logo
ಕನ್ನಡ ಸುದ್ದಿ  /  ಕರ್ನಾಟಕ  /  Krushi Bhagya: ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಒಪ್ಪಿಗೆ

Krushi Bhagya: ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಒಪ್ಪಿಗೆ

Umesh Kumar S HT Kannada

Nov 10, 2023 05:13 AM IST

100 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ ಸಂಪುಟ ತೀರ್ಮಾನ.

  • ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಕೃಷಿ ಭಾಗ್ಯ ಯೋಜನೆ ಮರುಜಾರಿಗೊಳಿಸಲು ಸಚಿವ ಸಂಪುಟ ಸಭೆ ಇಂದು (ನ.9) ತೀರ್ಮಾನಿಸಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

100 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ ಸಂಪುಟ ತೀರ್ಮಾನ.
100 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ ಸಂಪುಟ ತೀರ್ಮಾನ.

ಬೆಂಗಳೂರು: ಮನ್ಸೂನ್‌ ಮಳೆಯನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ನಾಡಿನ ರೈತರಿಗೆ ಸಂಜೀವಿನಿಯಂತಿದ್ದ ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ ನೀಡಲು ಇಂದು (ನ.9) ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಕೃಷಿ ಭಾಗ್ಯ ಯೋಜನೆಯಡಿ ನೀರು ಸಂಗ್ರಹಣೆಗಾಗಿ ಕೃಷಿಹೊಂಡಗಳ ನಿರ್ಮಾಣ, ನೀರು ಇಂಗದಂತೆ ತಡೆಯಲು ಪಾಲಿತಿನ್‌ ಹೊದಿಕೆ, ಹೊಂಡದಿಂದ ನೀರೆತ್ತಲು ಡೀಸೆಲ್‌ ಪಂಪ್‌ ಸೆಟ್‌, ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಸಾಧನಗಳು, ಕೃಷಿ ಹೊಂಡದ ಸುತ್ತಲೂ ತಂತಿಬೇಲಿ ನಿರ್ಮಾಣಕ್ಕಾಗಿ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಸಹಾಯಧನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾಗಿ ಅವರ ಕಚೇರಿ ಟ್ವೀಟ್ ಮಾಡಿದೆ.

ಸಚಿವ ಸಂಪುಟದಲ್ಲಿ ಅಂಗೀಕರಿಸಿದ ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ ಸಂಬಂಧಿಸಿದ ವಿವರ

ಮಳೆಯಾಶ್ರಿತ ಕೃಷಿ ನೀತಿ 2014ರ ಪ್ರಕಾರ, ಕೃಷಿ ಭಾಗ್ಯ ಯೋಜನೆಯನ್ನು 2023-24ನೇ ಸಾಲಿನಲ್ಲಿ ಸಾಲಿನಲ್ಲಿ 100 ಕೋಟಿ ರೂಪಾಯಿ ಅನುದಾನದಲ್ಲಿ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಜಾರಿಗೊಳಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಚಿವ ಸಂಪುಟ ಗುರುವಾರ (ನ.9) ಅನುಮೋದನೆ ನೀಡಿದೆ.

ಕೃಷಿ ಭಾಗ್ಯ ಯೋಜನೆ ಮರು ಜಾರಿಯ 4 ಉದ್ದೇಶಗಳು

  1. ಮಳೆ ಆಧಾರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ಮಾರ್ಪಡಿಸುವುದು.
  2. ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಮೂಲಕ ಉತ್ಪಾದಕತೆಯನ್ನು ವೃದ್ಧಿಸುವುದು.
  3. ಕೃಷಿ ಆದಾಯವನ್ನು ಹೆಚ್ಚಿಸುವುದು.
  4. ಮಳೆ ನೀರು ವ್ಯರ್ಥವಾಗದಂತೆ ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು.

ಕೃಷಿ ಭಾಗ್ಯ ಯೋಜನೆಯ ಘಟಕಗಳ ವಿವರ

  • ಕ್ಷೇತ್ರ ಬದು ನಿರ್ಮಾಣ.
  • ನೀರು ಸಂಗ್ರಹಣಾ ರಚನೆಯಾಗಿ ಕೃಷಿ ಹೊಂದ ನಿರ್ಮಾಣ.
  • ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಅಳವಡಿಸುವುದು.
  • ಕೃಷಿ ಹೊಂಡದಿಂದ ನೀರು ಎತ್ತಲು ಡಿಸೇಲ್ ಪಂಪ್‌ಸೆಟ್ ಪೂರೈಕೆ.
  • ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ (ತುಂತುರು) ಘಟಕ (PMKSY-PDMC / Atal Bhoo-Jal ಯೋಜನೆಯ ಒಗ್ಗೂಡಿಸುವಿಕೆಯಡಿ)
  • ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Fencing) ಘಟಕ ಅನುಷ್ಠಾನ.

ಕೃಷಿ ಭಾಗ್ಯ ಯೋಜನೆಗೆ ಸಂಬಂಧಿಸಿದ ಅಂಕಿ-ಸಂಖ್ಯೆ ಹೀಗಿದೆ ನೋಡಿ

  1. ಕೃಷಿ ಭಾಗ್ಯ ಯೋಜನೆಗೆ ಒಟ್ಟು ವೆಚ್ಚ 200 ಕೋಟಿ ರೂಪಾಯಿ
  2. ಪೂರಕ ಅಂದಾಜು 100 ಕೋಟಿ ರೂಪಾಯಿ
  3. ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯಿಂದ 100 ಕೋಟಿ ರೂಪಾಯಿ ಪಡೆಯಲಾಗುವುದು.
  4. ಮಳೆ ಆಧಾರಿತ ಕೃಷಿ ಪ್ರದೇಶಗಳು ಶೇಕಡ 68 ಕೃಷಿ ಪ್ರದೇಶಗಳು
  5. ಐದು ಒಣಹವೆ ಹವಾಮಾನ ವಲಯಗಳ 24 ಜಿಲ್ಲೆಗಳು
  6. 24 ಜಿಲ್ಲೆಗಳ 106 ತಾಲೂಕುಗಳು ಮತ್ತು ತಾಲೂಕುವಾರು ಅಂದಾಜು 152 ಕೃಷಿ ಹೊಂಡ ಇತರೆ ಘಟಕಗಳ ನಿರ್ಮಾಣ.
  7. ಒಂದು ತಾಲ್ಲೂಕಿಗೆ 1.85 ಕೋಟಿ ರೂಪಾಯಿ ಪ್ರಕಾರ ಒಟ್ಟಾರೆ 106 ತಾಲ್ಲೂಕುಗಳಿಗೆ 16062 ಕೃಷಿ ಹೊಂಡಗಳ ನಿರ್ಮಾಣ ಹಾಗೂ ಇತರೆ ಘಟಕಗಳು ಸೇರಿ 200 ಕೋಟಿ ರೂಪಾಯಿ ಎಂದು ಪ್ರಸ್ತಾವನೆ ತಿಳಿಸಿದೆ.



    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ