logo
ಕನ್ನಡ ಸುದ್ದಿ  /  Photo Gallery  /  Karnataka Assembly Elections Foot March, Street Play On Voting Awareness By Bbmp At Lal Bagh Park

Voting Awareness: ಲಾಲ್​ಬಾಗ್ ಉದ್ಯಾನವನದಲ್ಲಿ ಮತದಾನ ಜಾಗೃತಿ ಕುರಿತು ಜಾಥ, ಬೀದಿ ನಾಟಕ

Apr 22, 2023 12:17 PM IST

ವಿಧಾನಸಭಾ ಚುನಾವಣೆಯ (Karnataka Assembly Elections) ಅಂಗವಾಗಿ ಲಾಲ್​ಬಾಗ್ ಉದ್ಯಾನವನದಲ್ಲಿ ಮತದಾನ ಜಾಗೃತಿ (Voting Awareness) ಕುರಿತು ಜಾಥ, ಬೀದಿ ನಾಟಕ ಹಮ್ಮಿಕೊಳ್ಳಲಾಗಿದ್ದು, ಮೇ 10 ರಂದು ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು.

  • ವಿಧಾನಸಭಾ ಚುನಾವಣೆಯ (Karnataka Assembly Elections) ಅಂಗವಾಗಿ ಲಾಲ್​ಬಾಗ್ ಉದ್ಯಾನವನದಲ್ಲಿ ಮತದಾನ ಜಾಗೃತಿ (Voting Awareness) ಕುರಿತು ಜಾಥ, ಬೀದಿ ನಾಟಕ ಹಮ್ಮಿಕೊಳ್ಳಲಾಗಿದ್ದು, ಮೇ 10 ರಂದು ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು.
ವಿಧಾನಸಭಾ ಚುನಾವಣೆಯ ಅಂಗವಾಗಿ ದಕ್ಷಿಣ ವಲಯದ ಲಾಲ್​ಬಾಗ್ ಪೂರ್ವ ದ್ವಾರದ ಬಳಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥ ಕಾರ್ಯಕ್ರಮಕ್ಕೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹಾಗೂ ವಲಯ ಆಯುಕ್ತ ಜಯರಾಮ್ ರಾಯಪುರ ಚಾಲನೆ ನೀಡಿದರು.
(1 / 5)

ಲಾಲ್​​​ಬಾಗ್ ಉದ್ಯಾನವನದಲ್ಲಿ ವಾಯುವಿಹಾರಕ್ಕೆ ಬಂದಂತಹ ನಾಗರಿಕರಲ್ಲಿ ಮತದಾನದ ದಿನವಾದ ಮೇ 10 ರಂದು ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು. ಜೊತೆಗೆ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿಲಾಯಿತು‌.
(2 / 5)

ಈ ವೇಳೆ ವಲಯ ಜಂಟಿ ಆಯುಕ್ತ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ. ಜಗದೀಶ್ ಕೆ. ನಾಯಕ್, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಉಪ ಆಯುಕ್ತೆ ಲಕ್ಷ್ಮೀ ದೇವಿ, ಕಂದಾಯ ಅಧಿಕಾರಿಗಳು, ಎನ್.ಸಿ.ಸಿ ವಿದ್ಯಾರ್ಥಿಗಳು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
(3 / 5)

ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನೆಲೆ ಹಾಸ್ಯ ನಟರಾದ ರಮಾನಂದರವರ ಗೆಜ್ಜೆ ಹೆಜ್ಜೆ ರಂಗತಂಡದಿಂದ ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. 
(4 / 5)

ಲಾಲ್​​ಬಾಗ್ ಪೂರ್ವ ದ್ವಾರ(ಡಬಲ್ ರೋಡ್) ದಿಂದ ಉದ್ಯಾನದೊಳಗೆ ಸಾಗಿ ಲಾಲ್​ಬಾಗ್ ಪಶ್ಚಿಮ ದ್ವಾರದವರೆಗೆ ತೆರಳಿ ಕಾಲ್ನಡಿಗೆ ಜಾಥವನ್ನು ಮುಕ್ತಾಯಗೊಳಿಸಲಾಯಿತು. 
(5 / 5)

    ಹಂಚಿಕೊಳ್ಳಲು ಲೇಖನಗಳು