logo
ಕನ್ನಡ ಸುದ್ದಿ  /  ಜೀವನಶೈಲಿ  /  Car Facelifts: 2023ರಲ್ಲಿ ಬಿಡುಗಡೆಯಾದ ಟಾಪ್​ 5 ಕಾರ್ ಫೇಸ್‌ಲಿಫ್ಟ್​ಗಳಿವು

Car Facelifts: 2023ರಲ್ಲಿ ಬಿಡುಗಡೆಯಾದ ಟಾಪ್​ 5 ಕಾರ್ ಫೇಸ್‌ಲಿಫ್ಟ್​ಗಳಿವು

HT Kannada Desk HT Kannada

Dec 18, 2023 02:53 PM IST

ಹುಂಡೈ i20 ಫೇಸ್‌ಲಿಫ್ಟ್

    • Car Facelifts launched in 2023: ಕಾರ್ ಫೇಸ್​​ಲಿಫ್ಟ್ ಎಂದರೇನು? 2023ರಲ್ಲಿ ಬಿಡುಗಡೆಯಾದ ಕಾರ್ ಫೇಸ್​​ಲಿಫ್ಟ್​ಗಳು ಯಾವುದು? ಇಲ್ಲಿದೆ ವಿವರ. 
ಹುಂಡೈ i20 ಫೇಸ್‌ಲಿಫ್ಟ್
ಹುಂಡೈ i20 ಫೇಸ್‌ಲಿಫ್ಟ್

ಒಂದು ಮಾಡೆಲ್‌ ಕಾರು ಈಗಾಗಲೇ ಮಾರ್ಕೆಟ್‌ನಲ್ಲಿ ಇರುತ್ತದೆ. ಅದಕ್ಕೇ ತುಸು ಅಪ್‌ಡೇಟ್‌ ಮಾಡಿ ಹೊಸ ವರ್ಷನ್‌ ಆಗಿ ಬಿಡುಗಡೆ ಮಾಡುವುದಕ್ಕೆ ಕಾರ್ ಫೇಸ್​​ಲಿಫ್ಟ್ ಎಂದು ಕರೆಯಲಾಗುತ್ತದೆ. ದಸರಾ, ದೀಪಾವಳಿ ಹೀಗೆ ಹಬ್ಬಗಳು ಸೇರಿದಂತೆ ವಿಶೇಷ ಸಂದರ್ಭದಲ್ಲಿ ಕೊಂಚ ಫೀಚರ್‌ ಬದಲಾಯಿಸಿ, ಏನಾದರೂ ಮಾರ್ಪಾಡು ಮಾಡಿ ಬಿಡುಗಡೆ ಮಾಡಲಾಗುತ್ತದೆ. 2023ರಲ್ಲಿ ಈ ರೀತಿ ಬಿಡುಗಡೆಯಾದ ಕಾರ್ ಫೇಸ್​​ಲಿಫ್ಟ್​ಗಳ ಲಿಸ್ಟ್ ಹಾಗೂ ಅದರ ವೈಶಿಷ್ಟ್ಯ​ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

1) ಹುಂಡೈ ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್

ರೌಂಡ್​ ಮತ್ತು ಫನ್​-ಟು-ಡ್ರೈವ್​ ಹ್ಯಾಚ್‌ಬ್ಯಾಕ್, ಉತ್ತಮ ಗುಣಮಟ್ಟದ ಇಂಟೀರಿಯರ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ​ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ಹೊಂದಿರುವ ಈ ಕಾರನ್ನು ರಸ್ತೆಗಳ ಗುಣಮಟ್ಟಕ್ಕೆ ತಕ್ಕಂತೆ ಹೊಂದಿಕೊಳ್ಳುವಂತೆ ಫೇಸ್​​ಲಿಫ್ಟ್ ಮಾಡಲಾಗಿದೆ.

2) ಹುಂಡೈ ಔರಾ ಫೇಸ್‌ಲಿಫ್ಟ್

ಉತ್ತಮ ಗುಣಮಟ್ಟದ ಇಂಟೀರಿಯರ್ ಒಳಗೊಂಡ, ಸುಲಭವಾಗಿ ಓಡಿಸುವಂತೆ ವ್ಯವಸ್ಥೆ ಇರುವ ಈ ಕಾರು 6 ಏರ್‌ಬ್ಯಾಗ್‌, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ರಿಯರ್ ವ್ಯೂ ಮಾನಿಟರ್ ಹೊಂದಿದೆ.

3) ಹುಂಡೈ i20 ಫೇಸ್‌ಲಿಫ್ಟ್

ಒಳಗೆ ಮತ್ತು ಹೊರಗೆ ಎರಡೂ ಕಡೆ ವಿಶೇಷ ವಿನ್ಯಾಸ ಹೊಂದಿರುವ ಈ ಕಾರು ಬ್ಲಾಕ್​ ಫ್ರಂಟ್​ ಗ್ರಿಲ್​ ಮತ್ತು ಸ್ಕೀಡ್ ಪ್ಲೇಟ್‌ಗಳನ್ನು ಒಳಗೊಂಡಿದೆ. ಹ್ಯಾಚ್‌ಬ್ಯಾಕ್‌ಗಳಿಗೆ ಟ್ರೇಡ್‌ಮಾರ್ಕ್ ಇದ್ದು, ಪವರ್​ಫುಲ್​​ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ, ಉತ್ತಮ ಮ್ಯೂಸಿಕ್​ ವ್ಯವಸ್ಥೆ, ಆಟೋಫೋಲ್ಡಿಂಗ್​ ORVM ವ್ಯವಸ್ಥೆ ಹೊಂದಿದೆ.

4) ಟಾಟಾ ನೆಕ್ಸನ್ ಇವಿ

ಆರಾಮದಾಯಕ ಆಸನಗಳೊಂದಿಗೆ ವಿಶಾಲವಾದ ಕ್ಯಾಬಿನ್, ಪ್ರಾಕ್ಟಿಕಲ್​ 382-ಲೀಟರ್ ಬೂಟ್, 1.5L ಡೀಸೆಲ್ ಮತ್ತು 1.2L ಪೆಟ್ರೋಲ್ ಕಾರ್ಯಕ್ಷಮತೆ, 208 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 6 ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮೆರಾ, ಎರಡು ವಿಭಿನ್ನ ಬ್ಯಾಟರಿ ಪ್ಯಾಕ್‌ ಒಳಗೊಂಡಿದೆ.

5) ಹೋಂಡಾ ಸಿಟಿ ಹೈಬ್ರಿಡ್ ಫೇಸ್‌ಲಿಫ್ಟ್

ಬೆಂಚ್ಮಾರ್ಕ್ C2-ಸೆಗ್ಮೆಂಟ್ ಸೆಡಾನ್ ಜೊತೆಗೆ 1.5L ಪೆಟ್ರೋಲ್ ಎಂಜಿನ್, ಸ್ಮೂತ್ ಗೇರ್‌ಬಾಕ್ಸ್ ಮತ್ತು ರೆಸ್ಪಾನ್ಸಿವ್ ಸ್ಟೀರಿಂಗ್, 120 km/h, 6 ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಸನ್‌ರೂಫ್, ಅಲೆಕ್ಸಾ ಜೊತೆ ಹೋಂಡಾ ಸಂಪರ್ಕ, ಕ್ರೂಸ್ ಕಂಟ್ರೋಲ್ ವ್ಯವಸ್ಥೆಗಳನ್ನು ಒಳಗೊಂಡಿದೆ.

    ಹಂಚಿಕೊಳ್ಳಲು ಲೇಖನಗಳು