logo
ಕನ್ನಡ ಸುದ್ದಿ  /  ಕರ್ನಾಟಕ  /  Bpl Card: ಬಿಪಿಎಲ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಕಾಂಗ್ರೆಸ್‌ ಗ್ಯಾರಂಟಿ ಪಡೆಯಲು ಪಡಿತರ ಚೀಟಿ ಪಡೆಯುವ ವಿಧಾನ

BPL Card: ಬಿಪಿಎಲ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಕಾಂಗ್ರೆಸ್‌ ಗ್ಯಾರಂಟಿ ಪಡೆಯಲು ಪಡಿತರ ಚೀಟಿ ಪಡೆಯುವ ವಿಧಾನ

HT Kannada Desk HT Kannada

Jun 03, 2023 11:36 AM IST

google News

ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ? (ಸಾಂದರ್ಭಿಕ ಚಿತ್ರ)

    • Congress guarantee BPL Card Apply: ಕಾಂಗ್ರೆಸ್‌ ಗ್ಯಾರಂಟಿ ಪಡೆಯಲು ಬಿಪಿಎಲ್‌ ಕಾರ್ಡ್‌ ಮಾಡಿಸುವ ಸಲುವಾಗಿ ಜನರು ಓಡಾಟ ನಡೆಸಿದ್ದಾರೆ. ಆದರೆ ಹಲವರಿಗೆ ಬಿಪಿಎಲ್‌ ಕಾರ್ಡ್‌ ಅಥವಾ ಹೊಸ ರೇಷನ್‌ ಕಾರ್ಡ್‌ ಪಡೆಯುವ ವಿಧಾನ ತಿಳಿದಿಲ್ಲ. ಹಾಗಾದ್ರೆ ಬಿಪಿಎಲ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ. 
ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ? (ಸಾಂದರ್ಭಿಕ ಚಿತ್ರ)
ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ? (ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ ಪಡೆಯಲು ಮತ್ತೊಂದು ಅವಕಾಶ ಸಿಗಲಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಲು ರೇಷನ್‌ ಕಾರ್ಡ್ ಗುರುತು ಮುಖ್ಯ ಮಾನದಂಡ ಆಗಬಹುದು. ಹೀಗಾಗಿ, ಜನರು ಗ್ಯಾರಂಟಿಗಳನ್ನು ಪಡೆಯುವ ಸಲುವಾಗಿ ಪಡಿತರ ಚೀಟಿ ಮಾಡಿಸಲು ಮುಗಿಬಿದ್ದಿದ್ದಾರೆ.

ಕಾಂಗ್ರೆಸ್‌ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ಅಕ್ಕಿ ಭಾಗ್ಯ ಕೂಡ ಒಂದು. ಮನೆಯ ಪ್ರತಿ ಸದಸ್ಯನಿಗೆ ತಲಾ ಹತ್ತು ಕೆ.ಜಿ ಅಕ್ಕಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅದರಂತೆ ಬಿಪಿಎಲ್‌ ಕಾರ್ಡ್‌ ಮಾಡಿಸಲು ಗ್ರಾಹಕರು ಇದೀಗ ಆಹಾರ ಮತ್ತು ನಾಗರೀಕ ಸರಬರಾಜು ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ, ಇಲಾಖೆ ಕೂಡ ಸಿದ್ಧತೆ ಮಾಡಿಕೊಂಡಿದೆ.

ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುವ ಕಾರ್ಡ್‌ ಮಾಡಿಸಿಕೊಳ್ಳಲು ಈ ತಿಂಗಳಿನಿಂದ ಇಲಾಖೆ ಅವಕಾಶ ನೀಡುವ ಸಾಧ್ಯತೆ ಇದೆ. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಕಾರಣದಿಂದ ವೆಬ್‌ಸೈಟ್‌ಗಳ ಮೂಲಕ ಸಲ್ಲಿಸುವ ಅರ್ಜಿಗಳಿಗೆ ತಾತ್ಕಾಲಿಕ ತಡೆ ಹಿಡಿಯಲಾಗಿತ್ತು. ಇದೀಗ ಮತ್ತೆ ಆರಂಭಿಸುವ ಸಾಧ್ಯತೆಗಳು ಇವೆ.

ಹೊಸದಾಗಿ ರೇಷನ್‌ ಕಾರ್ಡ್‌ ಪಡೆಯಲು ಹೇಗೆ ಅರ್ಜಿ ಸಲ್ಲಿಸುವುದು, ಅರ್ಹತೆಗಳು ಹಾಗೂ ದಾಖಲೆಗಳ ಮಾಹಿತಿ ಇಲ್ಲಿದೆ.

ಯಾರು ಅರ್ಹರು?

ರಾಜ್ಯದ ನಿವಾಸಿಗಳಾಗಿರಬೇಕು, ಈಗಾಗಲೇ ಪಡಿತರ ಚೀಟಿ ಹೊಂದಿರಬಾರದು, ಹೊಸದಾಗಿ ಮದುವೆಯಾದವರು, ಪಡಿತರ ಚೀಟಿ ಅವಧಿ ಮುಗಿದ ಅರ್ಹರು.

ಅವಶ್ಯ ದಾಖಲೆಗಳು

ಆಧಾರ್‌ ಕಾರ್ಡ್‌, ಮನೆಯ ಸದಸ್ಯರ ಆಧಾರ್‌ ಕಾರ್ಡ್‌ಗಳು, ಸಂಯೋಜಿತ ಐಡಿ, ಬ್ಯಾಂಕ್‌ ಪಾಸ್‌ ಬುಕ್‌, ಆದಾಯ, ಜಾತಿ, ನಿವಾಸ ಪ್ರಮಾಣ ಪತ್ರ ಹಾಗೂ ಕುಟುಂಬ ಸದಸ್ಯರ ಫೋಟೊಗಳು, ಮೊಬೈಲ್‌ ಸಂಖ್ಯೆ, ಬಾಡಿಗೆದಾರರಿಗೆ ಒಪ್ಪಂದ ಪತ್ರ‌ ಕಡ್ಡಾಯವಾಗಿ ಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ

http://ahara.kar.nic.in ವೆಬ್‌ಸೈಟ್‌ ಓಪನ್‌ ಮಾಡಿಕೊಳ್ಳಬೇಕು.

* ಇ-ಸೇವೆಗಳು ಆಯ್ಕೆಯನ್ನು ಕ್ಲಿಕ್‌ ಮಾಡಬೇಕು

* ಇ-ರೇಷನ್‌ ಕಾರ್ಡ್‌ನಿಂದ ಹೊಸ ಪಡಿತರ ಚೀಟಿ ಆಯ್ಕೆ ಮಾಡಬೇಕು

* ನಂತರ 2 ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು (ಇಂಗ್ಲೀಷ್‌ ಅಥವಾ ಕನ್ನಡ)

* ಬಿಪಿಎಲ್‌ ಚೀಟಿಗಾಗಿ ಆದ್ಯತೆಯ ಮನೆ, ಎಪಿಎಲ್‌ಗೆ ಆದ್ಯತೆಯಲ್ಲದ ಕುಟುಂಬದ ಮೂಲಕ ಆಯ್ಕೆ ಮಾಡಬೇಕು

* ನಂತರ ಕೇಳುವ ಪ್ರಶ್ನೆಗೆ - ಮೊದಲು ಬಿಪಿಎಲ್‌ ಚೀಟಿಗೆ ಅರ್ಜಿ ಸಲ್ಲಿಸಿದ್ದೀರಾ ಅಥವಾ ಹೊಸ ಅರ್ಜಿಯೇ ಎಂಬುದಕ್ಕೆ ಉತ್ತರ ನೀಡಬೇಕು

* ಜಿಲ್ಲೆ, ತಾಲೂಕು, ಸ್ವೀಕೃತಿ ಸಂಖ್ಯೆ ಆಯ್ಕೆ ಮಾಡಿ, ಹೊಸ ನೋಂದಣಿ ಅರ್ಜಿ ಭರ್ತಿ ಮಾಡಲು ʼಗೋʼ ಆಯ್ಕೆ ಮಾಡಬೇಕು

* ನಂತರ ಬಿಪಿಎಲ್‌ ಅಥವಾ ಎಪಿಎಲ್‌ಗಾಗಿ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು.

ಪಡಿತರ ಚೀಟಿಗಾಗಿ ಸಲ್ಲಿಸಿದ ಎಲ್ಲಾ ದಾಖಲೆಗಳ ಪರಿಶೀಲನೆ ಬಳಿಕ 15 ದಿನದೊಳಗೆ ಹೊಸ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಆ ಸಂದರ್ಭದಲ್ಲಿ 100 ರೂ ಅಥವಾ ನಿಗದಿಪಡಿಸಿರುವ ಹಣವನ್ನು ನೀಡಬೇಕಾಗುತ್ತದೆ.

ಈ ಎಲ್ಲಾ ದಾಖಲೆಗಳೊಂದಿಗೆ ಮಾತ್ರ ಅರ್ಜಿ ಸಲ್ಲಿಸಲು ಮುಂದಾಗಿ. ಯಾವುದಾದರೂ ಒಂದು ದಾಖಲೆ ಇಲ್ಲದಿದ್ದರೂ ಮತ್ತೆ ಮತ್ತೆ ಇಲಾಖೆಗೆ ಅಥವಾ ಇಂಟರ್‌ನೆಟ್‌ ಸೆಂಟರ್‌ಗೆ ಹೋಗಬಹುದಾದ ಸನ್ನಿವೇಶ ತಂದುಕೊಳ್ಳಬೇಡಿ.

ಇದನ್ನೂ ಓದಿ

Congress Guarantee: ದಾವಣಗೆರೆಯಲ್ಲಿ ಬಿಪಿಎಲ್‌ ಕಾರ್ಡ್‌ಗಾಗಿ ನೂಕುನುಗ್ಗಲು, ಗೃಹಲಕ್ಷ್ಮಿ, ಅನ್ನಭಾಗ್ಯಕ್ಕಾಗಿ ಹೊಸದಾಗಿ 20 ಸಾವಿರ ಅರ್ಜಿ

Congress guarantee BPL Card Apply: ಕಾಂಗ್ರೆಸ್‌ ಸರ್ಕಾರದ ‘ಗ್ಯಾರಂಟಿ’ ಯೋಜನೆ ಪಡೆಯಲು ಬಿಪಿಎಲ್ ಕಾರ್ಡ್ ಮಾನದಂಡವಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರು ಬಿಪಿಎಲ್ ಕಾರ್ಡ್ ಪಡೆಯಲು ಎಡತಾಕುತ್ತಿದ್ದಾರೆ.

ದಾವಣಗೆರೆ: ಕಾಂಗ್ರೆಸ್‌ ಸರ್ಕಾರದ ‘ಗ್ಯಾರಂಟಿ’ ಯೋಜನೆ ಪಡೆಯಲು ಬಿಪಿಎಲ್ ಕಾರ್ಡ್ ಮಾನದಂಡವಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರು ಬಿಪಿಎಲ್ ಕಾರ್ಡ್ ಪಡೆಯಲು ಎಡತಾಕುತ್ತಿದ್ದಾರೆ. ಗ್ರಾಮ ಒನ್‌ ಸೇರಿದಂತೆ ವಿವಿಧೆಡೆ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಜನರು ಆಗಮಿಸುತ್ತಿದ್ದು, ಎಲ್ಲೆಡೆ ರಷ್‌, ನೂಕುನುಗ್ಗಲಿನಂತಹ ಪರಿಸ್ಥಿತಿ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ