logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Poll: ಚುನಾವಣಾ ಬೆಟ್ಟಿಂಗ್‌ ಶುರು; ಕಡೂರಲ್ಲಿ ಬೆಳ್ಳಿ ಪ್ರಕಾಶ್‌ ಪರ ʻಆಸ್ತಿʼ ಬಾಜಿಗಿಟ್ಟ ತೆಲುಗು ಸಮಾಜದ ಮುಖಂಡ!

Karnataka Poll: ಚುನಾವಣಾ ಬೆಟ್ಟಿಂಗ್‌ ಶುರು; ಕಡೂರಲ್ಲಿ ಬೆಳ್ಳಿ ಪ್ರಕಾಶ್‌ ಪರ ʻಆಸ್ತಿʼ ಬಾಜಿಗಿಟ್ಟ ತೆಲುಗು ಸಮಾಜದ ಮುಖಂಡ!

HT Kannada Desk HT Kannada

Mar 21, 2023 07:09 AM IST

ಕಡೂರು ಶಾಸಕ, ಬಿಜೆಪಿ ನಾಯಕ ಬೆಳ್ಳಿ ಪ್ರಕಾಶ್‌

  • Karnataka Poll: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನೇದಿನೆ ಏರುತ್ತಿದೆ. ಚುನಾವಣಾ ಬೆಟ್ಟಿಂಗ್‌ ಕೂಡ ಶುರುವಾಗಿದೆ. ಕಡೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಘೋಷಣೆಗೂ ಮೊದಲೇ, ಶಾಸಕ ಬೆಳ್ಳಿ ಪ್ರಕಾಶ್‌ ಪರ ಬೆಟ್ಟಿಂಗ್‌ ಶುರುವಾಗಿದೆ. ಆಸ್ತಿಯನ್ನೆ ಬಾಜಿಗಿಟ್ಟ ಪ್ರಸಂಗ ಸೋಮವಾರ ಶಾಸಕರ ಉಪಸ್ಥಿತಿಯಲ್ಲೇ ನಡೆದಿದೆ!

ಕಡೂರು ಶಾಸಕ, ಬಿಜೆಪಿ ನಾಯಕ ಬೆಳ್ಳಿ ಪ್ರಕಾಶ್‌
ಕಡೂರು ಶಾಸಕ, ಬಿಜೆಪಿ ನಾಯಕ ಬೆಳ್ಳಿ ಪ್ರಕಾಶ್‌ (youtube grab)

ಬೆಂಗಳೂರು: ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆಯ ಕಾವು ದಿನೇದಿನೆ ಏರುತ್ತಿದೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಕುತೂಹಲಕಾರಿ ವಿಚಾರಗಳು ಗಮನಸೆಳೆಯುತ್ತವೆ. ರಾಜಕೀಯ ರಂಗು ಅನೇಕರ ಬದುಕಿನ ಮೇಲೂ ಪರಿಣಾಮ ಬೀರುವುದು ಸುಳ್ಳಲ್ಲ. ಸೋಮವಾರ ಅಂಥದ್ದೇ ಒಂದು ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ರಾಜಕೀಯದ ಹುಚ್ಚು ಹಿಡಿಸಿಕೊಂಡವರು, ಕ್ರಿಕೆಟ್‌ ಪ್ರೇಮಿಗಳಿಗಿಂತ ಕಡಿಮೆ ಏನಲ್ಲ. ಐಪಿಎಲ್‌ ಪಂದ್ಯಾವಳಿ ನಡೆಯುವಾಗ ಕ್ರಿಕೆಟ್‌ ಪ್ರೇಮಿಗಳು ಹೇಗೆ ಬಾಜಿ ಕಟ್ಟುತ್ತಾರೋ ಅದೇ ರೀತಿ ಚುನಾವಣೆ ನಡೆಯುವಾಗ ರಾಜಕೀಯದ ಅಮಲೇರಿಸಿಕೊಂಡವರು ಹಲವು ರೀತಿಯ ಬಾಜಿಕಟ್ಟಿ ಗಮನಸೆಳೆಯುತ್ತಿರುತ್ತಾರೆ. ಸ್ಥಳೀಯವಾಗಿ ಮನೆಮಾತು ಆಗುವಂತಹ ವರ್ತನೆಗಳನ್ನೂ ತೋರುವುದು ಸಹಜ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಇಂಥದ್ದೇ ಒಂದು ಪ್ರಸಂಗ ಸೋಮವಾರ ಅಂದರೆ ನಿನ್ನೆ ನಡೆಯಿತು. ಕಡೂರು ತಾಲೂಕು ಎನ್‌.ಜಿ.ಕೊಪ್ಪಲು ಗ್ರಾಮದಲ್ಲಿ ರಸ್ತೆ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮ ಇದಕ್ಕೆ ವೇದಿಕೆಯಾಯಿತು.

ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಅವರ ಸಮ್ಮುಖದಲ್ಲೇ ಅವರೇ ದಂಗುಬಡಿಯುವಂತೆ ಬಾಜಿ ಕಟ್ಟಿದವರು ತೆಲುಗುಗೌಡ ಸಮಾಜದ ಮುಖಂಡ ಎಸ್‌.ಬಿ.ಹನುಮಂತಪ್ಪ!

ಸಭಾ ಕಾರ್ಯಕ್ರಮದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮಗಳ ಅಭಿವೃದ್ಧಿಗೆ ಬೆಳ್ಳಿ ಪ್ರಕಾಶ್‌ ತಂದಿರುವ ಅನುದಾನಗಳ ವಿವರ ನೀಡಿದ ಹನುಮಂತಪ್ಪ, ಇದ್ದಕ್ಕಿದ್ದಂತೆ ಶಾಸಕ ಬೆಳ್ಳಿ ಪ್ರಕಾಶ್‌ ಈ ಸಲ ಚುನಾವಣೆಯಲ್ಲಿ ಪುನರಾಯ್ಕೆ ಆಗುವ ವಿಚಾರದಲ್ಲಿ ಯಾರಿಗಾದರೂ ಅನುಮಾನ ಇದೆಯಾ ಎಂದು ನೆರೆದವರನ್ನು ಪ್ರಶ್ನಿಸಿದರು.

ಹನುಮಂತಪ್ಪ ಅವರ ಈ ಪ್ರಶ್ನೆ ಕೇಳಿ ಶಾಸಕ ಬೆಳ್ಳಿ ಪ್ರಕಾಶ್‌ ಸೇರಿ ಎಲ್ಲರೂ ದಂಗಾಗಿಬಿಟ್ಟರು. ಮಾತುಮುಂದುವರಿಸಿದ ಹನುಮಂತಪ್ಪ, ಯಾರಿಗಾದರೂ ಅನುಮಾನ ಇದ್ದರೆ, ಬಾಜಿ ಕಟ್ಟಲು ಬನ್ನಿ ಎಂದು ಆಹ್ವಾನ ಇತ್ತು ಪರಿಸ್ಥಿತಿ ತಿಳಿಗೊಳಿಸಿದರು.

ಅಷ್ಟೇ ಅಲ್ಲ, ಮುಂದುವರಿದು ಶಾಸಕ ಬೆಳ್ಳಿ ಪ್ರಕಾಶ್‌ ಪುನರಾಯ್ಕೆ ಆಗುತ್ತಾರೆ. ನನಗೆ ನಂಬಿಕೆ ಇದೆ. ಇದೇ ಕಾರಣಕ್ಕೆ ಬಾಜಿಗೆ ಆಹ್ವಾನ ನೀಡಿರುವಂಥದ್ದು. ಈ ಸಲ ಬಾಜಿ ಕಟ್ಟುವುದಕ್ಕೆ ಒಂದು ಅಥವಾ ಎರಡು ಕೋಟಿ ರೂಪಾಯಿ ಇಡುವಂಥದ್ದಲ್ಲ, ನನ್ನ ಆಸ್ತಿಯನ್ನೇ ಬಾಜಿಗಿಡುತ್ತಿದ್ದೇನೆ ಎಂದು ಘೋಷಿಸಿದರು. ಈ ಪಂಥಾಹ್ವಾನ ಸ್ವೀಕರಿಸುವಂಥವರು ನನ್ನೊಂದಿಗೆ ಬಾಜಿಗೆ ಬನ್ನಿ ಎಂದು ಹನುಮಂತಪ್ಪ ಸವಾಲೆಸೆದರು.

ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಬಗ್ಗೆ ಏಕಿಷ್ಟು ಅಭಿಮಾನ?

ಶಾಸಕ ಬೆಳ್ಳಿ ಪ್ರಕಾಶ್‌ ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷರೂ ಆಗಿದ್ದು, ಕ್ಷೇತ್ರದಲ್ಲಿ ಬಹಳ ಜನಪ್ರಿಯತೆ ಕಾಯ್ದುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಬೆಳ್ಳಿ ಪ್ರಕಾಶ್‌ ಈ ಸಲವೂ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ.

ಇತ್ತೀಚೆಗೆ ಕಡೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳ್ಳಿ ಪ್ರಕಾಶ್‌ ಅವರ ಬಗ್ಗೆ ಮಾತನಾಡುತ್ತ, ಬೆಳ್ಳಿ ಪ್ರಕಾಶ್‌ ಮನೆಗೆ ಹೋದವರು ಬರಿಗೈಯಲ್ಲಿ ಮರಳಿದ್ದೇ ಇಲ್ಲ ಎಂದು ಹೇಳಿದ ಮಾತುಗಳು ಪ್ರಕಾಶ್‌ ಜನಪ್ರಿಯತೆಯನ್ನು ಸಾರಿ ಹೇಳಿದೆ.

ಬೆಳ್ಳಿ ಪ್ರಕಾಶ್‌ ಅವರನ್ನು ಒಮ್ಮೆ ನೋಡಿದರೆ ಸಾಕು, ಜೀವನದ ಉದ್ದಕ್ಕೂ ಅವರನ್ನು ಮರೆಯೋದು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಬೆಳ್ಳಿ ಪ್ರಕಾಶ್‌ ಅವರನ್ನು ತಮ್ಮ ಪುತ್ರನಂತೆಯೇ ನೋಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದು ಬೆಳ್ಳಿ ಪ್ರಕಾಶ್‌ ಅವರ ಪ್ರಭಾವವನ್ನು ಸೂಚಿಸುವಂಥದ್ದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ