logo
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ಕಾರು ಖರೀದಿಸಬೇಕು ಎಂದುಕೊಂಡವರಿಗೆ ಸಿಹಿಸುದ್ದಿ; ಮಾರುತಿಯಿಂದ ಹುಂಡೈವರೆಗೆ, ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ ಈ 5 ಕಾರುಗಳು

ಹೊಸ ಕಾರು ಖರೀದಿಸಬೇಕು ಎಂದುಕೊಂಡವರಿಗೆ ಸಿಹಿಸುದ್ದಿ; ಮಾರುತಿಯಿಂದ ಹುಂಡೈವರೆಗೆ, ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ ಈ 5 ಕಾರುಗಳು

Reshma HT Kannada

Dec 11, 2023 03:20 PM IST

ಸಾಂಕೇತಿಕ ಚಿತ್ರ

    • ವಿವಿಧ ಕಂಪನಿಗಳ 5ಕ್ಕೂ ಹೆಚ್ಚು ಹೊಸ ಕಾರುಗಳು ತಯಾರಾಗಿದ್ದು, ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧವಾಗಿವೆ. ಹಾಗಾದರೆ ಯಾವೆಲ್ಲಾ ಕಂಪನಿಯು ಸದ್ಯದಲ್ಲೇ ತನ್ನ ಹೊಸ ಕಾರನ್ನು ಬಿಡುಗಡೆ ಮಾಡಲಿದೆ ನೋಡಿ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಭಾರತದ 6 ಪ್ರಸಿದ್ಧ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ, ಟಾಟಾ, ಮಹಿಂದ್ರಾ ಹಾಗೂ ಕಿಯಾ ತಮ್ಮ ಹೊಸ ಮಾಡೆಲ್‌ನ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿವೆ. ಹಾಗಾದರೆ ಯಾವೆಲ್ಲಾ ಕಾರುಗಳು ಮಾರುಕಟ್ಟೆಗೆ ಪ್ರವೇಶಿಸಲಿವೆ ನೋಡಿ.

ಟ್ರೆಂಡಿಂಗ್​ ಸುದ್ದಿ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಹುಂಡೈ ಕ್ರೆಟಾ ನವೀಕೃತ ಆವೃತ್ತಿ

2024ರ ಜನವರಿ 16 ರಂದು ಹುಂಡೈ ಭಾರತದಲ್ಲಿ ಕ್ರೆಟಾ ಕಾರಿನ ಫೇಸ್‌ಲಿಫ್ಟೆಡ್‌ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಇದು ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕ್ರೆಟಾ ಕಾರಿನ ಬಾಹ್ಯ ಹಾಗೂ ಒಳಾಂಗಣ ವಿನ್ಯಾಸದಲ್ಲಿ ಮರುವಿನ್ಯಾಸ ಮಾಡಲಾಗಿರುವ ಕಾರಾಗಿದೆ.

ಕಿಯಾ ಸೊನೆಟ್‌ ಫೇಸ್‌ಲಿಫ್ಟ್‌

2023ರ ಡಿಸೆಂಬರ್‌ 14 ರಂದು ಕಿಯಾ ಸೊನೆಟ್‌ ಫೇಸ್‌ಲಿಫ್ಟ್‌ ಭಾರತದಲ್ಲಿ ಜಾಗತಿಕ ಚೊಚ್ಚಲ ಪ್ರವೇಶ ಮಾಡಲಿದೆ. ಶೀಘ್ರದಲ್ಲೇ ಈ ಕಾರು ಬಿಡುಗಡೆಯಾಗಲಿದೆ. ಇದು ಪರಿಷ್ಕೃತ ಕಾಂಪ್ಯಾಕ್ಟ್‌ ಎಸ್‌ಯುವಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಇದು 1.2ಲೀಟರ್‌ ಪೆಟ್ರೋಲ್‌, 1.0 ಲೀಟರ್‌ ಟರ್ಬೊ ಪೆಟ್ರೋಲ್‌ ಮತ್ತು 1.5ಲೀಟರ್‌ ಡೀಸೆಲ್‌ ಎಂಜಿನ್‌ಗಳನ್ನು ಬಳಸುವುದನ್ನು ಮುಂದುವರಿಸುತ್ತದೆ.

ಟಾಟಾ ಕರ್ವ್‌ ಅಂಡ್‌ ಹ್ಯಾರಿಯರ್‌ ಪೆಟ್ರೋಲ್‌

ಮುಂದಿನ ವರ್ಷ ಅಂದರೆ 2024ರ ಮೊದಲಾರ್ಧದಲ್ಲಿ ಟಾಟಾ ಮೋಟಾರ್ಸ್‌ ತನ್ನ ಯುವಿ ನೋಟದಲ್ಲಿ ಕರ್ವ್‌ ಅನ್ನು ಭಾರತದಲ್ಲಿ ಪರಿಚಯಿಸುತ್ತಿದೆ. ಇದು ನೆಕ್ಸಾನ್‌ ಯುವಿಗಿಂತ ಟಾಪ್‌ ಆಗಿರುತ್ತದೆ. ಒಂದು ಬಾರಿ ಚಾರ್ಚ್‌ ಮಾಡಿದಾಗ 500 ಕಿಲೋಮೀಟರ್‌ಗಿಂತ ಹೆಚ್ಚು ದೂರ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ. 1.5 ಲೀ ಟಿಜಿಡಿಐ ಪೆಟ್ರೋಲ್‌ ಎಂಜಿನ್‌ ಸುಸಜ್ಜಿತ ಹ್ಯಾರಿಯರ್‌ ಕೂಡ ಮುಂದಿನ ವರ್ಷ ಮಾರುಕಟ್ಟೆ ಬರುವುದು ಪಕ್ಕಾ ಆಗಿದೆ. ಇದರೊಂದಿಗೆ ಪಂಚ್‌ ಯುವಿ ಮತ್ತು ಕರ್ವ್‌ ಐಸಿಇ ಕೂಡ 2024ರಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಮಹಿಂದ್ರಾ ಎಕ್ಸ್‌ಯುವಿ300 ಫೇಸ್‌ಲಿಫ್ಟ್‌ ಮತ್ತು 5 ಡೋರ್‌ ಥಾರ್‌

ಮರುನವೀಕೃತ ಮಹಿಂದ್ರಾ ಎಕ್ಸ್‌ಯುವಿ 300 ಒಳಗೆ ಹಾಗೂ ಹೊರಗಿನಿಂದ ಹಲವು ಬದಲಾವಣೆಗಳನ್ನು ಹೊಂದಿರುತ್ತದೆ. ಹೊಸ ಎಕ್ಸ್‌ಯುವಿಯ ಹೊರ ಭಾಗವು ಎಕ್ಸ್‌ಯುವಿ700 ಮತ್ತಿ ಮುಂಬರುವ ಬಿಇ ಶ್ರೇಣಿಯಿಂದ ಹೆಚ್ಚು ಪ್ರಭಾವಿತವಾಗಿದೆ. ಒಳಭಾಗವು ದೊಡ್ಡ ಟಚ್‌ಸ್ಕ್ರೀನ್‌, ನವೀಕರಿಸಿದ ಡ್ಯಾಶ್‌ ಮತ್ತು ಸೆಂಟ್ರಲ್‌ ಕನ್ಸೋಲ್‌, ಹೊಸ ಡಿಜಿಟಲ್‌ ಕ್ಲಸ್ಟರ್‌ ಇತ್ಯಾದಿ ಅಂಶಗಳನ್ನು ಹೊಂದಿರುತ್ತದೆ. ಯಾವುದೇ ಪವರ್‌ಟ್ರೇನ್‌ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ.

ನ್ಯೂ-ಜೆನ್‌ ಮಾರುತಿ ಸುಜುಕಿ ಸ್ವಿಫ್ಟ್‌

ಮಾರುತಿ ಸ್ವಿಫ್ಟ್‌ ಕಾರಿನ ಮೇಲೆ ಭಾರತೀಯರಿಗೆ ಒಲವು ಕಡಿಮೆಯಾಗುವುದಿಲ್ಲ. ಆ ಕಾರಣಕ್ಕೆ 2024ರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್‌ನ ನಾಲ್ಕನೇ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮಾರುಕಟ್ಟೆ ಪ್ರವೇಶಿಸಲಿರುವ ಹೊಸ ಸ್ವಿಫ್ಟ್‌ ಪರಿಕಲ್ಪನೆಯನ್ನು ಇತ್ತೀಚೆಗೆ ಟೋಕಿಯೊದಲ್ಲಿ ನಡೆದ ಜಪಾನ್ ಮೊಬಿಲಿಟಿ ಶೋ 2023 ರಲ್ಲಿ ವಿಕಸನೀಯ ಕಾಸ್ಮೆಟಿಕ್ ಮತ್ತು ಕ್ಯಾಬಿನ್ ಬದಲಾವಣೆಗಳೊಂದಿಗೆ ಪ್ರದರ್ಶಿಸಲಾಯಿತು. ಹೊಸ Z ಸರಣಿಯ ಸೌಮ್ಯ ಹೈಬ್ರಿಡ್ 1.2L ಪೆಟ್ರೋಲ್ ಎಂಜಿನ್ ಅಸ್ತಿತ್ವದಲ್ಲಿರುವ K ಸರಣಿ ಘಟಕವನ್ನು ಬದಲಾಯಿಸಬಹುದು. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು ನೀಡಲಾಗುವುದು ಎಂದು ಗಾಡಿವಾಡಿ.ಕಾಮ್‌ ವರದಿ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು