logo
ಕನ್ನಡ ಸುದ್ದಿ  /  ಜೀವನಶೈಲಿ  /  Sgb: ಚಿನ್ನ ಖರೀದಿಯ ಆಸೆಯಿದ್ದರೆ ಹೂಡಿಕೆಗೆ ಬೆಸ್ಟ್ ಆಯ್ಕೆ ಸವರನ್ ಗೋಲ್ಡ್ ಬಾಂಡ್, ಡಿ 22 ಕೊನೆಯ ದಿನ

SGB: ಚಿನ್ನ ಖರೀದಿಯ ಆಸೆಯಿದ್ದರೆ ಹೂಡಿಕೆಗೆ ಬೆಸ್ಟ್ ಆಯ್ಕೆ ಸವರನ್ ಗೋಲ್ಡ್ ಬಾಂಡ್, ಡಿ 22 ಕೊನೆಯ ದಿನ

Reshma HT Kannada

Dec 20, 2023 08:10 AM IST

ಸವರನ್‌ ಗೋಲ್ಡ್‌ ಬಾಂಡ್‌

    • ಭಾರತೀಯರಿಗೆ ಚಿನ್ನದ ಮೇಲಿನ ಆಸೆ ಎಂದಿಗೂ ಕಡಿಮೆಯಾಗುವುದಿಲ್ಲ. ಚಿನ್ನದ ಮೇಲೆ ಹೂಡಿಕೆ ಮಾಡುವ ಯೋಚನೆ ಇದ್ದರೆ ಸವರನ್‌ ಗೋಲ್ಡ್‌ ಬಾಂಡ್‌ (Sovereign gold bond) ಮೇಲೆ ಹೂಡಿಕೆ ಮಾಡಬಹುದು. ಆರ್‌ಬಿಐ ಶುಕ್ರವಾರ (ಡಿ.15) ಸಾವರನ್‌ ಗೋಲ್ಡ್‌ ಬಾಂಡ್‌ನ ಮುಂದಿನ ಕಂತಿನ ವಿತರಣೆಯ ಬೆಲೆಯನ್ನು ಘೋಷಿಸಿದ್ದು, ಪ್ರತಿ ಗ್ರಾಂಗೆ 6,199 ರೂ ನಿಗದಿ ಪಡಿಸಿದೆ.
ಸವರನ್‌ ಗೋಲ್ಡ್‌ ಬಾಂಡ್‌
ಸವರನ್‌ ಗೋಲ್ಡ್‌ ಬಾಂಡ್‌

ಚಿನ್ನ ಎಂದರೆ ಭಾರತೀಯರಿಗೆ ಅದೇನೋ ಒಲವು. ಚಿನ್ನದ ದರ ಗಗನಕ್ಕೇರಿದರೂ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಚಿನ್ನ ಖರೀದಿಯ ಪ್ರಮಾಣ ಹೆಚ್ಚಾಗಿದೆ ಹೊರತು ಕಡಿಮೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ಸಾಮಾನ್ಯವಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭ ಗಳಿಸುವ ಸಾಧ್ಯತೆಯೂ ಹೆಚ್ಚು. ನೀವು ಚಿನ್ನದ ಮೇಲೆ ಹೂಡಿಕೆ ಮಾಡುವ ಯೋಚನೆ ಇದ್ದರೆ ಸವರನ್‌ ಗೋಲ್ಡ್‌ ಬಾಂಡ್‌ ಉತ್ತಮ ಆಯ್ಕೆ.

ಟ್ರೆಂಡಿಂಗ್​ ಸುದ್ದಿ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

2023-2024ನೇ ಆರ್ಥಿಕ ವರ್ಷದ ಸವರನ್‌ ಗೋಲ್ಡ್‌ ಬಾಂಡ್‌ (SGB) ಸ್ಕೀಮ್‌ ಸರಣಿ III ಅನ್ನು ಡಿಸೆಂಬರ್‌ 18ರಂದು ತೆರೆಯಲಾಗಿದೆ. ಈ ಸ್ಕೀಮ್‌ ಡಿಸೆಂಬರ್‌ 22 ರಂದು ಕೊನೆಗೊಳ್ಳುತ್ತದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಸಾವರನ್‌ ಗೋಲ್ಡ್‌ ಬಾಂಡ್‌ನ ಮುಂದಿನ ಕಂತಿನ ವಿತರಣೆಯ ಬೆಲೆಯನ್ನು ಘೋಷಿಸಿದ್ದು, ಪ್ರತಿ ಗ್ರಾಂಗೆ 6,199 ರೂ ನಿಗದಿ ಪಡಿಸಿದೆ. ʼಸಬ್‌ಸ್ಕ್ರಿಪ್ಷನ್‌ ಅವಧಿಯ ಹಿಂದಿನ ವಾರದ ಕೊನೆಯ ಮೂರು ವರ್ಕಿಂಗ್‌ ಡೇಸ್‌ನಲ್ಲಿ ಅಂದರೆ ಡಿಸೆಂಬರ್‌ 13,14,15 ರ 999 ಹಾಲ್‌ಮಾರ್ಕ್‌ ಚಿನ್ನದ ಬೆಲೆಯ ಸರಾಸರಿ ಆಧರಿಸಿ ಬಾಂಡ್‌ನ ನಾಮಿನಲ್‌ ಮೌಲ್ಯವನ್ನು ಪ್ರತಿ ಗ್ರಾಂಗೆ 6,199 ರೂ ಎಂದು ನಿಗದಿ ಪಡಿಸಲಾಗಿದೆ.

ಆನ್‌ಲೈನ್‌ ಚಂದಾದಾರರಾಗುವ ಹಾಗೂ ಡಿಜಿಟಲ್‌ ಮೋಡ್‌ ಮೂಲಕ ಪಾವತಿಸುವ ಹೂಡಿಕೆದಾರರಿಗೆ ಸವರನ್‌ ಗೋಲ್ಡ್‌ ಬಾಂಡ್‌ ವಿತರಣೆಯ ಬೆಲೆ ಪ್ರತಿ ಗ್ರಾಂಗೆ 50 ರೂ ನಷ್ಟು ಕಡಿಮೆ ಇರುತ್ತದೆ. ಈ ಬಾಂಡ್‌ಗಳು ನಿಗದಿತ ವಾಣಿಜ್ಯ ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕ್‌ಗಳು, ಪೇಮೆಂಟ್‌ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCIL), ಡೆಸಿಗ್ನೇನೆಟೆಡ್‌ ಅಂಚೆ ಕಚೇರಿಗಳು, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌, ಇಂಡಿಯಾ ಲಿಮಿಟೆಡ್ ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೆಂಜ್‌ ಲಿಮಿಟೆಡ್ ಮೂಲಕ ಮಾರಾಟ ಮಾಡಲಾಗುತ್ತದೆ.

ಸವರನ್‌ ಗೋಲ್ಡ್‌ ಬಾಂಡ್‌ ಆರಂಭ

2015ರ ನವೆಂಬರ್‌ನಲ್ಲಿ ಗೋಲ್ಡ್‌ ಮಾನಿಟೈಜೇಷನ್‌ ಅಡಿಯಲ್ಲಿ ಸರ್ಕಾರ ಸವರನ್‌ ಗೋಲ್ಡ್‌ ಬಾಂಡ್‌ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಡಿ ಜಿಓಐ(GOI- The Government of India) ಯೊಂದಿಗೆ ಸಮಾಲೋಚಿಸಿ ಎಸ್‌ಬಿಐ (State Bank of India) ಸಬ್‌ಸ್ಕ್ರಿಪ್ಷನ್‌ ಆಯ್ಕೆಯನ್ನು ಮುಕ್ತಗೊಳಿಸುತ್ತದೆ. ಆರ್‌ಬಿಐ ಕಾಲಕಾಲಕ್ಕೆ ಈ ಸ್ಕೀಮ್‌ನ ನಿಯಮಗಳು ಹಾಗೂ ಷರತ್ತುಗಳನ್ನು ತಿಳಿಸುತ್ತದೆ. ಎಸ್‌ಜಿಬಿಗಳು ಗ್ರಾಂ ಚಿನ್ನದಲ್ಲಿ ಸೂಚಿಸಲಾದ ಸರ್ಕಾರಿ ಭದ್ರತೆಗಳಾಗಿವೆ. ಅದಲು ಭೌತಿಕ ಚಿನ್ನ ಬದಲಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಮುಕ್ತಾಯದ ಸಮಯದಲ್ಲಿ ಚಿನ್ನದ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಪ್ರತಿಬಿಂಬಿಸುವುದಿಲ್ಲ. ಆದರೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವ್ಯಾಪಾರ ಮಾಡಬಹುದು.

ಹೂಡಿಕೆದಾರರು ನಗದಿನ ಮೂಲಕ ಈ ಬಾಂಡ್‌ಗಳನ್ನು ವಿತರಣೆಯ ಬೆಲೆಯಲ್ಲಿ ಖರೀದಿ ಮಾಡುತ್ತಾರೆ. ಬಾಂಡ್‌ಗಳನ್ನು ರಿಡೀಮ್‌ ಮಾಡಿದಾಗ ಮುಕ್ತಾಯದ ನಂತರ ಹಣ ಪಡೆಯುತ್ತಾರೆ.

ಸವರನ್‌ ಗೋಲ್ಡ್‌ ಅವಧಿಯು 8 ವರ್ಷಗಳಾಗಿದ್ದು, 5ನೇ ವರ್ಷದ ನಂತರ ಪ್ರಿಮೆಚ್ಯೂರ್‌ ರಿಡಂಪ್ಷನ್‌ ಆಯ್ಕೆಯೊಂದಿಗೆ ಬಡ್ಡಿಯನ್ನು ಪಾವತಿಸಬೇಕಾದ ದಿನಾಂಕದಂದು ಚಲಾಯಿಸಲಾಗುತ್ತದೆ.

ಅವರು ಪ್ರತಿ ವರ್ಷ ಶೇ 2.5 ರಷ್ಟು ಬಡ್ಡಿಯನ್ನು ನೀಡುತ್ತಾರೆ. ಬಾಂಡ್‌ನ ನಾವಿನಲ್‌ ಮೌಲ್ಯದ ಮೇಲೆ ಅರ್ಧ ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಈ ಬಾಂಡ್‌ಗಳನ್ನು ಡಿಮ್ಯಾಟ್‌ ಖಾತೆಯಲ್ಲೂ ಇರಿಸಬಹುದು. ರಿಡಂಪ್ಷನ್‌ ಸಮಯದಲ್ಲಿ ಹೂಡಿಕೆದಾರರಿಗೆ ಆಗ ಚಾಲ್ತಿಯಲ್ಲಿರುವ ಚಿನ್ನದ ಬೆಲೆಯನ್ನು ಪಾವತಿಸಲಾಗುತ್ತದೆ.

ಎಸ್‌ಜಿಬಿಯನ್ನು ಏಕೆ ಖರೀದಿಸಬೇಕು? ಇದರ ಪ್ರಯೋಜನಗಳೇನು?

ಹೂಡಿಕೆದಾರರು ಪಾವತಿಸುವ ಚಿನ್ನದ ಪ್ರಮಾಣವನ್ನು ಸಂರಕ್ಷಿಸಲಾಗುತ್ತದೆ. ಏಕೆಂದರೆ ಹೂಡಿಕೆದಾರರು ರಿಡಂಪ್ಷನ್‌ ಅಥವಾ ಪ್ರಿಮೆಚ್ಯೂರ್‌ ರಿಡಂಪ್ಷನ್‌ ಸಮಯದಲ್ಲಿ ಸದ್ಯ ನಡೆಯುತ್ತಿರುವ ಮಾರುಕಟ್ಟೆ ಬೆಲೆಯನ್ನು ಪಡೆಯುತ್ತಾರೆ. ಭೌತಿಕ ಚಿನ್ನದ ಮೇಲಿನ ಹೂಡಿಕೆಗೆ ಸಾವರನ್‌ ಗೋಲ್ಡ್‌ ಬಾಂಡ್‌ ಉತ್ತಮ ಆಯ್ಕೆ. ವೆಚ್ಚ ಹಾಗೂ ಜೋಪಾನ ಮಾಡುವುದು ಸುಲಭ. ಹೂಡಿಕೆದಾರರಿಗೆ ಮೆಚ್ಯೂರಿಟಿ ಸಮಯದಲ್ಲಿ ಮಾರುಕಟ್ಟೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಲೆ ಲಭ್ಯವಾಗುತ್ತದೆ, ಅಲ್ಲದೇ ಕಾಲಕಾಲಕ್ಕೆ ಬಡ್ಡಿ ಕೂಡ ಸಿಗುತ್ತದೆ. ಆಭರಣ ರೂಪದಲ್ಲಿ ಖರೀದಿಸುವುದಾದರೆ ಹಾಲ್‌ಮಾರ್ಕ್‌ ಹಾಗೂ ಮೇಕಿಂಗ್‌ ಚಾರ್ಚ್‌ ಮೇಲೆ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ. ಆದರೆ ಇದರಲ್ಲಿ ಆ ತೊಂದರೆಗಳು ಇರುವುದಿಲ್ಲ. ಬಾಂಡ್‌ಗಳು ಆರ್‌ಬಿಐ ಪುಸ್ತಕಗಳಲ್ಲಿ ಅಥವಾ ಡಿಮ್ಯಾಟ್ ರೂಪದಲ್ಲಿ ಸ್ಕ್ರಿಪ್ ನಷ್ಟದ ಅಪಾಯವನ್ನು ನಿವಾರಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು