logo
ಕನ್ನಡ ಸುದ್ದಿ  /  ಕರ್ನಾಟಕ  /  ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ; ಪ್ರಗತಿಯಲ್ಲಿದೆ ರಕ್ಷಣಾ ಕಾರ್ಯ

ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ; ಪ್ರಗತಿಯಲ್ಲಿದೆ ರಕ್ಷಣಾ ಕಾರ್ಯ

Umesh Kumar S HT Kannada

Apr 03, 2024 09:56 PM IST

ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ ಸಾತ್ವಿಕ್ ಮುಜಗೊಂಡ (ಎಡ ಚಿತ್ರ); ಕೊಳವೆ ಬಾವಿ ಸಮೀಪ ರಾತ್ರಿಯೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ (ಬಲ ಚಿತ್ರ)

  • ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕನ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಅಗ್ನಿಶಾಮಕ ಸಿಬ್ಬಂದಿ ಜೆಸಿಬಿ ಬಳಸಿ ಬಾಲಕನನ್ನು ರಕ್ಷಿಸುವ ಕೆಲಸ ಮುಂದುವರಿಸಿದ್ದಾರೆ. ವಿವರ ಈ ವರದಿಯಲ್ಲಿದೆ. (ವರದಿ - ಸಮೀವುಲ್ಲಾ ಉಸ್ತಾದ್, ವಿಜಯಪುರ)

ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ ಸಾತ್ವಿಕ್ ಮುಜಗೊಂಡ (ಎಡ ಚಿತ್ರ); ಕೊಳವೆ ಬಾವಿ ಸಮೀಪ ರಾತ್ರಿಯೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ (ಬಲ ಚಿತ್ರ)
ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ ಸಾತ್ವಿಕ್ ಮುಜಗೊಂಡ (ಎಡ ಚಿತ್ರ); ಕೊಳವೆ ಬಾವಿ ಸಮೀಪ ರಾತ್ರಿಯೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ (ಬಲ ಚಿತ್ರ) (SMU)

ವಿಜಯಪುರ: ಇಂಡಿ ತಾಲೂಕು ಲಚ್ಯಾಣ ಗ್ರಾಮದ ತೋಟದ ವಸ್ತಿಯಲ್ಲಿ ಆಟವಾಡಲು ಹೋದ ಪುಟ್ಟ ಬಾಲಕ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಬುಧವಾರ ಜರುಗಿದೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರು ರಸ್ತೆಗಳಲ್ಲಿ ಮರ ಬೀಳುವ ಸನ್ನಿವೇಶವಿದೆಯಾ, ಈ ನಂಬರ್‌ಗಳಿಗೆ ಕರೆ ಮಾಡಿ

Mandya News: ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್‌ಐಆರ್‌ ದಾಖಲು

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಲಚ್ಯಾಣ ಗ್ರಾಮದ ಸತೀಶ ಜುನಗೊಂಡ ಅವರ ಪುತ್ರ ಸಾತ್ವಿಕ್ ಮುಜಗೊಂಡ (14 ತಿಂಗಳು) ಆಟವಾಡಲು ಹೋಗಿ ಆಯತಪ್ಪಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ಈಗ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಬಾಲಕನ ರಕ್ಷಣಾ ಕಾರ್ಯಕ್ಕೆ ಮುಂದಾಗಿರುವ ಅಗ್ನಿಶಾಮಕ ಹಾಗೂ ಪೋಲಿಸರು ಮುಂದಾಗಿದ್ದು, ಅಂದಾಜು 16 ಅಡಿ ಆಳದಲ್ಲಿ ಮಗು ಸಿಲುಕಿಕೊಂಡಿರಬಹುದು ಎಂದು ಹೇಳುತ್ತಿದ್ದಾರೆ. ಮಗುವಿನ ಸ್ಥಿತಿಗತಿ ನೋಡಲು ಕೊಳವೆಬಾವಿಗೆ ಕ್ಯಾಮೆರಾ ಬಿಡಲಾಗಿದ್ದು, ಮಗು ಕೈ, ಕಾಲು ಅಲುಗಾಡಿಸುತ್ತಿರುವುದು ಕಂಡುಬಂದಿದೆ. ಮಗುವಿನ ಉಸಿರಾಟಕ್ಕೆ ತೊಂದರೆಯಾಗದಿರಲು ವೈದ್ಯರು ಪೈಪ್ ಮೂಲಕ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ.

ಕತ್ತಲಾಗಿರುವ ಕಾರಣ ರಕ್ಷಣಾ ಕಾರ್ಯದಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ರಕ್ಷಣಾ ಸ್ಥಳಕ್ಕೆ ಜೆಸಿಬಿ ತರಲಾಗಿದ್ದು, ಕೊಳವೆಬಾವಿಗೆ ಸಮನಾಗಿ ಗುಂಡಿ ತೋಡಲಾಗುತ್ತಿದೆ.

ಸಚಿವರಿಂದ ಪೋನ್ ಮೂಲಕ ಸೂಚನೆ

ಪಾಳು ಕೊಳವೆ ಬಾವಿಗೆ ಮಗು ಬಿದ್ದಿರುವ ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾದಿಕಾರಿಗಳಿಗೆ ಕರೆ ಮಾಡಿ ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ.

(ವರದಿ - ಸಮೀವುಲ್ಲಾ ಉಸ್ತಾದ್, ವಿಜಯಪುರ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ