logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ನವೆಂಬರ್ 10 ರಂದು ಅಂಚೆ ಇಲಾಖೆಯಲ್ಲಿ ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ

Kalaburagi News: ನವೆಂಬರ್ 10 ರಂದು ಅಂಚೆ ಇಲಾಖೆಯಲ್ಲಿ ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ

HT Kannada Desk HT Kannada

Nov 04, 2023 01:06 PM IST

Kalaburagi News: ನವೆಂಬರ್ 10 ರಂದು ಅಂಚೆ ಇಲಾಖೆಯಲ್ಲಿ ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ

    • ನವೆಂಬರ್ 10 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿ ಜವಳಿ ಕಾಂಪ್ಲೆಕ್ಸ್ ಎದುರುಗಡೆಯಿರುವ ಕಲಬುರಗಿ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
Kalaburagi News: ನವೆಂಬರ್ 10 ರಂದು ಅಂಚೆ ಇಲಾಖೆಯಲ್ಲಿ ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ
Kalaburagi News: ನವೆಂಬರ್ 10 ರಂದು ಅಂಚೆ ಇಲಾಖೆಯಲ್ಲಿ ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ

ಕಲಬುರಗಿ: ಕಲಬುರಗಿ ವಿಭಾಗದ ಅಂಚೆ ಇಲಾಖೆಯ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಇದೇ ನವೆಂಬರ್ 10 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿ ಜವಳಿ ಕಾಂಪ್ಲೆಕ್ಸ್ ಎದುರುಗಡೆಯಿರುವ ಕಲಬುರಗಿ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಳ್ತಂಗಡಿ ಅಕ್ರಮ ಕಲ್ಲುಗಣಿಗಾರಿಕೆ ಕೇಸ್; ಆರೋಪಿಗಳ ಬಂಧನ, ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್‌, 10 ವಿದ್ಯಮಾನಗಳಿವು

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ; ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಬೆಂಗಳೂರು: ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಜಾಯ್‌ ರೈಡ್‌, ಯುವಕನ ಬಂಧನ, ಡಿಎಲ್ ಅಮಾನತಿಗೆ ಶಿಫಾರಸು

ಕರ್ನಾಟಕ ಹವಾಮಾನ ಮೇ 20; ದಕ್ಷಿಣ ಕನ್ನಡ, ಉಡುಪಿ ಸೇರಿ 8ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

ವಯೋಮಿತಿ 18 ರಿಂದ 50 ವರ್ಷದೊಳಗಿರಬೇಕು. ವಿದ್ಯಾರ್ಹತೆ ಕನಿಷ್ಠ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು. ಜೇವರ್ಗಿ, ಕಲಬುರಗಿ, ಕಮಲಾಪೂರ, ಆಳಂದ,ಕಾಳಗಿ ಅಫಜಲಪೂರ ಹಾಗೂ ಚಿಂಚೋಳಿ ತಾಲೂಕುಗಳ ಅಭ್ಯರ್ಥಿಗಳು ತಮ್ಮ ಜನ್ಮದಿನಾಂಕ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರಗಳ ನಕಲು, ವಾಸಸ್ಥಳದ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ಬೇರೆ ಯಾವುದೇ ವಿಮಾ ಸಂಸ್ಥೆ, ಕಂಪನಿ ಅಥವಾ ಸಂಘಗಳ ನೇರ ಪ್ರತಿನಿಧಿಯಾಗಿರಬಾರದು.

ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಯಾವುದೇ ವೇತನ ಅಥವಾ ಭತ್ಯೆ ಇರುವುದಿಲ್ಲ. ಜೀವ ವಿಮೆಗಳ ವ್ಯವಹಾರವನ್ನಾಧರಿಸಿ ಸೂಕ್ತ ಕಮಿಷನ್ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಅಂಚೆ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08472-263800, ಮೊಬೈಲ್ ಸಂಖ್ಯೆ 7353351111ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಕಲಬುರಗಿ ಜಿಲ್ಲೆಯ ಶಿಕ್ಷಕರ ನೇಮಕಾತಿಗೆ ಕೌನ್ಸಿಲಿಂಗ್‌

ಕಲಬುರಗಿ: 2022-23ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ (6 ರಿಂದ 8ನೇ ತರಗತಿ) ನೇಮಕಾತಿಗೆ ಸಂಬಂಧಿಸಿದಂತೆ ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ, ಜೀವ ವಿಜ್ಞಾನ ಮತ್ತು ಆಂಗ್ಲ ಭಾಷಾ ಶಿಕ್ಷಕರ ಹುದ್ದೆಗಳ ಸ್ಥಳ ನಿಯುಕ್ತಿಗಾಗಿ ಇದೇ ನವೆಂಬರ್ 4 ರಂದು ಬೆಳಗ್ಗೆ 10.30 ಗಂಟೆಗೆ ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಆಡಳಿತ) ಕಚೇರಿ ಆವರಣದಲ್ಲಿ ಕೌನ್ಸಿಲಿಂಗ್ ನಡೆಯಲಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಅವರು ತಿಳಿಸಿದ್ದಾರೆ.

ಈ ದಿನದಂದು ಗಣಿತ ಮತ್ತು ವಿಜ್ಞಾನ ಕನ್ನಡ ಮಾಧ್ಯಮ, ಗಣಿತ ಮತ್ತು ವಿಜ್ಞಾನ ಉರ್ದು ಮಾಧ್ಯಮ, ಗಣಿತ ಮತ್ತು ವಿಜ್ಞಾನ ತೆಲಗು ಮಾಧ್ಯಮ, ಸಮಾಜ ಪಾಠಗಳು ಕನ್ನಡ ಮಾಧ್ಯಮ, ಸಮಾಜ ಪಾಠಗಳು ಉರ್ದು ಮಾಧ್ಯಮ, ಜೀವ ವಿಜ್ಞಾನ ಕನ್ನಡ ಮಾಧ್ಯಮ, ಜೀವ ವಿಜ್ಞಾನ ಉರ್ದು ಮಾಧ್ಯಮ ಹಾಗೂ ಆಂಗ್ಲ ಭಾಷೆ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಯಲಿದೆ.

ಕೌನ್ಸಲಿಂಗ್‌ಗೆ ಹಾಜರಾಗುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಸಲ್ಲಿಸಲಾದ ಅರ್ಜಿ, ಅಂಗೀಕೃತ ಗುರುತಿನ ಚೀಟಿ, 20 ರೂ-ಛಾಪಾ ಕಾಗದ (ಅಭ್ಯರ್ಥಿಗಳ ಹೆಸರಿನಲ್ಲಿ 2ನೇ ಪಾರ್ಟಿ ಉಪನಿರ್ದೇಶಕರು (ಆಡಳಿತ) ಇವರ ಹೆಸರಿನಲ್ಲಿ) ಹಾಗೂ ಅಂಗವಿಕಲರಾಗಿದ್ದಲ್ಲಿ ಅಂಗವೀಕಲ ಪ್ರಮಾಣ ಪತ್ರಗಳ ಝೆರಾಕ್ಸ್ ಪ್ರತಿಯೊಂದಿಗೆ ಅಗತ್ಯ ದಾಖಲೆಗಳೂಂದಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಖುದ್ದಾಗಿ ಹಾಜರಾಗಬೇಕು. ಅಭ್ಯರ್ಥಿಯು ನಿಗದಿಪಡಿಸಲಾದ ಸಮಯಕ್ಕೆ ಸರಿಯಾಗಿ ಹಾಜರಾಗದೇ ಇದ್ದಲ್ಲಿ ಗೈರು ಹಾಜರಿ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ