logo
ಕನ್ನಡ ಸುದ್ದಿ  /  ಜೀವನಶೈಲಿ  /  Honeymoon Spots: ಈ 5 ಸ್ಥಳಗಳು ಹನಿಮೂನ್‌ಗೆ ಹೇಳಿ ಮಾಡಿಸಿದಂತಿವೆ; ಈಗಷ್ಟೇ ಮದುವೆ ಮುಗಿದಿದ್ರೆ ಖುಷಿಯಾಗಿ ಹೋಗಿ ಬನ್ನಿ

Honeymoon Spots: ಈ 5 ಸ್ಥಳಗಳು ಹನಿಮೂನ್‌ಗೆ ಹೇಳಿ ಮಾಡಿಸಿದಂತಿವೆ; ಈಗಷ್ಟೇ ಮದುವೆ ಮುಗಿದಿದ್ರೆ ಖುಷಿಯಾಗಿ ಹೋಗಿ ಬನ್ನಿ

HT Kannada Desk HT Kannada

Nov 22, 2023 08:48 AM IST

ಹನಿಮೂನ್‌ಗೆ ಹೇಳಿ ಮಾಡಿಸಿದಂಥ 5 ಬೆಸ್ಟ್‌ ಸ್ಪಾಟ್‌ಗಳು

  • ಹಿಮಾಚ್ಚಾದಿತ ಸುಂದರ ವಾತಾವರಣದ ನಡುವೆ ನಿಮ್ಮ ಸಂಗಾತಿಯೊಂದಿಗೆ ಹೆಜ್ಜೆ ಇಡುತ್ತಿದ್ದರೆ ಆ ಖುಷಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ. ಇಲ್ಲಿನ ಸ್ಪಿತಿ ವ್ಯಾಲಿ, ಖಜಿಯಾರ್, ಡಾಲ್‌ಹೌಸಿ, ಕುಲು-ಮನಾಲಿ, ಕಸೋಲ್, ಕುಫ್ರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ನವಜೋಡಿಗಳ ಮಧುಚಂದ್ರಕ್ಕೆ ಹೇಳಿಮಾಡಿಸಿದಂಥ ಸ್ಥಳಗಳು.

ಹನಿಮೂನ್‌ಗೆ ಹೇಳಿ ಮಾಡಿಸಿದಂಥ 5 ಬೆಸ್ಟ್‌ ಸ್ಪಾಟ್‌ಗಳು
ಹನಿಮೂನ್‌ಗೆ ಹೇಳಿ ಮಾಡಿಸಿದಂಥ 5 ಬೆಸ್ಟ್‌ ಸ್ಪಾಟ್‌ಗಳು (PC: Freepik)

ಮದುವೆ , ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಸಂಗಾತಿ, ಮದುವೆ ಜೀವನದ ಬಗ್ಗೆ ಪ್ರತಿಯೊಬ್ಬರೂ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಆದರೆ ಇಬ್ಬರ ಜೀವನ ಸಂತೋಷದಿಂದ ಇರಲು ಅವರಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವುದು ಮುಖ್ಯ. ಹಾಗೇ ಹೊಸದಾಗಿ ಮದುವೆಯಾದ ಜೋಡಿ ಮೊದಲು ಪ್ಲ್ಯಾನ್‌ ಮಾಡೋದು ಹನಿಮೂನ್‌ಗೆ. ಮಧುಚಂದ್ರ ಕೇವಲ ರೊಮ್ಯಾನ್ಸ್‌ ಮಾಡಲು ಮಾತ್ರವಲ್ಲ, ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ದೊರೆಯುವ ಅತ್ಯುತ್ತಮ ಸಮಯ.

ಟ್ರೆಂಡಿಂಗ್​ ಸುದ್ದಿ

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ನಿಮ್ಮ ಮದುವೆ ಫಿಕ್ಸ್‌ ಆಗಿ ಹನಿಮೂನ್‌ ಎಲ್ಲಿ ಹೋಗೋದು ಅಂತ ಪ್ಲ್ಯಾನ್‌ ಮಾಡ್ತಿದ್ರೆ, ಅಥವಾ ನೀವು ಈಗಷ್ಟೇ ಮದುವೆ ಆದವರಾದರೆ ನಿಮ್ಮ ಜೀವನ ಸಂಗಾತಿಯೊಂದಿಗೆ ಎಂಜಾಯ್‌ ಮಾಡಲು ಸಿನಿಮಾಗಳಲ್ಲಿ ತೋರಿಸಿರುವ ಕೆಲವೊಂದು ಖ್ಯಾತ ಹನಿಮೂನ್‌ ಸ್ಪಾಟ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ನಿಮಗೆ ಹೆಲ್ಪ್‌ ಆಗಬಹುದು ನೋಡಿ.

ಜಮ್ಮು ಮತ್ತು ಕಾಶ್ಮೀರ್

ಪ್ರೇಮ ಕಾಶ್ಮೀರ ಎಂದೇ ಹೆಸರಾಗಿರುವ ಜಮ್ಮು ಕಾಶ್ಮೀರ ನಿಮ್ಮ ಹನಿಮೂನ್‌ ಲಿಸ್ಟ್‌ನಲ್ಲಿ ಮೊದಲು ಇರಲಿ. ನಿಮ್ಮ ಬಜೆಟ್‌ ಹೆಚ್ಚಾಗಿದ್ದಲ್ಲಿ ನೀವು ಈ ಸ್ವರ್ಗವನ್ನು ನಿಮ್ಮ ಹನಿಮೂನ್‌ ಸ್ಪಾಟ್‌ ಆಗಿ ಆಯ್ಕೆ ಮಾಡಿಕೊಳ್ಳಬಹುದು. ಶಬ್ಧವೇಧಿ ಚಿತ್ರದಲ್ಲಿ ಅಣ್ಣಾವ್ರು ಜಯಪ್ರದಾ ಜೊತೆ ಓ ಓ ಪ್ರೇಮ ಕಾಶ್ಮೀರ ಎಂದು ಹಾಡಿರುವುದು ಇದೇ ಕಾಶ್ಮೀರದಲ್ಲಿ. ಕನ್ನಡ ಸೇರಿದಂತೆ ಅನೇಕ ಹಿಂದಿ ಸಿನಿಮಾಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿನ ಸೌಂದರ್ಯದಿಂದಾಗಿ ಕಾಶ್ಮೀರ ಭೂಲೋಕದ ಸ್ವರ್ಗ ಎಂದೇ ಹೆಸರಾಗಿದೆ. ಇಲ್ಲಿನ ದಾಲ ಲೇಕ್‌, ಗುಲ್ಮಾರ್ಗ್, ಸೋನ್ಮಾರ್ಗ್‌ನ ಹಿಮಾಚ್ಛಾದಿತ ಪ್ರದೇಶ ನವದಂಪತಿಗೆ ಹೇಳಿ ಮಾಡಿಸಿದಂತಿದೆ. ಜೊತೆಗೆ ನೀವು ಜಮ್ಮು ಕಾಶ್ಮೀರದ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಬಹುದು.

ರಾಜಸ್ಥಾನ

ರಾಜಸ್ಥಾನದಲ್ಲಿ ಮರುಭೂಮಿ ಇದೆ ಎಲ್ಲಿಗೂ ಹನಿಮೂನ್‌ ಹೋಗಬಹುದಾ ಅಂತ ಆಶ್ಚರ್ಯಪಡಬೇಡಿ. ರಾಜಸ್ಥಾನದ ಜೈಪುರ ಅರಮನೆಗಳ ನಗರಿ ಎಂದೇ ಫೇಮಸ್.‌ ನೀವು ಯಾವುದೇ ಹಿಂಜರಿಕೆ ಇಲ್ಲದೆ ರಾಜಸ್ಥಾನ್‌ಗೆ ಹನಿಮೂನ್‌ ಪ್ಲಾನ್‌ ಮಾಡಬಹುದು. ಇಲ್ಲಿ ಜಗಮಂದಿರ್‌, ಲೇಕ್‌ ಪಿಚೊಲಾ, ಫತೇಹ್‌ ಸಾಗರ್‌ ಲೇಕ್‌ಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಭೇಟಿ ನೀಡಬಹುದು. ಜೊತೆಗೆ ರಾಜಸ್ಥಾನ್‌ ಕ್ಯುಸಿನ್‌ ಟ್ರೈ ಮಾಡಬಹುದು. ಬಾಲಿವುಡ್‌ನಲ್ಲಿ ಜೋಧಾ ಅಕ್ಬರ್‌, ಘಸ್ನಿ, ರಂಗ್‌ ದೇ ಬಸಂತಿ ಸೇರಿ ಅನೇಕ ಸಿನಿಮಾಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಜೈಸ್ಮಲೇರ್‌, ಉದಯ್‌ಪುರ್‌, ಜೋಧಪುರ್‌ಗೆ ಚಳಿಗಾಲದಲ್ಲಿ ನೀವು ಹನಿಮೂನ್‌ ಪ್ಲ್ಯಾನ್‌ ಮಾಡಿದರೆ ಸೂಕ್ತ ಸಮಯ.

ಹಿಮಾಚಲ ಪ್ರದೇಶ

ಹಿಮಾಚ್ಚಾದಿತ ಸುಂದರ ವಾತಾವರಣದ ನಡುವೆ ನಿಮ್ಮ ಸಂಗಾತಿಯೊಂದಿಗೆ ಹೆಜ್ಜೆ ಇಡುತ್ತಿದ್ದರೆ ಆ ಖುಷಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ. ಬಾಲಿವುಡ್‌ನಲ್ಲಿ ಜಬ್‌ ವಿ ಮೆಟ್‌, ತಾಲ್‌ ಸಿನಿಮಾಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿನ ಸ್ಪಿತಿ ವ್ಯಾಲಿ, ಖಜಿಯಾರ್, ಡಾಲ್‌ಹೌಸಿ, ಕುಲು-ಮನಾಲಿ, ಕಸೋಲ್, ಕುಫ್ರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ನವಜೋಡಿಗಳ ಮಧುಚಂದ್ರಕ್ಕೆ ಹೇಳಿಮಾಡಿಸಿದಂಥ ಸ್ಥಳಗಳು. ಸಿನಿಮಾಗಳಲ್ಲಿನ ದೃಶ್ಯಗಳನ್ನು ರೀಕ್ರಿಯೇಟ್‌ ಮಾಡಿ ನೀವು ಫೋಟೋಶೂಟ್‌, ವಿಡಿಯೋಶೂಟ್‌ ಕೂಡಾ ಮಾಡಿಸಬಹುದು.

ಲೇಹ್‌ ಲಡಾಕ್‌

ಚಳಿಗಾಲದಲ್ಲಿ ನೀವು ಹನಿಮೂನ್‌ ಪ್ಲಾನ್‌ ಮಾಡ್ತಿದ್ರೆ ಲೇಹ್‌ ಲಡಾಕ್‌ ಕೂಡಾ ಒಳ್ಳೆ ಸ್ಥಳ. ಇಲ್ಲಿನ ಸ್ನೋ ಫಾಲ್‌, ನಿಮ್ಮನ್ನು ನಿಜಕ್ಕೂ ನಿಮಗೆ ಯಾವುದೋ ಸ್ವರ್ಗಕ್ಕೆ ಬಂದಿರುವಂತೆ ಅನುಭವ ನೀಡುತ್ತದೆ. ಲೇಹ್ ಪ್ಯಾಲೇಸ್‌, ಪಾಂಗಾಂಗ್ ತ್ಸೋ ಲೇಕ್‌, ಖರ್ದುಂಗ್ ಲಾ ಪಾಸ್, ನುಬ್ರಾ ವ್ಯಾಲಿ, ಝನ್ಸ್ಕರ್ ವ್ಯಾಲಿ ಹಾಗೂ ಇನ್ನಿತರ ಸ್ಥಳಗಳನ್ನು ನೀವು ಎಕ್ಸ್‌ಪ್ಲೋರ್‌ ಮಾಡಬಹುದು. ನಗರದ ವಾಯು ಮಾಲಿನ್ಯ, ಶಬ್ಧ ಮಾಲಿನ್ಯವನ್ನು ಬಿಟ್ಟು ಈ ಪ್ರಕೃತಿ ಮಡಿಲಿಗೆ ಒಮ್ಮೆ ನೀವು ಎಂಟ್ರಿ ಕೊಟ್ಟರೆ ವಾಪಸ್‌ ಬರಲು ಮನಸಾಗುವುದೇ ಇಲ್ಲ.

ಕೇರಳ

ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರದಂತ ಸ್ಥಳಗಳಿಗೆ ನೀವು ಹೋಗಲು ಸಾಧ್ಯವಾಗದಿದ್ದಲ್ಲಿ ನೆರೆ ರಾಜ್ಯ ಕೇರಳಕ್ಕೆ ಹನಿಮೂನ್‌ ಪ್ಲ್ಯಾನ್‌ ಮಾಡಬಹುದು. ದೇವರನಾಡು ಎಂದೇ ಹೆಸರಾಗಿರುವ ಕೇರಳದಲ್ಲಿ ಬೀಚ್‌, ಬ್ಯಾಕ್‌ ವಾಟರ್‌, ಸುಂದರ ಪ್ರಕೃತಿಯನ್ನು ನಿಮ್ಮ ಸಂಗಾತಿಯೊಂದಿಗೆ ಎಂಜಾಯ್‌ ಮಾಡಬಹುದು. ಕೇರಳದ ಅಲಪ್ಪಿಯಲ್ಲಿ ಬ್ಯಾಕ್‌ ವಾಟರ್‌ನಲ್ಲಿ ನೀವು ಬೋಟ್‌ ಹೌಸ್‌ನಲ್ಲಿ ಸ್ಟೇ ಆಗಬೇಕೆಂದರೆ ಮೊದಲೇ ಬುಕಿಂಗ್‌ ಮಾಡಬೇಕು. ಮುನ್ನಾರ್‌, ವೈನಾಡು ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಿಮಗೆ ಮಾಲ್ಡೀವ್‌ ಮಾದರಿಯಲ್ಲಿ ಅನೇಕ ರೆಸಾರ್ಟ್‌ಗಳನ್ನು ಸ್ಥಾಪಿಸಲಾಗಿದೆ.

ನಿಮ್ಮ ಬಜೆಟ್‌ಗೆ ತಕ್ಕಂತೆ ಮಧುಚಂದ್ರ ಪ್ಲ್ಯಾನ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು