logo
ಕನ್ನಡ ಸುದ್ದಿ  /  Karnataka  /  Mangaluru News Karnataka Election 2023 Congress Leader Rahul Gandhi Says Women Get Free Bus Service Bjp Jra

Rahul Gandhi: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ; ರಾಹುಲ್ ಗಾಂಧಿ ಹೊಸ ಭರವಸೆ

Jayaraj HT Kannada

Apr 28, 2023 09:46 AM IST

ರಾಹುಲ್‌ ಗಾಂಧಿ

    • “ನಾವು ಈಗಾಗಲೇ ನಾಲ್ಕು ಭರವಸೆಗಳನ್ನು ನೀಡಿದ್ದೇವೆ. ಈಗ ಅದಕ್ಕೆ ಮತ್ತೊಂದು ಭರವಸೆಯನ್ನು ಸೇರಿಸುತ್ತಿದ್ದೇನೆ. ನಮ್ಮ ಸರ್ಕಾರ ರಚನೆಯಾದ ಮೊದಲ ದಿನದಿಂದಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ ಸಿಗಲಿದೆ” ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly elections) ಕಣ ರಂಗೇರಿದೆ. ಪ್ರಬಲ ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಪ್ರಮುಖ ಭರವಸೆಗಳನ್ನು ನೀಡುವ ಮೂಲಕ ಮತಗಳನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ರಾಜ್ಯದಲ್ಲಿ ಪ್ರಚಾರ ಸಭೆಗಳನ್ನು ಆರಂಭಿಸಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮಹಿಳೆಯರಿಗೆ ಉಚಿತ ಬಸ್ ಸೇವೆಗಳನ್ನು ಒದಗಿಸಲಾಗುವುದು ಎಂದು ಗುರುವಾರ(ಏಪ್ರಿಲ್‌ 27) ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ

ಮೈಸೂರು ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ, ವೇಳಾಪಟ್ಟಿ, ಇತರೆ ವಿವರ ಪ್ರಕಟಿಸಿದ ಕೊಂಕಣ ರೈಲ್ವೆ

ಬಂದರು ನಗರಿ ಮಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ನಾವು ಈಗಾಗಲೇ ನಾಲ್ಕು ಭರವಸೆಗಳನ್ನು ನೀಡಿದ್ದೇವೆ. ಈಗ ಅದಕ್ಕೆ ಮತ್ತೊಂದು ಭರವಸೆಯನ್ನು ಸೇರಿಸುತ್ತಿದ್ದೇನೆ. ನಮ್ಮ ಸರ್ಕಾರ ರಚನೆಯಾದ ಮೊದಲ ದಿನದಿಂದಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ ಸಿಗಲಿದೆ” ಎಂದರು.

ಈ ನಡುವೆ ಭಾರತೀಯ ಜನತಾ ಪಕ್ಷವನ್ನು ಕಟುವಾಗಿ ಟೀಕಿಸಿದ ಅವರು, ಬಿಜೆಪಿಯು ಜನಾದೇಶವನ್ನು ಕದಿಯಲು ಸಜ್ಜಾಗಿದೆ ಎಂದು ಆರೋಪಿಸಿದರು. ಅಲ್ಲದೆ ಬಿಜೆಪಿಯು 40 ಪರ್ಸೆಂಟ್‌ ಸರ್ಕಾರ ಎಂದು ಗೇಲಿ ಮಾಡಿದರು.

ಕರ್ನಾಟಕದ ಮಹಿಳೆಯರಿಂದ ಶೇಕಡಾ 40ರಷ್ಟು ಹಣವನ್ನು ಕಸಿದುಕೊಳ್ಳುವುದು ಬಿಜೆಪಿಯ ಕೆಲಸವಾದರೆ, ರಾಜ್ಯದ ಹಣವನ್ನು ಮಹಿಳೆಯರಿಗೆ ವಾಪಸ್ ನೀಡುವುದು ನಮ್ಮ ಕೆಲಸ ಎಂದು ಅವರು ಹೇಳಿದರು. ಅಲ್ಲದೆ ಬಿಜೆಪಿಯು ಚುನಾವಣೆಯ ನಂತರ ಸಾರ್ವಜನಿಕರು ನೀಡಿದ ಜನಾದೇಶವನ್ನು ‘ಕದಿಯುತ್ತಿದ್ದಾರೆ’ ಎಂದು ಆರೋಪಿಸಿದರು.

ನಿಮ್ಮ ಮತಗಳಿಂದ ಬಿಜೆಪಿ ಸರ್ಕಾರ ರಚನೆಯಾಗಿಲ್ಲ. ಭ್ರಷ್ಟಾಚಾರದ ಹಣದಲ್ಲಿ ಶಾಸಕರನ್ನು ಖರೀದಿಸಿ ಬಿಜೆಪಿಯು ಜನಾದೇಶವನ್ನು ಕದ್ದಿದೆ. ಅವರು ಸಂವಿಧಾನವನ್ನು ನಾಶ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆಯಿಂದ ಹಿಡಿದು ಶಾಸಕರವರೆಗೆ ಎಲ್ಲವನ್ನೂ ಖರೀದಿಸಿದ್ದಾರೆ. ಬಿಜೆಪಿಯವರು ಜನರಿಗೆ ಸುವರ್ಣ ಭವಿಷ್ಯವನ್ನು ಕೊಡುತ್ತೇವೆಂದು ಅಧಿಕಾರ ಕೇಳುತ್ತಿದ್ದಾರೆ. ಆದರೆ ಅವರೇ ಮೂರು ವರ್ಷ ಅಧಿಕಾರದಲ್ಲಿದ್ದು ಏನು ಮಾಡಿದರು? ಎಂದು ಪ್ರಶ್ನಿಸಿದರು.

ಶಾಸಕರನ್ನು ಖರೀದಿಸುವ ಬಗ್ಗೆ‌ ಆ ಪಕ್ಷದ ಮುಖಂಡರೇ ಮಾತನಾಡುವ ರಾಜ್ಯದಲ್ಲಿ ನಿಮಗೆ 40 ಪರ್ಸೆಂಟ್ ಸರ್ಕಾರ ಬೇಕೇ? ಈ ಬಗ್ಗೆ ಕರ್ನಾಟಕ ಸಂಘ ಪ್ರಧಾನಿಗೆ ಪತ್ರ ಬರೆದಿದ್ದರೂ ಪ್ರಧಾನಿಯಿಂದ ಪ್ರತಿಕ್ರಿಯೆ ಬರಲಿಲ್ಲ. ಬಿಜೆಪಿ ಶಾಸಕರ ಪುತ್ರನೂ ರೆಡ್ ಹ್ಯಾಂಡ್ ಆಗಿ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದರು.

“ಒಂದೆಡೆ ಹಗರಣದ ಮೇಲೆ ಹಗರಣ, ಇನ್ನೊಂದೆಡೆ ಹಣದುಬ್ಬರ. ಪೆಟ್ರೋಲ್‌ಗೆ 90 ರೂಪಾಯಿ, ಗ್ಯಾಸ್‌ಗೆ 1100 ರೂಪಾಯಿ ಆಗಿದೆ. ಜಿಎಸ್‌ಟಿಯಿಂದ ಸಣ್ಣ ಉದ್ಯಮಗಳನ್ನು ಹಾಳು ಮಾಡಿದ್ದಾರೆ. ಇಂದು ಯುವಕರಿಗೆ ಉದ್ಯೋಗವಿಲ್ಲ. ಬಿಜೆಪಿ ಆಡಳಿತದಲ್ಲಿ 90 ಲಕ್ಷ ಸಣ್ಣ ಕಂಪನಿಗಳು ಬಾಗಿಲು ಮುಚ್ಚಿವೆ. ಇದು ಬಿಜೆಪಿ ತಂದ ಅಭಿವೃದ್ಧಿ” ಎಂದು ಅವರು ಟೀಕಿಸಿದರು.

ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಕ್ಕೆ ತಮ್ಮನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಗಿದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದರು. “ಭ್ರಷ್ಟಾಚಾರದ ಬಗ್ಗೆ ನಾನು ಪ್ರಶ್ನೆಗಳನ್ನು ಕೇಳಿದ್ದಕ್ಕೆ, ನನ್ನನ್ನು ಸಂಸತ್ತಿನಿಂದ ಅನರ್ಹಗೊಳಿಸಿದರು. ನಾನು ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಕೇಳಿದ್ದೆ,” ಎಂದು ರಾಹುಲ್ ಗಾಂಧಿ ಹೇಳಿದರು.

ಮಾರ್ಚ್ 29ರಂದು ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು. ರಾಜ್ಯದ ಒಟ್ಟು 224 ಸ್ಥಾನಗಳ ವಿಧಾನಸಭೆಗೆ ಮೇ 10ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು