logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka News: ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರ ನೇಮಕ; ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರ್‌ ಅಶೋಕ್​ ಅಧ್ಯಕ್ಷ

Karnataka News: ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರ ನೇಮಕ; ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರ್‌ ಅಶೋಕ್​ ಅಧ್ಯಕ್ಷ

HT Kannada Desk HT Kannada

Aug 12, 2023 01:19 PM IST

ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರ್‌ ಅಶೋಕ್​ ಅಧ್ಯಕ್ಷ

    • R Ashok: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಬಹು ಮುಖ್ಯವಾದ ಸಮಿತಿಯಾಗಿದ್ದು ಪ್ರತಿಪಕ್ಷದ ಸದಸ್ಯರೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಬಿಜೆಪಿಯ ಆರ್‌. ಅಶೋಕ್​ ಅಧ್ಯಕ್ಷರಾಗಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರ್‌ ಅಶೋಕ್​ ಅಧ್ಯಕ್ಷ
ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರ್‌ ಅಶೋಕ್​ ಅಧ್ಯಕ್ಷ

ಬೆಂಗಳೂರು: 2023–24ನೇ ಸಾಲಿನ ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ, ಹಕ್ಕು ಬಾಧ್ಯತೆಗಳ ಸಮಿತಿಗಳು ಪ್ರಮುಖವಾದ ಸಮಿತಿಗಳು. ಇವುಗಳಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಬಹು ಮುಖ್ಯವಾದ ಸಮಿತಿಯಾಗಿದ್ದು ಪ್ರತಿಪಕ್ಷದ ಸದಸ್ಯರೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಬಿಜೆಪಿಯ ಆರ್‌. ಅಶೋಕ್​ ಅಧ್ಯಕ್ಷರಾಗಿದ್ದಾರೆ. ಸರಕಾರದ ಒಂದೊಂದು ರೂಪಾಯಿಯೂ ಹೇಗೆ ವೆಚ್ಚವಾಯಿತು ಎಂದು ಈ ಸಮಿತಿ ಹದ್ದಿನ ಕಣ್ಣಿಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ: ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಬೆಂಗಳೂರು: ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಜಾಯ್‌ ರೈಡ್‌, ಯುವಕನ ಬಂಧನ, ಡಿಎಲ್ ಅಮಾನತಿಗೆ ಶಿಫಾರಸು

ಕರ್ನಾಟಕ ಹವಾಮಾನ ಮೇ 20; ದಕ್ಷಿಣ ಕನ್ನಡ, ಉಡುಪಿ ಸೇರಿ 8ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

ಸಾರ್ವಜನಿಕ ಲೆಕ್ಕಪತ್ರ ಸಮಿತಿ: ವಿಧಾನಸಭೆ ಸದಸ್ಯರು– ಆರ್‌. ಅಶೋಕ್ (ಅಧ್ಯಕ್ಷ), ಆರ್‌.ವಿ. ದೇಶಪಾಂಡೆ, ಎನ್‌.ವೈ. ಗೋಪಾಲಕೃಷ್ಣ, ಬಸವರಾಜ ರಾಯರಡ್ಡಿ, ಎಚ್.ವೈ. ಮೇಟಿ, ಎಚ್.ಸಿ. ಬಾಲಕೃಷ್ಣ, ಎಸ್‌. ಆರ್‌. ಶ್ರೀನಿವಾಸ (ವಾಸು), ಲಕ್ಷ್ಮಣ ಸವದಿ, ಜಿ.ಟಿ. ದೇವೇಗೌಡ, ಎನ್‌.ಎ. ಹ್ಯಾರಿಸ್‌, ಸಿ.ಸಿ. ಪಾಟೀಲ, ಎಸ್.ಆರ್‌. ವಿಶ್ವನಾಥ, ವಿ. ಸುನೀಲ್‌ಕುಮಾರ, ರಿಜ್ವಾನ್‌ ಅರ್ಷದ್‌, ರಾಘವೇಂದ್ರ ಹಿಟ್ನಾಳ. ವಿಧಾನ ಪರಿಷತ್‌ ಸದಸ್ಯರು– ಜಗದೀಶ ಶೆಟ್ಟರ್‌, ಬಿ.ಕೆ. ಹರಿಪ್ರಸಾದ್‌, ಶಶೀಲ್‌ ನಮೋಶಿ, ಶರವಣ, ಪ್ರತಾಪಸಿಂಹ ನಾಯಕ.

ಸಾರ್ವಜನಿಕ ಉದ್ದಿಮೆಗಳ ಸಮಿತಿ: ವಿಧಾನಸಭೆ ಸದಸ್ಯರು– ತನ್ವೀರ್‌ ಸೇಠ್ (ಅಧ್ಯಕ್ಷ), ಬಸನಗೌಡ ಪಾಟೀಲ ಯತ್ನಾಳ, ಜಿ.ಕೆ. ವೆಂಕಟಶಿವಾರೆಡ್ಡಿ, ಸಿ.ಎನ್‌. ಅಶ್ವತ್ಥನಾರಾಯಣ, ಎಂ. ಸತೀಶ್ ರೆಡ್ಡಿ, ಯು.ಬಿ. ಬಣಕಾರ್‌, ಡಾ. ಅಜಯ್‌ ಸಿಂಗ್‌, ಡಿ.ಜಿ. ಶಾಂತನಗೌಡ, ಎ.ಆರ್‌. ಕೃಷ್ಣಮೂರ್ತಿ, ಎ.ಬಿ. ರಮೇಶ ಬಂಡಿಸಿದ್ದೇಗೌಡ, ವಿನಯ್‌ ಕುಲಕರ್ಣಿ, ಬಿ.ಎ. ಬಸವರಾಜ, ವಿಜಯಾನಂದ ಕಾಶಪ್ಪನವರ್‌, ಟಿ.ಡಿ. ರಾಜೇಗೌಡ, ಜಿ. ಜನಾರ್ದನ ರೆಡ್ಡಿ. ವಿಧಾನ ಪರಿಷತ್‌ ಸದಸ್ಯರು– ಪ್ರಕಾಶ್ ಹುಕ್ಕೇರಿ, ಎಸ್‌. ರವಿ, ಹನುಮಂತ ನಿರಾಣಿ, ಸಿ.ಎನ್‌. ಮಂಜೇಗೌಡ, ಛಲವಾದಿ ನಾರಾಯಣಸ್ವಾಮಿ

ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ: ವಿಧಾನಸಭೆ ಸದಸ್ಯರು– ಪಿ.ಎಂ. ನರೇಂದ್ರಸ್ವಾಮಿ (ಅಧ್ಯಕ್ಷ), ಬಿ.ಜಿ. ಗೋವಿಂದಪ್ಪ, ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ಅಬ್ಬಯ್ಯ ಪ್ರಸಾದ, ಎಸ್.ಎನ್‌. ನಾರಾಯಣಸ್ವಾಮಿ, ಮಾನಪ್ಪ ಡಿ. ವಜ್ಜಲ, ಬಸನಗೌಡ ದದ್ದಲ, ಅನಿಲ್‌ ಚಿಕ್ಕಮಾದು, ಬಸವರಾಜ್‌ ಮತ್ತಿಮೂಡ್‌, ಎನ್‌. ಶ್ರೀನಿವಾಸಯ್ಯ, ಕೆ.ಸಿ. ವೀರೇಂದ್ರ ಪಪ್ಪಿ, ಪ್ರಕಾಶ ಕೋಳಿವಾಡ, ಕೃಷ್ಣ ನಾಯಕ, ಸಿಮೆಂಟ್‌ ಮಂಜು, ಕರೆಮ್ಮ. ವಿಧಾನ ಪರಿಷತ್‌– ಕೋಟ ಶ್ರೀನಿವಾಸ ಪೂಜಾರಿ, ಅರವಿಂದ್‌ ಕುಮಾರ್‌ ಅರಳಿ, ಶಾಂತಾರಾಮ್‌ ಬುಡ್ನ ಸಿದ್ದಿ, ರಾಜೇಂದ್ರ ರಾಜಣ್ಣ, ವೈ.ಎಂ. ಸತೀಶ್‌.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ: ವಿಧಾನಸಭೆ ಸದಸ್ಯರು– ಸಿ. ಪುಟ್ಟರಂಗಶೆಟ್ಟಿ (ಅಧ್ಯಕ್ಷ), ರಮೇಶ ಜಾರಕಿಹೊಳಿ, ಎಚ್.ಆರ್‌. ಗವಿಯಪ್ಪ, ಹರೀಶ್‌ ಪೂಂಜಾ, ಎಚ್.ಎ. ಇಕ್ಬಾಲ್‌ ಹುಸೇನ್, ಭೀಮಣ್ಣ ಟಿ. ನಾಯಕ, ಬಸವರಾಜು ಶಿವಗಂಗಾ, ಕೆ. ಹರೀಶ್ ಗೌಡ, ರವಿಶಂಕರ್ ಡಿ., ಆಸೀಫ್ (ರಾಜು) ಸೇಠ್, ಬಿ.ಬಿ. ಚಿಮ್ಮನಕಟ್ಟಿ, ಚನ್ನಬಸಪ್ಪ (ಚೆನ್ನಿ), ಎಚ್‌.ಕೆ. ಸುರೇಶ್‌ (ಹುಲ್ಲಳ್ಳಿ ಸುರೇಶ್‌), ಧೀರಜ್‌ ಮುನಿರಾಜು, ಶರಣಗೌಡ ಕಂದಕೂರ, ವಿಧಾನ ಪರಿಷತ್ತಿನ ಸದಸ್ಯರು– ವೈ.ಎ. ನಾರಾಯಣಸ್ವಾಮಿ, ಕೆ. ಅಬ್ದುಲ್‌ ಜಬ್ಬಾರ್‌, ಗಣಪತಿ ದುಮ್ಮಾ ಉಳ್ವೇಕರ್‌, ಎಸ್‌.ಎಸ್‌. ಗೋಪಿನಾಥ್‌, ಕೇಶವ ಪ್ರಸಾದ್‌ ಎಸ್‌.

ಹಕ್ಕು ಬಾಧ್ಯತೆಗಳ ಸಮಿತಿ: ವಿಧಾನಸಭೆಯ ಸದಸ್ಯರು– ಬಿ.ಆರ್‌. ಪಾಟೀಲ (ಅಧ್ಯಕ್ಷ), ತನ್ವೀರ್‌ ಸೇಠ್‌, ಎನ್‌.ಎ. ಹ್ಯಾರಿಸ್‌, ಅಜಯ್‌ ಧರ್ಮಸಿಂಗ್‌, ಎ.ಆರ್‌.ಕೃಷ್ಣಮೂರ್ತಿ, ಅರವಿಂದ ಬೆಲ್ಲದ, ಕೆ.ಗೋಪಾಲಯ್ಯ, ಕೆ.ವೈ.ನಂಜೇಗೌಡ, ಭರತ್‌ ಶೆಟ್ಟಿ ವೈ., ಡಿ.ವೇದವ್ಯಾಸ ಕಾಮತ್‌, ಎಚ್‌.ಡಿ ಮಂಜು.

ಖಾಸಗಿ ಸದಸ್ಯರ ಮಸೂದೆ ಮತ್ತು ನಿರ್ಣಯಗಳ ಸಮಿತಿ: ವಿಧಾನಸಭೆಯ ಸದಸ್ಯರು– ರುದ್ರಪ್ಪ ಮಾನಪ್ಪ ಲಮಾಣಿ(ಅಧ್ಯಕ್ಷ), ಅಪ್ಪಾಜಿ ನಾಡಗೌಡ, ಶಿವಾನಂದ ಕೌಜಲಗಿ, ಎಲ್‌.ಎ.ರವಿಸುಬ್ರಹ್ಮಣ್ಯ, ಎಂ.ಟಿ.ಕೃಷ್ಣಪ್ಪ, ರಿಜ್ವಾನ್‌ ಅರ್ಷದ್‌, ಶಶಿಕಲಾ ಜೊಲ್ಲೆ, ಶರತ್‌ ಬಚ್ಚೇಗೌಡ, ಎಂ.ರೂಪಕಲಾ, ಉದಯ ಗರುಡಾಚಾರ್‌, ಎ.ಸಿ.ಶ್ರೀನಿವಾಸ.

ಅರ್ಜಿಗಳ ಸಮಿತಿ: ವಿಧಾನಸಭೆಯ ಸದಸ್ಯರು– ರುದ್ರಪ್ಪ ಮಾನಪ್ಪ ಲಮಾಣಿ (ಅಧ್ಯಕ್ಷ), ಎಸ್‌.ಸುರೇಶ್‌ ಕುಮಾರ್, ಈ.ತುಕಾರಾಮ್‌, ಎ.ಮಂಜು, ಸಿ.ಬಿ.ಸುರೇಶ್‌ ಬಾಬು, ಬಿ.ಶಿವಣ್ಣ, ಎಸ್‌.ಟಿ.ಸೋಮಶೇಖರ್, ಅರಬೈಲ್‌ ಶಿವರಾಂ ಹೆಬ್ಬಾರ್, ಎಚ್‌.ಡಿ.ರಂಗನಾಥ್‌, ಉಮಾನಾಥ್‌ ಕೋಟ್ಯಾನ್‌, ಮಂತರ್‌ಗೌಡ, ಎಚ್‌.ಡಿ.ತಮ್ಮಯ್ಯ, ಪ್ರದೀಶ್ ಈಶ್ವರ್, ಎ.ಸಿ.ಶ್ರೀನಿವಾಸ್‌, ಆನಂದ್ ಕೆ.ಎಸ್‌, ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ.

ವಸತಿ ಸೌಕರ್ಯ ಸಮಿತಿ: ವಿಧಾನಸಭೆಯ ಸದಸ್ಯರು– ರುದ್ರಪ್ಪ ಮಾನಪ್ಪ ಲಮಾಣಿ (ಅಧ್ಯಕ್ಷ), ಶಿವರಾಜ್‌ ಪಾಟೀಲ, ಸತೀಶ್‌ ಕೃಷ್ಣ ಸೈಲ್‌, ಶರಣು ಸಲಗರ, ರವಿಶಂಕರ್‌ ಡಿ, ವೆಂಕಟೇಶ ಎಚ್‌.ವಿ, ವಿಶ್ವಾಸ್‌ ವಸಂತ್‌ ವೈದ್ಯ, ಜಗದೀಶ ಶಿವಯ್ಯ ಗುಡಗುಂಟಿ, ಸಿದ್ದುಪಾಟೀಲ, ಯಶಪಾಲ್ ಸುವರ್ಣ, ಮಹೇಶ್ ಟೆಂಗಿನಕಾಯಿ, ಸ್ವರೂಪ್ ಪ್ರಕಾಶ್‌, ಬಿ.ಎನ್.ರವಿಕುಮಾರ್‌.

ವರದಿ: ಎಚ್. ಮಾರುತಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ