logo
ಕನ್ನಡ ಸುದ್ದಿ  /  ಕರ್ನಾಟಕ  /  Koti Kanta Gayana: ಆಕಾಶ, ನೆಲ, ಜಲಗಳಲ್ಲಿ ನನ್ನ ನಾಡು ನನ್ನ ಹಾಡು ಕಾರ್ಯಕ್ರಮಕ್ಕೆ ನಾಳೆ ಚಾಲನೆ; ಏನಿದು ಕೋಟಿ ಕಂಠ ಗಾಯನ? ಇಲ್ಲಿದೆ ವಿವರ

Koti kanta gayana: ಆಕಾಶ, ನೆಲ, ಜಲಗಳಲ್ಲಿ ನನ್ನ ನಾಡು ನನ್ನ ಹಾಡು ಕಾರ್ಯಕ್ರಮಕ್ಕೆ ನಾಳೆ ಚಾಲನೆ; ಏನಿದು ಕೋಟಿ ಕಂಠ ಗಾಯನ? ಇಲ್ಲಿದೆ ವಿವರ

HT Kannada Desk HT Kannada

Oct 27, 2022 01:23 PM IST

google News

ನನ್ನ ನಾಡು, ನನ್ನ ಹಾಡು ಕೋಟಿ ಕಂಠ ಗಾಯನ

    • Koti kanta gayana Explained : ಕನ್ನಡ ಹಬ್ಬ, ಕರುನಾಡ ರಾಜ್ಯೋತ್ಸವಕ್ಕೂ ಮುನ್ನ ಜಗತ್ತಿನಾದ್ಯಂತ  ಆಗಸ, ನೆಲ, ಜಲಗಳಿಂದ ಕನ್ನಡ ʻಕೋಟಿʼ ಕಂಠ ಗಾಯನ ಅನುರಣಿಸಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ತಯಾರಿ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಹೇಳಿರುವುದೇನು? ಇಲ್ಲಿದೆ ವಿವರ. 
ನನ್ನ ನಾಡು, ನನ್ನ ಹಾಡು ಕೋಟಿ ಕಂಠ ಗಾಯನ
ನನ್ನ ನಾಡು, ನನ್ನ ಹಾಡು ಕೋಟಿ ಕಂಠ ಗಾಯನ

ಬೆಂಗಳೂರು: ಕನ್ನಡ ಹಬ್ಬ, ಕರುನಾಡ ರಾಜ್ಯೋತ್ಸವಕ್ಕೆ ಮೆರುಗು ನೀಡುವಂತೆ, ಉತ್ಸಾಹ, ಲವಲವಿಕೆ ತುಂಬುವಂತೆ ಅದಕ್ಕೆ ಪೂರ್ವಭಾವಿಯಾಗಿ ನಾಳೆ ಜಗತ್ತಿನಾದ್ಯಂತ ಆಗಸ, ನೆಲ, ಜಲಗಳಿಂದ ಕನ್ನಡ ʻಕೋಟಿʼ ಕಂಠ ಗಾಯನ ಅನುರಣಿಸಲಿದೆ.

ನಾಳೆ (ಅ.28) ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಅದ್ಧೂರಿ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ಸಿಗಲಿದೆ. ಆಕಾಶ, ನೆಲ ಮತ್ತು ಜಲಗಳಿಂದ ಕೋಟಿ ಕಂಠ ಗಾಯನದ ಧ್ವನಿ ಹೊರಹೊಮ್ಮಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕನ್ನಡದ ಅಭಿಮಾನ ಪ್ರತಿಭಟನೆಗೆ ಸೀಮಿತ ಆಗಬಾರದು. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಬೇಕು, ಬೆಳೆಸಬೇಕು. ಇನ್ನಷ್ಟು ಎತ್ತರಕ್ಕೆ ಏರಿಸಬೇಕು ಎಂಬುದು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲೂ ಇರುವಂಥದ್ದು. ಈ ಹಿನ್ನೆಲೆಯಲ್ಲಿ ಎಲ್ಲರ ಮನಸ್ಸುಗಳನ್ನು ಒಗ್ಗೂಡಿಸುವಂತಹ ಒಂದು ಒಳ್ಳೆಯ ಪ್ರಯತ್ನ ಕೋಟಿ ಕಂಠ ಗಾಯನ. ಕರ್ನಾಟಕದ ಎಲ್ಲ ಜನರನ್ನು ಈ ಗಾಯನದ ಮೂಲಕ ಒಂದುಗೂಡಿಸಬೇಕು. ಆ ಮೂಲಕ ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ವಿಶಾಲಗೊಳಿಸಬೇಕು. ಅದನ್ನು ಅಭಿಮಾನದಿಂದ ಹೇಳುವಂತೆ ಆಗಬೇಕು ಎಂಬುದು ನಮ್ಮ ಆಶಯ ಎಂದು ಸುನಿಲ್‌ ಕುಮಾರ್‌ ಹೇಳಿದರು.

ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನ ವಿಶೇಷ

1,12,00,000 - ನೋಂದಣಿ ಮಾಡಿಸಿದವರ ಸಂಖ್ಯೆ

10,000 - ಸ್ಥಳಗಳಲ್ಲಿ ಗಾಯನಕ್ಕೆ ವೇದಿಕೆ

46 ದೇಶಗಳಿಂದ ನೋಂದಣಿ

26 ರಾಜ್ಯಗಳ ಕನ್ನಡಿಗರು

19,000 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು

ಯಾವ ಆರು ಹಾಡುಗಳು

1. ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ

2. ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು

3. ಡಾ.ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ

4. ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ

5. ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ

6. ಡಾ. ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು

ನೆಲ, ಜಲ, ಆಗಸಗಳಲ್ಲಿ ಕಾರ್ಯಕ್ರಮ; ಎಲ್ಲೆಲ್ಲಿ?

ವಿಧಾನಸೌಧದ ಮೆಟ್ಟಿಲು  ಜೋಗ್‌ ಜಲಪಾತ  ಮೈಸೂರು ಅರಮನೆ  ಮಂಗಳೂರು, ಉಡುಪಿಯ ಸಮುದ್ರದಲ್ಲಿ  ವಿಮಾನ ಪ್ರಯಾಣ ಸೇರಿ ಹತ್ತಾರು ಕಡೆ ನನ್ನ ನಾಡು ನನ್ನ ಹಾಡು ಮೊಳಗಲಿದೆ.

'ದೇಶ- ವಿದೇಶಗಳಿಂದ ಈ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಕನ್ನಡಿಗರು ಉತ್ಸಾಹದಿಂದ ಮುಂದೆ ಬಂದಿದ್ದು, ನಾಳೆ ಕೋಟಿ ಕಂಠಗಳಲ್ಲಿ ಕನ್ನಡದ ವೃಂದ ಗಾಯನ ಮೊಳಗಿ ದಾಖಲೆ ಸೃಷ್ಟಿಯಾಗಲಿದೆ. ಈ ಕಾರ್ಯಕ್ರಮ ನಿಮಿತ್ತ ಇಲಾಖೆ ವತಿಯಿಂದ ಪ್ರತ್ಯೇಕ ಕ್ಯೂ ಆರ್ ಕೋಡ್ ಆರಂಭಿಸಲಾಗಿತ್ತು. ಮಂಗಳವಾರ ರಾತ್ರಿ ಕ್ಯೂ ಆರ್ ಕೋಡ್‍ನಲ್ಲಿ 1.1ಕೋಟಿ ಹೆಸರು ನೋಂದಣಿಯಾಗಿತ್ತು. ಇದೀಗ ಈ ಸಂಖ್ಯೆ1.10 ಕೋಟಿಗೆ ತಲುಪಿದೆ. ಮುಂದಿನ ಎರಡು ದಿನಗಳಲ್ಲಿ ಈ ಸಂಖ್ಯೆ 1.50 ಕೋಟಿ ಮೀರಲಿದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ ಸುನಿಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದ ನಿಮಿತ್ತ ಸಚಿವ ಸುನಿಲ್ಕುಮಾರ್ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಸಭೆಗಳು ನಡೆದಿವೆ. ಆಟೊ ಚಾಲಕರ ಸಂಘ, ಮಹಿಳಾ ಸ್ವಸಹಾಯ ಸಂಘ, ಸಹಕಾರಿ ಬ್ಯಾಂಕ್, ಗ್ರಾಮ ಪಂಚಾಯಿತಿ, ಐಟಿಬಿಟಿ ಉದ್ಯೋಗಿಗಳು, ವಿಶ್ವವಿದ್ಯಾಲಯ, ಶಾಲಾ- ಕಾಲೇಜು, ಚಾಲಕ ಸಂಘ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಸಂಘಟನೆಗಳ ಜತೆಗೆ ಸಚಿವರು ಖುದ್ದು ಸಭೆ ನಡೆಸಿದರು.

ರಾಜ್ಯ, ಗಡಿನಾಡು, ಸಾಗರೋತ್ತರ ಹೊರತುಪಡಿಸಿ ರಾಜ್ಯದ ಹದಿನೈದು ಸ್ಥಳಗಳಲ್ಲಿ ವಿಶೇಷ ಕಾರ್ತಕ್ರಮ ಆಯೋಜಿಸಲಾಗಿದೆ. ವಿಧಾನಸೌಧದ ಮೆಟ್ಟಿಲು, ಗಾಂ ಪ್ರತಿಮೆ, ಹೈಕೋರ್ಟ್, ಕಂಠೀರವ ಕ್ರೀಡಾಂಗಣ, ವಿಮಾನ, ರೈಲು, ಚಿತ್ರದುರ್ಗದ ಕೋಟೆ, ಕಡಲ ತೀರಗಳಲ್ಲಿ ಕನ್ನಡದ ಗೀತೆ ಮೊಳಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ