logo
ಕನ್ನಡ ಸುದ್ದಿ  /  ಕರ್ನಾಟಕ  /  Tumakuru News: ಕೆಎನ್ ರಾಜಣ್ಣನಿಗೆ ಒಲಿದ ಮಂತ್ರಿ ಪಟ್ಟ; ಟಿಬಿ ಜಯಚಂದ್ರಗಿಲ್ಲ ಸಚಿವ ಸ್ಥಾನ, ಹಿರಿಯ ಸಹಕಾರಿ ಧುರೀಣನ ರಾಜಕೀಯ ಹಾದಿ ಹೀಗಿದೆ

Tumakuru News: ಕೆಎನ್ ರಾಜಣ್ಣನಿಗೆ ಒಲಿದ ಮಂತ್ರಿ ಪಟ್ಟ; ಟಿಬಿ ಜಯಚಂದ್ರಗಿಲ್ಲ ಸಚಿವ ಸ್ಥಾನ, ಹಿರಿಯ ಸಹಕಾರಿ ಧುರೀಣನ ರಾಜಕೀಯ ಹಾದಿ ಹೀಗಿದೆ

HT Kannada Desk HT Kannada

May 27, 2023 07:46 PM IST

ಕೆಎನ್ ರಾಜಣ್ಣ - ಟಿಬಿ ಜಯಚಂದ್ರ

    • Tumakuru Minister Posts: ತುಮಕೂರು ಜಿಲ್ಲೆಯಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 7 ಜನ ಕಾಂಗ್ರೆಸ್ ಶಾಸಕರುಗಳು ಆಯ್ಕೆಯಾಗಿದ್ದು, ಡಾ.ಜಿ.ಪರಮೇಶ್ವರ್ ಅವರ ಜೊತೆಗೆ, ಕೆ.ಎನ್.ರಾಜಣ್ಣ ಅವರಿಗೂ ಮಂತ್ರಿ ಪದವಿ ದೊರೆತಿರುವುದು ಜಿಲ್ಲೆಗೆ ಎರಡು ಮಂತ್ರಿ ಸ್ಥಾನಗಳು ದೊರೆತಂತಾಗಿದೆ.
ಕೆಎನ್ ರಾಜಣ್ಣ - ಟಿಬಿ ಜಯಚಂದ್ರ
ಕೆಎನ್ ರಾಜಣ್ಣ - ಟಿಬಿ ಜಯಚಂದ್ರ

ತುಮಕೂರು: ತುಮಕೂರು ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಕೆ.ಎನ್.ರಾಜಣ್ಣ (KN Rajanna) ಇಂದು ( ಮೇ 27) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ತುಮಕೂರು ಜಿಲ್ಲೆಯಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 7 ಜನ ಕಾಂಗ್ರೆಸ್ ಶಾಸಕರುಗಳು ಆಯ್ಕೆಯಾಗಿದ್ದು, ಡಾ.ಜಿ.ಪರಮೇಶ್ವರ್ ಅವರ ಜೊತೆಗೆ, ಕೆ.ಎನ್.ರಾಜಣ್ಣ ಅವರಿಗೂ ಮಂತ್ರಿ ಪದವಿ ದೊರೆತಿರುವುದು ಜಿಲ್ಲೆಗೆ ಎರಡು ಮಂತ್ರಿ ಸ್ಥಾನಗಳು ದೊರೆತಂತಾಗಿದೆ.

ತುಮಕೂರು ನಗರದ ಕ್ಯಾತಸಂದ್ರದಲ್ಲಿ 1951 ಏಪ್ರಿಲ್ 13 ರಂದು ಜನಿಸಿದ ಕೆ.ಎನ್.ರಾಜಣ್ಣ ಸಿದ್ದಗಂಗಾ ಮಠದ ವಿದ್ಯಾರ್ಥಿ ಎಂಬುದು ವಿಶೇಷ. ಬಿಎಸ್ಸಿ, ಎಲ್‌ಎಲ್‌ಬಿ ಪದವಿಧರರಾದ ಇವರು, ವಕೀಲ ವೃತ್ತಿಯ ಜೊತೆ ಜೊತೆಗೆ, ಕೃಷಿ, ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಇವರ ಪತ್ನಿ ಶ್ರೀಮತಿ ಶಾಂತಲ ಸಹ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದವರು. ಇವರಿಗೆ ಓರ್ವ ಹೆಣ್ಣು ಮತ್ತು ಇಬ್ಬರು ಮಕ್ಕಳು. ಇವರಲ್ಲಿ ಹಿರಿಯವರಾದ ಆರ್.ರಾಜೇಂದ್ರ ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಇನೋರ್ವ ಪುತ್ರ ಉದ್ಯಮಿ, ಮಗಳು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಮದುವೆಯಾಗಿ ಗೃಹಿಣಿಯಾಗಿದ್ದಾರೆ. 1978ರಲ್ಲಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ನಿರ್ದೇಶಕರಾಗಿ ರಾಜಕೀಯ ಪ್ರವೇಶ ಮಾಡಿದ್ದ ಕೆಎಚ್ ರಾಜಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದ ಮತ್ತು ಹಲವು ಸಹಕಾರಿ ಬ್ಯಾಂಕುಗಳ ಅಧ್ಯಕ್ಷರಾಗಿದ್ದ ಕ್ಯಾತ್ಸಂದ್ರ ಎನ್. ರಾಜಣ್ಣನವರು 1988-2002ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ವಿಧಾನಪರಿಷತ್ತಿಗೆ ಹೋಗಲು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಸೇರಿ ಬೆಳ್ಳಾವಿ ಕ್ಷೇತ್ರದಿಂದ ಚುನಾವಣೆ ಎದುರಿಸಿ, ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದ ಕೆ.ಎನ್.ರಾಜಣ್ಣ, ಕ್ಷೇತ್ರ ಪುನರ್ ವಿಂಗಡನೆಯ ನಂತರ ಸಾಮಾನ್ಯ ಕ್ಷೇತ್ರವಾದ ಮಧುಗಿರಿಯಿಂದ ಸ್ಪರ್ಧೆಗಿಳಿದು 2008ರ ಚುನಾವಣೆ, ತದನಂತರದ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಕ್ಷೇತ್ರ ಬಿಡದೆ ಕೆಲಸ ಮಾಡಿದ ಪರಿಣಾಮ 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರಕ್ಕೆ ಸುಮಾರು 2000 ಕೋಟಿಗೂ ಹೆಚ್ಚು ಅನುದಾನ ತಂದು ಮಧುಗಿರಿಯನ್ನು ಜಿಲ್ಲೆಯನ್ನಾಗಿಸಲು ಅವಿರತ ಶ್ರಮಿಸಿದ್ದರು. ಮಧುಗಿರಿಗೆ ಹೊಸ ಆರ್‌ಟಿಒ ಕಚೇರಿ, ಡಿಡಿಪಿಐ ಕಚೇರಿ,ಹೊಸ ಕೋರ್ಟ್ ಕಟ್ಟಡ, ಬಸ್ ಡಿಪೋ, ಲೋಕೋಪಯೋಗಿ ಇಲಾಖೆಯ ಕಚೇರಿ ಹೀಗೆ ಜಿಲ್ಲಾ ಕೇಂದ್ರದಲ್ಲಿ ಇರಬೇಕಾದ ಹಲವು ಮೂಲಸೌಕರ್ಯಗಳನ್ನು ತರುವುದರಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಇಷ್ಟೆಲ್ಲಾ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದರೂ 2018ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಸೋತರು ಕ್ಷೇತ್ರ ಬಿಡದೆ ಐದು ವರ್ಷಗಳ ಕಾಲ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡಿದ ಪರಿಣಾಮ 2023ರ ಚುನಾವಣೆಯಲ್ಲಿ ಕ್ಷೇತ್ರದ ಜನರು 32 ಸಾವಿರ ಅಧಿಕ ಮತಗಳ ಅಂತರದಿAದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದರು. ಚುನಾವಣಾ ಪ್ರಚಾರದ ವೇಳೆ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಕೆ.ಎನ್.ರಾಜಣ್ಣ ಅವರನ್ನು ಮಂತ್ರಿ ಮಾಡುವ ಮೂಲಕ ಕ್ಷೇತ್ರದ ಜನರ ಆಶಯಕ್ಕೆ ಮನ್ನಣೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಟಿಬಿಜೆಗೆ ಮಂತ್ರಿ ಪಟ್ಟ ಮಿಸ್:

ತುಮಕೂರು ಜಿಲ್ಲೆಯ ಮೂವರಿಗೆ ಸಚಿವ ಪಟ್ಟ ಗ್ಯಾರಂಟಿ ಎಂಬಂತಿತ್ತು, ಮೊದಲ ಪಟ್ಟಿಯಲ್ಲಿ ಆಯ್ಕೆಯಾದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಿರೀಕ್ಷೆಯಂತೆ ಗೃಹ ಸಚಿವರಾಗಿದ್ದಾರೆ, ಇನ್ನು ಸಹಕಾರಿ ರತ್ನ ಎನಿಸಿದ್ದ ಕೆ.ಎನ್.ರಾಜಣ್ಣಗೆ ಸಿಎಂ ಸಿದ್ದರಾಮಯ್ಯರ ಕೃಪ ಕಟಾಕ್ಷದಿಂದ ಸಚಿವ ಸ್ಥಾನ ಒಲಿದು ಸಹಕಾರ ಮಂತ್ರಿ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರರಿಗೆ ನಿರಾಸೆಯಾಗಿದೆ, ವಯಸ್ಸಿನ ಕಾರಣ ಹೇಳಿ ಸಚಿವ ಪಟ್ಟ ತಪ್ಪಿಸಲಾಗಿದೆ, ಸ್ಪೀಕರ್ ಹುದ್ದೆಗೆ ಸೂಕ್ತವಾಗಿದ್ದ ಜಯಚಂದ್ರ ಅವರು ಆ ಹುದ್ದೆ ನನಗೆ ಬೇಡ ಎಂದು ಮೊದಲೇ ಹೇಳಿದ್ದರು, ಇದೀಗ ಸ್ಪೀಕರ್ ಹುದ್ದೆಯೂ ಇಲ್ಲ, ಮಂತ್ರಿಭಾಗ್ಯವೂ ಇಲ್ಲದಂತಾಗಿದೆ, ಇವರ ಅಭಿಮಾನಿಗಳು ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ, ಆದರೆ ಪ್ರತಿಭಟನೆ ಮಂತ್ರಿ ಪಟ್ಟ ತಂದು ಕೊಡುವ ಯಾವ ಲಕ್ಷಣವೂ ಕಾಣುತ್ತಿಲ್ಲ.

ವರದಿ: ಈಶ್ವರ್ ಎಂ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ