logo
ಕನ್ನಡ ಸುದ್ದಿ  /  ಕರ್ನಾಟಕ  /  Aap On Shobha Karandlaje: ರಾಜ್ಯ ಚುನಾವಣಾ ಆಯೋಗದ ಕೆಲಸದಲ್ಲಿ ಶೋಭಾ ಕರಂದ್ಲಾಜೆ ಹಸ್ತಕ್ಷೇಪ; ಆಮ್​ ಆದ್ಮಿ ಆರೋಪ

AAP on Shobha Karandlaje: ರಾಜ್ಯ ಚುನಾವಣಾ ಆಯೋಗದ ಕೆಲಸದಲ್ಲಿ ಶೋಭಾ ಕರಂದ್ಲಾಜೆ ಹಸ್ತಕ್ಷೇಪ; ಆಮ್​ ಆದ್ಮಿ ಆರೋಪ

Meghana B HT Kannada

Apr 28, 2023 06:27 PM IST

google News

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

    • AAP on Shobha Karandlaje: ರಾಜ್ಯ ಚುನಾವಣಾ ಆಯೋಗದ ಕೆಲಸ ಕಾರ್ಯಗಳಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ. 
 ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು: ರಾಜ್ಯ ಚುನಾವಣಾ ಆಯೋಗದ (Karnataka Election Commission) ಕೆಲಸ ಕಾರ್ಯಗಳಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಹಿರಿಯ ವಕೀಲರು ಹಾಗೂ ಆಮ್ ಆದ್ಮಿ ಪಕ್ಷದ (Aam Aadmi Party) ರಾಜ್ಯ ಮಾಧ್ಯಮ ಮತ್ತು ಸಂವಹನ ಉಸ್ತುವಾರಿಗಳಾಗಿರುವ ಬ್ರಿಜೇಶ್ ಕಾಳಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, ಶೋಭಾ ಕರಂದ್ಲಾಜೆ ಅವರು ತಮ್ಮ ಕಾರ್ಯಕರ್ತರಿಗೆ ಕಾಗದ ಬರೆದಿದ್ದಾರೆ. ಯಾವ ಯಾವ ಮತಗಟ್ಟೆಗಳನ್ನು ಸೂಕ್ಷ್ಣ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಎಂದು ಘೋಷಿಸಬೇಕು, ಯಾವ ಭಾಗಗಳಲ್ಲಿ ಕೇಂದ್ರ ಸೇನಾಪಡೆಗಳು ಅಥವಾ ಅರೆ ಸೇನಾಪಡೆ ತುಕಡಿಗಳನ್ನು ನಿಯೋಜಿಸಬೇಕು ಎಂಬುದರ ಬಗ್ಗೆ ಕಾಗದದಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ಕೇಂದ್ರ ಸಚಿವರಾಗಿರುವ ಅವರು ಡಿಸಿ ಮತ್ತು ಎಸ್‌ಪಿಗಳನ್ನ ಸಂಪರ್ಕ ಮಾಡಿ ಈ ವಿವರವನ್ನ ಪಡೆಯಬೇಕು. ಅದನ್ನ ಬಿಟ್ಟು ತಮ್ಮ ಕಾರ್ಯಕರ್ತರಿಂದ ಈ ರೀತಿ ಮಾಹಿತಿ ಕಲೆ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಬಿಜೆಪಿ ಸರ್ಕಾರ ಬಿಟ್ಟು ಬೇರೆ ಯಾವುದಾದರೂ ಸರ್ಕಾರ ಅಧಿಕಾರಕ್ಕೆ ಬರದಿದ್ದರೇ ರಾಜ್ಯದಲ್ಲಿ ಕೋಮುಗಲಭೆ, ಕೋಮುಘರ್ಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಿರುವುದು ರಾಜ್ಯದ ಜನರಿಗೆ ಬೆದರಿಕೆ ಹಾಕಿರುವ ರೀತಿಯಾಗಿದೆ ಎಂದರು.

ಶೋಭಾ ಕರಂದ್ಲಾಜೆ ಅವರು ಬರೆದ ಕಾಗದ ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಏಕ ಪಕ್ಷಕ್ಕೆ ಅನುಕೂಲಗಳನ್ನ ಮಾಡಿ, ಬೇರೆ ಪಕ್ಷಗಳಿಗೆ ತೊಂದರೆಗಳನ್ನ ಉಂಟು ಮಾಡುವ ರೀತಿ ಕಾಣಿಸುತ್ತಿದೆ. ಒಂದು ರಾಜಕೀಯ ಪಕ್ಷ ಹಾಗೂ ಕೇಂದ್ರ ಗೃಹ ಸಚಿವರು ಈ ರೀತಿಯ ಬೆದರಿಕೆಯನ್ನ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.

ಇನ್ನೂ, ಚುನಾವಣಾ ಸ್ಟಾರ್ ಪ್ರಚಾರಕರಾಗಿ ಆಪ್ ಪಕ್ಷದ ಪಂಜಾಜ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ.

ಪಂಜಾಜ್ ಮುಖ್ಯಮಂತ್ರಿ ಶ್ರೀಭಗವಂತ್ ಮಾನ್ ಚುನಾವಣೆ ಪ್ರಚಾರ ವಿವರ

ಏಪ್ರಿಲ್ 30 ರಂದು ಚಂಡೀಗಢನಿಂದ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಚಿತ್ರದುರ್ಗದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿರುವ ಜಗದೀಶ್ ಪರವಾಗಿ ಬೃಹತ್ ಪ್ರಚಾರ ಮತ್ತು ಸಭೆಯನ್ನ ನಡೆಸಲಿದ್ದಾರೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಪ್ರಯಾಣಿಸಿದ ಬಳಿಕ ಬೆಂಗಳೂರಿನ ಪುಲಕೇಶಿನಗರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿರುವ ಸುರೇಶ್ ರಾಥೋಡ್ ಪರವಾಗಿ ಬೃಹತ್ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ.

ಮೇ 1 ರಂದು ಬೆಂಗಳೂರಿನ ದಾಸರಹಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿರುವ ಕೀರ್ತನ್ ಕುಮಾರ್ ಅವರಿಗೆ ಬೆಂಬಲಿಸಿ ಶ್ರೀಭಗವಂತ್ ಮಾನ್ ಅವರು ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಬೆಂಗಳೂರಿನಿಂದ ಬೀದರ್‌ಗೆ ತೆರಳಲಿದ್ದಾರೆ. ಬೀದರ್‌ ಜಿಲ್ಲೆಯ ಮನ್ನೆಖೇಳ್ಳಿಯಲ್ಲಿ ಬೃಹತ್ ಮಟ್ಟದ ಜನಸಭೆ ಕಾರ್ಯಕ್ರಮವನ್ನ ನಡೆಸಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ