logo
ಕನ್ನಡ ಸುದ್ದಿ  /  ಕರ್ನಾಟಕ  /  Yadagiri Result: ನಾಲ್ಕು ಕ್ಷೇತ್ರಗಳ ಯಾದಗಿರಿಯಲ್ಲಿ ಕಾಂಗ್ರೆಸ್‌ನದ್ದೇ ಪಾರುಪತ್ಯ; ಜೆಡಿಎಸ್‌ಗೂ ದಕ್ಕಿತು ಒಂದು ಸ್ಥಾನ; ಬಿಜೆಪಿ ಧೂಳಿಪಟ

Yadagiri Result: ನಾಲ್ಕು ಕ್ಷೇತ್ರಗಳ ಯಾದಗಿರಿಯಲ್ಲಿ ಕಾಂಗ್ರೆಸ್‌ನದ್ದೇ ಪಾರುಪತ್ಯ; ಜೆಡಿಎಸ್‌ಗೂ ದಕ್ಕಿತು ಒಂದು ಸ್ಥಾನ; ಬಿಜೆಪಿ ಧೂಳಿಪಟ

HT Kannada Desk HT Kannada

May 14, 2023 02:27 PM IST

ಯಾದಗಿರಿಯಲ್ಲಿ ಕಾಂಗ್ರೆಸ್‌ಗೆ ಮೂರು ಸ್ಥಾನ, ಜೆಡಿಎಸ್‌ಗೆ ಒಂದು ಸ್ಥಾನ

    • ರೆಡ್ಡಿಗಳ ಸಾಮಾಜ್ರವಾಗಿರುವ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಮೂರು ಅಭ್ಯರ್ಥಿಗಳು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದು. ಇಲ್ಲಿ ರೆಡ್ಡಿ ಸಮಾಜದ ಮತಗಳೇ ನಿರ್ಣಯವಾಗಿದ್ದವು. ಕೊನೆಗೆ ಸೌಮ್ಯ ಸ್ವಭಾವದ ಕಾಂಗ್ರೆಸ್‌ ಅಭ್ಯರ್ಥಿ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರ್‌ ಗೆಲುವು ಸಾಧಿಸಿದ್ದಾರೆ.
ಯಾದಗಿರಿಯಲ್ಲಿ ಕಾಂಗ್ರೆಸ್‌ಗೆ ಮೂರು ಸ್ಥಾನ, ಜೆಡಿಎಸ್‌ಗೆ ಒಂದು ಸ್ಥಾನ
ಯಾದಗಿರಿಯಲ್ಲಿ ಕಾಂಗ್ರೆಸ್‌ಗೆ ಮೂರು ಸ್ಥಾನ, ಜೆಡಿಎಸ್‌ಗೆ ಒಂದು ಸ್ಥಾನ

ಯಾದಗಿರಿ: ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೂರು ಕಾಂಗ್ರೆಸ್‌ ಪಾಲಾದರೆ, ಇನ್ನೊಂದು ಕ್ಷೇತ್ರ ಜೆಡಿಎಸ್‌ ವಶವಾಗಿದೆ. ಬಿಜೆಪಿ ಧೂಳಿಪಟವಾಗಿದೆ. ಯಾದಗಿರಿ, ಶಹಾಪುರ, ಸುರಪುರದಲ್ಲಿ ಕಾಂಗ್ರೆಸ್‌ ಗೆದ್ದಿದರೆ, ಗುರುಮಠಕಲ್‌ದಲ್ಲಿ ಜೆಡಿಎಸ್‌ ಕ್ಷೇತ್ರ ತನ್ನದಾಗಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ರೆಡ್ಡಿಗಳ ಸಾಮಾಜ್ರವಾಗಿರುವ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಮೂರು ಅಭ್ಯರ್ಥಿಗಳು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದು. ಇಲ್ಲಿ ರೆಡ್ಡಿ ಸಮಾಜದ ಮತಗಳೇ ನಿರ್ಣಯವಾಗಿದ್ದವು. ಕೊನೆಗೆ ಸೌಮ್ಯ ಸ್ವಭಾವದ ಕಾಂಗ್ರೆಸ್‌ ಅಭ್ಯರ್ಥಿ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರ್‌ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್ ಪಕ್ಷದ ಡಾ. ಎಬಿ ಮಾಲಕರೆಡ್ಡಿ, ಕಾಂಗ್ರೆಸ್‌ನ ಚನ್ನಾರೆಡ್ಡಿ ಪಾಟೀಲ ತುನ್ನೂರ್ ಮತ್ತು ಬಿಜೆಪಿಯ ವಿಶ್ವನಾಥ್ ರೆಡ್ಡಿ ಮುದ್ನಾಳ್ ಈ ಮೂವರು ರೆಡ್ಡಿ ಸಮುದಾಯದವರು ಸ್ಪರ್ಧಿಸಿದ್ದಾರೆ. ಕೊನೆಗೆ ಈ ಕಾಳಗದಲ್ಲಿ ಗೆದ್ದಿದ್ದು ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್.

ಹಳೆ ಹುಲಿ ಮಾಲಕ ರೆಡ್ಡಿಗೆ ಸೋಲು

ಮಾಲಕ ರೆಡ್ಡಿ ಕ್ಷೇತ್ರದಲ್ಲಿ ಹಳೆಹುಲಿ. ಸುಮಾರು 4 ದಶಕಗಳಿಂದ ಯಾದಗಿರಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿಯೂ ದುಡಿದಿದ್ದಾರೆ. ಆದರೆ ಸಮಸ್ಯೆಯೆಂದರೆ ಇವರೊಬ್ಬ ಟರ್ನ್ಕೋಟ್. ಒಂದು ಪಕ್ಷದಿಂದ ಟಿಕೆಟ್ ಸಿಕ್ಕಿಲ್ಲಾಂದ್ರೆ ಬೇರೊಂದು ಪಕ್ಷದ ಕದ ತಟ್ಟುತ್ತಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತ ಬಳಿಕ ಬಿಜೆಪಿ ಸೇರಿದ್ದರು. ಈ ಬಾರಿಯ ಚುನಾವಣೆಯಲ್ಲಿ 87-ವರ್ಷದ ತನಗೆ ಬಿಜೆಪಿ ಟಿಕೆಟ್ ನೀಡದು ಅಂತ ಗೊತ್ತಾದಾಗ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದರು. ಅಲ್ಲೂ ತಮಗಾಗಲೀ, ತಮ್ಮ ಮಗಳಿಗಾಗಲೀ ಟಿಕೆಟ್ ಸಿಗಲ್ಲ ಅನ್ನೋದು ಖಾತ್ರಿಯಾದ ಕೂಡಲೇ, ಈ ಭಾಗದಲ್ಲಿ ಯೋಗ್ಯ ಅಭ್ಯರ್ಥಿಯ ತಲಾಷ್‌ನಲ್ಲಿದ್ದ ಜೆಡಿಎಸ್ ಸೇರಿ ಟಿಕೆಟ್ ಪಡೆದುಕೊಂಡಿದ್ದರು. ಈ ಬಾರಿ ಅವರು ಪಡೆದಿದ್ದು ಕೇವಲ 7,420 ವೋಟು ಮಾತ್ರ.

ಕಾಂಗ್ರೆಸ್ ಪಕ್ಷದ ಚನ್ನಾರೆಡ್ಡಿ ಪಾಟೀಲ್ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಷೇತ್ರದಲ್ಲಿ ಒಬ್ಬ ಹಿರಿಯ ರಾಜಕಾರಣಿ ಅಂತ ಗುರುತಿಸಿಕೊಂಡಿದ್ದಾರೆಯೇ ಹೊರತು ಜನಪ್ರಿಯರಾಗಿರಲಿಲ್ಲ. ಸಿದ್ದರಾಮಯ್ಯ ನಾಮಬಲದ ಮೇಲೆ ಚುನಾಣೆಯಲ್ಲಿ ಗೆಲ್ಲುವ ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದ್ದರು ಮತ್ತು ಅದರಲ್ಲಿ ಸಫಲರೂ ಆಗಿದ್ದಾರೆ.

ಬಿಜೆಪಿಯ ವೆಂಕಟರಡ್ಡಿ ಮುದ್ನಾಳ್ ಯಾದಗಿರಿ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಕಳೆದ ಬಾರಿ ಗೆಲ್ಲುವ ಮೂಲಕ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಎರಡು ಚುನಾವಣೆಗಳನ್ನು ಗುರುಮಠಕಲ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಮುದ್ನಾಳ್ ಕಳೆದ ಬಾರಿ ಯಾದಗಿರಿ ಕ್ಷೇತ್ರದಿಂದ ಗೆದ್ದು ಈ ಬಾರಿ ಮತ್ತೆ ಪಕ್ಷದ ಅಭ್ಯರ್ಥಿಯಾಗಿದ್ದರು.

5ನೇ ಬಾರಿ ಗೆಲುವು ಸಾಧಿಸಿದ ದರ್ಶನಾಪುರ

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಶರಣಬಸಪ್ಪಗೌಡ ದರ್ಶನಾಪುರ 5 ನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ,

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ 70ರ ದಶಕದಿಂದ ಶರಣಬಸಪ್ಪಗೌಡ ದರ್ಶನಾಪುರ ಪ್ರಾಬಲ್ಯ ಜೋರಾಗಿದೆ. ಐದನೇ ಬಾರಿ ವಿಧಾನಸಭೆಗೆ ಆಯ್ಕೆ ಬಯಸಿದ್ದ ಹಾಲಿ ಶಾಸಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ತಮ್ಮ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಅವರ ತಂದೆ ಬಾಪುಗೌಡ ದರ್ಶನಾಪುರ ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿ ಅಯ್ಕೆಯಾಗಿ ಒಮ್ಮೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಸಕ್ರಿಯ ರಾಜಕಾರಣಕ್ಕೆ ಬರುವ ಮೊದಲು ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಡುತ್ತಿದ್ದ ಶರಣಬಸಪ್ಪಗೌಡ ದರ್ಶನಾಪುರ; 1994, 2004, 2008 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಬಾರಿ ಅವರು ಬಿಜೆಪಿಯ ಗುರುಪಾಟೀಲ್ ಶಿರವಾಳ ಅವರ ವಿರುದ್ಧ 30 ಸಾವಿರಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಅವರಿಗಿರುವ ವರ್ಚಸ್ಸಿನ ಬಗ್ಗೆ ಎರಡು ಮಾತಿಲ್ಲ.

ಕಳೆದ ಬಾರಿ ಜೆಡಿಎಸ್ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಿದ್ದ ಅಮೀನರೆಡ್ಡಿ ಯಾಳಗಿ ಅವರಿಗೆ ಈ ಸಲ ಬಿಜೆಪಿ ಟಿಕೆಟ್ ನೀಡಿತ್ತು. ಗಮನಿಸಬೇಕಾದ ಸಂಗತಿಯೇನೆಂದರೆ, 2018 ರಲ್ಲಿ ಯಾಳಗಿ 23 ಸಾವಿರಕ್ಕಿಂತ ಹೆಚ್ಚು ಮತ ಪಡೆದಿದ್ದರು ಮತ್ತು 2023 ರಲ್ಲಿ ಅದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲುವು ನಿಶ್ಚಿತ ಎಂದು ಹೇಳಲಾಗಿತ್ತು. ಅವರ ನಾಯಕತ್ವದಲ್ಲಿ ಪ್ರಬಲಗೊಳ್ಳುತ್ತಿದ್ದ ಜೆಡಿಎಸ್ ಈಗ ಮತ್ತೇ ದುರ್ಬಲಗೊಂಡಿದೆ. ಜೆಡಿಎಸ್ ಅಬ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಗುರುಲಿಂಗಪ್ಪ ಗೌಡ ಸಹ ವಲಸೆ ಪ್ರಾಣಿಯೇ. ಚುನಾವಣಾ ದಿನಾಂಕ ಘೋಷಣೆಯಗುವ ಕೆಲವೇ ದಿನ ಮೊದಲು ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಶಹಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು.

ರಾಜಾ ವೆಂಕಟಪ್ಪ ನಾಯಕ

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಾ ವೆಂಕಟಪ್ಪ ನಾಯಕ ಅವರು ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರನ್ನು ಸೋಲಿಸಿ ಜಯಶಾಲಿಯಾಗಿದ್ದಾರೆ. ರಾಜುಗೌಡರು ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇವರು ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದು. ಪ್ರಸ್ತುತ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿದ್ದು. ಪುನರ್‌ ಆಯ್ಕೆ ಬಯಸಿ ಚುನಾವಣೆ ಸ್ಪರ್ಧಿಸಿದ್ದರು.

ಶರಣಗೌಡ ಕಂದಕೂರ

ಗುರುಮಠಕಲ್‌ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿರುವ ಶರಣಗೌಡ ಕಂದಕೂರ ಅವರು ಬಿಜೆಪಿ ಅಭ್ಯರ್ಥಿ ಲಲಿತಾ ಅನಪುರ, ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ ಚಿಂಚನಸೂರ ಅವರನ್ನು ಪರಾವಭಗೊಳಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಶರಣಗೌಡ ಅವರು ಹಾಲಿ ಶಾಸಕ ನಾಗನಗೌಡ ಕಂದಕೂರ ಅವರ ಸುಪುತ್ರರಾಗಿದ್ದರು. ವಯಸ್ಸಾಗಿರುವುದರಿಂದ ನಾಗನಗೌಡ ಕಂದಕೂರ ಅವರು ಸುಪುತ್ರ ನಾಗನಗೌಡನಿಗೆ ಟಿಕೆಟ್‌ ಕೊಡಿಸಿದ್ದರು. ಕಟ್ಟಾ ಜೆಡಿಎಸ್‌ ಸಿಪಾಯಿ ಆಗಿರುವ ನಾಗನಗೌಡ ಕಂದಕೂರ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಮಗನೂ ಸಹ ಸದಾ ಜನರೊಂದಿಗೆ ಬೆರೆತು ಅವರ ಸಮಸ್ಯೆಗೆ ಸ್ಪಂದಿಸುತ್ತಾ ಜನಪ್ರಿಯರಾಗಿದ್ದರು. ಪ್ರಮುಖ ಎದುರಾಳಿ ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ ಈ ಮೊದಲು ಕಾಂಗ್ರೆಸ್‌ನಲ್ಲಿಯೇ 7 ಬಾರಿ ಶಾಸಕರಾಗಿ, ಸಪ್ತ ಖಾತೆ ಸಚಿವರಾಗಿ ಆಯ್ಕೆಯಾಗಿದ್ದರು. ಆ ಬಳಿಕ ಅವರು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸಂಚು ರೂಪಿಸಿ ಅವರನ್ನು ಸೋಲಿಸಲು ‍ಶ್ರಮಿಸಿದ್ದರು. ಬಿಜೆಪಿಯಲ್ಲಿ ಕೋಲಿ ಸಮಾಜದ ನಿಗಮದ ಅಧ್ಯಕ್ಷರಾಗಿ ಮತ್ತು ವಿಧಾನ ಪರಿಷತ್‌ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಆದರೆ, ಗುರುಮಠಕಲ್‌ ಕ್ಷೇತ್ರದಿಂದ ಟಿಕೆಟ್‌ ನೀಡಿಲ್ಲವೆಂಬ ಕಾರಣಕ್ಕೆ ಬಿಜೆಪಿಗೆ ರಾಜೀನಾಮೆ ನೀಡಿ ಪುನಃ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಟಿಕೆಟ್‌ ಪಡೆದು ಸ್ಪರ್ಧಿಸಿದ್ದರು. ಬಿಜೆಪಿ ಸಹ ಹೊಸ ಮುಖಕ್ಕೆ ಅವಕಾಶ ನೀಡಿ ಲಲಿತಾ ಅನಪುರ ಅವರಿಗೆ ಟಿಕೆಟ್‌ ನೀಡಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ