logo
ಕನ್ನಡ ಸುದ್ದಿ  /  ಕರ್ನಾಟಕ  /  Voting Awareness: ಮತದಾನ ಜಾಗೃತಿ ಮಾಡುತ್ತಿರುವ ಚಿಣ್ಣರ ತಂಡ, ಮೂರನೇ ಕ್ಲಾಸಿನ ಸನ್ನಿಧಿಯೇ ಲೀಡರ್

Voting Awareness: ಮತದಾನ ಜಾಗೃತಿ ಮಾಡುತ್ತಿರುವ ಚಿಣ್ಣರ ತಂಡ, ಮೂರನೇ ಕ್ಲಾಸಿನ ಸನ್ನಿಧಿಯೇ ಲೀಡರ್

HT Kannada Desk HT Kannada

May 06, 2023 02:46 PM IST

ಸನ್ನಿಧಿ ಕಶೆಕೋಡಿ

    • ಮತದಾನ ಜಾಗೃತಿಗಾಗಿ ಸರಕಾರಿ ಇಲಾಖೆಗಳು ನೀರಿನೊಳಗೆ ಮೀನುಗಳ ಬಳಿ ಫಲಕ ಹಿಡಿಯುವುದು, ಕಾಡಿನ ಮಧ್ಯ ಡ್ರೋಣ್ ಕ್ಯಾಮರಾದಲ್ಲಿ ದೋಣಿಗಳನ್ನು ನಿಲ್ಲಿಸಿ ‘ಮೇ 10’ ಎಂಬ ರಚನೆ ಮಾಡಿ ನಿಲ್ಲುವಂಥ ಗಿಮಿಕ್ ಗಳನ್ನು ಮಾಡುತ್ತಿದ್ದರೆ, ಇಲ್ಲೊಬ್ಬಳು ಪುಟಾಣಿ ಸದ್ದಿಲ್ಲದೆ ಮನೆ ಮನೆಗೆ ತೆರಳಿ, ವೋಟು ಮಾಡುವುದು ಎಷ್ಟು ಮಹತ್ವದ್ದು ಎಂಬುದನ್ನು ಸಾರಿ ಹೇಳುತ್ತಿದ್ದಾಳೆ.
ಸನ್ನಿಧಿ ಕಶೆಕೋಡಿ
ಸನ್ನಿಧಿ ಕಶೆಕೋಡಿ

ಮಂಗಳೂರು: "ಉರಿಬಿಸಿಲಿನಲ್ಲಿ ಯಾರು ಮಾರಾಯರೇ ಓಟು ಹಾಕಲು ಹೋಗುವುದು, ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವ" ಎಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೂರ್ಯನ ಪ್ರಖರ ಬಿಸಿಲಿಗೆ ಬೆವರೊರೆಸಿಕೊಳ್ಳುತ್ತಾ ಪ್ರೌಢವಯಸ್ಕರು ಹಿಂದೇಟು ಹಾಕುವ ಸನ್ನಿವೇಶದಲ್ಲಿ, ಇಲ್ಲೊಬ್ಬಳು ಪುಟಾಣಿ, ತನ್ನ ಸೈನ್ಯ ಕಟ್ಟಿಕೊಂಡು ಕುಂಟೆಬಿಲ್ಲೆ ಆಡುವ ಬದಲು ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾನ ಜಾಗೃತಿ (Voting Awareness) ಮಾಡುತ್ತಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

ಬರದ ನಡುವೆ ಗ್ಯಾರಂಟಿ ಜಾರಿ, ಪರಿಹಾರದ ಚೊಂಬು; ಸಿದ್ದರಾಮಯ್ಯ- ಡಿಕೆಶಿ ಜೋಡಿ ಸರ್ಕಾರಕ್ಕೆ ವರ್ಷ, ಹೇಗಿತ್ತು ಈ ಹಾದಿ, 10 ಅಂಶಗಳು

Hassan Scandal: ರೇವಣ್ಣಗೆ ಎರಡನೇ ಪ್ರಕರಣದಲ್ಲೂ ಜಾಮೀನು, ನ್ಯಾಯಾಧೀಶರ ಸೂಚನೆ ಏನು

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲೊಲ್ಲ, ಅದು ಬಿಜೆಪಿ ಅಪಪ್ರಚಾರವಷ್ಟೇ: ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಪೂರ್ವ ಮುಂಗಾರು; 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಇತ್ತೀಚಿನ 10 ಸುದ್ದಿ ಮುಖ್ಯಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸನ್ನಿಧಿ ಕಶೆಕೋಡಿ (Sannidhi Kashekodi), ತನ್ನದೇ ವಯಸ್ಸಿನ ನಾಲ್ಕೈದು ಪುಟ್ಟ ಮಕ್ಕಳನ್ನು ಸೇರಿಸಿಕೊಂಡು, ಮನೆ, ಅಂಗಡಿ, ಹೋಟೆಲ್, ಆಟೋ ನಿಲ್ದಾಣಗಳು, ಹೀಗೆ ಗುರುತು ಪರಿಚಯದವರಷ್ಟೇ ಅಲ್ಲ, ಅಪರಿಚಿತರನ್ನೂ ಮಾತಾಡಿಸಿ, ‘’ಅಣ್ಣ, ಎಲ್ಲೊಂಜಿ ಓಟು ಪಾಡ್ಲೆ, ಅವು ಕಡ್ಡಾಯ’’ (ನೀವು ಮತದಾನ ಮಾಡಿ, ಅದು ಕಡ್ಡಾಯ) ಎಂಬುದನ್ನು ತನ್ನ ಮುದ್ದಾದ ಮಾತಲ್ಲಿ ಮನದಟ್ಟು ಮಾಡುತ್ತಿದ್ದಾಳೆ. 9 ವರ್ಷದ ಈ ಪುಟ್ಟ ಬಾಲಕಿ, ರಜಾ ಮಜಾದೊಂದಿಗೆ ಸಮಾಜಮುಖಿಯಾಗಿ ಹೊರಟಿದ್ದರೆ, ಆಕೆಯ ತಂದೆ ಲೋಕೇಶ್ ಕಶೆಕೋಡಿ ಸಾಥ್ ನೀಡುತ್ತಿದ್ದಾರೆ.

ಉತ್ತಮ ಆಡಳಿತಕ್ಕಾಗಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂಬ ಘೋಷವಾಕ್ಯದೊಂದಿಗೆ ಸನ್ನಿಧಿ ಮನೆಯಿಂದ ಹೊರಡುತ್ತಾಳೆ. ಜನಬಾಹುಳ್ಯ ಪ್ರದೇಶಗಳಲ್ಲಿ ಪ್ರಚಾರ ಮಾಡುತ್ತಾಳೆ. ಮದುವೆ ಸಮಾರಂಭಗಳಿಗೂ ಹೋಗಿ ಮಾತನಾಡಿಸುತ್ತಾಳೆ. ಬಳಿಕ ಕಡ್ಡಾಯವಾಗಿ ಈ ಬಾರಿ ಮತದಾನ ಮಾಡಿ ಎನ್ನುತ್ತಾಳೆ. ಇವಳು ಹೀಗೆ ಹೇಳಿದಾಗ ಕೇಳಿಸಿಕೊಂಡವರೂ ಸುಮ್ಮನಿರುವುದಿಲ್ಲ. ಸಣ್ಣ ಮಗು ಹೀಗೆ ಹೇಳುತ್ತದಲ್ಲಾ ಎಂದು ಖುಷಿಯಾಗಿ ಚಾಕೊಲೇಟ್ ನೀಡುವುದೂ ಉಂಟು.

ಆ ಪಕ್ಷ, ಈ ಪಕ್ಷ ಎಂದೇನಿಲ್ಲ. ಪಕ್ಷ ಯಾವುದೇ ಇರಲಿ, ಪರವಾಗಿಲ್ಲ, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ತನ್ನ ತಂಡದೊಂದಿಗೆ ಸನ್ನಿಧಿ ಹೇಳುತ್ತಾ ಬರುತ್ತಿದ್ದಾಳೆ. ಮಾಣಿ ಬಾಲವಿಕಾಸ ಶಾಲೆಯಲ್ಲಿ 3ನೇ ತರಗತಿ ಮುಗಿಸಿರುವ ಈಕೆ, ಮತಗಟ್ಟೆಗೆ ಹೋಗಿ ಮತದಾನ ಮಾಡಿ, ಎಲ್ಲರೂ ಕಡ್ಡಾಯವಾಗಿ ಓಟು ಹಾಕಲು ಮತಗಟ್ಟೆಗೆ ಬನ್ನಿ ಎನ್ನುತ್ತಾಳೆ. ಸುಡುಬಿಸಿಲಿನಲ್ಲೂ ಓಟು ಹಾಕಲು ಕೇಳಲು ಸನ್ನಿಧಿ ತಂಡ ಹೋಗುವುದಿಲ್ಲ. ಬೆಳಗ್ಗೆ ಅಥವಾ ಸಂಜೆ ಸಮಯವನ್ನೇ ಆಯ್ಕೆ ಮಾಡುತ್ತದೆ. ಉಳಿದ ಸಂದರ್ಭ ಯಾವುದಾದರೂ ಆಟೋಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈಗಾಗಲೇ 130 ಮನೆಗಳಿಗೆ ಈ ತಂಡ ಭೇಟಿ ನೀಡಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

"ಮತದಾನ ಸಂವಿಧಾನ ದೊರಕಿಸಿಕೊಟ್ಟ ಮಹತ್ವದ ಹಕ್ಕು"- ಹೀಗೆಂದು ಇಡೀ ದೇಹವನ್ನು ಮುಚ್ಚಿಕೊಂಡು, ಆಮ್ಲಜನಕ ಬೆಂಬಲದ ದಿರಿಸುಗಳನ್ನು ಹಾಕಿಕೊಂಡು, ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ ನೇತ್ರಾಣಿ ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್ ಮಾಡಿ, ಫಲಕಗಳನ್ನು ಹಿಡಿದು ಫೊಟೋ ಕ್ಲಿಕ್ಕಿಸಿದ್ದು ಒಂದೆಡೆ. ‘’ಮೇ 10’’ ಎಂಬುದನ್ನು ಬಾನೆತ್ತರದಿಂದ ಡ್ರೋಣ್ ಕ್ಯಾಮರಾಗಳಿಗೆ ಕಾಣುವಂತೆ ದೋಣಿಗಳನ್ನು ನಿಲ್ಲಿಸಿ, ಉಡುಪಿ (Udupi) ಜಿಲ್ಲೆಯ ಸುಂದರ ಕಾಂಡ್ಲಾವನದ ಮಧ್ಯೆ ಇರುವ ಸೀತಾನದಿ ಹಿನ್ನೀರಿನ ಮ್ಯಾಂಗ್ರೋವ್ (Mangrove) ಮಧ್ಯದಲ್ಲಿ ಮತದಾನದ ಮಹತ್ವ, ಓಟು ಹಾಕುವುದು ನಮ್ಮ ಜವಾಬ್ದಾರಿ ಎಂದು ಸಾರುವ ದೃಶ್ಯ ಇನ್ನೊಂದೆಡೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ