logo
ಕನ್ನಡ ಸುದ್ದಿ  /  ಜೀವನಶೈಲಿ  /  Pan Card: ಪ್ಯಾನ್‌ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ, ಇಲ್ಲಿದೆ ಸಿಂಪಲ್‌ ಗೈಡ್‌ಲೈನ್ಸ್‌

PAN Card: ಪ್ಯಾನ್‌ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ, ಇಲ್ಲಿದೆ ಸಿಂಪಲ್‌ ಗೈಡ್‌ಲೈನ್ಸ್‌

Reshma HT Kannada

Mar 01, 2024 02:29 PM IST

ಪ್ಯಾನ್‌ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ ಗೈಡ್‌ಲೈನ್ಸ್‌

    • ಈಗ ಪ್ಯಾನ್‌ಕಾರ್ಡ್‌ ಇಲ್ಲದೇ ಯಾವುದೇ ಹಣಕಾಸು ವ್ಯವಹಾರ ನಡೆಯಲು ಸಾಧ್ಯವಿಲ್ಲ. ಇದರೊಂದಿಗೆ ತೆರಿಗೆ ವಿನಾಯಿತಿ ಹಾಗೂ ಪಾವತಿ ವಿಚಾರಕ್ಕೂ ಪ್ಯಾನ್‌ಕಾರ್ಡ್‌ ಬೇಕೇಬೇಕು. ನಿಮಗಿನ್ನು ಪ್ಯಾನ್‌ ನಂಬರ್‌ ಸಿಕ್ಕಿಲ್ಲ ಅಂದ್ರೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ತ್ವರಿತವಾಗಿ ಪ್ಯಾನ್‌ ಕಾರ್ಡ್‌ ಪಡೆಯಿರಿ. ಆನ್‌ಲೈನ್‌ ಅಪ್ಲಿಕೇಷನ್‌ ಹಾಕೋದು ಹೇಗೆ ನೋಡಿ. 
ಪ್ಯಾನ್‌ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ ಗೈಡ್‌ಲೈನ್ಸ್‌
ಪ್ಯಾನ್‌ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ ಗೈಡ್‌ಲೈನ್ಸ್‌

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌, ಪೋಸ್ಟ್‌ ಆಫೀಸ್‌ ಹೀಗೆ ಯಾವುದೇ ಹಣಕಾಸಿನ ವ್ಯವಹಾರವಿರಲಿ ಪಾನ್‌ ಕಾರ್ಡ್‌ ಇಲ್ಲದೇ ಹೋದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಪಾನ್‌ ಕಾರ್ಡ್‌ ಇಲ್ಲದೇ ಹೋದಲ್ಲಿ ನೀವು ತೆರಿಗೆ ವಿಧಿಸಬೇಕಾಗಿಬರಬಹುದು. ಹಣಕಾಸಿನ ವ್ಯವಹಾರಗಳು ಹಾಗೂ ತೆರಿಗೆಗಳನ್ನು ಒಳಗೊಂಡಿರುವ ಪ್ರಮುಖ ದಾಖಲೆಯಾಗಿ ಪಾನ್‌ಕಾರ್ಡ್‌ ಕಾರ್ಯನಿರ್ವಹಿಸುತ್ತದೆ. ಆದಾಯ ತೆರಿಗೆ ಇಲಾಖೆಯು ಭಾರತದ ನಿವಾಸಿಗಳಿಗೆ ಪರ್ಮನೆಂಟ್‌ ಅಕೌಂಟ್‌ ನಂಬರ್‌ (PAN) ಕಾರ್ಡ್‌ ನೀಡುತ್ತದೆ. ಇದರಲ್ಲಿ ಅಂಕೆ ಹಾಗೂ ಅಕ್ಷರ ಸೇರಿ ಒಟ್ಟು 10 ಅಕ್ಷರಗಳಿರುತ್ತವೆ.

ಟ್ರೆಂಡಿಂಗ್​ ಸುದ್ದಿ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಭಾರತದಲ್ಲಿ ಇನ್‌ಕಮ್‌ ಟ್ಯಾಕ್ಸ್‌ (ಆದಾಯ ತೆರಿಗೆ) ರಿಟರ್ನ್ಸ್‌ ಸಲ್ಲಿಸಲು, ಬ್ಯಾಂಕ್‌ ಖಾತೆಗಳನ್ನು ತೆರೆಯಲು, ಭದ್ರತೆಗಳಲ್ಲಿ ಹೂಡಿಕೆ ಮಾಡಲು, ಆಸ್ತಿಯನ್ನು ಖರೀದಿಸಲು ಮತ್ತು ವಿವಿಧ ಹಣಕಾಸು ವಹಿವಾಟುಗಳನ್ನು ನಡೆಸಲು ಪ್ಯಾನ್‌ ಕಾರ್ಡ್‌ ಅತ್ಯಗತ್ಯ.

ವಿಳಾಸ ಹಾಗೂ ಇತರ ವಿವರಗಳನ್ನು ಹೊರತುಪಡಿಸಿದರೆ, ಒಬ್ಬ ವ್ಯಕ್ತಿಗೆ ಅವನ ಜೀವಿತಾವಧಿವರೆಗೆ ಒಂದೇ ಪ್ಯಾನ್‌ ನಂಬರ್‌ ಇರುತ್ತದೆ. ಪ್ಯಾನ್‌ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಪ್ಯಾನ್‌ ಕಾರ್ಡ್‌ ಏಕೆ ಬೇಕು?

ಬ್ಯಾಂಕ್‌ ಹಾಗೂ ಇತರ ವ್ಯವಹಾರಗಳಿಗೆ ಹೊರತುಪಡಿಸಿ, ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ ಹಾಗೂ ತೆರಿಗೆ ಪಾವತಿಸಲು ಬಳಸಲಾಗುತ್ತದೆ . ಇದು ವ್ಯಕ್ತಿಯ ಹಣಕಾಸು ವ್ಯವಹಾರಗಳನ್ನು ಟ್ರ್ಯಾಕ್ಸ್‌ ಮಾಡಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಸರಿಯಾಗಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರಾ ಅಥವಾ ಇಲ್ಲವೇ ಎಂಬುದನ್ನು ಟ್ರ್ಯಾಕ್‌ ಮಾಡಲು ಇದು ಸಹಾಯ ಮಾಡುತ್ತದೆ.

ಪ್ಯಾನ್‌ಕಾರ್ಡ್‌ಗಾಗಿ ಯಾರು ಅರ್ಜಿ ಸಲ್ಲಿಸಬಹುದು?

ಆರ್ಥಿಕ ಹಾಗೂ ಹಣಕಾಸು ವಹಿವಾಟು ನಡೆಸುವ ಪ್ರತಿಯೊಬ್ಬ ವ್ಯಕ್ತಿಯ ಹೆಸರಿನಲ್ಲೂ ಪ್ಯಾನ್‌ ಕಾರ್ಡ್‌ ಇರುವುದು ಅವಶ್ಯ. ತೆರಿಗೆ ಪಾವತಿಸುವ ಪ್ರತಿಯೊಬ್ಬರು ಪ್ಯಾನ್‌ ಕಾರ್ಡ್‌ ಹೊಂದಿರಬೇಕು.

ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

* https://www.protean-tinpan.com/services/pan/pan-index.html ಈ ವೆಬ್‌ಸೈಟ್‌ಗೆ ಭೇಟಿ ನೀಡಿ.

* ವೆಬ್‌ಸೈಟ್‌ನಲ್ಲಿ ನಿಮಗೆ ಒಂದಿಷ್ಟು ಆಯ್ಕೆ ಕಾಣಿಸುತ್ತದೆ.

* ಅಲ್ಲಿ Application for allotment of New PAN (Form 49A) – applicable for Citizens of India ಎಂದಿರುತ್ತದೆ. ಅದರಲ್ಲಿ ಕೆಳಗಡೆ ಅಪ್ಲೈ ಎಂಬ ಆಯ್ಕೆ ಕಾಣಿಸುತ್ತದೆ.

* ಅಲ್ಲಿ ಕ್ಲಿಕ್‌ ಮಾಡಿದರೆ ನಿಮಗೆ ಅರ್ಜಿ ಭರ್ತಿ ಮಾಡುವ ಆಯ್ಕೆ ಕಾಣಿಸುತ್ತದೆ. ಅದರಲ್ಲಿ ನಿಮ್ಮ ವಿವರಗಳನ್ನು ತಪ್ಪಿಲ್ಲದೇ ಭರ್ತಿ ಮಾಡಿ.

* ನಂತರ ಪೇಮೆಂಟ್‌ ಆಯ್ಕೆ ಕಾಣಿಸುತ್ತದೆ. ಅಲ್ಲಿ ಹೋಗಿ ಪೇಮೆಂಟ್‌ ಮಾಡಿ.

* ನಂತರ ನಿಮಗೆ ಒಂದು ಅಕ್‌ನಾಲೆಡ್ಜ್‌ಮೆಂಟ್‌ ರಿಸಿಟ್‌ ಬರುತ್ತದೆ.

* ಅದನ್ನ ಸೇವ್‌ ಮಾಡಿ, ಪ್ರಿಂಟ್‌ ತೆಗೆದು ಇರಿಸಿಕೊಳ್ಳಿ.

* ಅಪ್ಲಿಕೇಷನ್‌ನಲ್ಲಿ ನೀಡಿದ ಜಾಗದಲ್ಲಿ ಸರಿಯಾಗಿ ಸಹಿ ಮಾಡಿ, ಇತ್ತೀಚಿನ ಕಲರ್‌ ಫೋಟೊ ಅಂಟಿಸಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಈ ಅರ್ಜಿಯನ್ನು ಇನ್‌ಕಮ್‌ ಟ್ಯಾಕ್ಸ್‌ ಪಾನ್‌ ಸರ್ವೀಸ್‌ ಯುನಿಟ್‌ಗೆ ಕಳುಹಿಸಿ.

ಮೇಲೆ ತಿಳಿಸಿದ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಹಲವು ಆಯ್ಕೆಗಳು ಕಾಣುತ್ತವೆ. ಪಾನ್‌ ಕಾರ್ಡ್‌ ರೀಪ್ರಿಂಟ್‌ ಮಾಡುವುದು, ಪಾನ್‌ ಕಾರ್ಡ್‌ ತಿದ್ದುಪಡಿ (ಕರೆಕ್ಷನ್‌) ಸೇರಿದಂತೆ ಒಂದಿಷ್ಟು ಆಯ್ಕೆಗಳಿರುತ್ತವೆ, ಅದರಲ್ಲಿ ನೀವು ನಿಮಗೆ ಬೇಕಾದ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ, ತಿದ್ದುಪಡಿ ಬದಲಾವಣೆ ಮಾಡಿಕೊಳ್ಳಲೂ ಕೂಡ ಅವಕಾಶವಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು