logo
ಕನ್ನಡ ಸುದ್ದಿ  /  ಜೀವನಶೈಲಿ  /  Hyundai Casper Ev: ಮಾರುಕಟ್ಟೆಗೆ ಬರಲು ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ರೆಡಿ; ಕಾಸ್ಪರ್ ಇವಿ ಬೆಲೆ, ವೈಶಿಷ್ಟ್ಯಗಳು ಹೀಗಿವೆ

Hyundai Casper EV: ಮಾರುಕಟ್ಟೆಗೆ ಬರಲು ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ರೆಡಿ; ಕಾಸ್ಪರ್ ಇವಿ ಬೆಲೆ, ವೈಶಿಷ್ಟ್ಯಗಳು ಹೀಗಿವೆ

Raghavendra M Y HT Kannada

Feb 11, 2024 04:00 PM IST

google News

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಇತ್ತೀಚೆಗೆ ಮುಗಿದಿದ್ದು, ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಹ್ಯುಂಡೈ ಕಾಸ್ಪರ್ ಇವಿ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ.

  • Hyundai Casper EV: ಹ್ಯುಂಡೈ ಮೋಟಾರ್ಸ್ ಹೊಸ ಇವಿಯನ್ನು ಬಿಡುಗಡೆ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹ್ಯುಂಡೈ ಕಾಸ್ಪರ್ ಇವಿಯ ಟೆಸ್ಟ್ ಡ್ರೈವ್ ಇತ್ತೀಚೆಗೆ ಮುಗಿಸಿದೆ.

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಇತ್ತೀಚೆಗೆ ಮುಗಿದಿದ್ದು, ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಹ್ಯುಂಡೈ ಕಾಸ್ಪರ್ ಇವಿ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ.
ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಇತ್ತೀಚೆಗೆ ಮುಗಿದಿದ್ದು, ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಹ್ಯುಂಡೈ ಕಾಸ್ಪರ್ ಇವಿ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ.

Hyundai Casper EV Price: ಹ್ಯುಂಡೈ ಮೋಟಾರ್ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಆರಂಭಿಸಿದೆ. ಈ ಹೊಸ ಕಾರಿನ ಹೆಸರು ಹ್ಯುಂಡೈ ಕಾಸ್ಪರ್ ಇವಿ. ಇದು ಬಜೆಟ್ ಸ್ನೇಹಿ ಎಲೆಕ್ಟ್ರಿಕ್ ಎಸ್‌ಯುವಿ ಆಗಿದೆ. 2024ರ ಕೊನೆಯ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಎಂಟ್ರಿಕೊಡಲಿದೆ.

ಈ ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೊಸದೊಂದು ಅಪ್ಡೇಟ್ ಹೊರಬಿದ್ದಿದೆ. ಆಸ್ಟ್ರೇಲಿಯಾದಲ್ಲಿ ಹ್ಯುಂಡೈ ಕಾಸ್ಪರ್ ಇವಿ ಕಾರಿನ ಪರೀಕ್ಷಾರ್ಥವನ್ನು ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದ ಹಲವು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಸ್ಟ್ರೇಲಿಯಾದ ಬೀದಿಗಳಲ್ಲಿ ಈ ಕಾರಿನ್ನು ಟೆಸ್ಟ್ ಡ್ರೈವ್ ಮಾಡಲಾಗಿದೆ. ಹ್ಯುಂಡೈ ಕಾಸ್ಪರ್ ಇವಿ ಬೆಲೆ ಎಷ್ಟು, ಇದರ ವೈಶಿಷ್ಟ್ಯಗಳು ಏನು ಅನ್ನೋದನ್ನು ಇಲ್ಲಿ ತಿಳಿಯೋಣ.

ಜಾಲತಾಣಗಳಲ್ಲಿ ಸೋರಿಯಾಗಿರುವ ಫೋಟೊಗಳನ್ನು ಗಮನಿಸಿದರೆ ಹ್ಯುಂಡೈ ಕ್ಯಾಸ್ಪರ್ ಇವಿ ಬುಡ್ಡಾ ಎಲೆಕ್ಟ್ರಿಕ್ ಎಸ್‌ಯುವಿ ಎಂಬುದು ಸ್ಪಷ್ಟವಾಗಿದೆ. ಮೇಲಾಗಿ ಈಗಾಗಲೇ ಮಾರುಕಟ್ಟೆಯಲ್ಲಿರುವ ಕ್ಯಾಸ್ಪರ್ ವಿನ್ಯಾಸಕ್ಕೂ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ಇವಿ ಆವೃತ್ತಿಗೂ ದೊಡ್ಡ ವ್ಯತ್ಯಾಸಗಳು ಕಾಣುತ್ತಿಲ್ಲ.

ಕಾಸ್ಪರ್ ಇವಿ ವೃತ್ತಾಕಾರದ ಹೆಡ್‌ಲೈಟ್‌ಗಳು, ಪ್ಯಾರಾಮೆಟ್ರಿಕ್ ಪಿಕ್ಸೆಲ್‌ ಮಾದರಿಗಳೊಂದಿಗೆ ಎಲ್‌ಇಡಿ ಲೈಟ್ ಸಿಗ್ನೇಚರ್‌ಗಳು, ನಯವಾದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ಈ ಹ್ಯುಂಡೈ ಎಲೆಕ್ಟ್ರಿಕ್ ಕಾರು ಸ್ಪೋರ್ಟಿ ಅಲಾಯ್ ವೀಲ್ಸ್, ಸಿ ಪಿಲ್ಲರ್ ಮೌಂಟೆಡ್ ರೇರ್ ಡೋರ್ ಹ್ಯಾಂಡಲ್ಸ್, ಬ್ಲಾಕ್ಡ್‌ಔಟ್ ಫಂಕ್ಷನಲ್ ರೂಫ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುಕಟ್ಟೆಯಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ ಹ್ಯುಂಡೈ ಕಾಸ್ಪರ್ ಇವಿಯ ವೀಲ್ ಬೇಸ್ ಸ್ವಲ್ಪ ಹೆಚ್ಚಾಗಿಯೇ ಇರಲಿದೆ. ಕ್ಯಾಬಿನ್ ಜಾಗ ಇನ್ನಷ್ಟು ವಿಶಾಲವಾಗಿರಲಿದೆ.

ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಸುಧಾರಿತ ಬ್ಯಾಟರಿ ಪ್ಯಾಕ್ ಅನ್ನು ಹ್ಯುಂಡೈ ಬಳಸಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಬ್ಯಾಟರಿಯ ವ್ಯಾಪ್ತಿಯು ಒಮ್ಮೆ ಜಾರ್ಜ್ ಮಾಡಿದರೆ 320 ಕಿಲೋ ಮೀಟರ್ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಈ ಬಗ್ಗೆ ಸ್ಪಷ್ಟತೆ ಇಲ್ಲ.

ಹ್ಯುಂಡೈ ಕಾಸ್ಟರ್ ಎಲೆಕ್ಟ್ರಿಕ್ ವಾಹನವು 10 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇನ್‌ಸ್ಟ್ರುಮೆಂಟ್ ಕನ್ಸೋಲ್, ಹೀಟೆಡ್ ಫ್ರಂಟ್ ಸೀಟ್ಸ್, ಆರ್ಟಿಫಿಶಿಯರ್ ಅಪ್ಹೋಲ್‌ಸ್ಟರಿ, ವೆಂಟಿಲೇಟೆಡ್ ಡ್ರೈವರ್ ಸೀಟ್, ಸಿಂಗಲ್ ಪ್ಯಾನ್ ಸನ್‌ರೂಫ್ ಮುಂತಾದ ವೈಶಿಷ್ಟ್ಯಗಳ ಇರಲಿವೆ ಎಂದು ವರದಿಯಾಗಿದೆ. ಮೂಡ್ ಲ್ಯಾಂಪ್, ಬ್ಲೂಲಿಂಕ್ ಕನೆಕ್ಟಿವಿಟಿಯಂತಹ ಹಲವಾರು ವೈಶಿಷ್ಟ್ಯಗಳು ಈ ಹೊಸ ಕಾರಿನಲ್ಲಿವೆ. ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಹ್ಯುಂಡೈ ಕಾಸ್ಪರ್ ಇವಿ ಬೆಲೆ 40 ಸಾವಿ ಎಯುಡಿ ಆಗಿರಬಹುದು. ಭಾರತೀಯ ಕರೆನ್ಸಿಯಲ್ಲಿ ಸುಮಾರು 21.55 ಲಕ್ಷ ರೂಪಾಯಿ

ಹೊಸ ಹ್ಯುಂಡೈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಯಾವಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ? ಇದರ ಸ್ಪಷ್ಟವಾದ ವೈಶಿಷ್ಟ್ಯಗಳೇನು, ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ಸದ್ಯದಲ್ಲೇ ಹ್ಯುಂಡೈ ಮೋಟಾರ್ ಹೊಸ ಎಲೆಕ್ಟ್ರಿಕ್ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ