಯಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ. ಆದ್ದರಿಂದ ಕಲಬುರಗಿ ನಗರದ ಸಾರ್ವಜನಿಕರು ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.