logo
ಕನ್ನಡ ಸುದ್ದಿ  /  ಕರ್ನಾಟಕ  /  Summer Camps: ಮೈಸೂರು, ಕಲಬುರಗಿ ರಂಗಾಯಣದಲ್ಲಿ ಬೇಸಿಗೆ ಚಿಣ್ಣರಮೇಳ, ಮಂಡ್ಯ ರಮೇಶ್‌ ನಟನದಲ್ಲಿ ರಜಾ ಮಜಾ

Summer Camps: ಮೈಸೂರು, ಕಲಬುರಗಿ ರಂಗಾಯಣದಲ್ಲಿ ಬೇಸಿಗೆ ಚಿಣ್ಣರಮೇಳ, ಮಂಡ್ಯ ರಮೇಶ್‌ ನಟನದಲ್ಲಿ ರಜಾ ಮಜಾ

Umesha Bhatta P H HT Kannada

Mar 31, 2024 07:17 PM IST

ಮೈಸೂರಿನಲ್ಲಿ ರಂಗಾಯಣದ ಚಿಣ್ಣರ ಮೇಳ, ಮಂಡ್ಯ ರಮೇಶ್‌ ಅವರ ನಟನಾ ರಜಾ ಮಜಾ ಪ್ರಮುಖವಾದವು.,

    • ಮಕ್ಕಳನ್ನು ಬೇಸಿಗೆ ಶಿಬಿರಕ್ಕೆಸೇರಿಸಬೇಕೇ, ಇಲ್ಲಿದೆ ಮೈಸೂರು, ಕಲಬುರಗಿಯ ರಂಗ ಚಟುವಟಿಕೆಗಳ ವಿವರ.
ಮೈಸೂರಿನಲ್ಲಿ ರಂಗಾಯಣದ ಚಿಣ್ಣರ ಮೇಳ, ಮಂಡ್ಯ ರಮೇಶ್‌ ಅವರ ನಟನಾ ರಜಾ ಮಜಾ ಪ್ರಮುಖವಾದವು.,
ಮೈಸೂರಿನಲ್ಲಿ ರಂಗಾಯಣದ ಚಿಣ್ಣರ ಮೇಳ, ಮಂಡ್ಯ ರಮೇಶ್‌ ಅವರ ನಟನಾ ರಜಾ ಮಜಾ ಪ್ರಮುಖವಾದವು.,

ಮೈಸೂರು/ ಕಲಬುರಗಿ: ಕರ್ನಾಟಕದಲ್ಲಿರುವ ಐದು ರಂಗಾಯಣದಲ್ಲಿ ಮೈಸೂರು ರಂಗಾಯಣ ಎರಡು ದಶಕದಿಂದಲೂ ಚಿಣ್ಣರ ಮೇಳವನ್ನು ಆಯೋಜಿಸಿಕೊಂಡು ಬರುತ್ತಿದೆ. ಮಕ್ಕಳಿಗೆ ಬೇಸಿಗೆ ರಜೆಯ ದಿನಗಳಲ್ಲಿ ರಂಗಭೂಮಿಯ ಕುರಿತು ಆಸಕ್ತಿ ಬೆಳೆಸುವುದು. ಒಂದು ತಿಂಗಳಿಗೂ ಅಧಿಕ ಕಾಲ ರಂಗಾಯಣದ ಆವರಣದಲ್ಲಿದ್ದುಕೊಂಡು ಹತ್ತಾರು ಚಟುವಟಿಕೆಗಳನ್ನು ಕಲಿಯಲು ನೆರವಾಗಲಿದೆ. ಇದೇ ರೀತಿಯಲ್ಲಿ ಕಲಬುರಗಿ ರಂಗಾಯಣವೂ ಕೂಡ ಚಿಣ್ಣರ ಮೇಳವನ್ನು ನಡೆಸಿಕೊಂಡು ಬರುತ್ತಿದೆ. ಈ ವರ್ಷದ ಚಟುವಟಿಕೆಗಳು ಏಪ್ರಿಲ್‌ ಮೊದಲ ವಾರದಲ್ಲಿ ಆರಂಭಗೊಳ್ಳಲಿವೆ. ಇದಕ್ಕಾಗಿ ಸಿದ್ದತೆಗಳೂ ರಂಗಾಯಣದ ಆವರಣದಲ್ಲಿ ನಡೆದಿವೆ.

ಟ್ರೆಂಡಿಂಗ್​ ಸುದ್ದಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

ಮಕ್ಕಳೊಂದಿಗೆ ಅತೀ ಸೂಕ್ಷ್ಮ ವರ್ತನೆ ಅಗತ್ಯ. ಅವರ ಕಲ್ಪನೆಗಳು ಮುಕ್ಕಾಗದ ಹಾಗೆ ಅವರ ಭಾಷೆ, ಭಾವಗಳನ್ನು ಅರ್ಥಮಾಡಿಕೊಂಡು ಅವರದ್ದೇ ಲೋಕವನ್ನು ಒಲವಿನ ಒಡನಾಟದೊಂದಿಗೆ ಉಲ್ಲಾಸ ಸಂತಸದ ವಾತಾವರಣವನ್ನು ನಿರ್ಮಿಸಿ ಮಕ್ಕಳು ನಲಿಯುತ್ತ ಕಲಿಯುವ ಪ್ರಕ್ರಿಯೆಗೆ ತೊಡಗಿಸುವ ಉದ್ದೇಶವೇ ‘ಚಿಣ್ಣರಮೇಳ'.

ಬೇಸಿಗೆ ಬಂದರೆ ಮಕ್ಕಳ ನಿರ್ವಹಣೆ ಸುಲಭವಲ್ಲ. ಇದಕ್ಕಾಗಿಯೇ ಪೋಷಕರು ಮಕ್ಕಳನ್ನು ಅವರ ಆಸಕ್ತಿಗೆ ಅನುಗುಣವಾಗಿ ಬೇಸಿಗೆ ಶಿಬಿರಗಳಿಗೆ ಹಾಕುವುದುಂಟು. ಕಲೆ, ಸಂಗೀತ, ನೃತ್ಯ, ಸಾಹಸ, ವಿಜ್ಞಾನ ಹೀಗೆ ನಾನಾ ಕ್ಷೇತ್ರಗಳಲ್ಲಿನ ಆಸಕ್ತಿಗೆ ಅನುಗುಣವಾಗಿ ನಡೆಯುವ ಶಿಬಿರಗಳಿಗೆ ಸೇರಿಸುತ್ತಾರೆ. ರಂಗಭೂಮಿ, ಕಲೆಗೆ ಸಂಬಂಧಿಸಿದಂತೆ ರಂಗಾಯಣದ ಶಿಬಿರಗಳು ಪ್ರಮುಖವಾದವು. ಮೈಸೂರು ರಂಗಾಯಣವಂತೂ ಪ್ರತಿ ವರ್ಷ ಒಂದಿಲ್ಲೊಂದು ವಿಷಯ ಆಧರಿಸಿ ಚಿಣ್ಣರ ಮೇಳವನ್ನು ಆಯೋಜಿಸಿಕೊಂಡು ಬರುತ್ತಿದೆ. ಕೊನೆಗೆ ನಾಟಕದಲ್ಲಿ ಅಭಿನಯಿಸುವ ಅವಕಾಶವೂ ಸಿಗಲಿದೆ. ನಾನಾ ಕ್ಷೇತ್ರದ ತಜ್ಞರೊಂದಿಗೆ ಕಳೆಯುವ, ಅವರೊಂದಿಗೆ ಒಡನಾಡುವ ವಾತಾವರಣವೂ ರಂಗಾಯಣದಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕ. ರಂಗಾಯದಲ್ಲಿ ಮಕ್ಕಳಿಗೆ ಶಿಬಿರದ ನೆಪದಲ್ಲಿ ಏನನ್ನೋ ಹೇಳಿ ಸಾಗ ಹಾಕುವುದಿಲ್ಲ. ಬದಲಿಗೆ ಚಿಣ್ಣರ ಮೇಳವೂ ವ್ಯವಸ್ಥಿತವಾಗಿಯೇ ನಡೆಯಲಿದೆ. ಈ ಕಾರಣದಿಂದಲೇ ಮೈಸೂರು ರಂಗಾಯಣದ ಚಿಣ್ಣರಮೇಳಕ್ಕೆ ಸೇರಲು ಎಲ್ಲಿಲ್ಲದ ಬೇಡಿಕೆ. 8 ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಇಲ್ಲಿ ಅವಕಾಶ. ಮೈಸೂರು ರಂಗಾಯಣವು ‘ಸಮರಸವೇ ಜೀವನ’ ಎಂಬ ಆಶಯದಡಿ 21ನೇ ವರ್ಷದ ಚಿಣ್ಣರಮೇಳವನ್ನು ಏ.12ರಿಂದ ಮೇ 7 ರವರೆಗೆ ರಂಗಾಯಣದ ಆವರಣದಲ್ಲಿ ಆಯೋಜಿಸಲು ತಯಾರಿ ಮಾಡಿಕೊಂಡಿದೆ.

ಏ.2 ರಂದು ಬೆಳಗ್ಗೆ 10 ಗಂಟೆಗೆ ರಂಗಾಯಣದ ಕಚೇರಿಯಲ್ಲಿ ಅರ್ಜಿ ವಿತರಣೆ ಶುರುವಾಗಲಿದೆ. ಅರ್ಜಿಯ ಶುಲ್ಕ 100 ರೂ. ಆಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಏ.5ರಂದು ಸಂಜೆ 5 ಗಂಟೆಯೊಳಗೆ ರಂಗಾಯಣದ ಕಚೇರಿಗೆ ಸಲ್ಲಿಸಬೇಕು. ಆನಂತರ ಆಯ್ಕೆ ಆದ ಮಕ್ಕಳ ಪಟ್ಟಿ ಪ್ರಕಟಿಸಲಾಗುತ್ತದೆ. ಶಿಬಿರದ ಪ್ರವೇಶ ಶುಲ್ಕ ಮಗುವೊಂದಕ್ಕೆ 3 ಸಾವಿರ ರೂ. ಮೊತ್ತವನ್ನು ರಂಗಾಯಣದ ಉಪನಿರ್ದೇಶಕರ ಹೆಸರಿಗೆ ಡಿ.ಡಿ ತೆಗೆದು ಅರ್ಜಿಯೊಂದಿಗೆ ಸಲ್ಲಿಸಬೇಕು ಎನ್ನುವುದು ರಂಗಾಯಣದ ಉಪನಿರ್ದೇಶಕರಾದ ನಿರ್ಮಲಾ ಮಠಪತಿ ಅವರ ವಿವರಣೆ.

ಕಲಬುರಗಿ ರಂಗಾಯಣ

ಇದೇ ರೀತಿ ಕಲಬುರಗಿ ರಂಗಾಯಣವೂ 04ನೇ ಚಿಣ್ಣರಮೇಳವನ್ನು ಏಪ್ರಿಲ್‌ ತಿಂಗಳಿನಲ್ಲಿ ಆಯೋಜಿಸಲಿದೆ.

ಮಕ್ಕಳು ತಮ್ಮನ್ನು ತಾವೇ ಕಂಡುಕೊಳ್ಳುವ ರೂಪ ರೂಪಗಳನ್ನು ದಾಟುವ, ನಾಮಕೋಟಿಗಳನ್ನು ಮೀಟುವ ಕ್ರಿಯಾತ್ಮಕ ರಂಗಚಟುವಟಿಕೆಗಳ ಮೂಲಕ ಸುಮಾರು ಒಂದು ತಿಂಗಳು ನಡೆಯುವ ಅನಿಕೇತನದಲ್ಲಿ ಮಕ್ಕಳು ಆಡುತ್ತಾ, ಕುಣಿಯುತ್ತಾ ತಮ್ಮ ಕಲ್ಪನೆಯ ಬಣ್ಣ-ಬಣ್ಣದ ಚಿತ್ರಗಳನ್ನು ಬಿಡಿಸುತ್ತ, ಕರಕುಶಲಗಳನ್ನು ತಯಾರಿಸುತ್ತ, ಕಥೆಗಳನ್ನು ಹೇಳುತ್ತಾ, ಕೇಳುತ್ತಾ ನಾಡಿನ ಹೆಸರಾಂತ ಮಕ್ಕಳ ಚಿಂತಕರೊಂದಿಗೆ ಮುಖಾ-ಮುಖಿ ನಡೆಸುತ್ತ, ಹಕ್ಕಿ-ಪಕ್ಷಿ ಪರಿಸರವನ್ನು ಸ್ಪರ್ಶಿಸುತ್ತ ಗ್ರಾಮ ವೀಕ್ಷಣೆ ಮಾಡಿ ಸರಳ ಹಾಗೂ ಶ್ರಮದ ಬದುಕನ್ನು ಅರಿಯುತ್ತಾ, ಅಭಿನಯದ ಮೂಲಕ ನಾಟಕಗಳನ್ನು ಕಟ್ಟಿ ಪ್ರದರ್ಶಿಸುವತ್ತ ರಂಗಪಯಣವನ್ನು ನಡೆಸಲಿದ್ದಾರೆ. ಮಕ್ಕಳು ಕೂಡಿ, ಹಾಡಿ, ಊಟ ಮಾಡಿ ತಮ್ಮ ಮನಸ್ಸಿನಾಳದ ಮಾತುಗಳನ್ನು ಹಂಚಿಕೊಳ್ಳುವುದು ಮೇಳದ ಭಾಗ.

ಮಕ್ಕಳು ಪ್ರಕೃತಿಯ ಕೊಡುಗೆ, ಮನಸ್ಸು ಮುಕ್ತ, ಕನಸು ಕಣಜ, ಕಲ್ಪನೆ ಅದ್ಭುತ ಇವುಗಳನ್ನು ಮುತುವರ್ಜಿಯಿಂದ ಕಾಪಿಡುವ, ರೂಪಿಸುವ ಹೊಣೆ ಪೋಷಕರದ್ದು, ಶಿಕ್ಷಕರದ್ದು, ಸಮಾಜದ್ದು. ಅದಕ್ಕಾಗಿ ಬಂಧನ ಮುಕ್ತ ಸಾಂಸ್ಕೃತಿಕ ವಾತಾವರಣದ ನಿರ್ಮಾಣ ಮತ್ತು ನಿರ್ವಹಣೆ ನಮ್ಮೆಲ್ಲರ ನೈತಿಕ ಜವಾಬ್ದಾರಿ ಎಂದರಿತು ರಂಗಾಯಣವು ಪ್ರತಿವರ್ಷ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಅಗತ್ಯತೆಗೆ ತಕ್ಕಂತೆ ಮೇಳವನ್ನು ಅರ್ಥಪೂರ್ಣವಾಗಿ ಆಯೋಜಿಸುತ್ತಿದೆ. ಮಕ್ಕಳ ಲೋಕವನ್ನು ಪರಿಣಾಮಕಾರಿಯಾಗಿ ಸೃಷ್ಠಿಸಲು ಮುಂದಾಗಿದೆ ಎಂದು ಕಲಬುರಗಿ ರಂಗಾಯಣದ ಅಧಿಕಾರಿಗಳ ಹೇಳಿಕೆ.

ನಟನದಲ್ಲೂ ಉಂಟು

ಮೈಸೂರಿನಲ್ಲಿರುವ ಸಿನೆಮಾ ನಟ ಹಾಗೂ ರಂಗಭೂಮಿ ಕಲಾವಿದ ಮಂಡ್ಯ ರಮೇಶ್‌ ನೇತೃತ್ವದ ನಟನ ರಂಗಶಾಲೆಯೂ ಮಕ್ಕಳಿಗೆ ‘ರಜಾಮಜಾ’ ಬೇಸಿಗೆ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದೆ. ಈ ಶಿಬಿರವು ಏಪ್ರಿಲ್ ತಿಂಗಳ 11 ರಿಂದ ಮೇ ತಿಂಗಳ 05ರವರೆಗೆ ನಡೆಯಲಿದೆ. ಬೇಸಿಗೆ ಶಿಬಿರವನ್ನು ಬೆಳಗ್ಗೆ 10 ರಿಂದ ಸಂಜೆ 4.30 ರವರೆಗೆ ಮೈಸೂರಿನ ದಟ್ಟಗಳ್ಳಿಯ ಸುಪ್ರೀಮ್‌ ಪಬ್ಲಿಕ್‌ ಶಾಲೆಯಲ್ಲಿ ನಡಸಲಾಗುತ್ತದೆ.ಇದಕ್ಕಾಗಿ ಭಾನುವಾರ ಆಯ್ಕೆ ಪ್ರಕ್ರಿಯೆಯು ನಡೆದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ