logo
ಕನ್ನಡ ಸುದ್ದಿ  /  ಜೀವನಶೈಲಿ  /  Rasgulla: ಹಣ ಭೂಮಿ ಹೆಣ್ಣಿಗಾಗಿ ಅಲ್ಲ, ಪಶ್ಚಿಮ ಬಂಗಾಳ ಒಡಿಶಾ ನಡುವೆ ನಡೆಯಿತು ಸಿಹಿಗಾಗಿ ಜಗಳ; ರಸಗುಲ್ಲಾ ಯುದ್ಧ ನಡೆದಿದ್ದೇಕೆ?

Rasgulla: ಹಣ ಭೂಮಿ ಹೆಣ್ಣಿಗಾಗಿ ಅಲ್ಲ, ಪಶ್ಚಿಮ ಬಂಗಾಳ ಒಡಿಶಾ ನಡುವೆ ನಡೆಯಿತು ಸಿಹಿಗಾಗಿ ಜಗಳ; ರಸಗುಲ್ಲಾ ಯುದ್ಧ ನಡೆದಿದ್ದೇಕೆ?

HT Kannada Desk HT Kannada

Aug 11, 2023 07:28 PM IST

ಒಡಿಶಾ, ಪಶ್ಚಿಮ ಬಂಗಾಳಗಳ ನಡುವೆ ರಸಗುಲ್ಲಾ ಯುದ್ಧ

  • 19ನೇ ಶತಮಾನದಲ್ಲಿ ಹೆಸರಾಂತ ಸಿಹಿ ತಯಾರಕ ನಬೀನ್‌ ಚಂದ್ರ ದಾಸ್‌ ಎನ್ನುವವರು ಕಂಡು ಹಿಡಿದ ಸಿಹಿ ಇದು. ಕೊಲ್ಕತ್ತಾದ ಬಾಗ್‌ ಬಜಾರ್‌ನ ಅವರ ಮನೆಯಲ್ಲಿ ಮೊದಲ ಬಾರಿಗೆ ಅವರು ರಸಗುಲ್ಲಾ ತಯಾರಿಸಿದರು ಆದ್ದರಿಂದ ರಸಗುಲ್ಲಾ ಹಕ್ಕು ನಮಗೆ ಸೇರಬೇಕು ಎಂದು ಪಶ್ಚಿಮ ಬಂಗಾಳ ವಾದ ಮಾಡಿತು.

ಒಡಿಶಾ, ಪಶ್ಚಿಮ ಬಂಗಾಳಗಳ ನಡುವೆ ರಸಗುಲ್ಲಾ ಯುದ್ಧ
ಒಡಿಶಾ, ಪಶ್ಚಿಮ ಬಂಗಾಳಗಳ ನಡುವೆ ರಸಗುಲ್ಲಾ ಯುದ್ಧ

ಇಂಥಹ ಮತ್ತಷ್ಟು ಅಂಕಣಗಳನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿರಸಗುಲ್ಲಾ, ಜೀವನದಲ್ಲಿ ಒಮ್ಮೆಯಾದರೂ ಸಿಹಿಪ್ರಿಯರು ಈ ಸ್ವೀಟ್‌ ರುಚಿ ಮಾಡಿರುತ್ತೇವೆ. ಸ್ಫಂಜಿನಂತೆ ಇರುವ, ಒಳಗೆ ಮೃದುವಾಗಿ ಸಕ್ಕರೆ ಪಾಕದಿಂದ ಕೂಡಿರುವ ಈ ಸಿಹಿ, ಬಾಯಿಗೆ ಇಟ್ಟರೆ ಕರಗಿದ ಅನುಭವ ನೀಡುತ್ತದೆ. ಇಂತ ಅದ್ಭುತ ರುಚಿಯ ಸಿಹಿಗಾಗಿ ಎರಡು ರಾಜ್ಯಗಳ ನಡುವೆ ಜಗಳ ಉಂಟಾದ ವಿಚಾರ ಎಷ್ಟು ಜನರಿಗೆ ಗೊತ್ತು?

ಟ್ರೆಂಡಿಂಗ್​ ಸುದ್ದಿ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

Personality Test: ಚಿತ್ರದಲ್ಲಿ ಮೊದಲು ಕಂಡಿದ್ದೇನು? ನೀವು ನೇರ ಸ್ವಭಾವದವರಾ, ಮೌನಪ್ರೇಮಿಯೇ, ನಿಮ್ಮ ವ್ಯಕ್ತಿತ್ವ ತಿಳಿಸುವ ಚಿತ್ರವಿದು

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಜಿಐ ಟ್ಯಾಗ್‌ಗಾಗಿ ಕಿತ್ತಾಟ

ಹಣ ಭೂಮಿ ಹೆಣ್ಣಿಗಾಗಿ ಜಗಳ ನಡೆದ ಎಷ್ಟೋ ಉದಾಹರಣೆಗಳಿವೆ. ಆದರೆ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ನಡುವೆ ರಸಗುಲ್ಲಾಕ್ಕಾಗಿ ನಡೆದ ಜಗಳ ಕೋರ್ಟ್‌ ಮೆಟ್ಟಿಲೇರಿತ್ತು. ರಸಗುಲ್ಲಾ ನಮ್ಮ ರಾಜ್ಯಕ್ಕೆ ಸೇರಿದ್ದು ಎಂದು ಒಡಿಶಾ ವಾದಿಸಿದರೆ, ಇಲ್ಲ ಅದು ನಮ್ಮ ರಾಜ್ಯಕ್ಕೆ ಸೇರಿದ್ದು ಎಂದು ಪಶ್ಚಿಮ ಬಂಗಾಳ ವಾದ ಮಾಡಿತು. ಕೊನೆಗೆ ಈ ಜಗಳ ನ್ಯಾಯಾಲಯದ ಕಟ ಕಟೆ ಏರಿತು. ಜಿಐ ಟ್ಯಾಗ್‌ಗಾಗಿ ಎರಡೂ ರಾಜ್ಯಗಳ ಪರ ವಕೀಲರು ವಾದ ಪ್ರತಿವಾದ ಮಾಡಿದರು. ಒಡಿಶಾ ಸರ್ಕಾರವು ಪ್ರತಿ ವರ್ಷ ಜುಲೈ 30 ರಂದು ರಸಗುಲ್ಲಾ ಉತ್ಸವವನ್ನು ಆಚರಿಸುತ್ತಿದ್ದೇ ಈ ಜಗಳ ಆರಂಭವಾಗಲು ಪ್ರಮುಖ ಕಾರಣ.

ವಾದ ಪ್ರತಿವಾದ

19ನೇ ಶತಮಾನದಲ್ಲಿ ಹೆಸರಾಂತ ಸಿಹಿ ತಯಾರಕ ನಬೀನ್‌ ಚಂದ್ರ ದಾಸ್‌ ಎನ್ನುವವರು ಕಂಡು ಹಿಡಿದ ಸಿಹಿ ಇದು. ಕೊಲ್ಕತ್ತಾದ ಬಾಗ್‌ ಬಜಾರ್‌ನ ಅವರ ಮನೆಯಲ್ಲಿ ಮೊದಲ ಬಾರಿಗೆ ಅವರು ರಸಗುಲ್ಲಾ ತಯಾರಿಸಿದರು ಆದ್ದರಿಂದ ರಸಗುಲ್ಲಾ ಹಕ್ಕು ನಮಗೆ ಸೇರಬೇಕು ಎಂದು ಪಶ್ಚಿಮ ಬಂಗಾಳ ವಾದ ಮಾಡಿತು. ನೂರಾರು ವರ್ಷಗಳಿಂದ ರಸಗುಲ್ಲಾ ನಮ್ಮ ರಾಜ್ಯದ ಆಹಾರ ಪದ್ಧತಿಯ ಭಾಗವಾಗಿದೆ. ಅದನ್ನು ಭಗವಾನ್‌ ಜಗನ್ನಾಥನಿಗೆ ನೈವೇದ್ಯವನ್ನಾಗಿ ಬಳಸಲಾಗುತ್ತಿದೆ. ಪುರಿ ಜಗನ್ನಾಥ ರಥ ಯಾತ್ರೆಯಲ್ಲಿ ರಸಗುಲ್ಲಾವನ್ನೇ ಜನರಿಗೆ ಪ್ರಸಾದವನ್ನಾಗಿ ನೀಡಲಾಗುತ್ತಿದೆ. 15ನೇ ಶತಮಾನದಿಂದ ಇದು ಬಳಕೆಯಲ್ಲಿದೆ. ಆದ್ದರಿಂದ ರಸಗುಲ್ಲಾ ನಮಗೆ ಸೇರಬೇಕು ಎಂದು ಒಡಿಶಾ ವಾದಿಸಿತು.

ಪಶ್ಚಿಮ ಬಂಗಾಳ ಪಾಲಿಗೆ ರಸಗುಲ್ಲಾ

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಒಂದು ಸಮಿತಿ ರಚಿಸಿ ಇದರ ಬಗ್ಗೆ ವರದಿ ನೀಡುವಂತೆ ಸೂಚಿಸಿತು. ಅದರ ಅನ್ವಯ 14 ನವೆಂಬರ್‌ 2017 ರಂದು ಪಶ್ಚಿಮ ಬಂಗಾಳಕ್ಕೆ ಜಿಐ ಟ್ಯಾಗ್‌ ( ಜಿಯೋಗ್ರಾಫಿಕಲ್‌ ಇಂಡಿಕೇಷನ್)‌ ದೊರೆಯಿತು. ಅದೇ ದಿನ ಪಶ್ಚಿಮ ಬಂಗಾಳ ರಸಗುಲ್ಲಾ ದಿನ ಆಚರಿಸಿತು. ಉತ್ತರ ಕೊಲ್ಕತ್ತಾದ ಬಾಗ್‌ ಬಜಾರ್‌ ಬಳಿ ಬಾಣಸಿಗ ನಬೀನ್‌ ಚಂದ್ರ ದಾಸ್‌ ಪ್ರತಿಮೆಯನ್ನು ಸ್ಥಾಪಿಸಲಾಯ್ತು. ಆ ದಿನ ಇಡೀ ಪಶ್ಚಿಮ ಬಂಗಾಳ ದೊಡ್ಡ ಹಬ್ಬವನ್ನಾಗಿ ಆಚರಿಸಿದ್ದರು.

ರಸಗುಲ್ಲಾವನ್ನು ಮನೆಯಲ್ಲೇ ತಯಾರಿಸಬಹುದು

ರಸಗುಲ್ಲಾ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಫುಲ್‌ ಕ್ರೀಮ್‌ ಹಾಲು - 1 ಲೀಟರ್‌

ವಿನಿಗರ್‌ ಅಥವಾ ನಿಂಬೆರಸ - 2 ಸ್ಪೂನ್

ಸಕ್ಕರೆ - 1 ಕಪ್‌

ಏಲಕ್ಕಿ - 4

ತಯಾರಿಸುವ ವಿಧಾನ

  • ಹಾಲನ್ನು ದಪ್ಪ ತಳದ ಪಾತ್ರೆಗೆ ಸೇರಿಸಿ ಕುದಿಯಲು ಬಿಡಿ, ಹಾಲು ಕುದಿಯುತ್ತಿದ್ದಂತೆ ಒಂದೆರಡು ಸ್ಪೂನ್‌ ನೀರಿಗೆ ನಿಂಬೆರಸ ಅಥವಾ ವಿನಿಗರ್‌ ಸೇರಿಸಿ ಅದನ್ನು ಹಾಲಿಗೆ ಸೇರಿಸಿ ಸ್ಟೋವ್‌ ಆಫ್‌ ಮಾಡಿ.
  • ಒಂದು ಶುದ್ಧವಾದ ಬಟ್ಟೆಗೆ ಈ ಒಡೆದ ಹಾಲನ್ನು ಸೇರಿಸಿ ನೀರು ಸೋರಲು ಬಿಡಿ, ನೀರು ಸೋರುತ್ತಿದ್ದಂತೆ ಒಂದೆರಡು ಬಾರಿ ತಣ್ಣನೆಯ ನೀರನಿಂದ ಕೋವಾ ತೊಳೆಯಿರಿ, ಹೀಗೆ ಮಾಡಿದರೆ ನಿಂಬೆ ಹಣ್ಣು ಅಥವಾ ವಿನಿಗರ್‌ ವಾಸನೆ ಹೋಗುತ್ತದೆ.
  • ನೀರು ಸಂಪೂರ್ಣ ಸೋರುವಷ್ಟರಲ್ಲಿ ಪಾಕ ಮಾಡಿಕೊಳ್ಳಿ, ಸಕ್ಕರೆ ಮುಳುಗುವಷ್ಟು ನೀರು ಸೇರಿಸಿ ಕುದಿಯಲು ಬಿಡಿ.
  • ಖೋವಾವನ್ನು ಸಂಪೂರ್ಣ ಡ್ರೈ ಆಗುವರೆಗೂ ಬಿಡಬೇಡಿ, ಸ್ವಲ್ಪವಾದರೂ ನೀರಿನ ಅಂಶ ಇರಬೇಕು.
  • ನೀರು ಸೋರಿದ ಖೋವಾವನ್ನು ಒಂದು ಪ್ಲೇಟ್‌ಗೆ ಹಾಕಿಕೊಂಡು ಚೆನ್ನಾಗಿ ನಾದಿಕೊಳ್ಳಿ.
  • ಖೋವಾದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಅದನ್ನು ಸಕ್ಕರೆ ಪಾಕದೊಳಗೆ ಹಾಕಿ.
  • ಪಾಕಕ್ಕೆ ಖೋವಾಗಳನ್ನು ಹಾಕಿದ ನಂತರ ಮುಚ್ಚಳ ಮುಚ್ಚಿ 15 ನಿಮಿಷ ಕಡಿಮೆ ಉರಿಯಲ್ಲಿ ಬಿಡಿ.
  • ತಣ್ಣಗಾದ ನಂತರ ಒಂದು ಡಬ್ಬಿಗೆ ವರ್ಗಾಯಿಸಿ ರೆಫ್ರಿಜರೇಟರ್‌ನಲ್ಲಿಟ್ಟರೆ 15 ದಿನಗಳವರೆಗೂ ಇಡಬಹುದು.

ಬರಹ: ರಕ್ಷಿತಾ

ಈ ಕಾಲಂ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆಯನ್ನು ನಮಗೆ ತಿಳಿಸಿ. ಇ-ಮೇಲ್‌: ht.kannada@htdigital.in

ಇಂಥಹ ಮತ್ತಷ್ಟು ಅಂಕಣಗಳನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು