logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget 2023: ಇಲಾಖಾ ಮುಖ್ಯಸ್ಥರ ಜತೆಗೆ ಬಜೆಟ್‌ ಪೂರ್ವ ಸಭೆ ನಡೆಸಿದ ಸಿಎಂ; ಫೆ.17ಕ್ಕೆ ಬಜೆಟ್‌ ಮಂಡನೆ

Karnataka Budget 2023: ಇಲಾಖಾ ಮುಖ್ಯಸ್ಥರ ಜತೆಗೆ ಬಜೆಟ್‌ ಪೂರ್ವ ಸಭೆ ನಡೆಸಿದ ಸಿಎಂ; ಫೆ.17ಕ್ಕೆ ಬಜೆಟ್‌ ಮಂಡನೆ

HT Kannada Desk HT Kannada

Jan 22, 2023 07:21 AM IST

ಇಲಾಖಾ ಮುಖ್ಯಸ್ಥರು, ಸಚಿವರ ಜತೆಗೆ ಬಜೆಟ್‌ ಪೂರ್ವ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

  • Karnataka Budget 2023: ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನವು ಫೆಬ್ರವರಿ 10 ರಂದು ಆರಂಭವಾಗಲಿದೆ. ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಮುಂಗಡಪತ್ರ ಮಂಡಿಸಲಿದ್ದಾರೆ. ವಿಧಾನಮಂಡಲ ಬಜೆಟ್ ಅಧಿವೇಶನವು ರೂಢಿಯಂತೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರ ಭಾಷಣದೊಂದಿಗೆ ಶುರುವಾಗಲಿದೆ.

ಇಲಾಖಾ ಮುಖ್ಯಸ್ಥರು, ಸಚಿವರ ಜತೆಗೆ ಬಜೆಟ್‌ ಪೂರ್ವ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇಲಾಖಾ ಮುಖ್ಯಸ್ಥರು, ಸಚಿವರ ಜತೆಗೆ ಬಜೆಟ್‌ ಪೂರ್ವ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ವಿವಿಧ ಇಲಾಖಾ ಮುಖ್ಯಸ್ಥರ ಜತೆಗೆ ಬಜೆಟ್‌ ಪೂರ್ವ ಸಭೆ ಆರಂಭಿಸಿದ್ದಾರೆ. ವಿವಿಧ ಇಲಾಖೆಗಳ ಮುಂಗಡಪತ್ರ ಬೇಡಿಕೆಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಂಗ್ರಹಿಸಿದರು.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳ ಆಯವ್ಯಯ ಪೂರ್ವ ಸಭೆ ಶನಿವಾರ ನಡೆಯಿತು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ , ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಗೂ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರು ಸಭೆಯಲ್ಲಿ ಹಾಜರಿದ್ದರು

ಕೆಲವು ಇಲಾಖೆಗಳಿಂದ ಹೊಸ ಯೋಜನೆಗಳ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ. ಅನುದಾನ ಮತ್ತಿತರ ವಿಚಾರಗಳು ಕೂಡ ಸಭೆಯಲ್ಲಿ ಪ್ರಸ್ತಾಪವಾಗಿದ್ದವು ಎಂದು ಮೂಲಗಳು ತಿಳಿಸಿವೆ.

ವಿಧಾನಮಂಡಲದಲ್ಲಿ ಬಜೆಟ್‌ ಅಧಿವೇಶನ ಫೆ.10ಕ್ಕೆ ಶುರು, 17ಕ್ಕೆ ಬಜೆಟ್‌ ಮಂಡನೆ

ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನವು ಫೆಬ್ರವರಿ 10 ರಂದು ಆರಂಭವಾಗಲಿದೆ. ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಮುಂಗಡಪತ್ರ ಮಂಡಿಸಲಿದ್ದಾರೆ. ವಿಧಾನಮಂಡಲ ಬಜೆಟ್ ಅಧಿವೇಶನವು ರೂಢಿಯಂತೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರ ಭಾಷಣದೊಂದಿಗೆ ಶುರುವಾಗಲಿದೆ. ಇತ್ತೀಚೆಗೆ (ಜ.20) ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.

ವರ್ಷದ ಮೊದಲ ಅಧಿವೇಶನವಾದ ಕಾರಣ ರೂಢಿಯ ಪ್ರಕಾರ ಫೆ.10ರಂದು ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾತನಾಡಲಿದ್ದಾರೆ. ಅದಾಗಿ ಫೆ.17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಂದಿನ ವರ್ಷಕ್ಕೆ ಸಂಬಂಧಿಸಿದ ಆಯ-ವ್ಯಯ ಪತ್ರ ಮಂಡಿಸಲಿದ್ದಾರೆ. ವಿಧಾನಮಂಡಲದ ಬಜೆಟ್‌ ಅಧಿವೇಶನವು 15 ದಿನ ನಡೆಯಲಿದೆ. ಫೆ.16ರಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ತಿಳಿಸಿದ್ದರು.

ಸದ್ಯ 15 ದಿನ ಬಜೆಟ್‌ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಇನ್ನು, ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ವಿಧಾನಮಂಡಲದ ವ್ಯವಹಾರ ಸಲಹಾ ಸಮಿತಿಯಿ ಅಧಿವೇಶನದ ಅವಧಿಯ ಕುರಿತಾದ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಸಚಿವ ಮಾಧುಸ್ವಾಮಿ ವಿವರಿಸಿದ್ದರು.

ಗಮನಿಸಬಹುದಾದ ಸುದ್ದಿ

Vijaya Sankalp abhiyan: ಕಾಂಗ್ರೆಸ್‌ ಮತ್ತೆ ಮನೆಯಲ್ಲೇ ಕೂರಬೇಕೆಂಬುದು ಜನರ ನಿರ್ಧಾರ ಎಂದ ಜೆ.ಪಿ.ನಡ್ಡಾ; ವಿಜಯ ಸಂಕಲ್ಪಕ್ಕೆ ಚಾಲನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

10 crocodile mummies preserved: 2500 ವರ್ಷ ಹಳೆಯ ಸಂರಕ್ಷಿತ 10 ಮೊಸಳೆ ಮಮ್ಮಿಗಳು; ರಹಸ್ಯ ಭೇದಿಸಿದ ಪುರಾತತ್ತ್ವ ಶಾಸ್ತ್ರಜ್ಞರು

10 crocodile mummies preserved: ಈಜಿಪ್ಟ್‌ನಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು 2,500ಕ್ಕೂ ಹೆಚ್ಚು ಹಳೆಯ 10 ಮೊಸಳೆ ಮಮ್ಮಿಗಳನ್ನು ಪತ್ತೆ ಹಚ್ಚಿದ್ದಾರೆ. ಇದಕ್ಕೂ ಮುನ್ನ ಇತರ ಪ್ರಾಣಿಗಳ ಸಮಾಧಿಗಳು ಪತ್ತೆಯಾಗಿದ್ದವು. ಆದರೆ ಮೊಸಳೆ ಮಮ್ಮಿಗಳು ಸಿಗುವುದು ವಿರಳ. ವಿವರ ಓದಿಗೆ ಮತ್ತು ಫೋಟೋ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ