ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವೇ ಅಗರಬತ್ತಿ ಉದ್ಯಮಕ್ಕಿಳಿದ ದೊಡ್ಮನೆ ಸೊಸೆ ಅಶ್ವಿನಿ ಪುನೀತ್; ಬ್ರಾಂಡ್‌ ಹೆಸರೂ ಅಷ್ಟೇ ಅರ್ಥಪೂರ್ಣ-sandalwood news ashwini puneeth rajkumar started the agarabatti business on the occasion of dr rajkumar birthday mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವೇ ಅಗರಬತ್ತಿ ಉದ್ಯಮಕ್ಕಿಳಿದ ದೊಡ್ಮನೆ ಸೊಸೆ ಅಶ್ವಿನಿ ಪುನೀತ್; ಬ್ರಾಂಡ್‌ ಹೆಸರೂ ಅಷ್ಟೇ ಅರ್ಥಪೂರ್ಣ

ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವೇ ಅಗರಬತ್ತಿ ಉದ್ಯಮಕ್ಕಿಳಿದ ದೊಡ್ಮನೆ ಸೊಸೆ ಅಶ್ವಿನಿ ಪುನೀತ್; ಬ್ರಾಂಡ್‌ ಹೆಸರೂ ಅಷ್ಟೇ ಅರ್ಥಪೂರ್ಣ

ಡಾ. ರಾಜ್‌ಕುಮಾರ್‌ ಸವಿನೆನಪಿನಲ್ಲಿಯೇ ಅವರ ಬರ್ತ್‌ಡೇ ದಿನವೇ ಅಗರಬತ್ತಿ ಉದ್ಯಮಕ್ಕೆ ಇಳಿದಿದ್ದಾರೆ ದೊಡ್ಮನೆ ಕಿರಿ ಸೊಸೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌. ಆ ಬ್ರಾಂಡ್‌ನ ಹೆಸರೂ ಅಷ್ಟೇ ಅರ್ಥಪೂರ್ಣವಾಗಿದೆ.

ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವೇ ಅಗರಬತ್ತಿ ಉದ್ಯಮಕ್ಕಿಳಿದ ದೊಡ್ಮನೆ ಸೊಸೆ ಅಶ್ವಿನಿ ಪುನೀತ್; ಬ್ರಾಂಡ್‌ ಹೆಸರೂ ಅಷ್ಟೇ ಅರ್ಥಪೂರ್ಣ
ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವೇ ಅಗರಬತ್ತಿ ಉದ್ಯಮಕ್ಕಿಳಿದ ದೊಡ್ಮನೆ ಸೊಸೆ ಅಶ್ವಿನಿ ಪುನೀತ್; ಬ್ರಾಂಡ್‌ ಹೆಸರೂ ಅಷ್ಟೇ ಅರ್ಥಪೂರ್ಣ

Ashwini Puneeth Rajkumar: ಬುಧವಾರವಷ್ಟೇ ನಟಸಾರ್ವಭೌಮ, ವರನಟ ಡಾ. ರಾಜ್‌ಕುಮಾರ್‌ ಅವರ 95ನೇ ಜಯಂತಿ. ಈ ವಿಶೇಷ ದಿನವನ್ನು ಅವರ ಅಭಿಮಾನಿಗಳು ಅಷ್ಟೇ ಅರ್ಥಪೂರ್ಣವಾಗಿಯೇ ಆಚರಿಸಿದ್ದಾರೆ. ರಾಜ್‌ಕುಮಾರ್‌ ಕುಟುಂಬವೂ ಬೆಂಗಳೂರಿನ ಕಂಠೀರವ ಸ್ಡುಡಿಯೋದಲ್ಲಿನ ಸಮಾಧಿ ಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆಯನ್ನೂ ಸಲ್ಲಿಸಿದೆ. ಸಮಾಧಿ ಬಳಿ ಅಭಿಮಾನಿಗಳಿಂದ ಅನ್ನದಾನ, ರಕ್ತದಾನ, ನೇತ್ರದಾನ ವಾಗ್ದಾನವೂ ನಡೆದಿದೆ. ಈ ವಿಶೇಷ ದಿನದಂದೇ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಹ ಹೊಸ ಸಾಹಸಕ್ಕೆ ಇಳಿದಿದ್ದಾರೆ.

ಪಿಆರ್‌ಕೆ ಪ್ರೊಡಕ್ಷನ್ಸ್‌ ಮೂಲಕ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಈಗ ರಾಜ್‌ಕುಮಾರ್‌ ಬರ್ತ್‌ಡೇ ದಿನವೇ, ಅಗರಬತ್ತಿ ಉದ್ಯಮಕ್ಕೆ ಇಳಿದಿದ್ದಾರೆ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಶೇರ್‌ ಮಾಡಿದ್ದಾರೆ. ಅಗರಬತ್ತಿಯ ಬಾಕ್ಸ್‌ ಮೇಲೆ ಪುನೀತ್‌ ರಾಜ್‌ಕುಮಾರ್‌ ಬಿಳಿ ವಸ್ತ್ರಧಾರಿಯಾಗಿ ಕಾಣಿಸಿದ್ದಾರೆ. ಅಪ್ಪುಸ್‌ ಗಂಧದಗುಡಿಯೆಂದೂ ಅಕ್ಷರಗಳಲ್ಲಿ ಬರೆಯಲಾಗಿದೆ. ಅಶ್ವಿನಿ ಅವರ ಈ ಹೊಸ ಕೆಲಸಕ್ಕೆ ಅಭಿಮಾನಿ ಬಳಗದಿಂದಲೂ ಮೆಚ್ಚುಗೆ ಸಿಕ್ಕಿದೆ.

ಗಂಧದ ಗುಡಿ ಹೆಸರಲ್ಲಿ ಉದ್ಯಮ 

"ಅಪ್ಪಾಜಿ ಅವರ ಸವಿನೆನಪಿನಲ್ಲಿ. ಇಂದು ಅಪ್ಪಾಜಿಯವರ 95ನೇ ಜನ್ಮ ದಿನಾಚರಣೆಯ ಅಂಗವಾಗಿ ಹಾಗೂ ಗಂಧದಗುಡಿ ಚಿತ್ರದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಇದನ್ನು ಅಪ್ಪು ಅವರ ಗಂಧದಗುಡಿ ಅಗರಬತ್ತಿಯ ಶುಭಾರಂಭದೊಂದಿಗೆ ಸ್ಮರಿಸೋಣ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಸದ್ಯ ಅಪ್ಪಾಜಿ ಜನ್ಮದಿಂದು ಇದರ ಘೋಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಸಿನಿಮಾ ನಿರ್ಮಾಣದ ಜತೆಗೆ ಇನ್ನೊಂದು ಹೆಜ್ಜೆ

ಪುನೀತ್‌ ರಾಜ್‌ಕುಮಾರ್‌ ಅಕಾಲಿಕ ನಿಧನದ ಬಳಿಕ, ಪಿಆರ್‌ಕೆ ಪ್ರೊಡಕ್ಷನ್‌ನ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡವರು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌. ಪುನೀತ್‌ ನಿರ್ಮಿಸಬೇಕಿದ್ದ ಸಿನಿಮಾಗಳು, ಅವರ ಇಷ್ಟದ ಕಥೆಗಳಿಗೆ ಅಶ್ವಿನಿ ಜೀವ ತುಂಬುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರವೀಣ್‌ ತೇಜ, ಆಶಿಕಾ ರಂಗನಾಥ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ O2 ಸಿನಿಮಾ ಬಿಡುಗಡೆಯಾಗಿತ್ತು. ಪುನೀತ್‌ ಕೇಳಿ ಇಷ್ಟ ಪಟ್ಟ ಕೊನೇ ಕಥೆ ಅದಾಗಿತ್ತು. ಅದನ್ನು ತೆರೆಮೇಲೆ ತಂದಿದ್ದರು ಅಶ್ವಿನಿ ಪುನೀತ್.‌

ಇನ್ನು ಉದ್ಯಮದ ಬಗ್ಗೆ ಹೇಳುವುದಾದರೆ, ಡಾ. ರಾಜ್‌ ಕುಟುಂಬದಿಂದ ಈ ವರೆಗೂ ಯಾರೂ ಉದ್ಯಮಕ್ಕೆ ಇಳಿದಿರಲಿಲ್ಲ. ರಾಘವೇಂದ್ರ ರಾಜ್‌ಕುಮಾರ್‌ IAS ಕೋಚಿಂಗ್‌ ಸೆಂಟರ್‌ ನಡೆಸುತ್ತಿರುವುದನ್ನು ಬಿಟ್ಟರೆ, ಬೇರಾವ ಬಿಸಿನೆಸ್‌ ಇಲ್ಲ. ಇದೀಗ ಪುನೀತ್‌ ಹೆಸರಿನಲ್ಲಿ, ಡಾ. ರಾಜ್‌ಕುಮಾರ್‌ ಅವರ ಸಿನಿಮಾ ಶೀರ್ಷಿಕೆಯನ್ನಿರಿಸಿಕೊಂಡು ಅಗರಬತ್ತಿ ಉದ್ಯಮಕ್ಕೆ ಇಳಿದಿದ್ದಾರೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌.