logo
ಕನ್ನಡ ಸುದ್ದಿ  /  latest news  /  November 22 Kannada News Updates: ಫಿಫಾ ವಿಶ್ವಕಪ್: ಬಲಿಷ್ಠ ಅರ್ಜೆಂಟೀನಾಗೆ ಸೋಲುಣಿಸಿದ ಸೌದಿ ಅರೇಬಿಯಾ
ಅರ್ಜೆಂಟೀನಾ ವಿರುದ್ದ ಗೋಲು ಗಳಿಸಿದ ಸೌದಿ ಅರೇಬಿಯಾ ಆಟಗಾರ ಸಂಭ್ರಮಿಸಿದ್ದು ಹೀಗೆ. (ಫೋಟೋ-FIFA)

November 22 Kannada News Updates: ಫಿಫಾ ವಿಶ್ವಕಪ್: ಬಲಿಷ್ಠ ಅರ್ಜೆಂಟೀನಾಗೆ ಸೋಲುಣಿಸಿದ ಸೌದಿ ಅರೇಬಿಯಾ

Nov 22, 2022 06:44 AM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Nov 22, 2022 09:05 PM IST

ಫಲಿತಾಂಶ ಇಲ್ಲದೆ ತುನಿಷಿಯಾ-ಡೆನ್ಮಾರ್ಕ್ ಪಂದ್ಯ ಮುಕ್ತಾಯ

ಫಿಫಾ ವಿಶ್ವಕಪ್ ನಲ್ಲಿ ಇಂದಿನ ಎರಡನೇ ಪಂದ್ಯ ಯಾವುದೇ ಫಲಿತಾಂಶ ಇಲ್ಲದೆ ಮುಕ್ತಾಯವಾಗಿದೆ. ತುನಿಷಿಯಾ ಮತ್ತು ಡೆನ್ಮಾರ್ಕ್ ನಡುವಿನ ಪಂದ್ಯ 0-0ಯಲ್ಲಿ ಮುಕ್ತಾಯವಾಗಿದೆ 

Nov 22, 2022 08:58 PM IST

ಶ್ರದ್ದಾ ಹತ್ಯೆಯ ಆರೋಪಿ ಅಫ್ತಾಬ್ ಗೆ ಸುಳ್ಳು ಪರೀಕ್ಷೆ ಪತ್ತೆ ಆರಂಭ

ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಆರೋಪಿ ಅಫ್ತಾಬ್‌ ಗೆ ರೋಹಿಣಿ ಎಫ್‌ಎಸ್‌ಎಲ್‌ನಲ್ಲಿ ಸುಳ್ಳು ಪರೀಕ್ಷೆ ಪತ್ತೆ ಆರಂಭವಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. 

Nov 22, 2022 05:49 PM IST

ಸೌದಿ ಅರೇಬಿಯಾ ವಿರುದ್ಧ ಬಲಿಷ್ಠ ಅರ್ಜೆಂಟೀನಾಗೆ ಸೋಲು

ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನಲ್ಲಿ ಮೊದಲ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಸೌದಿ ಅರೇಬಿಯಾ ಬಲಿಷ್ಠ ಅರ್ಜೆಂಟೀನಾವನ್ನು 2-1 ಅಂತರದಿಂದ ಮಣಿಸಿದೆ. 

Nov 22, 2022 05:31 PM IST

ಸಿಎಂ ಬೆಂಗಾವಲು ವಾಹನ ಪಲ್ಟಿ; ಸಿಬ್ಬಂದಿಗೆ ಗಾಯ

ಹಿರಿಯೂರು ಪಟ್ಟಣದಲ್ಲಿ ಸಿಎಂ ಬೊಮ್ಮಾಯಿ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ. ಪರಿಣಾಮ ಸಿಪಿಐ ರಮಾಕಾಂತ್ ಸೇರಿ ವಾಹನದಲ್ಲಿದ್ದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಣಿವಿಲಾಸ ಡ್ಯಾಂನಿಂದ ಹಿರಿಯೂರುಗೆ ಬರುವ ವೇಳೆ ಹಿರಿಯೂರು ತಾಲೂಕು ಕಚೇರಿ ಬಳಿ ಈ ದುರ್ಘಟನೆ ನಡೆದಿದೆ. ಈ ವೇಳೆ, ರಸ್ತೆಯಲ್ಲಿ ತೆರಳುತ್ತಿದ್ದ ಮಸ್ಕಲ್ ಗ್ರಾಮದ ಮಂಜುಳಾ ಮತ್ತು ಪುತ್ರ ಮನೋಜ್ ಸಹ ಗಾಯಗೊಂಡಿದ್ದು, ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. 

Nov 22, 2022 04:37 PM IST

ಕಿವೀಸ್-ಭಾರತ ಕೊನೆ ಪಂದ್ಯ ಟೈ; ಟೀಂ ಇಂಡಿಯಾಗೆ ಸರಣಿ ಗೆಲುವು

ನೇಪಿಯರ್ ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ನಡುವಿನ ಕೊನೆಯ ಟಿ20 ಪಂದ್ಯ ಮಳೆಯಿಂದಾಗಿ ಡಿಎಲ್ ಎಸ್ ನಿಯದನ್ವಯ ಟೈ ಆಗಿದೆ. ಟೀಂ ಇಂಡಿಯಾ 1-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು. 

Nov 22, 2022 03:17 PM IST

ಶಾಲೆ ಅವ್ಯವಸ್ಥೆ ಬಗ್ಗೆ ಮಾಜಿ ಸಿಎಂಗೆ ಮನವರಿಕೆೆ ಮಾಡಿದ ವಿದ್ಯಾರ್ಥಿಗಳು

ಹೆಚ್ಡಿಕೆ ಅವರನ್ನು ರಸ್ತೆಯಲ್ಲೇ ಅಡ್ಡಗಟ್ಟಿದ ಶಾಲೆ ಮಕ್ಕಳು

ರಸ್ತೆಯಲ್ಲಿ ಧರಣಿ ಶಾಲೆಗೆ ಕರೆದುಕೊಂಡು ಹೋದ ಮಕ್ಕಳು

ಸೋರುತ್ತಿರುವ ಶಾಲೆ, ಶಿಥಿಲವಾದ ಶಾಲಾ ಕಟ್ಟಡ ತೋರಿಸಿ ಮಾಜಿ ಸಿಎಂ ಮುಂದೆ ಕಣ್ಣೀರಿಟ್ಟ ಮಕ್ಕಳು

ಶ್ರೀನಿವಾಸಪುರ ಮಾಸ್ತೇನಹಳ್ಳಿಯಲ್ಲಿ ಸೋರುತ್ತಿರುವ ಶಾಲೆ

ಕೋಲಾರ ಜಿಲ್ಲೆ ಶ್ರೀನಿವಾಸಪುರದ ಮಾಸ್ತೇನಹಳ್ಳಿ

ರಸ್ತೆಯಲ್ಲೇ ಕುಮಾರಸ್ವಾಮಿ ಅವರನ್ನು ತಬ್ಬಿಕೊಂಡು ಅತ್ತ ಮಕ್ಕಳು

ಮಕ್ಕಳ ಜತೆ ಶಾಲೆಗೆ ಬಂದು ವೀಕ್ಷಿಸಿದ ಮಾಜಿ ಸಿಎಂ

ಬೇರೆ ಕ್ಲಾಸ್‌ ರೂಂಗಳಿಲ್ಲ ಎಂದು ಅಳಲು ತೋಡಿಕೊಂಡ ಬಾಲಕ

ಎಷ್ಟೇ ಮನವಿ ಕೊಟ್ಟರೂ ಯಾರು ಸ್ಪಂದಿಸುತ್ತಿಲ್ಲ

ಬಾಲಕನ ಕಣ್ಣೀರು ಕಂಡು ಎಷ್ಟು ರೂಂ‌ ಬೇಕಾಗಿದೆ ಎಂದ ಹೆಚ್ಡಿಕೆ

ಮನವಿ ಪತ್ರ ಸ್ವೀಕರಿಸಿ ಮಾಡಿಕೊಡುತ್ತೇನೆ ಎಂದ ಕುಮಾರಸ್ವಾಮಿ

ಬಾಲಕನಿಗೆ ಏನ್ ಪೊಲೀಸ್ ಆಗ್ತಿಯ ಮುಂದೆ ಎಂದು ಕೇಳಿದ ಹೆಚ್ಡಿಕೆ

ಹುಂ ಎಂದ ಬಾಲಕ

*

ಸ್ಥಳದಲ್ಲಿ ಶಿಕ್ಷಣ ಸಚಿವ ನಾಗೇಶ್ ಗೆ ಕರೆ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ

ತಕ್ಷಣವೇ ಸಮಸ್ಯೆ ಬಗೆಹರಿಸುತ್ತೇವೆ ಎಂದ ನಾಗೇಶ್

*

ಇದೇ ವೇಳೆ ಕೋಲಾರದ ಡಿಡಿಪಿಐಗೆ ಕರೆ ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಶ್ರೀಘದಲ್ಲೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ಶಿಕ್ಷಣ ಸಚಿವರು

ಕುಮಾರಸ್ವಾಮಿ ಅವರನ್ನು ಕಂಡು ಭಾವುಕರಾದ ಮಕ್ಕಳು

ಶಾಲೆಯ ಕಟ್ಟಡ ಕಂಡು ಮಮ್ಮಲ ಮರುಗಿದ ಮಾಜಿ ಮುಖ್ಯಮಂತ್ರಿ

Nov 22, 2022 05:03 PM IST

ಭಾರತ ಗೆಲುವಿಗೆ 161 ರನ್ ಗಳ ಗುರಿ

ಮೂರನೇ ಹಾಗೂ ಕೊನೆಯ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವಿಗೆ ನ್ಯೂಜಿಲೆಂಡ್ 161 ರನ್ ಗಳ ಗುರಿ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 19.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 160 ರನ್ ಗಳಿಸಿದೆ. 

Nov 22, 2022 01:58 PM IST

ಮಂಗಳೂರಿನಲ್ಲಿ ಎನ್‌ಐಎ ಶಾಖೆ ಆರಂಭಕ್ಕೆ ಸಂಸತ್ತಿನ ಅಧಿವೇಶನದಲ್ಲಿ ಪಸ್ತಾಪ: ತೇಜಸ್ವಿ ಸೂರ್ಯ

ಕರಾವಳಿ ಭಾಗದ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶಾಖೆ‌ ಆರಂಭಕ್ಕೆ, ಡಿಸೆಂಬರ್‌ನಲ್ಲಿ ನಡೆಯುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮನವಿ ಮಾಡಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.

Nov 22, 2022 02:01 PM IST

ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಯ ಸಂಬಂಧಿಕರ ಮನೆ ಶೋಧ: ಆರಗ ಜ್ಞಾನೇಂದ್ರ

ಮಂಗಳೂರು ಆಟೋ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗದಲ್ಲಿರುವ ಶಂಕಿತ ವ್ಯಕ್ತಿಯ ಸಂಬಂಧಿಕರ ನಿವಾಸ ಸೇರಿದಂತೆ ಕೆಲವು ಸ್ಥಳಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದರೆ. ಅಲ್ಲದೇ ಶಂಕಿತ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಆತನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ (ANI)

Nov 22, 2022 01:53 PM IST

ಭಾರತ vs ನ್ಯೂಜಿಲೆಂಡ್‌ 3ನೇ ಟಿ-20 :‌ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕಿವೀಸ್

ಇಲ್ಲಿನ ನೇಪಿಯರ್‌ನಲ್ಲಿ ನಡೆಯುತ್ತಿರುವ ಭಾರತ vs ನ್ಯೂಜಿಲೆಂಡ್‌ ನಡುವಣ 3ನೇ ಟಿ-20 ಪಂದ್ಯದಲ್ಲಿ, ನ್ಯೂಜಿಲೆಂಡ್‌ ತಂಡ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ.  4 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 30 ರನ್‌ ಪೇರಿಸಿದೆ.  ಭಾರತದ ಪರ ಅರ್ಷದೀಪ್‌ ಸಿಂಗ್‌ ಒಂದು ವಿಕೆಟ್‌ ಕಬಳಿಸಿದ್ದಾರೆ.

ಭಾರತ vs ನ್ಯೂಜಿಲೆಂಡ್
ಭಾರತ vs ನ್ಯೂಜಿಲೆಂಡ್ (ANI)

Nov 22, 2022 12:58 PM IST

ಟಿಕೆಟ್‌ ಆಕಾಂಕ್ಷಿಗಳೊಂದಿಗೆ ಸಭೆ ನಡೆಸಲು ಮುಂದಾದ ರಾಜ್ಯ ಕಾಂಗ್ರೆಸ್‌ ನಾಯಕರು

2023 ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಟೆಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿರುವ ಅಕಾಂಕ್ಷಿಗಳೊಂದಿಗೆ,  ರಾಜ್ಯ ಕಾಂಗ್ರೆಸ್‌ ನಾಯಕರು ಇದೇ ಶುಕ್ರವಾರ(ನ.25) ಸಭೆ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಟಿಕೆಟ್‌ ಆಕಾಂಕ್ಷಿಗಳೊಂದಿಗಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (PTI)

Nov 22, 2022 11:13 AM IST

‌ಟ್ವಿಟ್ಟರ್ 'ಬ್ಲೂ ವೆರಿಫೈಡ್' ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಎಲಾನ್‌ ಮಸ್ಕ್!

ಟ್ವಿಟ್ಟರ್‌ನಲ್ಲಿ 'ಬ್ಲೂ ವೆರಿಫೈಡ್' ಬ್ಯಾಡ್ಜ್‌ನ ಮರುಪ್ರಾರಂಭವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುವುದು ಎಂದು ಎಲೋನ್ ಮಸ್ಕ್ ಘೋಷಿಸಿದ್ದಾರೆ. ಬ್ಲೂ ಟಿಕ್ ಪರಿಶೀಲನೆ ಯೋಜನೆ ಪರಿಚಯಿಸಿದ್ದ ಮಸ್ಕ್‌, ಇದಕ್ಕಾಗಿ 8 ಡಾಲರ್‌ ದರ ನಿಗದಿಪಡಿಸಿದ್ದರು.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (REUTERS)

Nov 22, 2022 09:08 AM IST

ಇಂಡೋನೇಷ್ಯಾ ಪ್ರಬಲ ಭೂಕಂಪ: 162ಕ್ಕೆ ಏರಿದ ಸಾವಿನ ಸಂಖ್ಯೆ!

ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಅಸುನೀಗಿದವರ ಸಂಖ್ಯೆ 162ಕ್ಕೆ ಏರಿದೆ. ರಿಕ್ಟರ್‌ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪದ ಕೇಂದ್ರಬಿಂದು, ಪಶ್ಚಿಮ ಜಾವಾದ ಪರ್ವತದ ಸಿಯಾಂಜೂರ್ ಪಟ್ಟಣದ ಸಮೀಪದಲ್ಲಿದೆ. ರಾಜಧಾನಿ ಜಕಾರ್ತಾದ ಆಗ್ನೇಯಕ್ಕೆ ಸುಮಾರು 75 ಕಿಮೀ (45 ಮೈಲುಗಳು) ದೂರದಲ್ಲಿರುವ ಈ ಪ್ರದೇಶವು, ಸುಮಾರು 2.5 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿದೆ.

ಇಂಡೋನೇಷ್ಯಾ ಭೂಕಂಪ
ಇಂಡೋನೇಷ್ಯಾ ಭೂಕಂಪ (AP)

Nov 22, 2022 06:40 AM IST

ಫಿಫಾ ಫಟ್ಬಾಲ್ ವಿಶ್ವಕಪ್:‌‌ ಇರಾನ್‌ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ

ಮಾಜಿ ಚಾಂಪಿಯನ್ಸ್‌ ಇಂಗ್ಲೆಂಡ್‌ ತಂಡ 2022ರ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ದೋಹಾದಲ್ಲಿರುವ ಖಲೀಫಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ, 6-2 ಗೋಲ್‌ಗಳ ಅಂತರದಲ್ಲಿ ಇರಾನ್‌ ತಂಡವನ್ನು ಬಗ್ಗುಬಡಿದಿದೆ.

ಇಂಗ್ಲೆಂಡ್‌ ತಂಡ
ಇಂಗ್ಲೆಂಡ್‌ ತಂಡ (AP)

Nov 22, 2022 06:38 AM IST

ರಾಜ್ಯಕ್ಕೆ ಖಡಕ್‌ ಗೃಹ ಸಚಿವರ ಅವಶ್ಯಕತೆ ಇದೆ: ಯತ್ನಾಳ ಅಭಿಮತ

ಮಂಗಳೂರು ಆಟೋ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖಡಕ್‌ ಪ್ರತಿಕ್ರಿಯೆ ನೀಡಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ, ರಾಜ್ಯಕ್ಕೆ ಉಗ್ರರಿಗೆ ದಿಟ್ಟ ಪ್ರತ್ಯುತ್ತರ ನೀಡಬಲ್ಲ ಗೃಹ ಸಚಿವರ ಅವಶ್ಯಕತೆ ಇದೆ ಎಂದು ಹೇಳಿದ್ಧಾರೆ.ಅಲ್ಲದೇ ತನಿಖೆಗೆ ಪೊಲೀಸರಿಗೆ ಮುಕ್ತ ಅಧಿಕಾರಕೊಡುವಂತೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಅವರನ್ನು ಕೋರುವುದಾಗಿ ಯತ್ನಾಳ ಸ್ಪಷ್ಟಪಡಿಸಿದ್ದಾರೆ.

ಯತ್ನಾಳ (ಸಂಗ್ರಹ ಚಿತ್ರ)
ಯತ್ನಾಳ (ಸಂಗ್ರಹ ಚಿತ್ರ) (HT)

Nov 22, 2022 06:35 AM IST

ವಿದೇಶಿ ಭೇಟಿಯ ಸಮಯದಲ್ಲಿ ರಾಜಕಾರಣಿಗಳಿಗೆ ಆತಿಥ್ಯ ಅನುಮತಿ ಈಗ ಆನ್‌ಲೈನ್‌ನಲ್ಲಿ

ರಾಜಕಾರಣಿಗಳು, ನ್ಯಾಯಾಧೀಶರು, ಶಾಸಕರು, ಸರ್ಕಾರಿ ನೌಕರರು ಮತ್ತು ಉದ್ಯೋಗಿಗಳು ತಮ್ಮ ವಿದೇಶ ಪ್ರವಾಸದ ಸಮಯದಲ್ಲಿ ಯಾವುದೇ ರೀತಿಯ ವಿದೇಶಿ ಆತಿಥ್ಯವನ್ನು ಸ್ವೀಕರಿಸಲು ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಕೇಂದ್ರ ಗೃಹ ಸಚಿವಾಲಯ ಆನ್‌ಲೈನ್‌ ಮಾಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (REUTERS)

Nov 22, 2022 06:32 AM IST

ಫೆಬ್ರವರಿ ಅಂತ್ಯದೊಳಗೆ 7 ಲಕ್ಷ ಮನೆಗಳ ನಿರ್ಮಾಣಕ್ಕೆ ಕರೆ ನೀಡಿದ ಸಿಎಂ ಬೊಮ್ಮಾಯಿ

ವಿವಿಧ ವಸತಿ ಯೋಜನೆಯಡಿ ಬಾಕಿಯಿರುವ 7 ಲಕ್ಷ ಮನೆಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೋಮವಾರ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ನಿರ್ಮಾಣದ ವಿವಿಧ ಹಂತಗಳಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಸವರಾಜ ಬೊಮ್ಮಾಯಿ(ಸಂಗ್ರಹ ಚಿತ್ರ)
ಬಸವರಾಜ ಬೊಮ್ಮಾಯಿ(ಸಂಗ್ರಹ ಚಿತ್ರ) (HT_PRINT)

    ಹಂಚಿಕೊಳ್ಳಲು ಲೇಖನಗಳು