logo
ಕನ್ನಡ ಸುದ್ದಿ  /  ಜೀವನಶೈಲಿ  /  Bisi Bele Bath: ನೀವು ಮಾಡಿದ್ದು ರುಚಿ ಇಲ್ವಾ? ಇಲ್ಲಿದೆ ನೋಡಿ ಪರ್ಫೆಕ್ಟ್‌ ಬಿಸಿ ಬೇಳೆ ಬಾತ್‌ ತಯಾರಿಸುವ ವಿಧಾನ; ಪುಡಿ ರೆಸಿಪಿ ಕೂಡಾ ಇದೆ

Bisi Bele Bath: ನೀವು ಮಾಡಿದ್ದು ರುಚಿ ಇಲ್ವಾ? ಇಲ್ಲಿದೆ ನೋಡಿ ಪರ್ಫೆಕ್ಟ್‌ ಬಿಸಿ ಬೇಳೆ ಬಾತ್‌ ತಯಾರಿಸುವ ವಿಧಾನ; ಪುಡಿ ರೆಸಿಪಿ ಕೂಡಾ ಇದೆ

HT Kannada Desk HT Kannada

Jul 19, 2023 08:34 AM IST

ಪರ್ಫೆಕ್ಟ್‌ ಬಿಸಿ ಬೇಳೆ ಬಾತ್‌ ರೆಸಿಪಿ

  • ಕರ್ನಾಟಕದ ಅಥೆಂಟಿಕ್‌ ರೆಸಿಪಿಗಳಲ್ಲಿ ಬಿಸಿ ಬೇಳೆ ಬಾತ್‌ ಕೂಡಾ ಒಂದು. ಅಡುಗೆ ತಯಾರಿಸುವುದು ಕೂಡಾ ಒಂದು ಕಲೆ, ಹಾಗೇ ನಾವು ಯಾವ ತಿಂಡಿ ತಯಾರಿಸಿದರೂ ಅದಕ್ಕೆ ಒಂದಿಷ್ಟು ತಯಾರಿ ಬೇಕು. ಸಾಮಗ್ರಿಗಳನ್ನು ಹದವಾಗಿ ಬಳಸಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೂ ಅಡುಗೆ ಕೆಡುತ್ತದೆ. ಬಿಸಿ ಬೇಳೆ ಬಾತ್‌ ತಯಾರಿಸುವಾಗಲೂ ಇದೇ ಎಚ್ಚರಿಕೆಯಿಂದ ಇರಬೇಕು.

ಪರ್ಫೆಕ್ಟ್‌ ಬಿಸಿ ಬೇಳೆ ಬಾತ್‌ ರೆಸಿಪಿ
ಪರ್ಫೆಕ್ಟ್‌ ಬಿಸಿ ಬೇಳೆ ಬಾತ್‌ ರೆಸಿಪಿ (PC: Pinterest)

ಬೇಳೆ ಸಾಂಬಾರ್‌ ಪುಡಿಯನ್ನು ಅಕ್ಕಿ, ನೀರು, ತರಕಾರಿ ಜೊತೆ ಮಿಕ್ಸ್‌ ಮಾಡಿ ತಯಾರಿಸುವ ತಿಂಡಿ ಎಂದಿಗೂ ಬಿಸಿ ಬೇಳೆ ಬಾತ್‌ ಆಗುವುದಿಲ್ಲ. ಅದನ್ನು ತಯಾರಿಸಲು ಪ್ರತ್ಯೇಕ ವಿಧಾನ ಇದೆ. ಪರ್ಫೆಕ್ಟ್‌ ಆದ , ಬಾಯಲ್ಲಿ ನೀರೂರಿಸುವ ಬಿಸಿ ಬೇಳೆ ಬಾತ್‌ ತಯಾರಿಸುವ ವಿಧಾನ ಇಲ್ಲಿದೆ. ಜೊತೆಗೆ ಈ ರೆಸಿಪಿಗೆ ಬಹಳ ಮುಖ್ಯವಾದ ಪುಡಿ ಮಾಡುವ ವಿಧಾನವನ್ನೂ ವಿವರಿಸಲಾಗಿದೆ. ಮುಂದಿನ ಬಾರಿ ತಪ್ಪದೆ ಟ್ರೈ ಮಾಡಿ.

ಟ್ರೆಂಡಿಂಗ್​ ಸುದ್ದಿ

Chia Seeds: ತೂಕ ಇಳಿಕೆ ಮಾತ್ರವಲ್ಲ, ತ್ವಚೆಯ ಅಂದ ಹೆಚ್ಚುವುದರಿಂದ ಹೃದಯದ ಆರೋಗ್ಯದವರೆಗೆ ಚಿಯಾ ಬೀಜ ಸೇವನೆಯ ಪ್ರಯೋಜನಗಳಿವು

Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

Personality Test: ಚಿತ್ರದಲ್ಲಿ ಮೊದಲು ಕಂಡಿದ್ದೇನು? ನೀವು ನೇರ ಸ್ವಭಾವದವರಾ, ಮೌನಪ್ರೇಮಿಯೇ, ನಿಮ್ಮ ವ್ಯಕ್ತಿತ್ವ ತಿಳಿಸುವ ಚಿತ್ರವಿದು

ಬಿಸಿ ಬೇಳೆ ಬಾತ್‌ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಚೆಕ್ಕೆ - 5 ಗ್ರಾಂ

ಲವಂಗ - 2 ಗ್ರಾಂ

ಕಡ್ಲೆಬೇಳೆ - 20 ಗ್ರಾಂ

ಉದ್ದಿನ ಬೇಳೆ - ಗ್ರಾಂ

ಜಾಯಿ ಕಾಯಿ - 1/2

ಇಂಗು - 10 ಗ್ರಾಂ

ಧನಿಯಾ - 50 ಗ್ರಾಂ

ಗುಂಟೂರು ಮೆಣಸಿನಕಾಯಿ - 10

ಬ್ಯಾಡಗಿ ಮೆಣಸಿನಕಾಯಿ - 150 ಗ್ರಾಂ

ಕರಿಬೇವು - 5 ಎಸಳು

ಗಸಗಸೆ - 10 ಗ್ರಾಂ

ಅರಿಶಿನ - 1 ಟೀ ಸ್ಪೂನ್‌

ಜೀರ್ಗೆ - 1 ಟೀ ಸ್ಪೂನ್‌

ಏಲಕ್ಕಿ - 2

ಎಣ್ಣೆ - 2 ಟೇಬಲ್‌ ಸ್ಪೂನ್

ಇಷ್ಟು ಸಾಮಗ್ರಿಗಳಿಂದ ಸುಮಾರು 1/4 ಕಿಲೋ ಬಿಸಿ ಬೇಳೆ ಬಾತ್‌ ಪುಡಿ ತಯಾರಿಸಬಹುದು

ಪುಡಿ ತಯಾರಿಸುವ ವಿಧಾನ

  • ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಇಂಗು, ಚೆಕ್ಕೆ, ಲವಂಗ ಸೇರಿಸಿ ಬಹಳ ಕಡಿಮೆ ಉರಿಯಲ್ಲಿ 30 ಸೆಕೆಂಡ್‌ ಹುರಿಯಿರಿ.
  • ಜೊತೆಗೆ ಕಡ್ಲೆಬೇಳೆ, ಉದ್ದಿನಬೇಳೆ, ಏಲಕ್ಕಿ ಸೇರಿಸಿ ಕಂದು ಬಣ್ಣ ಬರುವರೆಗೂ ಹುರಿದು ಹೆಚ್ಚುವರಿ ಎಣ್ಣೆಯನ್ನು ತೆಗೆಯಿರಿ.
  • ನಂತರ ಜಾಯಿ ಕಾಯಿ, ಜೀರ್ಗೆ, ಗಸಗಸೆ ಸೇರಿಸಿ ಫ್ರೈ ಮಾಡಿ, ಧನಿಯಾ, ಗುಂಟೂರು ಮೆಣಸಿನಕಾಯಿ, ಕರಿಬೇವು, ಅರಿಶಿನ ಸೇರಿಸಿ ಒಮ್ಮೆ ಫ್ರೈ ಮಾಡಿ ಒಂದು ಪ್ಲೇಟ್‌ಗೆ ಸೇರಿಸಿ ತಣ್ಣಗಾಗಲು ಬಿಡಿ.
  • ಅದೇ ಪಾತ್ರೆಗೆ ಬ್ಯಾಡಗಿ ಮೆಣಸಿನಕಾಯಿ ಸೇರಿಸಿ ಗರಿ ಗರಿಯಾಗುವರೆಗೂ ಫ್ರೈ ಮಾಡಿ.
  • ಎಲ್ಲಾ ಮಿಶ್ರಣ ತಣ್ಣಗಾದ ನಂತರ ಮೊದಲು ಮೆಣಸಿನಕಾಯನ್ನು ಮಿಕ್ಸಿ ಜಾರ್‌ಗೆ ಸೇರಿಸಿ ಪುಡಿ ಮಾಡಿಕೊಳ್ಳಿ.
  • ನಂತರ ಉಳಿದ ಸಾಮಗ್ರಿಗಳನ್ನು ಸೇರಿಸಿ ಪುಡಿ ಮಾಡಿಕೊಂಡು ಮೆಣಸಿನಕಾಯಿ ಪುಡಿ ಹಾಗೂ ಬೇಳೆ ಪುಡಿಯನ್ನು ಮತ್ತೊಮ್ಮೆ ಜಾರ್‌ನಲ್ಲಿ ಪುಡಿ ಮಾಡಿದರೆ ಘಮ ಘಮಿಸುವ ಬಿಸಿ ಬೇಳೆ ಬಾತ್‌ ಪುಡಿ ರೆಡಿ.

ಬಿಸಿ ಬೇಳೆ ಬಾತ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

ತೊಗರಿ ಬೇಳೆ - 1 ಕಪ್‌

ಅಕ್ಕಿ - 1 ಕಪ್‌

ಬಿಸಿ ಬೇಳೆ ಬಾತ್‌ ಪುಡಿ - 3 ಟೇಬಲ್‌ ಸ್ಪೂನ್‌

ಬೀನ್ಸ್‌ - 8

ಕ್ಯಾರೆಟ್‌ - 1

ಹಸಿ ಬಟಾಣಿ - 1/4 ಕಪ್

ಚಿಕ್ಕ ಟೊಮೆಟೊ - 2

ಹುಣಿಸೆ ಹಣ್ಣು - ದೊಡ್ಡ ನೆಲ್ಲಿಕಾಯಿ ಗಾತ್ರ

ಸಾಂಬಾರ್‌ ಈರುಳ್ಳಿ - 100 ಗ್ರಾಂ

ಒಣಕೊಬ್ಬರಿ ತುರಿ - 1 ಕಪ್‌

ಗೋಡಂಬಿ - 3 ಟೇಬಲ್‌ ಸ್ಪೂನ್‌

ಎಣ್ಣೆ - 4 ಸ್ಪೂನ್‌

ತುಪ್ಪ - 2 ಟೇಬಲ್‌ ಸ್ಪೂನ್‌

ಇಂಗು - ಚಿಟಿಕೆ

ಅರಿಶಿನ - ಚಿಟಿಕೆ

ಒಣಮೆಣಸಿನಕಾಯಿ - 5

ಕಡ್ಲೆಕಾಯಿ ಬೀಜ - 2 ಟೇಬಲ್‌ ಸ್ಪೂನ್‌

ಕರಿಬೇವು - 2 ಎಸಳು

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

  • ತೊಗರಿಬೇಳೆಯನ್ನು 2-3 ಬಾರಿ ತೊಳೆದು ಅದರೊಂದಿಗೆ 3 ಕಪ್‌ ನೀರು ಸ್ವಲ್ಪ ಅರಿಸಿನ , 2 ಸ್ಪೂನ್‌ ಎಣ್ಣೆ ಸೇರಿಸಿ ಮಿಕ್ಸ್‌ ಮಾಡಿ 2 ಸೀಟಿ ಕೂಗಿಸಿಕೊಳ್ಳಿ.
  • ಬೇಳೆ ಕುಕ್‌ ಆದ ನಂತರ ಅದರೊಂದಿಗೆ 3 ಕಪ್‌ ನೀರು, ಸಾಂಬಾರ್‌ ಈರುಳ್ಳಿ, ಟೊಮೆಟೊ, ತರಕಾರಿ, ಹಸಿ ಬಟಾಣಿ ಅಕ್ಕಿ, ಸ್ವಲ್ಪ ಉಪ್ಪು ಸೇರಿಸಿ ಕುದಿಯಲು ಬಿಡಿ.
  • ಹುಣಿಸೆಹಣ್ಣಿಗೆ ಸ್ವಲ್ಪ ನೀರು ಸೇರಿಸಿ ನೆನೆಯಲು ಬಿಟ್ಟು, ಕಿವುಚಿ ರಸ ತೆಗೆದಿಟ್ಟುಕೊಳ್ಳಿ.
  • ಈ ಹುಣಿಸೆ ರಸಕ್ಕೆ ಬಿಸಿ ಬೇಳೆ ಬಾತ್‌ ಪುಡಿ ಸೇರಿಸಿ ಗಂಟುಗಳು ಇಲ್ಲದಂತೆ ಮಿಕ್ಸ್‌ ಮಾಡಿ.
  • ಅಕ್ಕಿ ಮುಕ್ಕಾಲು ಭಾಗ ಕುಕ್‌ ಆದ ನಂತರ ಪುಡಿ ಸೇರಿಸಿದ ಹುಣಿಸೆ ರಸ ಸೇರಿಸಿ ತಿರುವುತ್ತಲೇ ಇರಿ, ಇಲ್ಲದಿದ್ದರೆ ಅದು ಗಂಟಾಗುತ್ತದೆ, ನಂತರ ಇನ್ನಷ್ಟು ಉಪ್ಪು, ಕೊಬ್ಬರಿ ತುರಿ ಸೇರಿಸಿ ಮಧ್ಯೆ ಮಧ್ಯೆ ಮರೆಯದೆ ತಿರುವಿ.
  • ಒಮ್ಮೆ ರುಚಿ ನೋಡಿ ನಿಮಗೆ ಅಗತ್ಯ ಎನಿಸಿದರೆ ಇನ್ನಷ್ಟು ಬಿಸಿ ಬೇಳೆ ಬಾತ್‌ ಪುಡಿ ಅಥವಾ ಉಪ್ಪನ್ನು ಅಡ್ಜೆಸ್ಟ್‌ ಮಾಡಿ ಕಡಿಮೆ ಉರಿಯಲ್ಲಿ 5 ನಿಮಿಷ ಕುಕ್‌ ಮಾಡಿ ಸ್ಟೋವ್‌ ಆಫ್‌ ಮಾಡಿ.
  • ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಇಂಗು, ಅರಿಶಿನ, ಒಣಮೆಣಸಿನಕಾಯಿ, ಕರಿಬೇವು, ಕಡ್ಲೆಕಾಯಿ ಬೀಜ, ಗೋಡಂಬಿ ಸೇರಿಸಿ ಫ್ರೈ ಮಾಡಿ
  • ಈ ಒಗ್ಗರಣೆಯನ್ನು ಬಿಸಿ ಬೇಳೆ ಬಾತ್‌ ಒಳಗೆ ಸೇರಿಸಿ ಮಿಕ್ಸ್‌ ಮಾಡಿ.

ರುಚಿಯಾದ ಬಿಸಿ ಬೇಳೆ ಬಾತನ್ನು ಖಾರಾ ಬೂಂದಿ ಜೊತೆ ಸರ್ವ್‌ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು