logo
ಕನ್ನಡ ಸುದ್ದಿ  /  ಜೀವನಶೈಲಿ  /  ಇಲ್ಲಿದೆ ಕಾಶ್ಮೀರಿ ಸ್ಪೆಷಲ್: ನಿಮ್ಮ ಮನೆಯಲ್ಲೂ ಈ 5 ಕಾಶ್ಮೀರಿ ಚಟ್ನಿ ಮಾಡಲು ಪ್ರಯತ್ನಿಸಿ, ತಿಂಡಿ-ಊಟದ ರುಚಿ ಹೆಚ್ಚಿಸಿಕೊಳ್ಳಿ

ಇಲ್ಲಿದೆ ಕಾಶ್ಮೀರಿ ಸ್ಪೆಷಲ್: ನಿಮ್ಮ ಮನೆಯಲ್ಲೂ ಈ 5 ಕಾಶ್ಮೀರಿ ಚಟ್ನಿ ಮಾಡಲು ಪ್ರಯತ್ನಿಸಿ, ತಿಂಡಿ-ಊಟದ ರುಚಿ ಹೆಚ್ಚಿಸಿಕೊಳ್ಳಿ

HT Kannada Desk HT Kannada

Apr 30, 2024 06:00 AM IST

ನಿಮ್ಮ ಮನೆಯಲ್ಲೂ ಈ 5 ಕಾಶ್ಮೀರಿ ಚಟ್ನಿ ಮಾಡಲು ಪ್ರಯತ್ನಿಸಿ, ತಿಂಡಿ-ಊಟದ ರುಚಿ ಹೆಚ್ಚಿಸಿಕೊಳ್ಳಿ

    • ಕಾಶ್ಮೀರದ ಅಡುಗೆ: ಸುಂದರ ಕಣಿವೆಗಳ ರಾಜ್ಯ ಕಾಶ್ಮೀರ. ಅಲ್ಲಿನ ಅಡುಗೆಗಳಲ್ಲಿ ಮಸಾಲೆಗಳ ವೈಶಿಷ್ಟ್ಯ ಕಾಣಬಹುದು. ಅದರಿಂಲೇ ಕಾಶ್ಮೀರಿ ಭಕ್ಷ್ಯಗಳು ಭಾರತದಾದ್ಯಂತ ಜನಪ್ರಿಯವಾಗಿದೆ. ಇಲ್ಲಿ ವಿಶೇಷ ರೀತಿಯ ಚಟ್ನಿಗಳನ್ನು ತಯಾರಿಸಲಾಗುತ್ತದೆ. ಮಸಾಲೆಗಳಿಂದ ಕೂಡಿರುವ ಕಾಶ್ಮೀರಿ ಚಟ್ನಿಗಳನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು.
ನಿಮ್ಮ ಮನೆಯಲ್ಲೂ ಈ 5 ಕಾಶ್ಮೀರಿ ಚಟ್ನಿ ಮಾಡಲು ಪ್ರಯತ್ನಿಸಿ, ತಿಂಡಿ-ಊಟದ ರುಚಿ ಹೆಚ್ಚಿಸಿಕೊಳ್ಳಿ
ನಿಮ್ಮ ಮನೆಯಲ್ಲೂ ಈ 5 ಕಾಶ್ಮೀರಿ ಚಟ್ನಿ ಮಾಡಲು ಪ್ರಯತ್ನಿಸಿ, ತಿಂಡಿ-ಊಟದ ರುಚಿ ಹೆಚ್ಚಿಸಿಕೊಳ್ಳಿ

ಭಾರತ ಹಲವು ವೈವಿಧ್ಯಗಳಿಂದ ಕೂಡಿರುವ ದೇಶ. ಇಲ್ಲಿನ ಪ್ರತಿ ಊರು ಒಂದಲ್ಲ ಒಂದು ಕಾರಣಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಭಾರತದ ಅಡುಗೆಗಳು ವಿಶ್ವದಲ್ಲೇ ಜನಪ್ರಿಯ. ಕೆಲವು ಪ್ರದೇಶಗಳು ರೊಟ್ಟಿ, ಪಲ್ಯ, ಚಪಾತಿಗಳಿಗೆ ಫೇಮಸ್‌ ಆದರೆ, ಇನ್ನು ಕೆಲವು ಸಾರು–ಸಾಂಬಾರುಗಳಿಗೆ ಹೆಸರುವಾಸಿ. ಕರ್ನಾಟಕದ ಇಡ್ಲಿ–ಸಾಂಬಾರು, ಮುಂಬೈ ಚಾಟ್ಸ್‌, ಗುಜರಾತಿನ ಡೋಕ್ಲಾ ಹೀಗೆ ಒಂದೊಂದು ರಾಜ್ಯಗಳು ಅದರದೇ ಆದ ಆಹಾರಗಳಿಗೆ ಹೆಸರುವಾಸಿಯಾಗಿದೆ. ಕಾಶ್ಮೀರದ ಆಹಾರ ಪದ್ಧತಿ ಬಹಳ ವೈಶಿಷ್ಟ್ಯದಿಂದ ಕೂಡಿದೆ. ಅಲ್ಲಿನ ಪಾಕವಿಧಾನಗಳಲ್ಲಿ ಇರಾನ್‌, ಇರಾಕ್‌ ಮತ್ತುಅಫ್ಘಾನಿಸ್ತಾನದ ಅಡುಗೆ ಶೈಲಿಗಳ ಪ್ರಭಾವ ಕಾಣಬಹುದು. ಮೊಘಲರು ಕಾಶ್ಮೀರಕ್ಕೆ ಬಂದಾಗ ಅವರ ಜೊತೆಗೆ ಬಹಳಷ್ಟು ಪಾಕವಿಧಾನಗಳನ್ನು ತಂದರು. ಇಲ್ಲಿನ ಸ್ಥಳೀಯ ಉತ್ಪನ್ನಗಳಿಗೆ ಅವುಗಳನ್ನು ಹೊಂದಿಸಿಕೊಂಡರು. ಅದೇ ಮುಂದೆ ಕಾಶ್ಮೀರಿ ಪಾಕಪದ್ಧತಿಯ ಅಭಿವೃದ್ಧಿಗೆ ಕಾರಣವಾಯಿತು. ಇದು ಭಾರತೀಯ ಮತ್ತು ಪರ್ಷಿಯಾದ ಪಾಕಪದ್ಧತಿಗಳ ಮಿಶ್ರಣವಾಗಿದೆ. ದಮ್‌ ಆಲೂ, ರೋಗನ್‌, ಜೋಶ್‌, ಕಾಶ್ಮೀರಿ ಯಾಕ್ನಿ ಲ್ಯಾಂಬ್‌ ಕರಿ, ಕಾಶ್ಮೀರಿ ಫುಲಾವ್‌ ಒಂದೇ ಎರಡೇ..., ಈ ಎಲ್ಲಾ ಕಾಶ್ಮೀರದ ಅಡುಗೆಗಳು ವಿಶೇಷ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಕಾಶ್ಮೀರದಲ್ಲಿ ವಿಶೇಷ ರೀತಿಯ ಚಟ್ನಿಗಳನ್ನು ತಯಾರಿಸಲಾಗುತ್ತದೆ. ಅವು ಭಾರತದಾದ್ಯಂತ ಪ್ರಸಿದ್ಧಿಯನ್ನು ಪಡೆದಿವೆ. ಕಾಶ್ಮೀರದ ಸುಂದರ ಕಣಿವೆ ಪ್ರದೇಶಗಳಲ್ಲಿ ತಯಾರಿಸುವ ಚಟ್ನಿಗಳನ್ನು ನೀವೂ ಮನೆಯಲ್ಲಿಯೇ ತಯಾರಿಸಿ ಸವಿಯಬಹುದು.

ಟ್ರೆಂಡಿಂಗ್​ ಸುದ್ದಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

1) ಮೌಜ್‌–ಇ–ಚೌಟ್‌

ಇದು ಕಾಶ್ಮೀರಿ ಪದ್ಧತಿಯಲ್ಲಿ ತಯಾರಿಸುವ ಮೂಲಂಗಿಯ ಚಟ್ನಿ. ಇದನ್ನು ತಾಜಾ ಮೂಲಂಗಿ, ಮೊಸರು, ಜೀರಿಗೆ, ಕೆಂಪು ಮೆಣಸಿನಕಾಯಿ, ಹಸಿಮೆಣಸು, ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ತಯಾರಿಸಲಾಗುತ್ತದೆ. ಮೂಲಂಗಿಯನ್ನು ಸ್ವಚ್ಛಗೊಳಿಸಿ, ತುರಿದುಕೊಳ್ಳಿ. ಅದಕ್ಕೆ ಗಟ್ಟಿ ಮೊಸರು ಸೇರಿಸಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮೇಲಿನಿಂದ ಹುರಿದ ಜೀರಿಗೆ ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ, ಕೆಂಪುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ. ಸುಲಭದ ಮೂಲಂಗಿ ಚಟ್ನಿ ತಯಾರಿಸಿ ಸವಿಯಿರಿ.

2) ಡೂನ್‌ ಚಟ್ನಿ

ಇದು ಕಾಶ್ಮಿರದಲ್ಲಿ ತಯಾರಿಸುವ ವಾಲ್‌ನಟ್‌ನ ಚಟ್ನಿ. ಇದರ ಸ್ಥಳೀಯ ಹೆಸರು ಡೂನ್‌ ಚಟ್ನಿ. ಇದು ರುಚಿಯಾದ ವಾಲ್ನಟ್‌ ಕಾಯಿಯಿಂದ ತಯಾರಿಸಬಹುದಾದ ವಿಶೇಷ ಚಟ್ನಿ. ಅರ್ಧ ಕಪ್‌ ವಾಲ್‌ನಟ್‌, ಹಸಿಮೆಣಸಿನಕಾಯಿ, ತಾಜಾ ಪುದೀನ ಎಲೆಗಳು, ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಜೀರಿಗೆ, 5 ಚಮಚ ಗಟ್ಟಿ ಮೊಸರು, ಮೆಣಸಿನ ಪುಡಿ, ಮತ್ತು ಉಪ್ಪು. ಈ ಎಲ್ಲಾ ಪದಾರ್ಥಗಳನ್ನು ಮಿಕ್ಸರ್‌ ಜಾರ್‌ಗೆ ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಈ ಚಟ್ನಿಯನ್ನು ವಿವಿಧ ಬಗೆಯ ತಂದೂರಿ ಮತ್ತು ಕರಿದ ತಿಂಡಿಗಳೊಂದಿಗೆ ಸವಿಯಲಾಗುತ್ತದೆ.

3) ಗಾಂಡ್‌ ಚಟ್ನಿ

ಕಾಶ್ಮೀರಿ ಶೈಲಿಯ ಈರುಳ್ಳಿ ಚಟ್ನಿಯಾಗಿದೆ. ಇದು ಕಾಶ್ಮೀರಿ ಹಬ್ಬಗಳಲ್ಲಿ ತಯಾರಿಸುವ ಅತ್ಯಂತ ಜನಪ್ರಿಯ ಮತ್ತು ಸರಳ ಚಟ್ನಿಯಾಗಿದೆ. ಈ ಚಟ್ನಿ ತಯಾರಿಸಲು ಹಸಿ ಮೆಣಸಿನಕಾಯಿ, ಕೆಂಪುಮೆಣಸಿನಕಾಯಿ ಪುಡಿ, ಕೊತ್ತಂಬರಿ ಸೊಪ್ಪು, ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ. ಈರುಳ್ಳಿಯನ್ನು ಗೋಲಾಕಾರವಾಗಿ ಕತ್ತರಿಸಿದರೆ ಉತ್ತಮ. ಈರುಳ್ಳಿಗೆ ಸ್ವಲ್ಪ ಉಪ್ಪು ಸೇರಿಸಿ ಒಂದು ಗಂಟೆಯ ಕಾಲ ಮುಚ್ಚಿಡಿ. ನಂತರ ಕೈಯಲ್ಲಿ ಒತ್ತಿ ಈರುಳ್ಳಿಯ ನೀರನ್ನು ತೆಗೆಯಿರಿ. ಅದಕ್ಕೆ ಹಸಿಮೆಣಸು, ಮೆಣಸಿನಪುಡಿ, ಕೊತ್ತೊಂಬರಿ ಸೊಪ್ಪು, ಜೀರಿಗೆ, ಉಪ್ಪು ಮತ್ತು ಕೆಲವು ಹನಿ ವಿನೆಗರ್‌ ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ. ಸರ್ವ್‌ ಮಾಡುವ ಮೊದಲು ಸ್ವಲ್ಪ ಸಮಯ ಫ್ರಿಡ್ಜ್‌ನಲ್ಲಿಡಿ.

4) ಕಾಶ್ಮೀರಿ ಟೊಮೆಟೊ ಚಟ್ನಿ

ಇದು ಮಸಾಲೆಗಳಿಂದ ಕೂಡಿದ ಖಾರದ ಚಟ್ನಿ. ಕಾಶ್ಮೀರಿ ಶೈಲಿಯ ಈ ಚಟ್ನಿಯಲ್ಲಿ ಮಸಾಲೆಗಳ ಘಮ ಕಾಣಸಿಗುತ್ತದೆ. ಈ ಚಟ್ನಿಗೆ ವಿಶೇಷವಾಗಿ ಕಾಶ್ಮೀರಿ ಕೆಂಪು ಮೆಣಸಿನ ಪುಡಿಯನ್ನು ಬಳಸಲಾಗುತ್ತದೆ. ಸೋಂಪು, ಏಲಕ್ಕಿ, ದಾಲ್ಚಿನ್ನಿ, ಸಾಸಿವೆ, ಜೀರಿಗೆ ಮತ್ತು ಟೊಮೆಟೊ. ಮೊದಲಿಗೆ ಎಲ್ಲಾ ಮಸಾಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಹುರಿದುಕೊಳ್ಳಬೇಕು. ಅದಕ್ಕೆ ಕತ್ತರಿಸಿದ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಹುರಿದುಕೊಳ್ಳಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಸೇರಿಸಿ.

5) ಛೋಂತ್‌ ಚಟ್ನಿ

ಇದು ಪ್ರಸಿದ್ಧ ಕಾಶ್ಮೀರಿ ಸೇಬುಗಳಿಂದ ತಯಾರಿಸುವ ರುಚಿಕಟ್ಟಾದ ಚಟ್ನಿ. ಇದು ಕಾಶ್ಮೀರಿ ಥಾಲಿಯಲ್ಲಿ ಅತ್ಯಂತ ಪ್ರಮುಖ ಸ್ಥಾನಗಳಿಸಿದೆ. ತಾಜಾ ಸೇಬು, ಸಕ್ಕರೆ, ಶುಂಠಿ, ಉಪ್ಪು, ಒಣದ್ರಾಕ್ಷಿ, ಮೆಣಸಿನ ಪುಡಿ ಮತ್ತು ಸ್ವಲ್ಪ ವಿನೆಗರ್ ಬಳಸಿ ಇದನ್ನು ತಯಾರಿಸುತ್ತಾರೆ. ಒಂದು ಪ್ಯಾನ್‌ ಬಿಸಿ ಮಾಡಿ, ಅದಕ್ಕೆ ಸಕ್ಕರೆ ಮತ್ತು ಕತ್ತರಿಸಿದ ಸೇಬು ಸೇರಿಸಿ. ಸಕ್ಕರೆ ಕರಗಲು ಸ್ವಲ್ಪ ನೀರು ಸೇರಿಸಿ. ನೀರು ಆರಿದ ನಂತರ ಅದಕ್ಕೆ ಶುಂಠಿ ಸೇರಿಸಿ ನಾಲ್ಕರಿಂದ ಐದು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ಅದಕ್ಕೆ ಮೆಣಸಿನ ಪುಡಿ ಮತ್ತು ಸ್ವಲ್ಪ ವಿನೆಗರ್ ಹನಿ ಹಾಕಿ. ಎರಡು ನಿಮಿಷ ಬೇಯಿಸಿ. ಕಾಶ್ಮೀರದ ಸ್ಪೆಷಲ್‌ ಚಟ್ನಿ ಸವಿಯಲು ಸಿದ್ಧ.

ನೋಡಿದ್ರಲ್ಲ ಕಾಶ್ಮೀರದ ಬಗೆ ಬಗೆ ಚಟ್ನಿ ತಯಾರಿಸುವುದು ಹೇಗೆ ಎಂದು. ಹಾಗಾದ್ರೆ ಇವುಗಳನ್ನು ಮನೆಯಲ್ಲಿ ಟ್ರೈ ಮಾಡಿ. ಹೊಸ ರುಚಿ ಎಲ್ಲರಿಗೂ ಇಷ್ಟವಾಗುವುದು ಖಂಡಿತ.

    ಹಂಚಿಕೊಳ್ಳಲು ಲೇಖನಗಳು