logo
ಕನ್ನಡ ಸುದ್ದಿ  /  ಕರ್ನಾಟಕ  /  Ksp Recruitment 2022: ಕರ್ನಾಟಕ ಸಶಸ್ತ್ರ ಮೀಸಲು ಪಡೆಯಲ್ಲಿ 3,484 ಕಾನ್ಸ್‌ಟೇಬಲ್‌ ಹುದ್ದೆ, ಇಂದಿನಿಂದ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ

KSP recruitment 2022: ಕರ್ನಾಟಕ ಸಶಸ್ತ್ರ ಮೀಸಲು ಪಡೆಯಲ್ಲಿ 3,484 ಕಾನ್ಸ್‌ಟೇಬಲ್‌ ಹುದ್ದೆ, ಇಂದಿನಿಂದ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ

Praveen Chandra B HT Kannada

Oct 19, 2022 11:31 AM IST

KSP recruitment 2022: ಕರ್ನಾಟಕ ಸಶಸ್ತ್ರ ಮೀಸಲು ಪಡೆಯಲ್ಲಿ 3,484 ಕಾನ್ಸ್‌ಟೇಬಲ್‌ ಹುದ್ದೆ

    • KSP recruitment 2022: ಇಂದಿನಿಂದ ಸಶಸ್ತ್ರ ಮೀಸಲು ಪಡೆಯಲ್ಲಿರುವ 3,484 ಕಾನ್ಸ್‌ಟೇಬಲ್‌ ಹುದ್ದಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು? ವಯೋಮಿತಿ ಏನಿರಬೇಕು? ವಿದ್ಯಾರ್ಹತೆ, ದೈಹಿಕ ಸಾಮರ್ಥ್ಯ ಏನಿರಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಶುಲ್ಕ ಎಷ್ಟು? ಇತ್ಯಾದಿ ಮಾಹಿತಿ ಇಲ್ಲಿದೆ.
KSP recruitment 2022: ಕರ್ನಾಟಕ ಸಶಸ್ತ್ರ ಮೀಸಲು ಪಡೆಯಲ್ಲಿ 3,484 ಕಾನ್ಸ್‌ಟೇಬಲ್‌ ಹುದ್ದೆ
KSP recruitment 2022: ಕರ್ನಾಟಕ ಸಶಸ್ತ್ರ ಮೀಸಲು ಪಡೆಯಲ್ಲಿ 3,484 ಕಾನ್ಸ್‌ಟೇಬಲ್‌ ಹುದ್ದೆ

KSP recruitment 2022: ಕರ್ನಾಟಕ ಪೊಲೀಸ್‌ ಪಡೆಯಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಈ ದೀಪಾವಳಿ ವೇಳೆಗೆ ಹಲವು ಅವಕಾಶಗಳಿವೆ. ರಾಜ್ಯ ಪೊಲೀಸ್‌ ಇಲಾಖೆಯು ಸಶಸ್ತ್ರ ಪೊಲೀಸ್‌ ಮೀಸಲು ಪಡೆ ಮತ್ತು ಸಿವಿಲ್‌ ಪೊಲೀಸ್‌ ವಿಭಾಗದಲ್ಲಿ ನೇಮಕಾತಿ ಆರಂಭಿಸಿದೆ. ಇಂದಿನಿಂದ ಸಶಸ್ತ್ರ ಮೀಸಲು ಪಡೆಯಲ್ಲಿರುವ 3,484 ಕಾನ್ಸ್‌ಟೇಬಲ್‌ ಹುದ್ದಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು? ವಯೋಮಿತಿ ಏನಿರಬೇಕು? ವಿದ್ಯಾರ್ಹತೆ, ದೈಹಿಕ ಸಾಮರ್ಥ್ಯ ಏನಿರಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಶುಲ್ಕ ಎಷ್ಟು? ಹೀಗೆ, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರಿಗೆ ಅನುಕೂಲವಾಗುವಂತಹ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಅಪ್‌ಡೇಟ್‌ (ಅಕ್ಟೋಬರ್‌ 28): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆಗೊಂಡಿದ್ದು, ಸಂಪೂರ್ಣ ಮಾಹಿತಿಯನ್ನು ಈ ಲಿಂಕ್‌ ಮೂಲಕ ಪಡೆದುಕೊಳ್ಳಿ

ಅರ್ಜಿ ಸಲ್ಲಿಕೆಗೆ ಆರಂಭ:ಅರ್ಜಿ ಸಲ್ಲಿಕೆಗೆ ಆರಂಭ: ಅಕ್ಟೋಬರ್‌ 19, 2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31, 2022 (ಅಪ್‌ಡೇಟ್‌: ನವೆಂಬರ್‌ 31 ಕೊನೆಯ ದಿನಾಂಕ)

ಶುಲ್ಕ ಪಾವತಿಗೆ ಕೊನೆ ದಿನ: ನವೆಂಬರ್ 03, 2022 (ಅಪ್‌ಡೇಟ್‌: ಡಿಸೆಂಬರ್‌ 2)

ವೇತನ ಎಷ್ಟು: 23500-47650 ರೂ.

ಹುದ್ದೆಗಳ ವಿವರ

ಒಟ್ಟು 3,484 ಸಶಸ ಪೊಲೀಸ್ ಕಾನ್ಸ್‌ಟೆಬಲ್ (ಸಿಎಆರ್/ಡಿಎಆರ್) ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು ಹುದ್ದೆಗಳ ಪೈಕಿ ಕಲ್ಯಾಣ-ಕರ್ನಾಟಕದ ಅಭ್ಯರ್ಥಿಗಳಿಗೆ 420 ಹುದ್ದೆಗಳನ್ನು ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯ ಲಿಂಗಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಈ ನೇಮಕದಲ್ಲಿ ಸುಮಾರು 79 ತೃತೀಯ ಲಿಂಗ ಪುರುಷ ಅಭ್ಯರ್ಥಿಗಳಿಗೆ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಅವಕಾಶ ದೊರಕಲಿದೆ.

ವಿದ್ಯಾರ್ಹತೆ ಏನಿರಬೇಕು?

ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ತತ್ಸಮಾನ ವಿದ್ಯಾರ್ಹತೆ ಎಂದರೆ ಸಿಬಿಎಸ್‌ಇ, ಐಸಿಎಸ್‌ಇ ಮಂಡಳಿಗಳು, ಇತರೆ ರಾಜ್ಯ ಸರಕಾರದ ಪರೀಕ್ಷಾ ಮಂಡಳಿಗಳು ನಡೆಸುವ 10ನೇ ತರಗತಿ ಪರೀಕ್ಷೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಓಪನ್ ಸ್ಕೂಲಿಂಗ್ ವತಿಯಿಂದ ನಡೆಸುವ ಪ್ರೌಢಶಿಕ್ಷಣ ಕೋರ್ಸ್ ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್ (ಕೆಒಎಸ್) ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು.

ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ವಯೋಮಿತಿ ಎಷ್ಟು?

ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ 18ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ/ ಪಂಗಡ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಎರಡು ವರ್ಷ ಹಾಗೂ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗ, ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳು 400 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಪಾವತಿಸಬಹುದು ಹಾಗೂ ಚಲನ್ ಡೌನ್‌ಲೋಡ್ ಮಾಡಿಕೊಂಡು ಕೆನರಾ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿಗಳಲ್ಲೂ ಪಾವತಿಸಬಹುದು. ಸೇವಾ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.

ದೈಹಿಕ ಅರ್ಹತೆಯೇನು?

ಅರ್ಜಿ ಸಲ್ಲಿಸುವ ಪುರುಷ ಅಭ್ಯರ್ಥಿಗಳು ಕನಿಷ್ಠ 168 ಸೆಂ.ಮೀ. ಎತ್ತರ ಇರಬೇಕು ಮತ್ತು 86 ಸೆಂ.ಮೀ. ಎದೆ ಸುತ್ತಳತೆ ಹೊಂದಿರಬೇಕು.

ಅರ್ಜಿ ಸಲ್ಲಿಸುವ ಮೊದಲು ಗಮನಿಸಿ

ಪರೀಕ್ಷೆ ಬರೆದು ಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2022ರ ಅಕ್ಟೋಬರ್ 31ರೊಳಗೆ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಗೆ ಸಂಬಂಧಿಸಿದ ಪರೀಕ್ಷೆಯ ಅಂಕಪಟ್ಟಿಯನ್ನು ಹೊಂದಿರಬೇಕು. ಒಬ್ಬರು ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದಲ್ಲಿ ಒಂದು ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಸಮಸ್ಯೆಗಳು ಕಂಡು ಬಂದಲ್ಲಿ ಸಹಾಯವಾಣಿಗೆ ಕರೆ ಮಾಡಿ

. ಅಂಚೆ ಮೂಲಕ ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ನೀಡಲಾಗುವುದಿಲ್ಲ. ನೇಮಕಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ. ಹಾಗಾಗಿ, ಅಭ್ಯರ್ಥಿಗಳು ಆಗಾಗ ವೆಬ್‌ಸೈಟ್ ವೀಕ್ಷಿಸುವಂತೆ ಸೂಚಿಸಲಾಗಿದೆ.

ಈ ಕೆಳಗೆ ಎರಡೂ ಅಧಿಸೂಚನೆಯ ಪಿಡಿಎಫ್‌ ಅಪ್ಲೋಡ್‌ ಮಾಡಲಾಗಿದ್ದು, ಆಸಕ್ತರು ಸಂಪೂರ್ಣ ಮಾಹಿತಿ ನೋಡಿಕೊಂಡು ಅರ್ಜಿ ಸಲ್ಲಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ