logo
ಕನ್ನಡ ಸುದ್ದಿ  /  ಕರ್ನಾಟಕ  /  Shani Jayanti 2023: ಇಂದು ಕರ್ಮಕಾರಕ ಶನಿದೇವನ ಜನ್ಮದಿನ; ಈ ದಿನದ ಮಹತ್ವ, ಪೂಜಾವಿಧಾನಗಳ ಕುರಿತ ಲೇಖನ ಇಲ್ಲಿದೆ

Shani Jayanti 2023: ಇಂದು ಕರ್ಮಕಾರಕ ಶನಿದೇವನ ಜನ್ಮದಿನ; ಈ ದಿನದ ಮಹತ್ವ, ಪೂಜಾವಿಧಾನಗಳ ಕುರಿತ ಲೇಖನ ಇಲ್ಲಿದೆ

HT Kannada Desk HT Kannada

May 19, 2023 06:15 AM IST

ಇಂದು ಶನಿ ಜಯಂತಿ

    • Shani Amavasya: ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಅಮಾವಾಸ್ಯೆಯಂದು ಶನಿ ದೇವರ ಜನ್ಮದಿನ. ಸೂರ್ಯದೇವ ಹಾಗೂ ಛಾಯಾದೇವಿಯ ಪುತ್ರನಾದ ಶನಿಯ ಜನ್ಮ ದಿನವನ್ನು ಎಲ್ಲೆಡೆ ಭಕ್ತ ಭಾವದಿಂದ ಆಚರಿಸಲಾಗುತ್ತದೆ. ಇಂದು (ಏಪ್ರಿಲ್‌ 19) ಶನಿ ಜಯಂತಿ ಆಚರಣೆಯಿದ್ದು, ಈ ದಿನ ಮಹತ್ವ ಹಾಗೂ ಪೂಜಾ ವಿಧಾನಗಳು ಕುರಿತ ಲೇಖನ ಇಲ್ಲಿದೆ.   
ಇಂದು ಶನಿ ಜಯಂತಿ
ಇಂದು ಶನಿ ಜಯಂತಿ

ಜಗತ್ತಿನ ಪ್ರತಿಯೊಬ್ಬರೂ ಹೆದರುವುದು ಶನಿ ದೇವನಿಗೆ ಮಾತ್ರ. ಶನಿಯು ಯಾರಿಗೂ ಕೆಟ್ಟದ್ದನ್ನು ಮಾಡುವುದಿಲ್ಲ. ಆದರೆ ಜನ್ಮ ಕುಂಡಲಿಯಲ್ಲಿ ದುಸ್ಥಿತಿಯಲ್ಲಿ ಇದ್ದಲ್ಲಿ ತೊಂದರೆ ಉಂಟಾಗುತ್ತದೆ. ಅಲ್ಲದೆ ಕಷ್ಟಪಟ್ಟು ದುಡಿಯುವ ಜನರಿಗೆ ತೊಂದರೆ ನೀಡಿದಲ್ಲಿ ಖಂಡಿತ ಶನಿ ದೇವನು ತೊಂದರೆ ನೀಡುತ್ತಾನೆ.

ಟ್ರೆಂಡಿಂಗ್​ ಸುದ್ದಿ

Mandya News: ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್‌ಐಆರ್‌ ದಾಖಲು

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಶನಿಯು ಸೂರ್ಯ ಮತ್ತು ಛಾಯಾದೇವಿಯ ಮಗ. ಕೆಲವು ಧರ್ಮಗ್ರಂಥಗಳ ಪ್ರಕಾರ ಇವನು ವೈಶಾಖ ಮಾಸದ ಅಮಾವಾಸ್ಯೆಯಂದು ಜನಿಸಿದನೆಂದು ಹೇಳಲಾಗಿದೆ. ಶನಿ ಜಯಂತಿಯನ್ನು ಶೋಭನ ನಾಮ ಯೋಗ ಇರುವಾಗ ಆಚರಿಸಬೇಕು. ಶನಿ ಜಯಂತಿಯ ಪೂಜೆಯನ್ನು ಇಂದು ಆಚರಿಸಬೇಕು.

ಶನಿದೇವನು ನ್ಯಾಯವನ್ನು ಪ್ರತಿಪಾದಿಸುತ್ತಾನೆ. ಜನ ಸಾಮಾನ್ಯರು ತಾವು ಮಾಡಿದ ಕರ್ಮಕ್ಕೆ ತಕ್ಕ ಫಲವನ್ನು ಅನುಭವಿಸುತ್ತಾರೆ. ಕರ್ಮ ಎಂದರೆ ನಾವು ಮಾಡುವ ಕೆಲಸ ಎಂದರ್ಥ. ಆದ್ದರಿಂದ ಶನಿಯನ್ನು ಕರ್ಮಕಾರಕ ಎಂದು ಕರೆಯುತ್ತಾರೆ.

ಶನಿ ಪೂಜೆಯಿಂದ ದೋಷ ಪರಿಹಾರ

ಈ ದಿನ ಶನಿದೇವರನ್ನು ಪೂಜಿಸುವುದರಿಂದ ಜನ್ಮ ಕುಂಡಲಿಯಲ್ಲಿ ಶನಿಯಿಂದ ಉಂಟಾಗುವ ಕೆಟ್ಟ ಫಲಗಳಿಂದ ಪಾರಾಗಬಹುದು. ಗೋಚಾರದಲ್ಲಿ ಶನಿಯು ಲಗ್ನ, ದ್ವಿತೀಯ, ಪಂಚಮ, ಸಪ್ತಮ, ಅಷ್ಟಮ ಮತ್ತು ದ್ವಾದಶಭಾವಗಳಲ್ಲಿ ಇದ್ದಲ್ಲಿ ದೊರೆಯುವ ಪಾಪ ಫಲಗಳಿಂದಲೂ ಪಾರಾಗಬಹುದು.

ಭದ್ರ, ಯಮರಾಜ ಮತ್ತು ಯಮುನಾ ಶನಿದೇವರ ಒಡಹುಟ್ಟಿದವರು ಎನ್ನುತ್ತಾರೆ. ಕೆಲವು ಗ್ರಂಥಗಳಲ್ಲಿ ಮುಳ್ಳ ಕಟ್ಟಮ್ಮ ಸಹ ಶನಿದೇವರ ಸೋದರಿ ಎಂದು ಹೇಳಲಾಗಿದೆ. ಶನಿಯು ತಪಸ್ಸನ್ನು ಮಾಡಿ ಶಿವನ ಔದಾರ್ಯಕ್ಕೆ ಪಾತ್ರನಾಗುತ್ತಾನೆ. ಆದ್ದರಿಂದ ಶ್ರೀ ಶಿವನ ಪೂಜೆಯಿಂದ ಶನಿದೇವರ ಅನುಗ್ರಹವನ್ನು ಪಡೆಯಬಹುದಾಗಿದೆ. ರಾವಣನು ನವಗ್ರಹಗಳನ್ನು ಬಂದಿಸಿದ್ದ ಸಂದರ್ಭದಲ್ಲಿ ಶ್ರೀ ಆಂಜನೇಯನು ಕಾಪಾಡಿದನೆಂಬ ಕತೆ ಯಿದೆ. ಆದ್ದರಿಂದ ಮಾರುತಿ ಪೂಜೆಯಿಂದಲೂ ಶುಭಫಲಗಳು ದೊರೆಯುತ್ತವೆ ಎಂದು ಹೇಳಲಾಗಿದೆ.

ಹೀಗಿರಲಿ ಪೂಜಾ ಕ್ರಮ

ಸಾಮಾನ್ಯವಾಗಿ ಶನಿದೇವರ ಪೂಜೆಯನ್ನು ಮನೆಯಲ್ಲಿ ಮಾಡುವುದಿಲ್ಲ. ಮಾಡಲೇ ಬೇಕಾದಲ್ಲಿ ದಿನಪೂರ್ತಿ ಉಪವಾಸ ಮಾಡಿ, ಜಾಗರಣೆ ಮಾಡಿ ಶನಿದೇವರ ಕಥೆಯನ್ನು ಪಾರಾಯಣ ಮಾಡಬೇಕಾಗುತ್ತದೆ. ಆದ್ದರಿಂದ ಶ್ರೀರಾಮ ಪಟ್ಟಾಭಿಷೇಕದ ಭಾವಚಿತ್ರವನ್ನು ಇಟ್ಟು ಶೋಡಚೋಪಚಾರ ಪೂಜೆಯನ್ನು ಮಾಡಬೇಕು. ರವೆಯಿಂದ ಮಾಡಿದ ಸಜ್ಜಿಗೆಯನ್ನು ನೇವೇದ್ಯ ಮಾಡಿ ಮನೆಯವರೆಲ್ಲರೂ ಸೇವಿಸಿದಲ್ಲಿ ಶನಿದೇವರಿಂದ ಶುಭಫಲಗಳನ್ನು ಪಡೆಯಬಹುದು. ಈ ಪೂಜೆಯನ್ನು ಸೀತಾಮಾತೆಯು ಮಾಡಿದ ಪರಿಣಾಮವಾಗಿ ತನ್ನ ಕಷ್ಟಗಳಿಂದ ಪಾರಾದಳು ಎಂದು ಹೇಳಲಾಗಿದೆ.

ಶನಿದೇವರ ಪೂಜೆಯನ್ನೇ ಮಾಡಬೇಕೆನ್ನುವವರು ಶನಿ ಜಯಂತಿಯ ದಿನದಂದು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆಯನ್ನು ಮಾಡಬೇಕು. ಶುಭ್ರ ವಸ್ತ್ರವನ್ನು ಧರಿಸಿ, ಬೆಳ್ಳಿ ಬಣ್ಣದ ಮಣೆಯ ಮೇಲೆ ನೀಲಿ ಬಟ್ಟೆಯನ್ನು ಹಾಸಬೇಕು. ಬೇಕಾದಲ್ಲಿ ಮರದ ಮಣೆಯನ್ನೂ ಬಳಸಬಹುದು. ಅದರ ಮೇಲೆ ಶನಿದೇವರ ಚಿತ್ರವನ್ನು ಪ್ರಜ್ತಿಷ್ಟಾಪಿಸಬೇಕು. ಭಾವಚಿತ್ರದ ಬದಲು ಕರಿಎಳ್ಳನ್ನು ಸಹ ಪೂಜೆಗೆ ಇಟ್ಟುಕೊಳ್ಳಬಹುದು. ತುಪ್ಪದ ದೀಪವನ್ನು ಹಚ್ಚಬೇಕು. ಯಾವುದೇ ಕಾರಣಕ್ಕೂ ಮನೆಯಲ್ಲಿ ಎಳ್ಳಿನ ದೀಪವನ್ನು ಹಚ್ಚಬಾರದು. ಪಂಚಾಮೃತದ ಅಭಿಷೇಕ ಅಥವ ನೇವೇಧ್ಯವನ್ನು ಮಾಡಬೇಕು.

ಆನಂತರ ನೀಲಿ ಹೂವುಗಳಿಂದ ಪೂಜಿಸಬೇಕು. ಆ ನಂತರ ಶನಿ ಸ್ತೋತ್ರ ಮತ್ತು ಶನಿ ಚಾಲೀಸಾವನ್ನು ಪಠಿಸಬಹುದು. ನಿರ್ಗತಿಕರಿಗೆ ದಾನ ಧರ್ಮ ಮಾಡಬೇಕು. ಯಾವುದೇ ಕಾರಣಕ್ಕೂ ಕಾರ್ಮಿಕವರ್ಗದವರನ್ನು ಅವಮಾನಿಸಕೂಡದು. ಹರಿದ ಬಟ್ಟೆಗಳನ್ನು ಧರಿಸಬಾರದು ಹಾಗೆಯೇ ದಾನ ನೀಡಬಾರದು.

ಈ ಮಂತ್ರ ಪಠಿಸಿ ಶನಿ ದೇವರ ಕೃಪೆಗೆ ಪಾತ್ರರಾಗಿ

ಮನೆಯಲ್ಲಿ ಪೂರ್ವಾಭಿಮುಖಿಯಾಗಿ ಕುಳಿತು ಶನಿಪೀಡಾ ಪರಿಹಾರ ಸ್ತೋತ್ರವನ್ನು ಪಠಿಸಬೇಕು.

''ಓಂ ಭಗಭವಾಯ ವಿದ್ಮಹೈಂ ಮೃತ್ಯುರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್|

ನಮಃ ಕೃಷ್ಣಾಯ ನೀಲಾಯ ಶಿಖಿಖಂಡನಿಭಾಯ ಚ

ನಮೋ ನೀಲಮಧೂಕಾಯ ನೀಲೋತ್ಪಲನಿಭಾಯ ಚ

ನಮೋ ನಿರ್ಮಾಂಸದೇಹಾಯ ದೀರ್ಘಶ್ರುತಿಜಟಾಯ ಚ

ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ

ನಮಃ ಪೌರುಷಗಾತ್ರಾಯ ಸ್ಥೂಲರೋಮಾಯ ತೇ ನಮಃ

ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತೃಪ್ತಾಯ ತೇ ನಮಃ

ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ

ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಸ್ತು ತೇ

ನಮಸ್ತೇ ಘೋರರೂಪಾಯ ದುರ್ನಿರೀಕ್ಷ್ಯಾಯ ತೇ ನಮಃ

ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಽಸ್ತು ತೇ

ಸೂರ್ಯಪುತ್ತ್ರ ನಮಸ್ತೇಽಸ್ತು ಭಾಸ್ವರೋಭಯದಾಯಿನೇ

ಅಧೋದೃಷ್ಟೇ ನಮಸ್ತೇಽಸ್ತು ಸಂವರ್ತಕ ನಮೋಸ್ತು ತೇ

ನಮೋ ಮಂದಗತೇ ತುಭ್ಯಂ ನಿಷ್ಪ್ರಭಾಯ ನಮೋನಮಃ

ತಪಸಾ ಜ್ಞಾನದೇಹಾಯ ನಿತ್ಯಯೋಗರತಾಯ ಚ

ಜ್ಞಾನಚಕ್ಷುರ್ನಮಸ್ತೇಽಸ್ತು ಕಾಶ್ಯಪಾತ್ಮಜಸೂನವೇ

ತುಷ್ಟೋ ದದಾಸಿ ರಾಜ್ಯಂ ತ್ವಂ ಕ್ರುದ್ಧೋ ಹರಸಿ ತತ್ತ ಕ್ಷಣಾತ್

ದೇವಾಸುರಮನುಷ್ಯಾಶ್ಚ ಸಿದ್ಧವಿದ್ಯಾಧರೋರಗಾಃ

ತ್ವಯಾವಲೋಕಿತಾಸ್ಸೌರೇ ದೈನ್ಯಮಾಶುವ್ರಜಂತಿತೇ

ಬ್ರಹ್ಮಾ ಶಕ್ರೋಯಮಶ್ಚೈವ ಮುನಯಃ ಸಪ್ತತಾರಕಾಃ

ರಾಜ್ಯಭ್ರಷ್ಟಾಃ ಪತಂತೀಹ ತವ ದೃಷ್ಟ್ಯಾವಲೋಕಿತಃ

ತ್ವಯಾಽವಲೋಕಿತಾಸ್ತೇಽಪಿ ನಾಶಂ ಯಾಂತಿ ಸಮೂಲತಃ

ಪ್ರಸಾದಂ ಕುರು ಮೇ ಸೌರೇ ಪ್ರಣತ್ವಾಹಿತ್ವಮರ್ಥಿತಃ

ಇತಿ ದಶರಥಕೃಥ ಶ್ರೀ ಶನಿ ಸ್ತೋತ್ರಂ ಸಂಪೂರ್ಣಾಮ್

ಹನುಮಾನ್ ಛಾಲೀಸ ಪಠಣೆಯಿಂದಲೂ ಶುಭ ಫಲಗಳನ್ನು ಪಡೆಯಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ