ಕನ್ನಡ ಸುದ್ದಿ  /  ಕರ್ನಾಟಕ  /  Summer Voting: ಬಿರುಬಿಸಿಲು, ಬಿಸಿಲ ಗಾಳಿಯ ವಾತಾವರಣ, ಮತ ಹಾಕಲು ನಿಮ್ಮ ಯೋಜನೆ ಹೀಗಿರಲಿ

Summer Voting: ಬಿರುಬಿಸಿಲು, ಬಿಸಿಲ ಗಾಳಿಯ ವಾತಾವರಣ, ಮತ ಹಾಕಲು ನಿಮ್ಮ ಯೋಜನೆ ಹೀಗಿರಲಿ

Umesha Bhatta P H HT Kannada

Apr 25, 2024 03:07 PM IST

ಮತದಾನಕ್ಕೆ ಸರದಿ ಸಾಲಿನಲ್ಲಿ ನಿಂತಾಗ ಬಿಸಿಲು ಬಾಧಿಸಬಹುದು,

    • ಲೋಕಸಭೆ ಚುನಾವಣೆಗೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ. ಈ ಬಾರಿ ಬಿಸಿಲಿನ ಪ್ರಮಾಣ ಅಧಿಕವಾಗಿರುವುದರಿಂದ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಮತದಾನಕ್ಕೆ ಸರದಿ ಸಾಲಿನಲ್ಲಿ ನಿಂತಾಗ ಬಿಸಿಲು ಬಾಧಿಸಬಹುದು,
ಮತದಾನಕ್ಕೆ ಸರದಿ ಸಾಲಿನಲ್ಲಿ ನಿಂತಾಗ ಬಿಸಿಲು ಬಾಧಿಸಬಹುದು,

ಬೆಂಗಳೂರು: ಸಾಮಾನ್ಯವಾಗಿ ಚುನಾವಣೆಗಳು ನಡೆಯುವುದು ಬೇಸಿಗೆಯಲ್ಲಿಯೇ. ಮಳೆಗಾಲದಲ್ಲಿಯಾದರೆ ಮತದಾನಕ್ಕೆ ಅಡಚಣೆಯಾಗಬಹುದು. ವ್ಯವಸ್ಥೆ ಕಲ್ಪಿಸಲು ಕಷ್ಟವಾಗಬಹುದು ಎನ್ನುವ ಕಾರಣವೂ ಇರಬಹುದು. ಈ ಕಾರಣದಿಂದಲೇ ಏಪ್ರಿಲ್‌ ಮೇ ತಿಂಗಳಲ್ಲಿಯೇ ಬಹುತೇಕ ಸಾರ್ವತ್ರಿಕ ಚುನಾವಣೆ ನಡೆದುಕೊಂಡು ಬಂದಿವೆ. ಈ ಬಾರಿಯೂ ಲೋಕಸಭೆ ಚುನಾವಣೆಗೆ ಇದೇ ಅವಧಿಯಲ್ಲಿಯೇ ಮತದಾನದ ದಿನಾಂಕಗಳನ್ನು ಘೋಷಿಸಲಾಗಿದ್ದು, ಮೊದಲ ಹಂತದ ಮತದಾನ ಮುಗಿದು ಎರಡನೇ ಹಂತಕ್ಕೆ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿವೆ. ಈ ಬಾರಿ ಬಿರು ಬಿಸಿಲು ಕೂಡ ಇರುವುದರಿಂದ ಮತದಾನಕ್ಕೆ ಅಡ್ಡಿಯಾಗದಿರಲು ಚುನಾವಣೆ ಆಯೋಗ ಮುನ್ನೆಚ್ಚರಿಕೆ ವಹಿಸಿದೆ. ಮತದಾನ ಮಾಡುವವರು ಬಿಸಿಲಿನಿಂದ ಝಳದಿಂದ ಹಾಗೂ ಬಿಸಿಲ ಗಾಳಿಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದರೆ ಒಳ್ಳೆಯದು ಎನ್ನುವ ಸಲಹೆಗಳೂ ಕೇಳಿ ಬಂದಿವೆ.

ಟ್ರೆಂಡಿಂಗ್​ ಸುದ್ದಿ

Mangalore News: ಮಂಗಳೂರಿನಲ್ಲಿ ಏಕಾಂಗಿ ವಿಮಾನ ಹಾರಾಟ ಬಯಸಿ ಪೊಲೀಸ್‌ ಅತಿಥಿಯಾದ ಪ್ರಯಾಣಿಕ !

Dakshin Kannada News: ಬಂಟ್ವಾಳದಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ಮಹಿಳೆ ಸೇರಿ ಕಾಸರಗೋಡಿನ ಇಬ್ಬರ ಬಂಧನ

HSRP Number Plate: ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಲ್ಲವೇ, ದಂಡ ಬೀಳುತ್ತೆ ಹುಷಾರು

Hassan Scandal: 16 ದಿನದ ನಂತರವೂ ಪ್ರಜ್ವಲ್‌ ನಾಪತ್ತೆ. ರೆಡ್ ಕಾರ್ನರ್ ನೋಟಿಸ್ ಜಾರಿಗೆ ಸಿದ್ದತೆ, ಮಾಹಿತಿಗೆ 1 ಲಕ್ಷ ರೂ. ಬಹುಮಾನ

ಈ ಬಾರಿ ಬೆಂಗಳೂರು, ಮೈಸೂರು ಭಾಗದಲ್ಲೂ ಬಿಸಿಲಿನ ಪ್ರಮಾಣ ಅಧಿಕವಾಗಿದೆ.ಬೆಂಗಳೂರಿನಲ್ಲಿ ಎರಡು ದಶಕದ ನಂತರ ಈ ಪ್ರಮಾಣದಲ್ಲಿ ಬಿಸಿಲಿನ ವಾತಾವರಣ ಕಂಡು ಬಂದಿದೆ. ಇನ್ನು ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಲೆನಾಡಿನ ಚಿಕ್ಕಮಗಳೂರು, ಹಾಸನ,ಕೊಡಗು, ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ, ಹಳೆ ಮೈಸೂರು ಭಾಗದ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲೂ ಶುಕ್ರವಾರ ಗರಿಷ್ಠ ಉಷ್ಣಾಂಶದ ಪ್ರಮಾಣ 36 ರಿಂದ 37 ಡಿಗ್ರಿ ಸೆಲ್ಸಿಯಸ್‌ ಇರುವ ಅಂದಾಜಿದೆ.

ಕೆಲವು ಕಡೆ ಇದು 38 ರಿಂದ 39 ಡಿಗ್ರಿ ಸೆಲ್ಸಿಯಸ್‌ ತಲುಪಲೂ ಬಹುದು ಎನ್ನುವ ಮುನ್ನೆಚ್ಚರಿಕೆ ನೀಡಲಾಗಿದೆ. ಮಳೆಯೂ ಶುಕ್ರವಾರ ಇಲ್ಲ ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಈಗಾಗಲೇ ತಿಳಿಸಿದೆ.

ಈ ಕಾರಣದಿಂದ ಮತದಾನಕ್ಕೆ ಹೋಗುವವರು ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.

ಚುನಾವಣೆ ಆಯೋಗವೂ ಸ್ಥಳೀಯರ ನೆರವಿನಿಂದ ಮತದಾನ ಕೇಂದ್ರಗಳಲ್ಲಿ ಆದಷ್ಟು ಮತದಾರರಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬೇಕಾದ ವ್ಯವಸ್ಥೆಗಳನ್ನು ಮಾಡಲು ಮುಂದಾಗಿದೆ.

ಆದರೂ ಮತದಾನ ಕೇಂದ್ರ ದೂರ ಇರುವವರು ಬಿಸಿಲಿನಲ್ಲಿಯೇ ಬಂದು ಹೋಗಬೇಕಾಗುವುದರಿಂದ ಪೂರ್ವ ತಯಾರಿ ಮಾಡಿಕೊಳ್ಳುವುದು ಸೂಕ್ತ ಎನ್ನುವುದು ಅಧಿಕಾರಿಗಳ ವಿವರಣೆ.

ಬಿಸಿಲ ಗಾಳಿ ಇಲ್ಲವೇ ಸೆಖೆಯ ವಾತಾವರಣದ ಕಾರಣಕ್ಕೆ ಮತದಾನ ಕೇಂದ್ರಗಳ ಸಿಬ್ಬಂದಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಚುನಾವಣೆ ಆಯೋಗ ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಿದೆ. ಈ ಕಾರಣದಿಂದ ಕೇಂದ್ರಗಳಲ್ಲಿ ಕುಡಿಯುವ ನೀರು, ಫ್ಯಾನಿನ ವ್ಯವಸ್ಥೆಗೂ ಒತ್ತು ನೀಡಲಾಗಿದೆ.

ನಿಮ್ಮ ತಯಾರಿ ಹೀಗಿರಲಿ

  • ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶವಿದೆ.
  • ಆದಷ್ಟು ಬೆಳಿಗ್ಗೆಯೇ ಬಂದು ನಿಮ್ಮ ಹಕ್ಕನ್ನು ನೀವು ಚಲಾವಣೆ ಮಾಡಬಹುದು
  • ಬೇಗನೇ ಬಂದು ಮತದಾನ ಮಾಡುವುದರಿಂದ ಬಿಸಿಲಿನಿಂದ ತಪ್ಪಿಸಿಕೊಳ್ಳಬಹುದು
  • ತಡ ಮಾಡಿ ಬಂದಷ್ಟು ಆನಂತರ ಬಿಸಿಲಿನಲ್ಲಿ ಸಿಲುಕುವ ಸಾಧ್ಯತೆಯು ಇರುತ್ತದೆ
  • ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಬಿಸಿಲಿನ ಪ್ರಮಾಣ ಹೆಚ್ಚಿರಲಿದೆ.
  • ಸಂಜೆ 4ರ ನಂತರ ಬಿಸಿಲಿನ ಪ್ರಮಾಣ ಕಡಿಮೆಯಾಗಲಿದೆ.
  • ಬೆಳಿಗ್ಗೆ ಆಗುವುದೇ ಇಲ್ಲ ಎನ್ನುವ ಸ್ಥಿತಿ ಇರುವವರು ಸಂಜೆಯೂ ಮತ ಹಾಕಬಹುದು
  • ಬೆಳಿಗ್ಗೆ ಹಾಗೂ ಸಂಜೆಯ ಮತದಾನ ಬೇಡ ಮಧ್ಯಾಹ್ನವೇ ಹೋಗುವುದಾದರೆ ಛತ್ರಿ ಜತೆಯಲ್ಲಿ ಇರಲಿ

ಇದನ್ನೂ ಓದಿರಿ: Mangalore News: ಆಸ್ಪತ್ರೆಯಿಂದ ಬಂದು ಲೋಕಸಭೆ ಚುನಾವಣೆಗೆ ಮನೆಯಲ್ಲಿ ಮತದಾನ ಮಾಡಿ ನಿಧನರಾದ ಮಾಜಿ ಸೈನಿಕ

  • ಜತೆಗೆ ಒಂದು ಬಾಟಲಿ ನೀರು, ಕರವಸ್ತ್ರಗಳನ್ನು ಜತೆಯಲ್ಲಿ ತೆಗೆದುಕೊಂಡು ಹೋಗಿ.
  • ಮತದಾನ ಮಾಡಲು ಹೋಗುವಾಗ ಹಣ್ಣು, ಜ್ಯೂಸ್‌ ಅನ್ನು ಸೇವಿಸುವುದು ಒಳ್ಳೆಯದು
  • ದೇಹವನ್ನು ನಿರ್ಜಲೀಕರಣ ಮಾಡಿಕೊಂಡು ಮತದಾನಕ್ಕೆ ಹೋಗಿ ತೊಂದರೆಗೆ ಸಿಲುಕಬೇಡಿ
  • ಮತದಾನ ಕೇಂದ್ರಗಳಲ್ಲೂ ಆದಷ್ಟು ನೆರಳು ಇರುವ ಕಡೆಯೇ ನಿಂತುಕೊಳ್ಳಿ
  • ಸರತಿ ಸಾಲಿನಲ್ಲಿ ನಿಲ್ಲುವ ಸನ್ನಿವೇಶ ಇರುವುದರಿಂದ ಬಿಸಿಲಿನಿಂದ ತಪ್ಪಿಸಿಕೊಳ್ಳುವುದು ಸೂಕ್ತ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ